ಅಸಲಿ ವಜ್ರದಿಂದ ತಯಾರಿಸಿದ ಈ ಗಣಪತಿ ಜಗತ್ತಿನಲ್ಲಿಯೇ ದುಬಾರಿ; ಇದರ ಬೆಲೆಯೆಷ್ಟು ಗೊತ್ತಾ?

news18
Updated:September 14, 2018, 5:45 PM IST
ಅಸಲಿ ವಜ್ರದಿಂದ ತಯಾರಿಸಿದ ಈ ಗಣಪತಿ ಜಗತ್ತಿನಲ್ಲಿಯೇ ದುಬಾರಿ; ಇದರ ಬೆಲೆಯೆಷ್ಟು ಗೊತ್ತಾ?
  • Advertorial
  • Last Updated: September 14, 2018, 5:45 PM IST
  • Share this:
ನ್ಯೂಸ್​ 18 ಕನ್ನಡ

ಸೂರತ್​ (ಸೆ.14): ಗಣೇಶ ಹಬ್ಬ ಬಂದ್ರೆ ಸಾಕು ವಿವಿಧ ಭಂಗಿಯ, ದುಬಾರಿ ಬೆಲೆಯ ಗಣಪತಿ ಮೂರ್ತಿ ಕೂರಿಸಿ ಜನರು ಸಂಭ್ರಮಿಸುತ್ತಾರೆ. ಸೂರತ್​ನಲ್ಲಿ ಕೂರಿಸಿರುವ ಈ ಗಣಪತಿಯ ಬೆಲೆ ಕೇಳಿದರೆ ಆಶ್ಚರ್ಯದ ಜೊತೆಗೆ ನಂಬುವುದು ಕೂಡ ಕಷ್ಟವಾಗುತ್ತದೆ. ಕಾರಣ ಇದರ ಬೆಲೆ ಬರೋಬ್ಬರಿ 500ಕೋಟಿ.ಗುಜರಾತ್​ನ ಸೂರತ್​ನ ವಜ್ರದ ವ್ಯಾಪಾರಿ ಮನೆಯಲ್ಲಿ ಕೂರಿಸಿರುವ ಈ ಗಣಪತಿ ಜಗತ್ತಿನ ಅತಿ ದುಬಾರಿ ಬೆಲೆಯ ಗಣಪತಿ ಎಂಬ ಖ್ಯಾತಿಗೂ ಕೂಡ ಕಾರಣವಾಗಿದೆ. ಸೂರತಿನ ಕರ್ತಗ್ರಾಮ ಪ್ರದೇಶದ  ರಾಜೇಶ್​ ಪಾಂಡವ ಎಂಬುವವರ ಮನೆಯಲ್ಲಿ ಕೂರಿಸುವ ಈ ಗಣೇಶದನ ಮೂರ್ತಿ ನೈಸರ್ಗಿಕ  ವಜ್ರವಾದ  27.47ಕ್ಯಾರೆಟ್​ ಅಸಲಿ ವಜ್ರದಿಂದ ಈ ಮೂರ್ತಿಯನ್ನು ತಯಾರಿಸಲಾಗಿದೆ. ಈ ಗಣೇಶ ಮೂರ್ತಿಯನ್ನು ಗಣೇಶ ಹಬ್ಬದಂದು ಮಾತ್ರ ಹೊರತೆಗೆಯಲಾಗುವುದು.ದಶಕದ ಹಿಂದೆ ಕಚ್ಛಾ ವಜ್ರದಿಂದ ತಯಾರಿಸಿದ ಈ ಗಣೇಶನನ್ನು ವಜ್ರದ ವ್ಯಾಪಾರಿ ಖರೀದಿಸಿದರಂತೆ. ಈ ಮೂರ್ತಿಯ ಒಂದು ಕೈಯಲ್ಲಿ ಅಕ್ಷವನ್ನು ಹೊಂದಿದೆ, 24.11ಮಿ.ಮೀ ಎತ್ತರ. 16.49 ಮಿಮೀ ಅಗಲವಾದ ಈ ಮೂರ್ತಿ ಹಳದಿ ಮತ್ತು ಬೂದು ಬಣ್ಣ ಮಿಶ್ರಿತವಾಗಿದೆ, ಪ್ರತಿ ವರ್ಷ ಗಣೇಶ ಹಬ್ಬಕ್ಕೆ ಮಾತ್ರ ಈ ಗಣೇಶನ ಮೂರ್ತಿಯನ್ನು ಕುಟುಂಬ ಪ್ರದರ್ಶನಕ್ಕೆ ಇಡುತ್ತಾರೆ

First published:September 14, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ