Sushant Singh Case: ನಟಿ ರಿಯಾ ಚಕ್ರಬರ್ತಿ ಜಾಮೀನು ಅರ್ಜಿ ತಿರಸ್ಕಾರ; 14 ದಿನ ನ್ಯಾಯಾಂಗ ಬಂಧನ

SSR Death Case: ಕಳೆದ ಮೂರು ದಿನಗಳಿಂದಲೂ ರಿಯಾ ಚಕ್ರಬರ್ತಿ ಅವರನ್ನ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಭಾನುವಾರ 6 ಗಂಟೆ, ಸೋಮವಾರ 8 ಗಂಟೆ ಹಾಗೂ ನಿನ್ನೆ ಮಂಗಳವಾರ ಐದಾರು ಗಂಟೆಗಳ ಕಾಲ ಎನ್ಸಿಬಿ ಅಧಿಕಾರಿಗಳು ನಟಿಯ ವಿಚಾರಣೆ ನಡೆಸಿ ನಂತರ ಬಂಧಿಸಿದ್ದರು. ಇದೀಗ ನಟಿಯನ್ನು 14 ದಿನ ಜ್ಯುಡಿಷಿಯಲ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ.

ಸುಶಾಂತ್​ ಹಾಗೂ ರಿಯಾ ಚಕ್ರವರ್ತಿ

ಸುಶಾಂತ್​ ಹಾಗೂ ರಿಯಾ ಚಕ್ರವರ್ತಿ

 • News18
 • Last Updated :
 • Share this:
  ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪೂತ್ ಸಾವು ಹಾಗೂ ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿರುವ ನಟಿ ರಿಯಾ ಚಕ್ರಬರ್ತಿ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ರಿಯಾ ಅವರನ್ನು ಎನ್​ಸಿಬಿ 14 ದಿನ ಕಾಲ ನ್ಯಾಯಾಂಗ ಕಸ್ಟಡಿಗೆ ಪಡೆದಿದೆ. ರಿಯಾ ಚಕ್ರಬರ್ತಿ ಅವರು ಇಂದು ಮುಂಬೈನ ಸೆಷನ್ಸ್ ಕೋರ್ಟ್​ನಲ್ಲಿ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. “ರಿಯಾ ಅವರನ್ನು ಬಂಧಿಸಲಾಗಿದ್ದು, ಅವರ ಕುಟುಂಬಕ್ಕೆ ಮಾಹಿತಿ ನೀಡುವ ಪ್ರಕ್ರಿಯೆ ಮುಗಿದಿದೆ” ಎಂದು ಎನ್​ಸಿಬಿ ಡೆಪ್ಯೂಟಿ ಡೈರೆಕ್ಟರ್ ಕೆಪಿಎಸ್ ಮಲ್ಹೋತ್ರ ತಿಳಿಸಿದ್ದಾರೆ.

  ಇದಕ್ಕೂ ಮೊದಲು ಕಳೆದ ಮೂರು ದಿನಗಳಿಂದಲೂ ನಾರ್ಕೋಟಿಕ್ಸ್ ಕ್ರಂಟ್ರೋಲ್ ಬ್ಯೂರೋ (ಎನ್​ಸಿಬಿ) ರಿಯಾ ಚಕ್ರಬರ್ತಿ ಅವರನ್ನ ತೀವ್ರ ವಿಚಾರಣೆಗೆ ಒಳಪಡಿಸಿತ್ತು. ಭಾನುವಾರ 6 ಗಂಟೆ, ಸೋಮವಾರ 8 ಗಂಟೆ ಹಾಗೂ ನಿನ್ನೆ ಮಂಗಳವಾರ ಐದಾರು ಗಂಟೆಗಳ ಕಾಲ ಎನ್​ಸಿಬಿ ಅಧಿಕಾರಿಗಳು ನಟಿಯ ವಿಚಾರಣೆ ನಡೆಸಿ ನಂತರ ಬಂಧಿಸಿದ್ದರು.

  ಇದನ್ನೂ ಓದಿ: Sanjjanaa Galrani: ನಟಿ ಸಂಜನಾ 5 ದಿನ ಸಿಸಿಬಿ ಪೊಲೀಸರ ವಶಕ್ಕೆ - ಕೋರ್ಟ್​ ಆದೇಶ

  ಮೂರು ದಿನಗಳ ಹಿಂದೆ ಬಂಧಿತರಾಗಿದ್ದ ರಿಯಾ ಚಕ್ರಬರ್ತಿಯ ಸಹೋದರ ಶೌವಿಕ್ ಚಕ್ರಬರ್ತಿ, ಸುಶಾಂತ್ ಮನೆಯ ಮ್ಯಾನೇಜರ್ ಸ್ಯಾಮುಯೆಲ್ ಮಿರಾಂಡ, ಮನೆ ಸಹಾಯಕ ದೀಪೇಶ್ ಸಾವಂತ್ ಅವರ ಎನ್​ಸಿಬಿ ಕಸ್ಟಡಿ ಅವಧಿ ಇವತ್ತು ಮುಗಿಯುತ್ತದೆ. ಎನ್​ಸಿಬಿ ಕಸ್ಟಡಿಯಲ್ಲಿ ಡ್ರಗ್ ಪೆಡ್ಲೆರ್ಸ್ ಎನ್ನಲಾಗಿರುವ ಅಬ್ದುಲ್ ಬಸಿತ್ ಪರಿಹಾರ್ ಹಾಗೂ ಝೇದ್ ವಿಲಾತ್ರ ಕೂಡ ಇದ್ದಾರೆ.

  ಇದನ್ನೂ ಓದಿ: ಡ್ರಗ್ಸ್ ಪ್ರಕರಣದಲ್ಲಿ ಕೇವಲ ಸಿನಿಮಾ ರಂಗವನ್ನ ಮಾತ್ರ ಟಾರ್ಗೆಟ್ ಮಾಡಬೇಡಿ -  ಸಂಸದೆ ಸುಮಲತಾ ಮನವಿ

  ಎರಡು ತಿಂಗಳ ಹಿಂದೆ ಸುಶಾಂತ್ ಸಿಂಗ್ ರಾಜಪೂತ್ ಅವರ ಶವ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬುದು ಮುಂಬೈ ಪೊಲೀಸರ ಶಂಕೆಯಾಗಿತ್ತು. ಆದರೆ, ಸುಶಾಂತ್ ಅವರದ್ದು ಆತ್ಮಹತ್ಯೆಯಲ್ಲ ಕೊಲೆ; ಸುಶಾಂತ್ ಸಾವಿಗೆ ರಿಯಾ ಅವರೇ ಕಾರಣ ಎಂದು ಸುಶಾಂತ್ ಕುಟುಂಬದವರ ಆರೋಪ. ಪಾಟ್ನಾದಲ್ಲಿ ದೂರು ಕೂಡ ದಾಖಲಿಸಿದ್ದರು. ಇದೀಗ ಸುಶಾಂತ್ ಸಾವು ಪ್ರಕರಣದಲ್ಲಿ ಡ್ರಗ್ಸ್ ದಂಧೆ ತಳುಕು ಹಾಕಿಕೊಂಡಿದೆ. ಸುಶಾಂತ್ ಸಾವಿಗೆ ಡ್ರಗ್ಸ್ ಮಾಫಿಯಾ ಕೈವಾಡ ಇದೆಯಾ ಎಂಬ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ.
  Published by:Vijayasarthy SN
  First published: