Sushma Swaraj: ಹುಟ್ಟುಹಬ್ಬಕ್ಕೆ ನನ್ನಿಷ್ಟದ ಚಾಕೋಲೇಟ್ ಕೇಕ್​ ತರೋದನ್ನ ಸುಷ್ಮಾ ಎಂದೂ ಮಿಸ್ ಮಾಡ್ತಿರ್ಲಿಲ್ಲ; ಶಿಷ್ಯೆಯ ಬಗ್ಗೆ ಅಡ್ವಾಣಿ ನೆನಪು

Sushma Swaraj Passed Away: ಹಲವಾರು ವರ್ಷಗಳಿಂದಲೂ ನನ್ನ ಹುಟ್ಟಹಬ್ಬದ ದಿನದಂದು ಚಾಕೋಲೇಟ್ ಕೇಕ್​ನೊಂದಿಗೆ ಸುಷ್ಮಾ ನಮ್ಮನೆಯಲ್ಲಿ ಹಾಜರಾಗುತ್ತಿದ್ದರು ಎಂದು ಸುಷ್ಮಾ ಜೊತೆಗಿನ ನೆನಪುಗಳನ್ನು ಎಲ್​.ಕೆ. ಅಡ್ವಾಣಿ ಹಂಚಿಕೊಂಡಿದ್ದಾರೆ.

Sushma Chakre | news18
Updated:August 7, 2019, 11:46 AM IST
Sushma Swaraj: ಹುಟ್ಟುಹಬ್ಬಕ್ಕೆ ನನ್ನಿಷ್ಟದ ಚಾಕೋಲೇಟ್ ಕೇಕ್​ ತರೋದನ್ನ ಸುಷ್ಮಾ ಎಂದೂ ಮಿಸ್ ಮಾಡ್ತಿರ್ಲಿಲ್ಲ; ಶಿಷ್ಯೆಯ ಬಗ್ಗೆ ಅಡ್ವಾಣಿ ನೆನಪು
ಎಲ್​ಕೆ ಅಡ್ವಾಣಿ ಅವರೊಂದಿಗೆ ಸುಷ್ಮಾ ಸ್ವರಾಜ್
Sushma Chakre | news18
Updated: August 7, 2019, 11:46 AM IST
ನವದೆಹಲಿ (ಆ. 7): ನಿನ್ನೆ ರಾತ್ರಿ ಹೃದಯಾಘಾತದಿಂದ ಕೊನೆಯುಸಿರೆಳೆದ ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಜೊತೆಗಿನ ಒಡನಾಟವನ್ನು ಅನೇಕ ಹಿರಿಯ ನಾಯಕರು ಮೆಲುಕು ಹಾಕುತ್ತಿದ್ದಾರೆ. ಸುಷ್ಮಾ ಸ್ವರಾಜ್ ಜೊತೆ ಆತ್ಮೀಯ ಸಂಬಂಧ ಹೊಂದಿದ್ದ ಬಿಜೆಪಿ ಹಿರಿಯ ನಾಯಕ ಎಲ್​.ಕೆ. ಅಡ್ವಾಣಿ ಕೂಡ ತಮ್ಮಿಬ್ಬರ ಒಡನಾಟವನ್ನು ಮೆಲುಕು ಹಾಕಿದ್ದಾರೆ.

ಸುಷ್ಮಾ ಸ್ವರಾಜ್​ಗೆ ಗಾಡ್​ ಫಾದರ್​ ರೀತಿಯಲ್ಲಿದ್ದ ಎಲ್​.ಕೆ. ಅಡ್ವಾಣಿ ತಮ್ಮ ಶಿಷ್ಯೆಯ ಬಗ್ಗೆ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಯಾವುದೇ ಕಪ್ಪುಚುಕ್ಕೆಯಿಲ್ಲದ ರಾಷ್ಟ್ರಮಟ್ಟದ ನಾಯಕಿ ಸುಷ್ಮಾ ಸ್ವರಾಜ್. ಅವರ ಅಗಲಿಕೆಯಿಂದ ಈ ದೇಶಕ್ಕೆ ತೀವ್ರ ನಷ್ಟವಾಗಿದೆ. ನನಗಂತೂ ಆಕೆ ಬಹಳ ಆತ್ಮೀಯರಾಗಿದ್ದರು. ಅವರಿನ್ನು ಇಲ್ಲ ಎಂಬುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅಡ್ವಾಣಿ ಶೋಕ ಸಂದೇಶ ನೀಡಿದ್ದಾರೆ.

Sushma Swaraj Passes Away Live: ಸುಷ್ಮಾ ಸ್ವರಾಜ್​ಗೆ ಗಣ್ಯರ ನಮನ; ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಅಂತ್ಯಕ್ರಿಯೆ

ಮಹಿಳಾ ರಾಜಕಾರಣಿಗಳಿಗೆ ಆದರ್ಶವಾಗಿದ್ದ ಸುಷ್ಮಾ ಸ್ವರಾಜ್ ಅವರಿಂದ ಸ್ಫೂರ್ತಿಗೊಂಡು ಅನೇಕ ಮಹಿಳೆಯರು ರಾಜಕೀಯ ಪ್ರವೇಶ ಮಾಡಿದವರಿದ್ದಾರೆ. ಓರ್ವ ಮಹಿಳೆಯಾಗಿ ಮತ್ತು ರಾಜಕಾರಣಿಯಾಗಿ ಸುಷ್ಮಾ ಅವರದ್ದು ಮಾದರಿಯಾಗಬಲ್ಲ ವ್ಯಕ್ತಿತ್ವ. ಪ್ರತಿವರ್ಷವೂ ಅವರು ನನ್ನ ಬರ್ತಡೇಗೆ ನನ್ನಿಷ್ಟದ ಚಾಕೋಲೇಟ್ ಕೇಕ್ ತರುವುದನ್ನು ಮಿಸ್ ಮಾಡುತ್ತಿರಲಿಲ್ಲ. ಹಲವಾರು ವರ್ಷಗಳಿಂದಲೂ ನನ್ನ ಹುಟ್ಟಹಬ್ಬದ ದಿನದಂದು ಚಾಕೋಲೇಟ್ ಕೇಕ್​ನೊಂದಿಗೆ ಸುಷ್ಮಾ ನಮ್ಮನೆಯಲ್ಲಿ ಹಾಜರಾಗುತ್ತಿದ್ದರು ಎಂದು ಸುಷ್ಮಾ ಜೊತೆಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಇಂದು ಬೆಳಗ್ಗೆಯಿಂದ ರಾಷ್ಟ್ರಪತಿ ರಾಮನಾಥ ಕೋವಿಂದ್, ಸೋನಿಯಾ ಗಾಂಧಿ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಸಿಎಂ ಬಿ.ಎಸ್​. ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು ಸುಷ್ಮಾ ಸ್ವರಾಜ್ ಅವರ ಪಾರ್ಥಿವ ಶರೀರ ಅಂತಿಮ ದರ್ಶನ ಪಡೆದಿದ್ದಾರೆ. ಇಂದು ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಲಿದೆ.

 

First published:August 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...