ಇನ್ಮುಂದೆ ಕೊಳೆ ಖಂಡಿತ ಒಳ್ಳೆಯದಲ್ಲ: ಸರ್ಫ್ ಎಕ್ಸೆಲ್, ರಿನ್, ಲಕ್ಸ್, ವೀಲ್​ ಬೆಲೆ ಗಗನಕ್ಕೆ: ಇಲ್ಲಿದೆ ವಿವರ

Rin, Surf Excel, Lux, etc Price Hike: ಈ ಹಿಂದೆ ಪೆಟ್ರೋಲ್​, ಡೀಸೆಲ್​, ಗ್ಯಾಸ್​, ಅಡುಗೆ ಎಣ್ಣೆ ಮತ್ತಿತರ ಬೆಲೆ ಏರಿಕೆಯಿಂದ ತತ್ತರಿಸಿದ್ದ ಸಾಮಾನ್ಯರಿಗೆ ಈಗ ದಿನಬಳಕೆ ಸೋಪು, ಡಿಟರ್ಜೆಂಟ್​ ಬೆಲೆಯಲ್ಲೂ ಏರಿಕೆ ಕಂಡಿರುವುದು ದೊಡ್ಡ ಪೆಟ್ಟು ನೀಡಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  Surf Excel, Rin, Lux other Hindustan Unilever Products Price Hiked: 500 ಗ್ರಾಮ್‌ ವೀಲ್ ಡಿಟರ್ಜೆಂಟ್ ಪ್ಯಾಕ್ (Wheel Detergent Pack) ರೂ 29 ಕ್ಕೆ ಇದೀಗ ಲಭ್ಯವಿದ್ದು ಈ ಹಿಂದೆ ರೂ 28 ಆಗಿತ್ತು. ವೀಲ್ ಡಿಟರ್ಜೆಂಟ್‌ನ ಒಂದು ಕಿಲೋಗ್ರಾಮ್ ಪ್ರಸ್ತುತ ಬೆಲೆ ರೂ 58 ಆಗಿದ್ದು ಈ ಹಿಂದೆ 1 ಕಿಲೋಗ್ರಾಮ್ ಬೆಲೆ ರೂ 56-57 ಆಗಿತ್ತು. ಹಿಂದುಸ್ತಾನ್ ಯುನಿಲಿವರ್ ಲಿಮಿಡೆಟ್ ತನ್ನ ಪ್ರಾಡಕ್ಟ್‌ಗಳ ಮೇಲಿನ ಬೆಲೆಗಳನ್ನು ಹೆಚ್ಚಿಸಿದ್ದು ಲಾಂಡ್ರಿ ಹಾಗೂ ಕ್ಲೆನ್ಸಿಂಗ್ ವಿಭಾಗಗಳ ಉತ್ಪನ್ನಗಳಲ್ಲಿ ಬೆಲೆ ಏರಿಕೆ ಮಾಡಿದೆ. ಡಿಟರ್ಜೆಂಟ್ ವಿಭಾಗದಲ್ಲಿ HUL (Hindustan Unilever) ವೀಲ್ ಡಿಟರ್ಜೆಂಟ್‌ನ ಒಂದು ಕಿಲೋಗ್ರಾಮ್ ಹಾಗೂ 500 ಕಿಲೋಗ್ರಾಮ್‌ಗಳ ಪ್ಯಾಕ್‌ಗಳಲ್ಲಿ ಬೆಲೆ ಏರಿಕೆ ಮಾಡಿದೆ. ಈ ಹೆಚ್ಚಿಸುವಿಕೆಯು 3.5 ಶೇ ಅಂದಾಜು ಏರಿಕೆಯಾಗಿದ್ದು 1-2 ರೂಗಳ ಏರಿಕೆಯನ್ನು 1 ಕಿಲೋಗ್ರಾಮ್ ಹಾಗೂ 500 ಕಿಲೋಗ್ರಾಮ್‌ಗಳ ಪ್ಯಾಕ್‌ನಲ್ಲಿ ಕಾಣಬಹುದಾಗಿದೆ.

  ಕಂಪನಿಯ ರಿನ್ ಡಿಟರ್ಜೆಂಟ್ ಪೌಡರ್‌ನಲ್ಲಿ (Detergent Powders Price) ಕೂಡ ಗಮನಾರ್ಹ ಏರಿಕೆಯಾಗಿದ್ದು ಈ ಹಿಂದೆ ಒಂದು ಕಿಲೋಗ್ರಾಮ್‌ನ ಪ್ಯಾಕ್‌ಗೆ ರೂ 77 ಹಣ ನಿಗದಿಯಾಗಿತ್ತು ಇದೀಗ ರೂ 82 ಅನ್ನು ನೀಡಿ ಗ್ರಾಹಕರು ರಿನ್ ಡಿಟರ್ಜೆಂಟ್ ಪೌಡರ್ ಅನ್ನು ಖರೀದಿಸಬೇಕಾಗುತ್ತದೆ. ಸಣ್ಣ ಪ್ಯಾಕೇಟ್‌ಗಳ ಗ್ರಾಮ್‌ಗಳಲ್ಲೂ ಇಳಿಕೆ ಮಾಡಿದೆ ಉದಾಹರಣೆಗೆ 150 ಗ್ರಾಮ್‌ಗಳ ಪ್ಯಾಕ್‌ಗೆ ರೂ 10 ನಿಗದಿಯಾಗಿತ್ತು ಈಗ 130 ಗ್ರಾಮ್‌ಗೆ ಇದನ್ನು ಇಳಿಸಲಾಗಿದೆ. ಒಟ್ಟಾರೆ ರಿನ್‌ ಏರಿಕೆಯು ಅಂದಾಜು 6-8% ಆಗಿದೆ. ಇನ್ನು ಎಚ್‌ಯುಎಲ್‌ನ ಇತರ ಪ್ರಾಡಕ್ಟ್‌ಗಳಾದ ಸರ್ಫ್ ಎಕ್ಸೆಲ್ ಹೆಚ್ಚಿನ ಬೆಲೆಗೆ ಏರಿಕೆಯಾಗಿದ್ದು ಒಂದು ಕಿಲೋಗ್ರಾಮ್ ಪ್ಯಾಕೇಟ್‌ಗೆ ರೂ 14 ಏರಿಕೆಯಾಗಿದೆ.

  ಲಕ್ಸ್, ಲೈಬಾಯ್ (Lifebuoy) ಸೋಪ್ ಉತ್ಪನ್ನಗಳಿಗೂ ಬೆಲೆ ಏರಿಕೆಯ ಬಿಸಿ ತಟ್ಟಿದ್ದು ಈ ಎರಡೂ ಸೋಪ್‌ಗಳು 8-12% ಏರಿಕೆಯಾಗಿದೆ. 100 ಗ್ರಾಮ್‌ನ 5-ಇನ್‌-1 ಪ್ಯಾಕ್‌ನ ಲಕ್ಸ್ ಸೋಪ್‌ನ ಬೆಲೆ ಈ ಹಿಂದೆ ರೂ 120 ಆಗಿತ್ತು, ಇದೀಗ ರೂ 128-130 ಬೆಲೆಯಾಗಿದೆ. ಸೋಪ್‌ಗಳ ವಿಭಾಗದಲ್ಲೂ ಸಣ್ಣ ಪ್ಯಾಕ್‌ಗಳಲ್ಲಿ ಗ್ರಾಮ್‌ಗಳಲ್ಲಿ ಇಳಿಕೆಯನ್ನು ಮಾಡಲಾಗಿದೆ.

  HUL ನಿರಂತರ ಬೆಲೆ ಏರಿಕೆಯನ್ನು ಮಾಡುತ್ತಿದ್ದು ಚಹಾದಿಂದ ಹಿಡಿದು ಡಿಟರ್ಜೆಂಟ್‌ಗಳವರೆಗೆ ವಿವಿಧ ಉತ್ಪನ್ನಗಳಲ್ಲಿ ಬೆಲೆ ಏರಿಕೆಯನ್ನು ಸಂಸ್ಥೆ ಮಾಡಿದೆ. ಪ್ರಮುಖ ಕಚ್ಚಾವಸ್ತುಗಳಲ್ಲಿ ಕಂಪನಿಯು ಹಣದುಬ್ಬರ ಸಮಸ್ಯೆಯನ್ನು ಎದುರಿಸುತ್ತಿರುವುದರಿಂದ ಉತ್ಪನ್ನಗಳಲ್ಲಿ ಬೆಲೆ ಏರಿಕೆಯಾಗಿದೆ ಎಂಬುದು ತಿಳಿದುಬಂದಿದೆ.

  ಇದನ್ನೂ ಓದಿ: ಐಪಿಒ ಅಪ್ಲಿಕೇಶನ್ ಸ್ಟೇಟಸ್ ಪರಿಶೀಲನೆ ನಡೆಸುವುದು ಹೇಗೆ?

  ಮಂಗಳವಾರ FMCG ದೈತ್ಯ ಸೂಕ್ಷ್ಮ ಲಾಭಗಳನ್ನು ದಾಖಲಿಸಿದ್ದು HUL ನ ಸ್ಟಾಕ್ ಬೆಲೆಗಳು ಮುಂಬೈ ಸ್ಟಾಕ್ ವಿನಿಮಯದಲ್ಲಿ ರೂ .2808 ರ ಗರಿಷ್ಠ ಮಟ್ಟಕ್ಕೆ ಏರಿ ಸತತ ಎರಡು ದಿನಗಳವರೆಗೆ ಲಾಭ ಗಳಿಸಿತು. ಸ್ಟಾಕ್‌ಗಳ ಏರಿಕೆಯಿಂದಾಗಿ ಕಂಪನಿಗೆ ಮಾರುಕಟ್ಟೆ ಮೌಲ್ಯವು ಇದೇ ಮೊದಲ ಬಾರಿಗೆ ರೂ 6.5 ಲಕ್ಷ ಕೋಟಿಗಿಂತಲೂ ಹೆಚ್ಚಿನ ಮೌಲ್ಯ ದಾಖಲಿಸಲು ಸಹಕಾರಿಯಾಗಿದೆ. CNBC ವರದಿಗಳ ಪ್ರಕಾರ ಮಾರುಕಟ್ಟೆಯಲ್ಲಿ ರೂ. 2791.50 ಕ್ಕೆ 0.43% ಲಾಭ ಗಳಿಸಿದೆ.  ಇದನ್ನೂ ಓದಿ: ಲಿವಿಂಗ್​ ರಿಲೇಷನ್​ಶಿಪ್​ನಲ್ಲಿ ಅಕ್ರಮ ಸಂಬಂಧದ ಘಾಟು: ಪ್ರೇಯಸಿಯ ಖಾಸಗಿ ಭಾಗಕ್ಕೆ ಖಾರದ ಪುಡಿ ಹಚ್ಚಿ ಕೊಲೆ

  ಈ ಹಿಂದೆ ಪೆಟ್ರೋಲ್​, ಡೀಸೆಲ್​, ಗ್ಯಾಸ್​, ಅಡುಗೆ ಎಣ್ಣೆ ಮತ್ತಿತರ ಬೆಲೆ ಏರಿಕೆಯಿಂದ ತತ್ತರಿಸಿದ್ದ ಸಾಮಾನ್ಯರಿಗೆ ಈಗ ದಿನಬಳಕೆ ಸೋಪು, ಡಿಟರ್ಜೆಂಟ್​ ಬೆಲೆಯಲ್ಲೂ ಏರಿಕೆ ಕಂಡಿರುವುದು ದೊಡ್ಡ ಪೆಟ್ಟು ನೀಡಲಿದೆ. ಜನರ ಆದಾಯ ಮಾತ್ರ ಕಳೆದೆರಡು ವರ್ಷಗಳಿಂದ ಕಿಂಚಿತ್ತೂ ಹೆಚ್ಚದಿದ್ದರೂ, ಜೇಬಿನಿಂದ ಖರ್ಚು ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವುದು ಹಣದುಬ್ಬರದ ಮುನ್ಸೂಚನೆಯಾಗಿದೆ. ಕೇಂದ್ರ ಸರ್ಕಾರ ಡೀಸೆಲ್​ ಮತ್ತು ಪೆಟ್ರೋಲ್​ ಬೆಲೆ ಏರಿಕೆ ಮಾಡಿರುವುದು ಈ ಎಲ್ಲಾ ಬೆಲೆ ಏರಿಕೆಗೆ ನೇರ ಹೊಣೆಯಾಗಿದೆ. ಏಕೆಂದರೆ ಎಲ್ಲಾ ವಸ್ತುಗಳ ಟ್ರಾನ್ಸ್​ಪೋರ್ಟ್​​ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚಾಗುವುದರಿಂದ, ಪ್ರಾಡಕ್ಟ್​ಗಳ ಬೆಲೆಯೂ ಸಹಜವಾಗಿ ಏರಿಕಾಯಾಗುತ್ತದೆ.
  Published by:Sharath Sharma Kalagaru
  First published: