ವೈದ್ಯರ ಯಡವಟ್ಟು; ಆಪರೇಷನ್ ವೇಳೆ 9 ಇಂಚಿನ ಇಕ್ಕಳ ಹೊಟ್ಟೆಯಲ್ಲೇ ಬಿಟ್ಟರು..!

ವೈದ್ಯರು ಆಪರೇಷನ್ ಮಾಡುವ ವೇಳೆ 9 ಇಂಚಿನ ಇಕ್ಕಳವೊಂದನ್ನು ಹೊಟ್ಟೆಯಲ್ಲಿಯೇ ಬಿಟ್ಟಿದ್ದಾರೆ. ರಿಪೋರ್ಟ್​​ ನೋಡಿ ಭಯಭೀತಗೊಂಡ ಮಹಿಳೆ ತಕ್ಷಣ ಆಸ್ಪತ್ರೆಗೆ ಅಡ್ಮಿಟ್​ ಆಗಿದ್ದಾರೆ. ಆಗ ವೈದ್ಯರು ಮತ್ತೆ ಆಪರೇಷನ್​ ಮಾಡಿ ಆ ಸಲಕರಣೆಯನ್ನು ಹೊಟ್ಟೆಯಿಂದ ಹೊರಗೆ ತೆಗೆದಿದ್ದಾರೆ.

Latha CG | news18
Updated:February 9, 2019, 12:42 PM IST
ವೈದ್ಯರ ಯಡವಟ್ಟು; ಆಪರೇಷನ್ ವೇಳೆ 9 ಇಂಚಿನ ಇಕ್ಕಳ ಹೊಟ್ಟೆಯಲ್ಲೇ ಬಿಟ್ಟರು..!
ಸಾಂದರ್ಭಿಕ ಚಿತ್ರ
Latha CG | news18
Updated: February 9, 2019, 12:42 PM IST
ಹೈದರಾಬಾದ್​,(ಫೆ.09): ಕೆಲವೊಮ್ಮೆ ವೈದ್ಯರ ನಿರ್ಲಕ್ಷ್ಯದಿಂದಾಗಿ ಯಡವಟ್ಟುಗಳು ಸಂಭವಿಸುತ್ತವೆ.  ಶಸ್ತ್ರ ಚಿಕಿತ್ಸೆ ಮಾಡುವಾಗ ಹೊಟ್ಟೆಯಲ್ಲಿ ಕತ್ತರಿ ಮತ್ತಿತರ ಆಪರೇಷನ್ ಸಲಕರಣೆಗಳನ್ನು ಹೊಟ್ಟೆಯಲ್ಲೇ ಬಿಟ್ಟಿರುವ ಎಷ್ಟೋ ಘಟನೆಗಳನ್ನು ಕೇಳಿರುತ್ತೇವೆ. ಇಂತಹದ್ದೇ ಮತ್ತೊಂದು ಘಟನೆ ಹೈದರಾಬಾದ್​ನಲ್ಲಿ ನಡೆದಿದ್ದು, ವೈದ್ಯರು ಆಪರೇಷನ್​ ಮಾಡುವ ವೇಳೆ ಮಹಿಳೆಯ ಹೊಟ್ಟೆಯಲ್ಲಿ 9 ಇಂಚಿನ ಇಕ್ಕಳ ಬಿಟ್ಟಿದ್ದಾರೆ.

33 ವರ್ಷದ ಮಹಿಳೆ ಅನಾರೋಗ್ಯ ಕಾರಣ 3 ತಿಂಗಳ ಹಿಂದೆ ಹೈದರಾಬಾದ್​ನ ಪ್ರತಿಷ್ಠಿತ ನಿಜಾಮ್​​ನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಡಿಸ್ಚಾರ್ಜ್​ ಆಗಿ ಮನೆಗೆ ಬಂದ ಬಳಿಕ ಹೊಟ್ಟೆನೋವು ಕಾಣಿಸಿಕೊಂಡಿತ್ತು.

ಒಂದೇ ಕಾಲೇಜು, ಒಂದೇ ಬ್ಯಾಚ್​ನ 57 ನಕಲಿ ವೈದ್ಯರು ಪತ್ತೆ

ಹೊಟ್ಟೆನೋವು ಹೆಚ್ಚಾದ ಕಾರಣ ಮಹಿಳೆ ವಾಪಸ್ಸು ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಂಡರು. ಅಷ್ಟೇ ಅಲ್ಲದೇ ಎಕ್ಸ್​-ರೇ ಕೂಡ ಮಾಡಿಸಿದರು. ಎಕ್ಸ್-ರೇ ರಿಪೋರ್ಟ್​ನಲ್ಲಿ ಬೆಚ್ಚಿಬೀಳಿಸುವ ಸಂಗತಿಯೊಂದು ಬೆಳಕಿಗೆ ಬಂದಿದೆ.

ವೈದ್ಯರು ಆಪರೇಷನ್ ಮಾಡುವ ವೇಳೆ 9 ಇಂಚಿನ ಇಕ್ಕಳವೊಂದನ್ನು ಹೊಟ್ಟೆಯಲ್ಲಿಯೇ ಬಿಟ್ಟಿದ್ದಾರೆ. ರಿಪೋರ್ಟ್​​ ನೋಡಿ ಭಯಭೀತಗೊಂಡ ಮಹಿಳೆ ತಕ್ಷಣ ಆಸ್ಪತ್ರೆಗೆ ಅಡ್ಮಿಟ್​ ಆಗಿದ್ದಾರೆ. ಆಗ ವೈದ್ಯರು ಮತ್ತೆ ಆಪರೇಷನ್​ ಮಾಡಿ ಆ ಸಲಕರಣೆಯನ್ನು ಹೊಟ್ಟೆಯಿಂದ ಹೊರಗೆ ತೆಗೆದಿದ್ದಾರೆ.

ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವೈದ್ಯರ ನಿರ್ಲಕ್ಷ್ಯದ ವಿರುದ್ಧ ಮಹಿಳೆ ದೂರು ದಾಖಲಿಸಬಹುದಾಗಿದೆ. 

First published:February 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...