Sushma ChakreSushma Chakre
|
news18-kannada Updated:August 9, 2020, 3:12 PM IST
ದಿಶಾ ಸಾಲಿಯಾನ್
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಜೂನ್ 14ರಂದು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಮನೆಯಲ್ಲಿ ಸಾವಿಗೀಡಾಗಿದ್ದರು. ಅದಕ್ಕೂ ಕೇವಲ ಒಂದು ವಾರದ ಹಿಂದೆ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದರು. ಒಂದೇ ವಾರದೊಳಗೆ ಇಬ್ಬರೂ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರ ಬಗ್ಗೆ ಸಾಕಷ್ಟು ಚರ್ಚೆಗಳಾಗಿತ್ತು. ಇದೀಗ ಸುಶಾಂತ್ ಸಾವಿನ ಪ್ರಕರಣವನ್ನು ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಿದೆ. ಗೆಳೆಯನ ಅಪಾರ್ಟ್ಮೆಂಟ್ನಲ್ಲಿ ಪಾರ್ಟಿ ಮಾಡಿ, ಮೇಲಿನ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿರುವ ದಿಶಾ ಸಾಲಿಯಾನ್ ತಾನು ಸಾಯುವ ಸ್ವಲ್ಪ ಹೊತ್ತಿಗೂ ಮುನ್ನ ಸ್ನೇಹಿತರ ಜೊತೆ ಡ್ಯಾನ್ಸ್ ಮಾಡಿ, ಎಂಜಾಯ್ ಮಾಡಿರುವ ವಿಡಿಯೋ ಈಗ ವೈರಲ್ ಆಗಿದೆ.
ಸುಶಾಂತ್ ಸಿಂಗ್ಗೆ ಮ್ಯಾನೇಜರ್ ಆಗಿದ್ದ 28 ವರ್ಷದ ದಿಶಾ ಸಾಲಿಯಾನ್ ತಮ್ಮ ಅಪಾರ್ಟ್ಮೆಂಟ್ನಲ್ಲಿ ಜೂ. 8ರಂದು ಸಾವನ್ನಪ್ಪಿದ್ದರು. ಮಹಡಿಯ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿತ್ತು, ಆಕೆ ಗರ್ಭಿಣಿಯಾಗಿದ್ದಳು ಎಂಬ ಸುದ್ದಿಯೂ ಹರಿದಾಡಿತ್ತು. ಆದರೆ, ಅದಕ್ಕೆಲ್ಲ ಆಕೆಯ ಕುಟುಂಬಸ್ಥರು ಸ್ಪಷ್ಟನೆ ನೀಡಿದ್ದು, ತಮ್ಮ ಮಗಳ ಮೇಲೆ ಅತ್ಯಾಚಾರವೂ ಆಗಿಲ್ಲ, ಆಕೆ ಗರ್ಭಿಣಿಯೂ ಆಗಿರಲಿಲ್ಲ ಎಂದಿದ್ದಾರೆ.
ದಿಶಾ ಸಾಯುವ ಸ್ವಲ್ಪ ಹೊತ್ತಿಗೂ ಮುನ್ನ ತಮ್ಮ ಗೆಳೆಯನ ಮನೆಯಲ್ಲಿ ನಡೆದ ಪಾರ್ಟಿಯಲ್ಲಿ ಸ್ನೇಹಿತ ರೋಹನ್ ರಾಯ್ ಮತ್ತು ಇತರರೊಂದಿಗೆ ನಡೆಸಿದ್ದ ಪಾರ್ಟಿಯೊಂದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಜೂನ್ 9ರಂದು ದಿಶಾ ಸಾಲಿಯಾನ್ ಮುಂಬೈನ ಅಪಾರ್ಟ್ಮೆಂಟ್ನಿಂದ ಬಿದ್ದು ಸಾವನ್ನಪ್ಪಿದ್ದರು. ಇದಾದ ಒಂದು ವಾರದ ನಂತರ ಅಂದರೆ ಜೂನ್ 14ರಂದು ಸುಶಾಂತ್ ಸಿಂಗ್ ಸಾವನ್ನಪ್ಪಿದ್ದರು. ಇದರಿಂದಾಗಿ ದಿಶಾ ಸಾವಿನ ಪ್ರಕರಣ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿತ್ತು.
28 ವರ್ಷದ ದಿಶಾ ತನ್ನ ಪ್ರಿಯಕರ ರೋಹನ್ ರಾಯ್ ಮತ್ತು ಕೆಲವು ಸ್ನೇಹಿತರೊಂದಿಗೆ ಡ್ಯಾನ್ಸ್ ಮಾಡುತ್ತಾ ಪಾರ್ಟಿ ಮಾಡಿದ್ದ ವಿಡಿಯೋ ಈಗ ವೈರಲ್ ಆಗಿದೆ. ದಿಶಾ ಸಾಲಿಯನ್ ಅವರ ಜೂನ್ 8, 2020 ರಂದು ನಡೆದ ನಿಗೂಢ ಸಾವಿನ ಬಗ್ಗೆ ಮುಂಬೈ ಪೊಲೀಸರು ಮತ್ತೊಮ್ಮೆ ತನಿಖೆ ನಡೆಸುತ್ತಿದ್ದಾರೆ.
Published by:
Sushma Chakre
First published:
August 9, 2020, 3:11 PM IST