ಬಾರದ ಲೋಕದತ್ತ ಬಿಜೆಪಿ ಕಟ್ಟಾಳು; ಸರ್ಕಾರಿ ಗೌರವದೊಂದಿಗೆ ಸುಷ್ಮಾ ಸ್ವರಾಜ್​​ ಅಂತ್ಯಕ್ರಿಯೆ

ಭಾರತ ಸರ್ಕಾರದ ಮಾಜಿ ವಿದೇಶಾಂಗ ಸಚಿವೆಯ ಅಕಾಲಿಕ ಮರಣ ಇಡೀ ದೇಶವನ್ನೇ ಶೋಕ ಸಾಗರದಲ್ಲಿ ಮುಳುಗಿಸಿತ್ತು. ಸುಷ್ಮಾರಿಗೆ ಭಾವೋದ್ರಿಕ್ತ ಸೆಲ್ಯೂಟ್ ಮಾಡುವ ಮೂಲಕ ಮಗಳು ಬಾನ್ಸುರಿ ಸ್ವರಾಜ್ ಹಾಗೂ ಪತಿ ಸ್ವರಾಜ್ ಕುಶಾಲ್ ಅಂತಿಮ ವಿದಾಯ ಸಲ್ಲಿಸಿದರು.

Vinay Bhat | news18
Updated:August 7, 2019, 5:23 PM IST
ಬಾರದ ಲೋಕದತ್ತ ಬಿಜೆಪಿ ಕಟ್ಟಾಳು; ಸರ್ಕಾರಿ ಗೌರವದೊಂದಿಗೆ ಸುಷ್ಮಾ ಸ್ವರಾಜ್​​ ಅಂತ್ಯಕ್ರಿಯೆ
ಸುಷ್ಮಾ ಸ್ವರಾಜ್​
  • News18
  • Last Updated: August 7, 2019, 5:23 PM IST
  • Share this:
ನವದೆಹಲಿ(ಆಗಸ್ಟ್​​.07): ಕೇಂದ್ರದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಅಂತ್ಯಕ್ರಿಯೆ ಶಾಂತ ರೀತಿಯಲ್ಲೇ ಮುಗಿದಿದೆ. ಇಂದು ನಗರದ ಲೋಧಿ ಚಿತಾಗಾರದಲ್ಲಿ ಹಿಂದೂ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆಯನ್ನು ಸುಷ್ಮಾರ ಪತಿ ಸ್ವರಾಜ್ ಕೌಶಲ್ ನೆರವೇರಿಸಿದ್ದಾರೆ. ಸಕಲ ಸರ್ಕಾರಿ ಗೌರವದೊಂದಿಗೆ ಬಿಜೆಪಿ ಹಿರಿಯ ನಾಯಕಿಯ ಅಂತ್ಯಕ್ರಿಯೆ ನಡೆಸಲಾಗಿದೆ. ಅಂತ್ಯಕ್ರಿಯೆ ವೇಳೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಸೇರಿದಂತೆ ಕೇಂದ್ರ ಸಚಿವರು, ವಿರೋಧ ಪಕ್ಷದ ನಾಯಕರು, ಹಲವು ದೇಶಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಇತ್ತೀಚೆಗೆ ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್‌ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಮಂಗಳವಾರ ರಾತ್ರಿಯೇ ಅವರ ಆರೋಗ್ಯ ದಿಢೀರ್‌ ಏರುಪೇರಾಗಿತ್ತು. ಹೀಗಾಗಿ ಸುಷ್ಮರನ್ನು ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ನಿನ್ನೆ(ಬುಧವಾರ) ರಾತ್ರಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಉತ್ತಮ ಸಂಸದೀಯ ಪಟುವಾಗಿ ಉತ್ತಮ ಕೆಲಸ ಮಾಡುತ್ತಿದ್ದ ಇವರ ಅಗಲಿಕೆಗೆ ಇಡೀ ದೇಶವೇ ಕಂಬನಿ ಮಿಡಿದಿದೆ.

ಸುಷ್ಮಾ ಸ್ವರಾಜ್​​ ಅವರನ್ನು ನೋಡಲು ಬಿಜೆಪಿಯ ಹಿರಿಯ ನಾಯಕರ ದಂಡೇ ಏಮ್ಸ್​ ಆಸ್ಪತ್ರೆಗೆ ಭೇಟಿ ನೀಡಿತ್ತು. ಇವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಕೇಂದ್ರ ಸಚಿವರು, ವಿಪಕ್ಷ ನಾಯಕರು ಕೂಡ ಸಂತಾಪ ಸೂಚಿಸಿದ್ದರು.

ಸಹೋದರಿ ನಿಧನದ ಸುದ್ದಿ ಕೇಳಿ ಮನಸಿಗೆ ಭಾರೀ ನೋವಾಗಿದೆ. ಸುಷ್ಮಾರನ್ನು ನೋಡಿದ ತಕ್ಷಣವೇ ತಾಯಿ ಮನೋಭಾವ ಮೂಡುತಿತ್ತು. ಅತೀ ಚಿಕ್ಕ ವಯಸ್ಸಿನಲ್ಲೇ ಹರಿಯಾಣ ರಾಜ್ಯ ಸಂಪುಟ ದರ್ಜೆಯಲ್ಲಿ ಸಚಿವೆಯಾಗಿದ್ದರು. ಈ ದೇಶದ ಎರಡನೇ ಮಹಿಳಾ ವಿದೇಶಾಂಗ ಸಚಿವೆಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಭಾರತ ದೇಶವೂ ಮಾತೃ ಹೃದಯಿ ಮಗಳನ್ನ ಕಳೆದು ಕೊಂಡಿದೆ ಎಂದು ಟ್ವೀಟ್​​ ಮೂಲಕ ಸುಷ್ಮಾರನ್ನು ನೆನೆದಿದ್ದಾರೆ.

ಇದನ್ನೂ ಓದಿ: ಭಾವೋಧ್ರಿಕ್ತ ಸೆಲ್ಯೂಟ್ ಮಾಡುವ ಮೂಲಕ ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ವಿದಾಯ ಸಲ್ಲಿಸಿದ ಮಗಳು ಮತ್ತು ಪತಿ!

ಬಿಜೆಪಿ ಸಂಸದೀಯ ಪಟ್ಟುವಿನ ಪಾರ್ಥೀವ ಶರೀರವನ್ನು ದೀನ ದಯಾಳ್ ಉಪಾಧ್ಯಾಯ ರಸ್ತೆಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಾರ್ವಜನಿಕರ ವೀಕ್ಷಣೆಗಾಗಿ ಇರಿಸಲಾಗಿತ್ತು. ಈ ವೇಳೆ ವಿವಿಧ ಪಕ್ಷದ ನಾಯಕರು ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ನಂತರ ಬಿಜೆಪಿ ನಾಯಕರು ತಮ್ಮ ನೆಚ್ಚಿನ ನಾಯಕಿಗೆ ಪಕ್ಷದ ಸಂಪ್ರದಾಯದಂತೆ ಕೊನೆಯ ವಿದಾಯ ಸಲ್ಲಿಸಿದರು. ಅಲ್ಲದೆ ಸರ್ಕಾರಿ ಗೌರವವನ್ನೂ ಸಲ್ಲಿಸಲಾಯಿತು.

ಇನ್ನು ಬಿಜೆಪಿ ಕಾರ್ಯಕರ್ತರಲ್ಲಿ ಅಕ್ಷರಶಃ ಕಣ್ಣೀರು ತುಂಬಿಕೊಂಡಿತ್ತು. ಭಾರತ ಸರ್ಕಾರದ ಮಾಜಿ ವಿದೇಶಾಂಗ ಸಚಿವೆಯ ಅಕಾಲಿಕ ಮರಣ ಇಡೀ ದೇಶವನ್ನೇ ಶೋಕ ಸಾಗರದಲ್ಲಿ ಮುಳುಗಿಸಿತ್ತು. ಸುಷ್ಮಾರಿಗೆ ಭಾವೋದ್ರಿಕ್ತ ಸೆಲ್ಯೂಟ್ ಮಾಡುವ ಮೂಲಕ ಮಗಳು ಬಾನ್ಸುರಿ ಸ್ವರಾಜ್ ಹಾಗೂ ಪತಿ ಸ್ವರಾಜ್ ಕುಶಾಲ್ ಅಂತಿಮ ವಿದಾಯ ಸಲ್ಲಿಸಿದರು.-----------------
First published: August 7, 2019, 5:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading