HOME » NEWS » National-international » SUSHIL MODI URGES GOVT TO FORM LAW FOR SHARING TECH GIANTS REVENUE WITH MEDIA ORGANIZATIONS SNVS

ಫೇಸ್​ಬುಕ್, ಗೂಗಲ್ ಆದಾಯದಲ್ಲಿ ಮಾಧ್ಯಮ ಸಂಸ್ಥೆಗಳಿಗೂ ಪಾಲು ಸಿಗಬೇಕೆಂಬ ಕಾನೂನಿಗೆ ಸುಶೀಲ್ ಮೋದಿ ಒತ್ತಾಯ

ಮಾಧ್ಯಮಗಳಿಗೆ ಬರುತ್ತಿದ್ದ ಬಹುತೇಕ ಜಾಹೀರಾತುಗಳು ಈಗ ಗೂಗಲ್, ಫೇಸ್ಬುಕ್ ಸಂಸ್ಥೆಗಳ ಪಾಲಾಗುತ್ತಿವೆ. ಮಾಧ್ಯಮ ಸುದ್ದಿಗಳನ್ನ ಉಚಿತವಾಗಿ ಬಳಸಿಕೊಂಡು ಈ ಸಂಸ್ಥೆಗಳು ಹಣ ಗಳಿಸುತ್ತಿವೆ. ಈ ಆದಾಯದಲ್ಲಿ ಮಾಧ್ಯಮಗಳಿಗೂ ಪಾಲು ಕೊಡುವಂತಹ ಕಾನೂನು ರೂಪುಗೊಳ್ಳಬೇಕು ಎಂದು ಸುಶೀಲ್ ಮೋದಿ ಒತ್ತಾಯಿಸಿದ್ಧಾರೆ.

news18
Updated:March 18, 2021, 3:56 PM IST
ಫೇಸ್​ಬುಕ್, ಗೂಗಲ್ ಆದಾಯದಲ್ಲಿ ಮಾಧ್ಯಮ ಸಂಸ್ಥೆಗಳಿಗೂ ಪಾಲು ಸಿಗಬೇಕೆಂಬ ಕಾನೂನಿಗೆ ಸುಶೀಲ್ ಮೋದಿ ಒತ್ತಾಯ
ಬಿಜೆಪಿ ರಾಜ್ಯ ಸಭಾ ಸದಸ್ಯ ಸುಶೀಲ್ ಮೋದಿ
  • News18
  • Last Updated: March 18, 2021, 3:56 PM IST
  • Share this:
ನವದೆಹಲಿ(ಮಾ. 18): ಗೂಗಲ್, ಫೇಸ್‌ಬುಕ್ ಮತ್ತು ಯೂಟ್ಯೂಬ್‌ ಸಂಸ್ಥೆಗಳು ತಮ್ಮ ಜಾಹೀರಾತು ಆದಾಯವನ್ನು ಮಾಧ್ಯಮ ಸಂಸ್ಥೆಗಳೊಂದಿಗೆ ಹಂಚಿಕೊಳ್ಳುವಂತೆ ಕಾನೂನು ರೂಪಿಸಬೇಕು ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಶೀಲ್ ಮೋದಿ ಅವರು ಇಂದು ರಾಜ್ಯಸಭೆಯಲ್ಲಿ ಒತ್ತಾಯಿಸಿದರು. ಮಾಧ್ಯಮ ಕ್ಷೇತ್ರದಲ್ಲಿ ವರದಿಗಾರರು, ಪತ್ರಕರ್ತರು ಹಾಗೂ ಇತರ ಉಪಕರಣಗಳಿಗೆ ದೊಡ್ಡ ಮಟ್ಟದಲ್ಲಿ ಹಣ ಹೂಡಲಾಗಿರುತ್ತದೆ. ಆದರೆ, ಮಾಧ್ಯಮಗಳಿಗೆ ಸಿಗಬೇಕಾದ ಲಾಭ ಟೆಕ್ ಸಂಸ್ಥೆಗಳ ಪಾಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಕಾನೂನಾಗಬೇಕು. ಮಾಧ್ಯಮಗಳ ಸುದ್ದಿಯನ್ನು ಉಚಿತವಾಗಿ ಬಳಸುವ ಗೂಗಲ್, ಫೇಸ್​ಬುಕ್ ಸಂಸ್ಥೆಗಳು ತಮ್ಮ ಆದಾಯದಲ್ಲಿ ಒಂದಷ್ಟು ಪಾಲನ್ನು ಮಾಧ್ಯಮಗಳಿಗೆ ನೀಡಬೇಕು ಎಂದು ಆಸ್ಟ್ರೇಲಿಯಾ ಸೂಚಿಸಿದೆ. ಇದು ಭಾರತದಲ್ಲೂ ಆಗಬೇಕು ಎಂದು ಸುಶೀಲ್ ಮೋದಿ ಒತ್ತಾಯಿಸಿದರು.

ಸಾಂಪ್ರದಾಯಿಕ ಮಾಧ್ಯಮ ಕಂಪನಿಗಳು ಇತ್ತೀಚಿನ ದಿನಗಳಲ್ಲಿ ಇತಿಹಾಸದಲ್ಲೇ ಕೆಟ್ಟ ಸ್ಥಿತಿಯನ್ನು ತಲುಪಿವೆ ಎಂದು ಅವರು ಹೇಳಿದ್ದಾರೆ. "ಸಾಂಪ್ರದಾಯಿಕ ಮಾಧ್ಯಮ ಕಂಪನಿಗಳು ತೀವ್ರವಾದ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿವೆ. ಈ ಮೊದಲು ಅದು ಸಾಂಕ್ರಾಮಿಕ ರೋಗದಿಂದ ಆರ್ಥಿಕ ಬಿಕ್ಕಟ್ಟಿಗೆ ತುತ್ತಾಗಿದ್ದರೆ, ಈಗ ಅದು ಯೂಟ್ಯೂಬ್, ಫೇಸ್‌ಬುಕ್ ಮತ್ತು ಗೂಗಲ್‌ನಂತಹ ದೈತ್ಯ ಕಂಪನಿಗಳಿಂದಾಗಿ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿವೆ," ಎಂದು ಸುಶೀಲ್ ಮೋದಿ ಅವರು ಹೇಳಿದರು.

ಸಾಂಪ್ರದಾಯಿಕ ಮಾಧ್ಯಮ ಕಂಪನಿಗಳು ಆಂಕರ್‌ಗಳು, ಪತ್ರಕರ್ತರು, ವರದಿಗಾರರನ್ನು ನೇಮಿಸುವಲ್ಲಿ ಭಾರಿ ವೆಚ್ಚವನ್ನು ಮಾಡುತ್ತವೆ ಮತ್ತು ಸುದ್ದಿ ಮಾಧ್ಯಮಕ್ಕೆ ಜಾಹೀರಾತು ಮುಖ್ಯ ಆದಾಯದ ಮೂಲವಾಗಿದೆ ಎಂದು ಮೋದಿ ಹೇಳಿದ್ದಾರೆ. "ಕಳೆದ ಕೆಲವು ವರ್ಷಗಳಲ್ಲಿ ಗೂಗಲ್, ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಂತಹ ಟೆಕ್ ದೈತ್ಯ ಕಂಪನಿಗಳ ಆಗಮನದಿಂದ ಜಾಹೀರಾತಿನ ಹೆಚ್ಚಿನ ಪಾಲನ್ನು ಈ ಟೆಕ್ ದೈತ್ಯ ಕಂಪನಿಗಳೇ ತೆಗೆದುಕೊಳ್ಳುತ್ತಿವೆ. ಇದರಿಂದ ಸಾಂಪ್ರದಾಯಿಕ ಮಾಧ್ಯಮ ಸಂಸ್ಥೆಗಳಿಗೆ ಭಾರೀ ಆರ್ಥಿಕ ಪೆಟ್ಟು ನೀಡಿದೆ," ಎಂದು ಅವರು ಹೇಳಿದರು.

ಇದನ್ನೂ ಓದಿ: WestBengal Assembly Eelection: ಆಟ ಶುರು ಅಲ್ಲ, ಅಭಿವೃದ್ಧಿ ಆರಂಭ; ದೀದಿಗೆ ಕುಟುಕಿದ ಪ್ರಧಾನಿ ಮೋದಿ

ಈ ವಿಷಯದಲ್ಲಿ ಭಾರತ ಸರ್ಕಾರವು ಆಸ್ಟ್ರೇಲಿಯ ಮಾದರಿಯನ್ನು ಅನುಸರಿಸಬೇಕಿದೆ. ಜಾಹೀರಾತು ಹಂಚಿಕೆಯಲ್ಲಿ ಆಸ್ಟ್ರೇಲಿಯಾ ಕಾನೂನು ಸಂಹಿತೆ ಜಾರಿಗೊಳಿಸಿದಂತೆ ನಮ್ಮಲ್ಲೂ ಇಂತಹ ಕಾನೂನು ರಚಿಸಬೇಕಿದೆ. ಕಳೆದ ವಾರ ಆಸ್ಟ್ರೇಲಿಯ ಸಂಸತ್ತು, ಜಾಹೀರಾತು ಆದಾಯವನ್ನು ಸುದ್ದಿಮಾಧ್ಯಮಗಳೊಂದಿಗೆ ಗೂಗಲ್​ ಹಂಚಿಕೊಳ್ಳುವಂತೆ ನಿಯಮ ಜಾರಿ ಮಾಡಿತ್ತು. ಈಗ ಫ್ರಾನ್ಸ್ ಮತ್ತು ಇತರೆ ದೇಶಗಳು ಜಾಹೀರಾತು ಆದಾಯವನ್ನು ಹಂಚಿಕೊಳ್ಳುವಂತೆ ಕಾನೂನು ತರಲು ಮುಂದಾಗಿವೆ. ಅದರಂತೆ ನಮ್ಮಲ್ಲೂ ಸಹ ಈ ದೈತ್ಯ ಕಂಪನಿಗಳು ಜಾಹೀರಾತಿನಿಂದ ಪಡೆದುಕೊಳ್ಳುವ ಆದಾಯದ ಬಗ್ಗೆ ಮಾಹಿತಿ ಹಂಚಿಕೊಳ್ಳಬೇಕು ಎಂದು ಸುಶೀಲ್ ಮೋದಿ ಅವರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಗೂಗಲ್ ಮತ್ತು ಫೇಸ್‌ಬುಕ್ ಸಂಸ್ಥೆಗಳು ಸುದ್ದಿ ಸಂಸ್ಥೆಗಳಿಗೆ ತಮ್ಮ ಜಾಹೀರಾತು ಆದಾಯದ ನ್ಯಾಯಯುತ ಪಾಲನ್ನು ಖಾತ್ರಿಪಡಿಸಿಕೊಳ್ಳಲು ಭಾರತ ಈಗ ಮುಂದಾಗಬೇಕು ಎಂದು ರಾಜ್ಯಸಭಾ ಬಿಜೆಪಿ ಸದಸ್ಯರಾದ ಸುಶೀಲ್ ಮೋದಿ ಅವರು ಹೇಳಿದ್ದಾರೆ.

"ಸಾಮಾಜಿಕ ಮಾಧ್ಯಮ ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ನಿಯಂತ್ರಿಸಲು ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್ 2021 ಅನ್ನು ಅವರು ತಿಳಿಸಿದ ರೀತಿಯಲ್ಲಿಯೇ ಅವರು ಆಸ್ಟ್ರೇಲಿಯಾದ ಮಾದರಿಯಲ್ಲಿ ಕಾನೂನು ಜಾರಿಗೆ ತರಬೇಕು ಎಂದು ನಾನು ಒತ್ತಾಯಿಸುತ್ತೇನೆ. ಸಾಂಪ್ರದಾಯಿಕ ಮಾಧ್ಯಮಗಳೊಂದಿಗೆ ಆದಾಯವನ್ನು ಹಂಚಿಕೊಳ್ಳಿ. ಅಂತರ್ಜಾಲದಲ್ಲಿ ದೇಶೀಯವಾಗಿ ಉತ್ಪತ್ತಿಯಾಗುವ ಸುದ್ದಿ ವಿಷಯದಿಂದ ಗೂಗಲ್ ಮತ್ತು ಫೇಸ್‌ಬುಕ್‌ಗಳು ಗಳಿಸುವ ನ್ಯಾಯಯುತ ಪಾಲನ್ನು ಪಾವತಿಸಲು ಮುಂದಾಗಬೇಕು." ಎಂದು ಅವರು ತಿಳಿಸಿದ್ದಾರೆ.
Published by: Vijayasarthy SN
First published: March 18, 2021, 3:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories