ಶನಿ ಮಹಾತ್ಮ ಜಯಂತಿಯ ದಿನವಾದ ಇಂದು ಈ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದೆ. ಈ ಕಂಕಣ ಸೂರ್ಯಗ್ರಹಣ ಈ ಬಾರಿ ವೃಷಭ ರಾಶಿ ಮತ್ತು ಮೃಗಶಿರ ನಕ್ಷತ್ರದಲ್ಲಿ ಸೂರ್ಯಗ್ರಹಣ ನಡೆಯಲಿದ್ದು, ವೃಷಭ ರಾಶಿಯಲ್ಲಿ ಗೋಚರವಾಗಲಿದೆ. ಈ ಸೂರ್ಯ ಗ್ರಹಣವನ್ನು ಆನ್ಲೈನ್ನಲ್ಲಿ ವೀಕ್ಷಿಸಬಹುದು. ನಾಸಾ ಟಿವಿಯಲ್ಲಿ (NASA TV) ಸೂರ್ಯಗ್ರಹಣವನ್ನು (Solar Eclipse Live) ಲೈವ್ ಆಗಿ ವೀಕ್ಷಿಸಬಹುದು. ಭಾರತದ 2 ರಾಜ್ಯಗಳಲ್ಲಿ ಮಾತ್ರ ಈ ಸೂರ್ಯಗ್ರಹಣ ಗೋಚರವಾಗುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಈ ವರ್ಷದ ಮೊದಲ ಸೂರ್ಯಗ್ರಹಣ ಇಂದು ನಡೆಯಲಿದೆ. ಈಶಾನ್ಯ ಅಮೇರಿಕಾ, ಅಟ್ಲಾಂಟಿಕ್ ಸಾಗರದ ಕೆಲವು ಭಾಗ, ಯುರೋಪ್, ಏಷ್ಯಾ, ಕೆನಡಾ, ರಷ್ಯಾ ರಾಷ್ಟ್ರಗಳಲ್ಲಿ ಸೂರ್ಯಗ್ರಹಣ ಸಂಪೂರ್ಣವಾಗಿ ಗೋಚರವಾಗಲಿದೆ. ಇಂದು ಅಮಾವಾಸ್ಯೆ ದಿನವಾಗಿದ್ದು, ಶನಿ ಜಯಂತಿ ಕೂಡ ಇದೆ. ಹೀಗಾಗಿ, ಈ ಬಾರಿಯ ಸೂರ್ಯಗ್ರಹಣ (Surya Grahan) ಕೊಂಚ ವಿಶೇಷವಾಗಿರಲಿದೆ.
ಇದನ್ನೂ ಓದಿ: Petrol Price Today: ಶಿವಮೊಗ್ಗದಲ್ಲೂ 100 ರೂ. ದಾಟಿದ ಪೆಟ್ರೋಲ್ ಬೆಲೆ; ವಾಹನ ಸವಾರರಿಗೆ ಬೆಲೆಯೇರಿಕೆಯ ಶಾಕ್
ಇಂದು ಸೂರ್ಯಗ್ರಹಣ ಭಾರತದಲ್ಲಿ ಸಂಪೂರ್ಣವಾಗಿ ಗೋಚರವಾಗುವುದಿಲ್ಲ. ಆದರೆ, ಅರುಣಾಚಲ ಪ್ರದೇಶ ಮತ್ತು ಲಡಾಖ್ ಭಾಗದಲ್ಲಿ ಇಂದು ಸೂರ್ಯಾಸ್ತಕ್ಕೂ ಮುನ್ನ ಸೂರ್ಯಗ್ರಹಣ ಗೋಚರವಾಗಲಿದೆ. ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಸೂರ್ಯಗ್ರಹಣ ಗೋಚರವಾಗುವುದಿಲ್ಲ. ಇಂದು ಮಧ್ಯಾಹ್ನ 2.30ರಿಂದ ನಾಸಾದ ವೆಬ್ಸೈಟ್ನಲ್ಲಿ ಈ ಸೂರ್ಯಗ್ರಹಣ ನೇರ ಪ್ರಸಾರವಾಗಲಿದೆ.
ಇಂದು ಮಧ್ಯಾಹ್ನ 1.42ಕ್ಕೆ ಆರಂಭವಾಗುವ ಸೂರ್ಯಗ್ರಹಣ ಸಂಜೆ 6.41ರವರೆಗೂ ಇರಲಿದೆ. ಈ ಅವಧಿಯೊಳಗೆ ನಡೆಯುವ ಸೂರ್ಯಗ್ರಹಣ ಕೇವಲ 3 ನಿಮಿಷ 51 ಸೆಕೆಂಡ್ಗಳ ಕಾಲ ಮಾತ್ರ ಗೋಚರವಾಗಲಿದೆ. ವರ್ಷದ ಮೊದಲ ಈ ವಿಶೇಷವಾದ ಸೂರ್ಯಗ್ರಹಣವನ್ನು ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಕಾದು ಕುಳಿತಿದೆ. ನಾಸಾ ನೀಡಿರುವ ಮಾಹಿತಿ ಪ್ರಕಾರ, ರಷ್ಯಾ, ಕೆನಡಾ ಮತ್ತು ಗ್ರೀನ್ಲ್ಯಾಂಡ್ನಲ್ಲಿ ಸಂಪೂರ್ಣವಾಗಿ ಸೂರ್ಯಗ್ರಹಣದ ದರ್ಶನವಾಗಲಿದೆ.
ಈ ಹಿಂದೆ 1873ರಲ್ಲಿ ಶನಿ ಜಯಂತಿಯಂದು ಸೂರ್ಯಗ್ರಹಣ ಸಂಭವಿಸಿತ್ತು. ಅದಾದ 148 ವರ್ಷಗಳ ನಂತರ ಶನಿ ಜಯಂತಿ ದಿನದಂದು ಇಂದು ಸೂರ್ಯಗ್ರಹಣ ಸಂಭವಿಸಲಿದೆ. ಇಂದು ಮಧ್ಯಾಹ್ನ 1. 42ರಿಂದ ಸೂರ್ಯಗ್ರಹಣ ಆರಂಭವಾಗಲಿದ್ದು, ಸಂಜೆ 6:41ಕ್ಕೆ ಕೊನೆಯಾಗಲಿದೆ. ಈ ಅವಧಿಯನ್ನು ಸೂತಕಕಾಲ ಎಂದು ಪರಿಗಣಿಸಲಾಗಿದೆ.
ನಾಸಾ ಮಾತ್ರವಲ್ಲದೆ ಬೇರೆ ಮಾಧ್ಯಮಗಳಲ್ಲೂ ಸೂರ್ಯಗ್ರಹಣ ನೇರ ಪ್ರಸಾರ ಇರಲಿದೆ. ಮಧ್ಯಾಹ್ನ 2.30ರ ಬಳಿಕ ಈ ಲಿಂಕ್ನಲ್ಲಿ ಸೂರ್ಯಗ್ರಹಣದ ನೇರಪ್ರಸಾರವನ್ನು ವೀಕ್ಷಿಸಬಹುದು. ಸೂರ್ಯನ ಬಹುತೇಕ ಭಾಗ ಮುಚ್ಚಿಕೊಂಡು ಸುತ್ತ ಬಳೆ ತೊಟ್ಟಂತೆ ಸೂರ್ಯ ಗೋಚರವಾಗುವುದಕ್ಕೆ ಇದಕ್ಕೆ ಕಂಕಣ ಸೂರ್ಯಗ್ರಹಣ ಎಂದು ಕರೆಯುತ್ತಾರೆ
ಇಂದು ಶೇ. 97ರಷ್ಟು ಭಾಗ ಚಂದ್ರನು ಸೂರ್ಯನನ್ನು ಆವರಿಸಲಿದ್ದಾನೆ. ಎಲ್ಲೆಲ್ಲಿ ಸೂರ್ಯಗ್ರಹಣ ಗೋಚರವಾಗುತ್ತದೆಯೋ ಅಲ್ಲಿ ಸೂತಕದ ಅವಧಿ ಇರಲಿದೆ. ಆ ಪ್ರದೇಶಗಳಲ್ಲಿ ಸೂರ್ಯಗ್ರಹಣದ ಸಂದರ್ಭದಲ್ಲಿ ಊಟ, ತಿಂಡಿಗಳನ್ನು ಮಾಡದಿರುವುದು ಉತ್ತಮ ಎನ್ನಲಾಗಿದೆ. ಈ ಬಾರಿ ವೃಷಭ ರಾಶಿ ಮತ್ತು ಮೃಗಶಿರಾ ನಕ್ಷತ್ರದಲ್ಲಿ ಸೂರ್ಯಗ್ರಹಣ ನಡೆಯಲಿದ್ದು, ವೃಷಭ ರಾಶಿಯವರ ಮೇಲೆ ಸೂರ್ಯಗ್ರಹಣದ ಪ್ರಭಾವ ಹೆಚ್ಚಾಗಿರಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ