HOME » NEWS » National-international » SUSHANT SINGHS CO STAR SANDEEP NAHAR COMMITS SUICIDE AT MUMBAI SNVS

Actor Sandeep Suicide - ಎಂಎಸ್ ಧೋನಿ ಚಿತ್ರದ ಸುಶಾಂತ್ ಸಹನಟ ಸಂದೀಪ್ ನಾಹರ್ ಆತ್ಮಹತ್ಯೆ

ಎಂಎಸ್ ಧೋನಿ ಚಿತ್ರದಲ್ಲಿ ಸುಶಾಂತ್ ಜೊತೆ ನಟಿಸಿದ್ದ ಸಂದೀಪ್ ನಾಹರ್ ನಿನ್ನೆ ಮುಂಬೈನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ಫೇಸ್​ಬುಕ್​ನಲ್ಲಿ ಹಲವು ವಿಚಾರಗಳನ್ನ ತಿಳಿಸಿದ್ದಾರೆ.

news18
Updated:February 16, 2021, 7:13 AM IST
Actor Sandeep Suicide - ಎಂಎಸ್ ಧೋನಿ ಚಿತ್ರದ ಸುಶಾಂತ್ ಸಹನಟ ಸಂದೀಪ್ ನಾಹರ್ ಆತ್ಮಹತ್ಯೆ
ಸಂದೀಪ್ ನಾಹರ್
  • News18
  • Last Updated: February 16, 2021, 7:13 AM IST
  • Share this:
ಮುಂಬೈ(ಫೆ. 16): ಸುಶಾಂತ್ ಸಿಂಗ್ ರಾಜಪೂತ್ ಆತ್ಮಹತ್ಯೆ ಪ್ರಕರಣ ಇನ್ನೂ ಹೊಗೆಯಾಡುತ್ತಿರುವಂತೆಯೇ ಅವರ ಸಹನಟರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ‘ಎಂಎಸ್ ಧೋನಿ- ದಿ ಅನ್​ಟೋಲ್ಡ್ ಸ್ಟೋರಿ’ ಎಂಬ ಚಿತ್ರದಲ್ಲಿ ಸುಶಾಂತ್ ಜೊತೆ ಅಭಿನಯಿಸಿದ್ದ ನಟ ಸಂದೀಪ್ ನಾಹರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಬೈನ ಗೋರೆಗಾಂವ್ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಎಎಫ್​ಪಿ ಸುದ್ದಿ ಸಂಸ್ಥೆಯ ವರದಿಯಲ್ಲಿ ತಿಳಿಸಲಾಗಿದೆ.

ಸಂದೀಪ್ ಅವರು ನೇಣು ಬಿಗಿದುಕೊಂಡಿದ್ದರು ಎಂದು ಅವರ ಪತ್ನಿ ಹೇಳಿದ್ದಾರೆ. ಮೃತದೇಹವನ್ನ ಪೋಸ್ಟ್ ಮಾರ್ಟಂಗೆ ಕಳುಹಿಸಲಾಗಿದ್ದು, ಅದರ ವರದಿ ಬಂದ ನಂತರ ಏನಾದರೂ ಸುಳಿವು ಸಿಗಬಹುದು ಎಂದು ಡಿಸಿಪಿ ವಿಶಾಲ್ ಠಾಕೂರ್ ಹೇಳಿದ್ದಾರೆ.
ಬಾಲಿವುಡ್ ಹಾಗೂ ಕಿರುತೆರೆ ನಟರಾಗಿದ್ದ ಸಂದೀಪ್ ನಾಹರ್ ಅವರು ಎಂಎಸ್ ಧೋನಿ ದ ಅನ್​ಟೋಲ್ಡ್ ಸ್ಟೋರಿ ಚಿತ್ರವಲ್ಲದೆ ಕೇಸರಿ ಮೊದಲಾದ ಸಿನಿಮಾಗಳಲ್ಲೂ ಅಭಿನಯಿಸಿದ್ದರು. ಕಿರುತೆರೆಯಲ್ಲಿ ಇವರು ಹೆಚ್ಚು ಖ್ಯಾತರಾಗಿದ್ದಾರೆ. ಇವರ ಈ ಆತ್ಮಹತ್ಯೆಗೆ ಸಾಂಸಾರಿಕ ಜಿಗುಪ್ಸೆಯೇ ಕಾರಣ ಎನ್ನಲಾಗಿದೆ. ಸಾಯುವ ಮುನ್ನ ಅವರು ಈ ವಿಚಾರವನ್ನು ಫೇಸ್​​ಬುಕ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ನಟ ಸುಶಾಂತ್​ ಸಿಂಗ್ ಸಹೋದರಿ ಮೀತು ಸಿಂಗ್ ವಿರುದ್ಧ ನಟಿ ರಿಯಾ ಸಲ್ಲಿಸಿದ ಪ್ರಕರಣ ರದ್ದುಪಡಿಸಿದ ಬಾಂಬೆ ಹೈಕೊರ್ಟ್​ವೈವಾಹಿಕ ಜೀವನ ಸರಿಯಾಗಿಲ್ಲ. ಹೀಗಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಅವರು ಈ ಫೇಸ್​ಬುಕ್ ಪೋಸ್ಟ್​ನಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೇ ತಾನು ಜೀವನದಲ್ಲಿ ಪಟ್ಟಿರುವ ಕಷ್ಟ, ತಮ್ಮ ಸಂಬಂಧಿಕರು ಇತ್ಯಾದಿ ಬಗ್ಗೆ ನಾಹರ್ ಈ ಪೋಸ್ಟ್​​ನಲ್ಲಿ ಬರೆದಿದ್ದಾರೆ.

ನಾಹರ್ ಅವರು ಅಭಿನಯಿಸಿದ್ದ ಎಂಎಸ್ ಧೋನಿ ದಿ ಅನ್​ಟೋಲ್ಡ್ ಸ್ಟೋರಿ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದ ಸುಶಾಂತ್ ಸಿಂಗ್ ರಾಜಪೂತ್ ಕಳೆದ ವರ್ಷ ಮುಂಬೈನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಸುಶಾಂತ್ ಸಾವು ಚಿತ್ರರಂಗದಲ್ಲಿ ಸ್ವಜನ ಪಕ್ಷಪಾತದ ಬಗ್ಗೆ ಚರ್ಚೆಯನ್ನೇ ಹುಟ್ಟುಹಾಕಿತ್ತು. ಚಿತ್ರರಂಗದಲ್ಲಿ ಡ್ರಗ್ಸ್ ವಿಚಾರವೂ ಹಬೆಯಾಡುತ್ತಿದೆ.
Published by: Vijayasarthy SN
First published: February 16, 2021, 7:13 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories