HOME » NEWS » National-international » SUSHANT SINGH DEATH CASE 35 PEOPLE NAMED IN CHARGESHEET FILED BY NCB SNVS

Sushant Case - ಸುಶಾಂತ್ ಪ್ರಕರಣ: ರಿಯಾ ಚಕ್ರಬರ್ತಿ ಸೇರಿ 35 ಮಂದಿ ವಿರುದ್ಧ ಎನ್​ಸಿಬಿ ಚಾರ್ಜ್​ಶೀಟ್

ನಟಿ ರಿಯಾ ಚಕ್ರಬರ್ತಿ, ಆಕೆಯ ಸಹೋದರ ಸೇರಿದಂತೆ 35 ಮಂದಿ ವಿರುದ್ಧ ಎನ್ಸಿಬಿ ಇಂದು ಆರೋಪ ಪಟ್ಟಿ ದಾಖಲು ಮಾಡಿದೆ. ಇವರ ಪೈಕಿ ಸದ್ಯ ಐವರು ನಾಪತ್ತೆಯಾಗಿದ್ದಾರೆ. ಅವರ ಹುಡುಕಾಟ ನಡೆದಿದೆ.

news18
Updated:March 5, 2021, 12:56 PM IST
Sushant Case - ಸುಶಾಂತ್ ಪ್ರಕರಣ: ರಿಯಾ ಚಕ್ರಬರ್ತಿ ಸೇರಿ 35 ಮಂದಿ ವಿರುದ್ಧ ಎನ್​ಸಿಬಿ ಚಾರ್ಜ್​ಶೀಟ್
ಸುಶಾಂತ್ ಸಿಂಗ್ ರಾಜಪೂತ್
  • News18
  • Last Updated: March 5, 2021, 12:56 PM IST
  • Share this:
ಮುಂಬೈ(ಮಾ. 05): ಕಳೆದ ವರ್ಷ ಮೃತಪಟ್ಟ ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪೂತ್ ಅವರ ಸಾವು ಪ್ರಕರಣಕ್ಕೆ ತಳುಕುಹಾಕಿಕೊಂಡಿರುವ ಡ್ರಗ್ಸ್ ಪ್ರಕರಣದಲ್ಲಿ ಎನ್​ಸಿಬಿ ಇಂದು 35 ಮಂದಿ ವಿರುದ್ಧ ಎನ್​ಡಿಪಿಎಸ್ ಕೋರ್ಟ್​ನಲ್ಲಿ ಆರೋಪಪಟ್ಟಿ ದಾಖಲಿಸಿದೆ. ಸುಶಾಂತ್ ಸಾವು ಪ್ರಕರಣದಲ್ಲಿ ಆರೋಪಿಯಾಗಿದ್ದ ನಟಿ ರಿಯಾ ಚಕ್ರಬರ್ತಿ ಅವರ ಹೆಸರೂ ಡ್ರಗ್ಸ್ ಕೇಸ್​ನಲ್ಲಿ ದಾಖಲಾಗಿರುವ ಚಾರ್ಜ್​ಶೀಟ್​ನಲ್ಲಿದೆ. ರಿಯಾ ಸಹೋದರ ಶೌವಿಕ್ ಚಕ್ರಬರ್ತಿ, ಸುಶಾಂತ್ ಸಿಂಗ್ ಅವರ ಮಾಜಿ ಮ್ಯಾನೇಜರ್ ಸ್ಯಾಮುಯೆಲ್ ಮಿರಾಂಡ, ಅವರ ಮನೆಗೆಲಸದವ ದೀಪೇಶ್ ಸಾವಂತ್ ಅವರ ಹೆಸರೂ ಇದೆ. ಆರೋಪ ಪಟ್ಟಿಯಲ್ಲಿರುವ 35 ಮಂದಿ ಪೈಕಿ ಐವರು ನಾಪತ್ತೆಯಾಗಿದ್ದಾರೆ.

ಡ್ರಗ್ಸ್ ಪ್ರಕರಣದ ತನಿಖೆ ನಡೆಸಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ಮಂಬೈ ವಿಭಾಗದ ನಿರ್ದೇಶಕ ಸಂಜಯ್ ವಾಂಖಡೆ ಅವರು ಚಾರ್ಜ್ ಶೀಟ್ ಸಲ್ಲಿಕೆಯಾಗಿರುವುದನ್ನು ಖಚಿಪಡಿಸಿದ್ಧಾರೆ. ಆದರೆ, ಅದರ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು ನಿರಾಕರಿಸಿದ್ಧಾರೆ. ಆದರೆ, ಎನ್​ಸಿಬಿ ಮೂಲಗಳ ಪ್ರಕಾರ, ಸಿಂಥೆಟಿಕ್ ನಾರ್ಕೋಟಿಕ್ಸ್ ಸೇರಿದಂತೆ ಹಲವು ಮಾದಕ ವಸ್ತುಗಳನ್ನ ಅತ್ಯುನ್ನತ ಮಟ್ಟದಲ್ಲಿ ಖರೀದಿಸಿ ಮುಂಬೈನ ವಿವಿಧ ಮಂದಿಗೆ ಹೇಗೆ ವಿತರಣೆ ಮಾಡಲಾಗುತ್ತಿತ್ತು ಎಂಬುದನ್ನು ಆರೋಪ ಪಟ್ಟಿಯಲ್ಲಿ ಪ್ರಸ್ತಾಪಿಸಲಾಗಿದೆಯಂತೆ. ಡ್ರಗ್ಸ್ ತಯಾರಿಕೆಯಿಂದ ಹಿಡಿದು ಸರಬರಾಜು ಸರಪಳಿ (Supply Chain) ಮೂಲಕ ಬಳಕೆದಾರರ ಕೈ ತಲುಪುವ ಮಾರ್ಗಗಳನ್ನ ಎನ್​ಸಿಬಿ ಬಿಚ್ಚಿಟ್ಟಿದೆ. ಎನ್​ಸಿಬಿ ಅಧಿಕಾರಿಗಳು ವಿವಿಧೆಡೆ ನಡೆಸಿದ ರೇಡ್ ವೇಳೆ ವಶಪಡಿಸಿಕೊಳ್ಳಲಾದ ಮೊಬೈಲ್​ಗಳಲ್ಲಿನ ವಾಟ್ಸಾಪ್ ಸಂದೇಶ ಇತ್ಯಾದಿ ಅಂಶಗಳನ್ನ ಸಾಕ್ಷ್ಯವಾಗಿ ನೀಡಲಾಗಿದೆ ಎಂದು ಎನ್​ಸಿಬಿ ಮೂಲಗಳು ಹೇಳಿವೆ.

ಇದನ್ನೂ ಓದಿ: Nita Ambani - ಎಲ್ಲಾ ಸಿಬ್ಬಂದಿವರ್ಗ ಮತ್ತವರ ಕುಟುಂಬದವರ ಕೋವಿಡ್ ಲಸಿಕೆ ವೆಚ್ಚ ಭರಿಸುತ್ತಿದೆ ರಿಲಾಯನ್ಸ್

ಎಲ್​ಎಸ್​ಡಿ ಶೀಟ್, ಮರಿಜುವಾನಾದಂಥ ಡ್ರಗ್​ಗಳನ್ನ ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದ ಆರೋಪ ಇರುವ ಅನುಜ್ ಕೇಶವಾನಿ ಅವರ ಹೆಸರು ಈ ಚಾರ್ಜ್​ಶೀಟ್​ನಲ್ಲಿರುವುದು ತಿಳಿದುಬಂದಿದೆ. ಹಾಗೆಯೇ, ನಟ ಅರ್ಜುನ್ ರಾಮಪಾಲ್ ಅವರ ಪಾರ್ಟ್ನರ್​ನ ಸಹೋದರ ಅಗಿಸಿಲಾವೊಸ್ ಡೆಮೆಟ್ರಿಯಾಡೆಸ್ ಸೇರಿದಂತೆ ಇಬ್ಬರು ವಿದೇಶಿಗರು ಹಾಗೂ ಅವರೊಂದಿಗೆ ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಆರೋಪಪಟ್ಟಿಯಲ್ಲಿದ್ದಾರೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪೂತ್ ಅವರು 2020, ಜೂನ್ 14ರಂದು ತಮ್ಮ ಮುಂಬೈ ನಿವಾಸದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಪ್ರಕರಣದ ತನಿಖೆ ನಡೆಸುವಾಗ ಡ್ರಗ್ಸ್ ಪ್ರಕರಣವೂ ತಳುಕು ಹಾಕಿಕೊಂಡಿರುವುದು ಕಂಡು ಬಂದು 2020, ಆಗಸ್ಟ್ 26ರಂದು ಅಧಿಕೃತವಾಗಿ ಪ್ರಕರಣ ದಾಖಲಾಯಿತು. ಸುಶಾಂತ್ ಸಾವಿನ ಹಿಂದೆ ಡ್ರಗ್ಸ್ ಜಾಲದ ಕೈವಾಡ ಇರಬಹುದು ಎಂಬ ಶಂಕೆ ಇದೆ.
Published by: Vijayasarthy SN
First published: March 5, 2021, 12:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories