HOME » NEWS » National-international » SUSHANT SINGH RAJPUT DEATH MUMBAI BMC RELEASES BIHAR IPS OFFICER VINAY TIWARI FROM QUARANTINE TODAY SCT

Sushant Singh Rajput: ಸುಶಾಂತ್ ಸಿಂಗ್ ಸಾವು; ಐಪಿಎಸ್​ ಅಧಿಕಾರಿ ವಿನಯ್ ತಿವಾರಿ ಮುಂಬೈ ಕ್ವಾರಂಟೈನ್​ನಿಂದ ಮುಕ್ತ

Sushant Singh Death: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಸಂಬಂಧಿಸಿದ ತನಿಖೆಗೆ ತೆರಳಿದ್ದ ಬಿಹಾರದ ಐಪಿಎಸ್ ಅಧಿಕಾರಿ ವಿನಯ್ ತಿವಾರಿ ಅವರನ್ನು ಮುಂಬೈ ಮಹಾನಗರ ಪಾಲಿಕೆ ಬಲವಂತವಾಗಿ ಕ್ವಾರಂಟೈನ್ ಗೆ ಒಳಪಡಿಸಿರುವುದು ವಿವಾದಕ್ಕೆ ಕಾರಣವಾಗಿತ್ತು. ಇಂದು ಅವರನ್ನು ಬಿಡುಗಡೆಗೊಳಿಸಲಾಗಿದೆ.

Sushma Chakre | news18-kannada
Updated:August 7, 2020, 11:50 AM IST
Sushant Singh Rajput: ಸುಶಾಂತ್ ಸಿಂಗ್ ಸಾವು; ಐಪಿಎಸ್​ ಅಧಿಕಾರಿ ವಿನಯ್ ತಿವಾರಿ ಮುಂಬೈ ಕ್ವಾರಂಟೈನ್​ನಿಂದ ಮುಕ್ತ
ಐಪಿಎಸ್ ಅಧಿಕಾರಿ ವಿನಯ್ ತಿವಾರಿ
  • Share this:
ಮುಂಬೈ (ಆ. 7): ಸುಶಾಂತ್ ಸಿಂಗ್ ರಜಪೂತ್ ರಜಪೂತ್ ಸಾವಿನ ತನಿಖೆಗೆ ಬಿಹಾರದಿಂದ ಮುಂಬೈಗೆ ಬಂದಿದ್ದ ಐಪಿಎಸ್ ಅಧಿಕಾರಿ ವಿನಯ್ ತಿವಾರಿ ಅವರನ್ನು ಬಲವಂತದಿಂದ ಕ್ವಾರಂಟೈನ್​ಗೆ ಒಳಪಡಿಸಲಾಗಿತ್ತು. ಇದಕ್ಕೆ ವ್ಯಾಪಕ ಖಂಡನೆಯೂ ವ್ಯಕ್ತವಾಗಿತ್ತು. ಈಗಾಗಲೇ ಸುಶಾಂತ್ ಸಿಂಗ್ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದ್ದು, ವಿನಯ್ ತಿವಾರಿ ಅವರ ಕ್ವಾರಂಟೈನ್​ನಿಂದ ಇಂದು ಮುಕ್ತಗೊಳಿಸಲಾಗಿದೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಜೂನ್ 14ರಂದು ಅನುಮಾನಾಸ್ಪದವಾಗಿ ಮುಂಬೈನ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದರು. ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಅವರ ಕುಟುಂಬದವರು ಸೇರಿದಂತೆ ಹಲವರು ಆರೋಪಿಸಿದ್ದರು. ಅದಾಗಿ ಒಂದೂವರೆ ತಿಂಗಳ ಬಳಿಕ ಕೇಂದ್ರ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿತ್ತು. ಈ ಪ್ರಕರಣದಲ್ಲಿ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ವಿರುದ್ಧವೂ ಆರೋಪಗಳು ಕೇಳಿಬಂದಿತ್ತು.

ಇದನ್ನೂ ಓದಿ: Anupama Pathak Suicide: ಫೇಸ್​ಬುಕ್ ಲೈವ್​ ನಂತರ ಭೋಜ್​ಪುರಿ ನಟಿ ಆತ್ಮಹತ್ಯೆ; ಮುಂಬೈನಲ್ಲಿ ಅನುಪಮಾ ಪಾಠಕ್ ಸಾವು

ಈ ನಡುವೆ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಸಂಬಂಧಿಸಿದ ತನಿಖೆಗೆ ತೆರಳಿದ್ದ ಬಿಹಾರದ ಐಪಿಎಸ್ ಅಧಿಕಾರಿ ವಿನಯ್ ತಿವಾರಿ ಅವರನ್ನು ಮುಂಬೈ ಮಹಾನಗರ ಪಾಲಿಕೆ ಬಲವಂತವಾಗಿ ಕ್ವಾರಂಟೈನ್ ಗೆ ಒಳಪಡಿಸಿರುವುದು ವಿವಾದಕ್ಕೆ ಕಾರಣವಾಗಿತ್ತು. ನಟಿ ರಿಯಾ ಚಕ್ರವರ್ತಿ ವಿರುದ್ಧ ಸುಶಾಂತ್ ತಂದೆ ಕೆ.ಕೆ.ಸಿಂಗ್ ಸಲ್ಲಿಸಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಲು ಬಿಹಾರ ಪೊಲೀಸರ ತಂಡ ಮುಂಬೈಗೆ ತೆರಳಿತ್ತು. ಆದರೆ, ಅವರನ್ನು ಬಲವಂತವಾಗಿ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಬೇರೆಯವರಿಗೆ ಇಲ್ಲದ ನಿಯಮವನ್ನು ಪೊಲೀಸರ ಮೇಲೆ ಮಾತ್ರ ಹೇರಿ ಗೃಹಬಂಧನಕ್ಕೊಳಪಡಿಸಲಾಗಿದೆ. ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇದೀಗ ಬಿಹಾರ ಪೊಲೀಸ್ ಇಲಾಖೆಯ ಮನವಿ ಮೇರೆಗೆ ಐಪಿಎಸ್​ ಅಧಿಕಾರಿ ವಿನಯ್ ತಿವಾರಿ ಅವರನ್ನು ಕ್ವಾರಂಟೈನ್​ನಿಂದ ಇಂದು ಬಿಡುಗಡೆಗೊಳಿಸಲಾಗಿದೆ . ಅವರು ನಾಳೆ ಪಾಟ್ನಾಗೆ ವಾಪಾಸ್ ತೆರಳಲಿದ್ದಾರೆ.


ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಸಿಬಿಐಗೆ ವಹಿಸಿರುವುದರಿಂದ ವಿನಯ್ ತಿವಾರಿ ಪಾಟ್ನಾಗೆ ವಾಪಾಸ್ ತೆರಳಲಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಹಾರ್ ಡಿಜಿಪಿ ಗುಪ್ತೇಶ್ವರ್ ಪಾಂಡೆ, ಬಿಹಾರ ಪೊಲೀಸ್ ಕೇಂದ್ರ ಕಚೇರಿಯಿಂದ ನಿನ್ನೆ ಬಿಎಂಸಿ ಕಮಿಷನರ್​ಗೆ ಪತ್ರ ಬರೆದು, ಐಪಿಎಸ್ ಅಧಿಕಾರಿ ವಿನಯ್ ತಿವಾರಿ ಅವರನ್ನು ಕ್ವಾರಂಟೈನ್​ನಿಂದ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದ್ದೆವು. ಅದರಂತೆ ಅವರನ್ನು ಇಂದು ರಿಲೀಸ್ ಮಾಡಲಾಗಿದೆ. ನಾಳೆ ಸಂಜೆಯ ವೇಳೆಗೆ ವಿನಯ್ ತಿವಾರಿ ಪಾಟ್ನಾಗೆ ವಾಪಾಸ್ ಬರಲಿದ್ದಾರೆ. ಬಿಎಂಸಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.
Published by: Sushma Chakre
First published: August 7, 2020, 11:48 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories