Sushma Swaraj Passes Away: ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​​ ನಿಧನ; ಇಲ್ಲಿದೆ ಬಿಜೆಪಿ ಕಟ್ಟಾಳು ನಡೆದು ಬಂದ ಹಾದಿ

2014ರ ಮೇ ತಿಂಗಳಿನಿಂದ ಭಾರತೀಯ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಇಂದಿರಾ ಗಾಂಧಿಯವರ ನಂತರ ಈ ಸ್ಥಾನವನ್ನು ಪಡೆದ ಎರಡನೇ ಮಹಿಳೆ ಇವರು.

Ganesh Nachikethu | news18
Updated:August 7, 2019, 8:21 AM IST
Sushma Swaraj Passes Away: ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​​ ನಿಧನ; ಇಲ್ಲಿದೆ ಬಿಜೆಪಿ ಕಟ್ಟಾಳು ನಡೆದು ಬಂದ ಹಾದಿ
ಸುಷ್ಮಾ ಸ್ವರಾಜ್​
 • News18
 • Last Updated: August 7, 2019, 8:21 AM IST
 • Share this:
ನವದೆಹಲಿ(ಆಗಸ್ಟ್​​.07): ಮಾಜಿ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​​​ ಅವರು, ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ 67 ವರ್ಷದ ಬಿಜೆಪಿ ಕಟ್ಟಾಳು ಸುಷ್ಮಾ ಸ್ವರಾಜ್ ಅವರಿಗೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಸದ್ಯವೀಗ ಚಿಕಿತ್ಸೆ ಫಲಿಸದೇ ನಮ್ಮನಗಲಿದ್ದಾರೆ. ಈಗಾಗಲೇ ಬಿಜೆಪಿ ನಾಯಕರ ದಂಡೇ ಏಮ್ಸ್​​ ಆಸ್ಪತ್ರೆಯತ್ತ ತೆರಳಿದೆ. ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ರಾಜಕೀಯ ಗಣ್ಯರು ಸುಷ್ಮಾ ಸ್ವರಾಜ್​​ ಅವರ ಸಾವಿಗೆ ಸಂತಾಪ ಸೂಚಿಸುತ್ತಿದ್ದಾರೆ.

ಸುಷ್ಮಾ ಸ್ವರಾಜ್ ಭಾರತೀಯ ರಾಜಕಾರಣಿ. ಭಾರತದ ಸರ್ವೋಚ್ಚ ನ್ಯಾಯಾಲಯದ ಮಾಜಿ ವಕೀಲೆ. ಇವರು ಸಂಸದೆಯಾಗಿ ಏಳು ಬಾರಿ ಮತ್ತು ವಿಧಾನ ಸಭಾ ಸದಸ್ಯೆಯಾಗಿ ಮೂರು ಬಾರಿ ಆಯ್ಕೆಯಾಗಿದ್ದಾರೆ. 1977ರಲ್ಲಿ ಉತ್ತರ ಭಾರತದ ಹರಿಯಾಣ ರಾಜ್ಯದ ಸಂಪುಟ ಸಚಿವೆಯಾದರು.

ಬಾಲ್ಯ ಮತ್ತು ಶಿಕ್ಷಣ: ಸುಷ್ಮಾ ಸ್ವರಾಜ್ ಅವರು 1959ರ ಫೆಬ್ರುವರಿ 14ರಂದು ಹರಿಯಾಣದ ಅಂಬಾಲಾ ಕ್ಯಾಂಟ್ನಲ್ಲಿ ಜನಿಸಿದರು. ಇವರ ತಂದೆ ಹಾರ್ದೇವ್ ಶರ್ಮಾ ಮತ್ತು ತಾಯಿ ಲಕ್ಷ್ಮಿ ದೇವಿ. ಅವರು ಅಂಬಾಲಾ ಕಂಟೋನ್ಮೆಂಟ್ನ ಸನಾತನ ಧರ್ಮ ಕಾಲೇಜಿನಲ್ಲಿ ಸಂಸ್ಕೃತ ಮತ್ತು ರಾಜ್ಯಶಾಸ್ತ್ರ ವಿಷಯಗಳಲ್ಲಿ ಪದವಿಯನ್ನು ಪಡೆದರು. ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಕಾನೂನು ಅಭ್ಯಾಸ ಮಾಡಿದರು. 1973ರಲ್ಲಿ ಭಾರತದ ಸುಪ್ರೀಂಕೋರ್ಟ್​​ನಲ್ಲಿ ವಕೀಲರಾಗಿ ಅಭ್ಯಾಸ ಆರಂಭಿಸಿದರು.

ರಾಜಕೀಯ ಜೀವನ: ಸುಷ್ಮಾ ಸ್ವರಾಜ್ ಅವರು ರಾಜಕೀಯ ವೃತ್ತಿಜೀವನವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​​ನೊಂದಿಗೆ 1970ರಲ್ಲಿ ಆರಂಭಿಸಿದರು. ಅವರ ಪತಿ ಸ್ವರಾಜ್ ಕೌಶಲ್, ಸಮಾಜವಾದಿ ನಾಯಕ ಜಾರ್ಜ್ ಫರ್ನಾಂಡಿಸ್​​ನವರೊಂದಿಗೆ  ನಿಕಟ ಸಂಬಂಧ ಹೊಂದಿದ್ದರು. ಸುಷ್ಮಾ ಸ್ವರಾಜ್ 1975ರಲ್ಲಿ ಜಾರ್ಜ್ ಫರ್ನಾಂಡಿಸ್ ಅವರ ಕಾನೂನು ರಕ್ಷಣಾ ತಂಡದ ಅಂಗವಾಗಿದ್ದರು. ಜಯಪ್ರಕಾಶ್ ನಾರಾಯಣರ ಒಟ್ಟು ಕ್ರಾಂತಿಯ ಚಳುವಳಿಯಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡರು. ತುರ್ತು ಪರಿಸ್ಥಿತಿಯ ನಂತರ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರಿದರು. ನಂತರ ಅವರು ಬಿಜೆಪಿಯ ರಾಷ್ಟ್ರೀಯ ನಾಯಕರಾದರು.

ಇನ್ನು 1977ರಿಂದ 1982ರವರೆಗೆ ಹರಿಯಾಣ ವಿಧಾನಸಭೆಯ ಸದಸ್ಯರಾಗಿದ್ದರು. 25ನೇ ವಯಸ್ಸಿನಲ್ಲಿ ಅಂಬಾಲಾ ಕಂಟೋನ್ಮೆಂಟ್ ಶಾಸನ ಸಭೆಗೆ ಅವಕಾಶ ಪಡೆದರು. 1977ರ ಜುಲೈನಲ್ಲಿ ಆಗಿನ ಮುಖ್ಯಮಂತ್ರಿ ದೇವಿ ಲಾಲ್ ಅವರ ನೇತೃತ್ವದಲ್ಲಿ ಜನತಾ ಪಕ್ಷದ ಸರಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಅವರು ಪ್ರಮಾಣವಚನ ಸ್ವೀಕರಿಸಿದರು. ಅವರು 1976ರಲ್ಲಿ ಹರಿಯಾಣ ರಾಜ್ಯದ ಜನತಾ ಪಕ್ಷದ ರಾಜ್ಯ ಅಧ್ಯಕ್ಷರಾದರು. ಅವರು 1987ರಿಂದ 1990ರ ಅವಧಿಯಲ್ಲಿ ಭಾರತೀಯ ಜನತಾ ಪಾರ್ಟಿ-ಲೋಕಸಭೆ ಒಕ್ಕೂಟದ ಸರಕಾರದಲ್ಲಿ ಹರಿಯಾಣದ ಶಿಕ್ಷಣ ಸಚಿವೆಯಾಗಿದ್ದರು.

ನಿರ್ವಹಿಸಿದ ಹುದ್ದೆಗಳು
 • 1977-82ರಲ್ಲಿ ಹರಿಯಾಣ ವಿಧಾನಸಭೆಯ ಸದಸ್ಯರಾಗಿ ಚುನಾಯಿತರಾದರು

 • 19977-79 ಕ್ಯಾಬಿನೆಟ್ ಮಂತ್ರಿ, ಕಾರ್ಮಿಕ ಮತ್ತು ಉದ್ಯೋಗ, ಹರಿಯಾಣ ಸರ್ಕಾರ

 • 1982-90 ಹರಿಯಾಣ ವಿಧಾನಸಭೆಯ ಸದಸ್ಯರಾಗಿ ಚುನಾಯಿತರಾದರು

 • 1982-90 ಕ್ಯಾಬಿನೆಟ್ ಮಂತ್ರಿ, ಶಿಕ್ಷಣ, ಆಹಾರ ಮತ್ತು ನಾಗರಿಕ ಸರಬರಾಜು, ಹರಿಯಾಣ ಸರ್ಕಾರ

 • 1990-96 ರಲ್ಲಿ ರಾಜ್ಯಸಭೆಗೆ ಆಯ್ಕೆ (1ನೇ ಅವಧಿ)

 • 1996-97 ಹನ್ನೊಂದನೇ ಲೋಕಸಭೆ ಸದಸ್ಯೆ(ಎರಡನೆಯ ಅವಧಿ)

 • 1996(16 ಮೇ-1.ಜೂನ್​)​- ಯೂನಿಯನ್ ಕ್ಯಾಬಿನೆಟ್ ಮಂತ್ರಿ, ಮಾಹಿತಿ ಮತ್ತು ಪ್ರಸಾರ

 • 1998-99( 10 ಮಾರ್ಚ್​​ 1998- 26 ಏಪ್ರಿಲ್​​​ 1999) ಹನ್ನೆರಡನೆಯ ಲೋಕಸಭೆ ಸದಸ್ಯೆ(3ನೇ ಅವಧಿ)

 • 1999( 19 ಮಾರ್ಚ್​​- 12 ಅಕ್ಟೋಬರ್] ಯೂನಿಯನ್ ಕ್ಯಾಬಿನೆಟ್ ಮಂತ್ರಿ, ಮಾಹಿತಿ ಮತ್ತು ಪ್ರಸಾರ ಮತ್ತು ದೂರಸಂಪರ್ಕ

 • 1999( 13 ಅಕ್ಟೋಬರ್ - 3 ಡಿಸೆಂಬರ್] ದೆಹಲಿಯ ಮುಖ್ಯಮಂತ್ರಿ

 • 1998(ನವೆಂಬರ್​​​) ದೆಹಲಿ ಅಸೆಂಬ್ಲಿಯ ಹಾಝ್ ಖಾಸ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದರು

 • 2000-06 ರಾಜ್ಯಸಭೆ ಸದಸ್ಯೆ (4ನೇ ಅವಧಿ)

 • 2003-04( 26 ಜನವರಿ - 22 ಮೇ) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮತ್ತು ಸಂಸದೀಯ ವ್ಯವಹಾರಗಳ ಸಚಿವೆ

 • 2006-09 ರಾಜ್ಯಸಭೆ ಸದಸ್ಯೆ (5ನೇ ಅವಧಿ)

 • 2009-14( 16 ಮೇ 2009- 18 ಮೇ 2014) 15ನೇ ಲೋಕಸಭೆ ಸದಸ್ಯೆ ( 6ನೇ ಅವಧಿ)

 • 2009( 3 ಜೂನ್​​​ 2006- 21 ಡಿಸೆಂಬರ್ 2009] ಲೋಕಸಭೆಯಲ್ಲಿ ಪ್ರತಿಪಕ್ಷದ ಉಪ ನಾಯಕಿ

 • 2009-14( 21 ಡಿಸೆಂಬರ್ 2009- 18 ಮೇ 2014) ಲಾಲ್ ಕೃಷ್ಣ ಆಡ್ವಾಣಿ ಬದಲಿಗೆ ಪ್ರತಿಪಕ್ಷ ನಾಯಕಿ

 • 2014( 26 ಮೇ) 16ನೇ ಲೋಕಸಭೆ ಸದಸ್ಯೆ (7ನೇ ಅವಧಿ)

 • 2014( 26 ಮೇ) ಭಾರತದ ಒಕ್ಕೂಟದ ವಿದೇಶಾಂಗ ಸಚಿವೆ


ಮಾಹಿತಿ ಮತ್ತು ಪ್ರಸಾರ:  ದಕ್ಷಿಣ ದೆಹಲಿ ವಿಧಾನ ಸಭಾ ಕ್ಷೇತ್ರದಿಂದ 1998ರ ಮಾರ್ಚ್​​ನಲ್ಲಿ ಎರಡನೆಯ ಅವಧಿಗೆ ಅವರು 12ನೇ ಬಾರಿಗೆ ಲೋಕಸಭೆಗೆ ಮರು ಚುನಾಯಿತರಾದರು. ಎರಡನೇ ಅವಧಿಯ ವಾಜಪೇಯಿ ಸರ್ಕಾರದಲ್ಲಿ ದೂರಸಂಪರ್ಕ ಸಚಿವಾಲಯದ ಮಾಹಿತಿ ಮತ್ತು ಪ್ರಸಾರದ ಕೇಂದ್ರ ಸಂಪುಟ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಕೇಂದ್ರ ಆರೋಗ್ಯ ಸಚಿವೆ: ಜನವರಿ 2003 ರಿಂದ ಮೇ 2004ರ ವರೆಗೆ ಅವರು ಕುಟುಂಬ ಕಲ್ಯಾಣ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದರು. ಕೇಂದ್ರ ಆರೋಗ್ಯ ಸಚಿವರಾಗಿ ಅವರು ಭೋಪಾಲ್ (ಎಂಪಿ), ಭುವನೇಶ್ವರ್ (ಒಡಿಶಾ), ಜೋಧಪುರ್ (ರಾಜಸ್ಥಾನ), ಪಾಟ್ನಾ (ಬಿಹಾರ), ರಾಯ್ಪುರ್ (ಛತ್ತೀಸ್​ಗಢ) ಮತ್ತು ರಿಷಿಕೇಶ್ (ಉತ್ತರಾಖಂಡ್)ನಲ್ಲಿ ಆರು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಸ್ಥಾಪಿಸಿದ್ದಾರೆ.

 • ಬಾಹ್ಯ ವ್ಯವಹಾರಗಳ ಸಚಿವೆ:  2014ರ ಮೇ ತಿಂಗಳಿನಿಂದ ಭಾರತೀಯ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಇಂದಿರಾ ಗಾಂಧಿಯವರ ನಂತರ ಈ ಸ್ಥಾನವನ್ನು ಪಡೆದ ಎರಡನೇ ಮಹಿಳೆ ಇವರು.


 
First published: August 6, 2019, 11:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading