sushanth singh rajput : ಬಾಲಿವುಡ್​ ಡ್ರಗ್ಸ್​ ಪ್ರಕರಣ; ಪಾಕ್​ನೊಂದಿಗೆ ಹೊಂದಿದೆ ಸಂಬಂಧ

ಮಾಹಿತಿ ಪ್ರಕಾರ 2018ರಲ್ಲಿ 1,200 ಕಿ.ಗ್ರಾನಷ್ಟು ಕೊಕೈನ್​ ಭಾರತಕ್ಕೆ ಪೂರೈಕೆಯಾಗಿದ್ದು, ಇದರಲ್ಲಿ 300 ಗ್ರಾನಷ್ಟು ಮುಂಬೈಗೆ ಸರಬರಾಜು ಮಾಡಲಾಗಿದೆ.

news18-kannada
Updated:September 21, 2020, 8:52 PM IST
sushanth singh rajput : ಬಾಲಿವುಡ್​ ಡ್ರಗ್ಸ್​ ಪ್ರಕರಣ; ಪಾಕ್​ನೊಂದಿಗೆ ಹೊಂದಿದೆ ಸಂಬಂಧ
ಸುಶಾಂತ್​ ಸಿಂಗ್​
  • Share this:
ಮುಂಬೈ (ಸೆ.21): ನಟ ಸುಶಾಂತ್​ ಸಿಂಗ್​ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಕಾಣುತ್ತಿದೆ. ಆತ್ಮಹತ್ಯೆಯೊಂದಿಗೆ ಶುರುವಾದ ತನಿಖೆ ಡ್ರಗ್ಸ್​ ಜಾಲದೊಂದಿಗೆ ನಂಟು ಹೊಂದಿತ್ತು. ಮುಂಬಯಿಗೆ ಸರಬರಾಜು ಆಗುತ್ತಿದ್ದ ಈ ಮಾದಕ ದ್ರವ್ಯಗಳು ಪಾಕಿಸ್ತಾನದೊಂದಿಗೆ ನಂಟು ಹೊಂದಿರುವ ಸಾಧ್ಯತೆ ಇದೆ ಎಂದು ನಾರ್ಕೋಟಿಕ್ಸ್​ ಕಂಟ್ರಲ್​ ಬ್ಯೂರೊ ತಿಳಿಸಿದೆ. ಡ್ರಗ್ಸ್​ ಆಯಾಮದ ಕುರಿತು ತನಿಖೆ ನಡೆಸಿರುವ ಘಟಕಕ್ಕೆ ಬಾಲಿವುಡ್​ ಮತ್ತು ಮುಂಬೈಗೆ ಕೊಕೇನ್​ ಮತ್ತು ಇನ್ನಿತರ ಡ್ರಗ್ಸ್​ಗಳು ಪಂಜಾಬ್​ನ ಅಮೃತಸರ ಮತ್ತು ಪಾಕಿಸ್ತಾನದಿಂದ ಸರಬರಾಜು ಆಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಡ್ರಗ್​ ಪೆಡ್ಲರ್​ಗಳ ಹಿಂದೆ ಯಾರಿದ್ದಾರೆ. ಎಲ್ಲಿಂದ ಇವುಗಳ ಸರಬರಾಜು ಆಗುತ್ತಿದೆ. ಯಾರಿದನ್ನು ನಿರ್ವಹಣೆ ಮಾಡುತ್ತಿದ್ದಾರ ಎಂಬ ಆಯಾಮದಲ್ಲಿ ತನಿಖೆ ನಡೆಸಲಾಗಿದೆ. ಅಷ್ಟೇ ಅಲ್ಲದೇ ಈ ಘಟನೆಯಲ್ಲಿ ಯಾರು ಭಾಗಿಯಾಗಿದ್ದಾರೆ. ಈ ಮಾದಕ ವಸ್ತುಗಳನ್ನು ಯಾರಿಗೆ ಸರಬರಾಜು ಮಾಡಲಾಗುತ್ತಿತ್ತು ಎಂಬ ಬಗ್ಗೆ ನಮಗೆ ಸ್ಪಷ್ಟತೆ ಇದೆ ಎಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹಿಂದೂಸ್ತಾನ್​ ಟೈಮ್ಸ್​ ವರದಿ ಮಾಡಿದೆ.

ಹೆರೋಯಿನ್​, ಕೊಕೈನ್​ ಮತ್ತು ಮೆಥಾಂಫೆಟಮೈನ್​ ನಂತಹ ಮಾದಕ ದ್ರವ್ಯ ಪೂರೈಕೆದಾರರ ಬಗ್ಗೆ ಸಾಕ್ಷ ಸಂಗ್ರಹಿಸಲಾಗುತ್ತಿದೆ. ಇನ್ನು ಈ ತನಿಖೆಯ ಕೇಂದ್ರ ಬಿಂದುವಾಗಿರುವ ಅಮೃತಸರ ಜೊತೆಗಿನ ನಂಟಿನ ಕುರಿತು ತನಿಖೆ ನಡೆಸಲಾಗುತ್ತಿದೆ. ಇದಕ್ಕಾಗಿ ಎನ್​ಸಿಬಿ  ಯುಎಸ್​, ಯುಕೆ ಮತ್ತು ಆಸ್ಟ್ರೇಲಿಯಾ ಏಜೆನ್ಸಿ ಸಂಪರ್ಕ ಪಡೆಯಲಿದೆ. ಈ ಮೂಲಕ ಮುಂಬೈಗೆ ಹೇಗೆ ಮಾದಕ ದ್ರವ್ಯಗಳು ಪೂರೈಕೆಯಾಗುತ್ತಿತ್ತು ಎಂಬ ಆಯಾಮದಲ್ಲಿ ವಿಚಾರಣೆ  ನಡೆಸಲಾಗುವುದು.

ಇದನ್ನು ಓದಿ: ನಟಿ ಶ್ರದ್ಧಾ ಕಪೂರ್​, ಸಾರಾ ಆಲಿಖಾನ್​ಗೆ ಸಮನ್ಸ್​ ಜಾರಿ ಸಾಧ್ಯತೆ

ಮಾಹಿತಿ ಪ್ರಕಾರ 2018ರಲ್ಲಿ 1,200 ಕಿ.ಗ್ರಾನಷ್ಟು ಕೊಕೈನ್​ ಭಾರತಕ್ಕೆ ಪೂರೈಕೆಯಾಗಿದ್ದು, ಇದರಲ್ಲಿ 300 ಗ್ರಾನಷ್ಟು ಮುಂಬೈಗೆ ಸರಬರಾಜು ಮಾಡಲಾಗಿದೆ.

ಭಾರತಕ್ಕೆ ಅಂದಾಜು ಒಂದು ಟನ್​ ಹೆರಾಯಿನ್​ ಸರಬರಾಜಾಗುತ್ತಿದ್ದು, ಇದು ಅಫ್ಘಾನ್​ ಹೆರಾಯಿನ್​ ಆಗಿದೆ. ಪಂಜಾಬ್​ (ಪಾಕಿಸ್ತಾನದಿಂದ) ಅಥವಾ ಗುಜರಾತ್​ ಸಮುದ್ರ ಮಾರ್ಗದಿಂದ ಇದು ಮುಂಬಯಿ ಬಂದು ಸೇರುತ್ತಿದೆ. ಪಾಕಿಸ್ತಾನದ ಕೆಲ ರಾಜ್ಯಗಳು ಈ ಮಾದಕ ದ್ರವ್ಯದ ಹಣವನ್ನು ಭಯೋತ್ಪಾದಕ ನಿಧಿಗೆ ಬಳಸುತ್ತಿದೆ ಎನ್ನಲಾಗಿದೆ.

ಸುಶಾಂತ್ ಸಿಂಗ್​ ರಜಪೂತ್​ ಸಾವಿನ ಪ್ರಕರಣದೊಂದಿಗೆ ಡ್ರಗ್ಸ್​ ನಂಟಿನ ಕುರಿತು ಎನ್​ಸಿಬಿ ಆಳವಾದ ತನಿಖೆ ನಡೆಸುತ್ತಿದ್ದು, ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುತ್ತಿದೆ
Published by: Seema R
First published: September 21, 2020, 8:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading