news18-kannada Updated:November 11, 2020, 12:00 PM IST
ಡೆಲ್ಲಿ ನೀಡಿದ್ದ 157 ರನ್ಗಳ ಸಾಧಾರಣ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಸ್ಫೋಟಕ ಆರಂಭ ಪಡೆದುಕೊಳ್ಳುವ ಜೊತೆ ಒಂದು ವಿಕೆಟ್ ಕಳೆದುಕೊಂಡಿತು. ಓಪನರ್ಗಳಾದ ಕ್ವಿಂಟನ್ ಡಿಕಾಕ್ ಹಾಗೂ ನಾಯಕ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದರು.
ದೇಶೀಯ ಕ್ರಿಕೆಟ್ ಹಾಗೂ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾಗೆ ಆಯ್ಕೆಯಾಗಿರಲಿಲ್ಲ. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು. ಅಷ್ಟೇ ಅಲ್ಲ, ರಾಯಲ್ ಚಾಲೆಂಜರ್ಸ್ ವಿರುದ್ಧದ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಅವರನ್ನು ದಿಟ್ಟಿಸಿ ನೋಡಿ ಸಾಕಷ್ಟು ಸುದ್ದಿ ಆಗಿದ್ದರು. ಆದರೆ, ಈಗ ಅವರು ನಾಯಕ ರೋಹಿತ್ ಶರ್ಮ ಅವರಿಗಾಗಿ ಮಾಡಿದ ತ್ಯಾಗದ ವಿಚಾರ ಸಾಕಷ್ಟು ಮೆಚ್ಚುಗೆ ಪಡೆದುಕೊಳ್ಳುತ್ತಿದೆ.
ಡೆಲ್ಲಿ ನೀಡಿದ್ದ 157 ರನ್ಗಳ ಸಾಧಾರಣ ಟಾರ್ಗೆಟ್ ಬೆನ್ನಟ್ಟಿದ
ಮುಂಬೈ ಸ್ಫೋಟಕ ಆರಂಭ ಪಡೆದುಕೊಳ್ಳುವ ಜೊತೆ ಒಂದು ವಿಕೆಟ್ ಕಳೆದುಕೊಂಡಿತು. ಓಪನರ್ಗಳಾದ ಕ್ವಿಂಟನ್ ಡಿಕಾಕ್ ಹಾಗೂ ನಾಯಕ
ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಮೊದಲ 4 ಓವರ್ನಲ್ಲೇ 45 ರನ್ ಚಚ್ಚಿದರು. ಆದರೆ, 5ನೇ ಓವರ್ನಲ್ಲಿ ಕೀಪರ್ಗೆ ಕ್ಯಾಚಿತ್ತು ಡಿಕಾಕ್(20) ಔಟ್ ಆದರು.
ಈ ವೇಳೆ ಬ್ಯಾಟಿಂಗ್ಗೆ ಬಂದಿದ್ದು ಸೂರ್ಯಕುಮಾರ್. ಇಬ್ಬರೂ ಉತ್ತಮವಾಗಿಯೇ ಆಡುತ್ತಿದ್ದರು. ಈ ವೇಳೆ ರೋಹಿತ್ ನೇರವಾಗಿ ಬೀಸಿದ ಬ್ಯಾಟ್ ಫೀಲ್ಡರ್ ಕೈ ಸೇರಿತ್ತು. ಇದನ್ನು ಗಮನಿಸದ ಅವರು ರನ್ ಕದಿಯಲು ಯತ್ನಿಸಿದ್ದರು. ಆದರೆ, ಸೂರ್ಯ ಕುಮಾರ್ ಓಡಿಯೇ ಇರಲಿಲ್ಲ. ಇಬ್ಬರೂ ಒಂದೇ ದಿಕ್ಕಿನಲ್ಲಿ ನಿಂತು ಬಿಟ್ಟಿದ್ದರು. ಈ ವೇಳೆ ನಾಯಕನ ರಕ್ಷಣೆಗೆ ಮುಂದಾದ ಸೂರ್ಯಕುಮಾರ್, ರೋಹಿತ್ಗೆ ಸ್ಕ್ರೀಜ್ ಬಿಟ್ಟುಕೊಟ್ಟರು. ಈ ಮೂಲಕ ತಾವು ಔಟ್ ಆದರು.
Published by:
Rajesh Duggumane
First published:
November 11, 2020, 10:10 AM IST