ಒಂಗೋಲ್: ಹಾವುಗಳು ಜಗಳವಾಡೋದನ್ನು ಕೇಳಿದ್ದೀವಿ. ಹಾವು ಮುಂಗುಸಿ ಅಥವಾ ಇನ್ಯಾವುದೋ ಪ್ರಾಣಿಗಳು ಪರಸ್ಪರ ಕಿತ್ತಾಡೋದನ್ನೂ ನೋಡಿರ್ತೀರಿ. ಆದರೆ ಯಾವತ್ತಾದ್ರೂ ಎರಡು ಹಲ್ಲಿಗಳು (Garden Lizards) ಜಗಳವಾಡೋದನ್ನು ನೋಡಿದ್ದೀರಾ? ಇಲ್ಲವೆಂದರೆ ಈ ಫೋಟೋ ನೋಡಿ.
ಇದು ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಒಂಗೋಲ್‌ನಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಮೀಪದಲ್ಲಿ ಕಂಡು ಬಂದಿರುವ ದೃಶ್ಯ. ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡುವ ಪ್ರವಾಸಿಗರ ಕಣ್ಣಿಗೆ ಈ ಅಪರೂಪದ ದೃಶ್ಯ ಸೆರೆ ಸಿಕ್ಕಿದೆ. ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಕನಿಷ್ಠ ತಲೆಕೆಡಿಸಿಕೊಳ್ಳದ ಎರಡು ಉದ್ಯಾನ ಹಲ್ಲಿಗಳು (garden lizards) ಪರಸ್ಪರ ಜಗಳವಾಡುತ್ತಿರುವುದನ್ನು ಕಂಡು ಸಾರ್ವಜನಿಕರು ಆಶ್ಚರ್ಯಚಕಿತರಾಗಿದ್ದಾರೆ. ಸುಮಾರು 15 ನಿಮಿಷಗಳ ಕಾಲ ಗಾರ್ಡನ್ ಲಿಜಾರ್ಡ್ಸ್ ಜಾತಿಯ ಹಲ್ಲಿಗಳು ಪರಸ್ಪರ ಜಗಳ ಮಾಡಿದ್ದು, ಅಲ್ಲಿದ್ದವರು ಇದನ್ನು ವಿಡಿಯೋ ಮಾಡಿದ್ದಾರೆ.
ಇದನ್ನೂ ಓದಿ: Revenue Collect: ಹಿಟ್ಟಿನ ಗಿರಣಿಯಲ್ಲಿ ತೆರಿಗೆ ದುಪ್ಪಟ್ಟು ಮಾಡಿದ ಗ್ರಾಮ ಪಂಚಾಯ್ತಿ! ಕರ ವಸೂಲಿಯ ಐಡಿಯಾಗೆ ಎಲ್ಲರೂ ಫಿದಾ!
ಒಂಗೋಲ್‌ನಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿರುವ ಉದ್ಯಾನವನ ಹಸಿರು ಮತ್ತು ಜೈವಿಕ ವೈವಿಧ್ಯತೆಗಳು ಇರುವ ತಾಣವಾಗಿದೆ. ಅಲ್ಲಿ ವಿವಿಧ ರೀತಿಯ ಮರಗಳು, ಪ್ರಾಣಿಗಳು, ಪಕ್ಷಿಗಳು ಮತ್ತು ಸರೀಸೃಪಗಳನ್ನು ನಾವು ಪ್ರತಿನಿತ್ಯ ಕಾಣಬಹುದು. ಪರಿಸರ ಪ್ರೇಮಿಗಳಿಗಂತೂ ಜಿಲ್ಲಾಧಿಕಾರಿ ಕಛೇರಿಯ ತಾಣ ಮನಸ್ಸಿನ ಶಾಂತಿ ಮತ್ತು ನೆಮ್ಮದಿಯನ್ನು ನೀಡುವ ಸ್ಥಳವಾಗಿ ಪರಿವರ್ತನೆಯಾಗಿದೆ.
ವಾತಾವರಣದ ಕಿರಿಕಿರಿ
ಅಂದ ಹಾಗೆ ಈ ಎರಡು ಗಾರ್ಡನ್ ಲಿಜಾರ್ಡ್ಸ್ ಜಾತಿಯ ಹಲ್ಲಿಗಳು ಮಾಡು ಇಲ್ಲವೇ ಮಡಿ ಎನ್ನುವ ರೀತಿಯಲ್ಲಿ ಹೋರಾಟ ಮಾಡಿದ್ದು, ಪರಸ್ಪರ ಹೊಡೆದಾಟದಲ್ಲಿ ಒಂದು ಹಲ್ಲಿಯ ದೇಹದಲ್ಲಿ ರಕ್ತಸ್ರಾವವಾಗುವ ಮಟ್ಟಕ್ಕೆ ಕಾದಾಟ ತೀವ್ರಸ್ವರೂಪದಲ್ಲಿತ್ತು. ಈ ಹಲ್ಲಿಗಳು ತಂಪಾದ ವಾತಾವರಣದಲ್ಲಿ ವಾಸಿಸುತ್ತಿದ್ದರೂ ಕೂಡ ಒಂಗೋಲ್‌ನಲ್ಲಿ ಸುಮಾರು 40 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರೋದ್ರಿಂದ ಡಿ-ಹೈಡ್ರೇಶನ್ ಮತ್ತು ಉಸಿರುಗಟ್ಟುವಿಕೆ ಉಂಟಾಗಿ ಈ ತೋಟದ ಹಲ್ಲಿಗಳಿಗೆ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: House in Graveyard: ಸ್ಮಶಾನದಲ್ಲೇ ಮನೆ ಕಟ್ಟಿ ಮಹಿಳೆಯರ ವಾಸ, ಇವ್ರನ್ನ ನೋಡಿ ಅಧಿಕಾರಿಗಳೇ ಶಾಕ್!
ಹಲ್ಲಿಗಳ ತೀವ್ರ ಗಲಾಟೆಯನ್ನು ಗಮನಿಸಿದ ಅಲ್ಲೇ ಇದ್ದ ಇಬ್ಬರು ಎರಡೂ ಹಲ್ಲಿಗಳ ಬಾಲವನ್ನು ಎಳೆದಿದ್ದು, ಆಗ ಗಲಿಬಿಲಿಗೊಂಡ ಅವುಗಳು ಜಗಳ ನಿಲ್ಲಿಸಿ ಪರಸ್ಪರ ರಾಜಿಗೆ ಬಂದಿದೆ. ನಂತರ ಎರಡೂ ಹಲ್ಲಿಗಳು ಪರಸ್ಪರ ದ್ವೇಷ ಮರೆತು ಬಾಂಧವ್ಯದಿಂದ ಇದ್ದು, ಸ್ನೇಹಿತರಂತೆ ವರ್ತಿಸಿದವು. ನೋಡು ನೋಡುತ್ತಿದ್ದಂತೆ ಅಲ್ಲಿಂದ ಕಣ್ಮರೆಯಾದವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ