ದೀಪಾವಳಿ ಹಬ್ಬಕ್ಕೆ ಉದ್ಯೋಗಿಗಳಿಗೆ ಬಂಪರ್; Electric Scooterನ ಗಿಫ್ಟ್ ಆಗಿ ನೀಡಿದ ಸೂರತ್ ಕಂಪನಿ

ಸೂರತ್‍ನ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಎಲೆಕ್ಟ್ರಿಕ್ ಸ್ಕೂಟರ್​​ಗಳನ್ನು ಉಡುಗೊರೆಯಾಗಿ ನೀಡಿದೆ. ಅಲೈಯನ್ಸ್ ಗ್ರೂಪ್, ಕಸೂತಿ ಯಂತ್ರಗಳ ವ್ಯಾಪಾರವನ್ನು ನಡೆಸುತ್ತಿರುವ ಕಂಪನಿಯು, ಓಕಿನಾವಾ ಪ್ರೈಸ್‍ಪ್ರೊ ಎಂದು ತೋರುವ ಎಲೆಕ್ಟ್ರಿಕ್ ಸ್ಕೂಟರ್‍ಗಳನ್ನು ನೀಡಲು ನಿರ್ಧರಿಸಿದೆ, ಇದರ ಬೆಲೆ 76,848 ರೂ. ಆಗಿದೆ.

ಸಂತಸದಲ್ಲಿ ಉದ್ಯೋಗಿಗಳು

ಸಂತಸದಲ್ಲಿ ಉದ್ಯೋಗಿಗಳು

 • Share this:
  ಹಬ್ಬಗಳ ಆಗರವಾದ ಭಾರತದಲ್ಲಿ(India) ಪ್ರತಿಯೊಂದು ಹಬ್ಬವೂ ವಿಶೇಷ, ವಿಭಿನ್ನವಾಗಿ ಇರುತ್ತದೆ. ದಸರಾ, ಗಣೇಶನ ಹಬ್ಬ, ದೀಪಾವಳಿ (deepavali 2021) ಹೀಗೆ ಸಾಲು ಸಾಲು ಹಬ್ಬಗಳು (festive season) ಶ್ರಾವಣ ಮಾಸದಲ್ಲಿ ಬರುತ್ತವೆ. ದಸರಾ, ದೀಪಾವಳಿ ಎಂದರೆ ತುಸು ಹೆಚ್ಚು ಜೋರಾಗಿಯೇ ಇರುತ್ತದೆ. ದೀಪಾವಳಿ, ದಸರಾ ಎಂದರೆ ಪ್ರತಿಯೊಬ್ಬರಿಗೂ ಸಂಭ್ರಮ, ಸಡಗರಕ್ಕೆ ಏನೂ ಕಡಿಮೆ ಇರುವುದಿಲ್ಲ. ಮನೆಮಂದಿಗೆ ಪಟಾಕಿ (crackers) , ಲಕ್ಷ್ಮೀ ಪೂಜೆ, ಸಿಹಿತಿಂಡಿ, ಹೊಸಬಟ್ಟೆ ಇವುಗಳು ದೀಪಾವಳಿ ಹಬ್ಬವನ್ನು ಮತ್ತಷ್ಟು ಇಮ್ಮಡಿಗೊಳಿಸುತ್ತದೆ. ಇನ್ನು ಕಾರ್ಮಿಕರಿಗೆ, ಉದ್ಯೋಗಿಗಳಿಗೆ ಇವುಗಳ ಜೊತೆಗೆ ಬೋನಸ್ ಎಂಬುದು ಸೇರಿಕೊಳ್ಳುತ್ತದೆ.

  ಸೂರತ್‍ನ ಕಂಪನಿಯ ಉದ್ಯೋಗಿಗಳಿಗೆ ಬಂಪರ್​ 

  ದೀಪಾವಳಿಯ ಸಂದರ್ಭದಲ್ಲಿ ಕೆಲವು ಕಂಪನಿಗಳು, ಅಂಗಡಿಗಳು ತಮ್ಮ ಉದ್ಯೋಗಿಗಳಿಗೆ ಒಂದು ತಿಂಗಳ ಸಂಬಳವನ್ನು ಬೋನಸ್ ಆಗಿ ನೀಡುವುದು ರೂಢಿ. ಆದರೆ ಸೂರತ್‍ನ ಕಂಪನಿಯೊಂದು ಒಂದು ಹೆಜ್ಜೆ ಮುಂದೆ ಇಟ್ಟಿದ್ದು, ಉದ್ಯೋಗಿಗಳಿಗೆ ಬಂಪರ್ ಕೊಡುಗೆಯನ್ನೇ ನೀಡುವುದರ ಮೂಲಕ ಉದ್ಯೋಗಿಗಳ ಸಂತೋಷವನ್ನು ಹೆಚ್ಚಿಸಿದ್ದಾರೆ. ಸೂರತ್‍ನ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಎಲೆಕ್ಟ್ರಿಕ್ ಸ್ಕೂಟರ್​​ಗಳನ್ನು ಉಡುಗೊರೆಯಾಗಿ ನೀಡಿದೆ. ಅಲೈಯನ್ಸ್ ಗ್ರೂಪ್, ಕಸೂತಿ ಯಂತ್ರಗಳ ವ್ಯಾಪಾರವನ್ನು ನಡೆಸುತ್ತಿರುವ ಕಂಪನಿಯು, ಓಕಿನಾವಾ ಪ್ರೈಸ್‍ಪ್ರೊ ಎಂದು ತೋರುವ ಎಲೆಕ್ಟ್ರಿಕ್ ಸ್ಕೂಟರ್‍ಗಳನ್ನು ನೀಡಲು ನಿರ್ಧರಿಸಿದೆ, ಇದರ ಬೆಲೆ 76,848 ರೂ. ಆಗಿದೆ. (ಎಕ್ಸ್ ಶೋ ರೂಂ).

  ಪೆಟ್ರೋಲ್​, ಡೀಸೆಲ್​ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಈ ಉಡುಗೊರೆ

  ಹೆಚ್ಚುತ್ತಿರುವ ಇಂಧನ ಬೆಲೆಗಳು ಮತ್ತು ಇತರ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಾವು ನಮ್ಮ ಉದ್ಯೋಗಿಗಳಿಗೆ ಎಲೆಕ್ಟ್ರಿಕ್ ವಾಹನಗಳನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದೇವೆ" ಎಂದು ಕಂಪನಿಯ ನಿರ್ದೇಶಕ ಸುಭಾಷ್ ದಾವರ್ ಹೇಳಿದರು. ಇದು ಆರ್ಥಿಕ ಸ್ಥಿತಿಯ ಮೇಲೂ ಪರಿಣಾಮ ಬೀರಿಲಿದೆ ಎಂದು ಕಂಪನಿ ಹೇಳಿದೆ. ಇತ್ತೀಚಿನ ದಿನಗಳಲ್ಲಿ ಏರುತ್ತಿರುವ ಪೆಟ್ರೋಲ್, ಡೀಸೆಲ್‍ಗಳ ಮೇಲಿನ ವೆಚ್ಚವನ್ನು ಉಳಿಸುವುದು ಮಾತ್ರವಲ್ಲದೆ ನಮ್ಮ ಕಂಪನಿಯು ಪರಿಸರ ಸಂರಕ್ಷಣೆ ಮತ್ತು ಹಸಿರು ನಾಡಿನ ಕಲ್ಪನೆಯನ್ನು ಜೀವಂತವಾಗಿರಿಸಲು ಅನುವು ಮಾಡಿಕೊಡುತ್ತದೆ, ”ಎಂದು ಅವರು ಹೇಳಿದರು.

  ಪರಿಸರಸ್ನೇಹಿ ಈ ಗಿಫ್ಟ್​​ 

  ಸುಭಾಷ್​​ ಅವರು ಯಾವಾಗಲೂ ಪರಿಸರ ಪ್ರೇಮಿ. ಅವರು ಯಾವಾಗಲೂ ಪರಿಸರದ ಮೇಲೆ ಹೆಚ್ಚು ಗಮನ ಹರಿಸುತ್ತಾರೆ ಮತ್ತು ಪ್ರಕೃತಿಯ ಒಡಲಿನಲ್ಲಿ ಬದುಕಲು ಇಷ್ಟಪಡುತ್ತಾರೆ ಪರಿಸರ ಸಂರಕ್ಷಣೆಗೆ ತಮ್ಮಿಂದ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವ ಹಂಬಲ ಅವರದು ಎಂದು ತಿಳಿಸಿದರು. ಕಂಪನಿಯು ತನ್ನ ಉದ್ಯೋಗಿಗಳ 35 ಎಲೆಕ್ಟ್ರಿಕ್ ಸ್ಕೂಟರ್‍ಗಳನ್ನು ದೀಪಾವಳಿ ಉಡುಗೊರೆಯಾಗಿ ನೀಡಿದೆ ಎಂದು ವ್ಯವಹಾರವನ್ನು ನೋಡಿಕೊಳ್ಳುತ್ತಿರುವ ಸುಭಾಷ್ ದಾವರ್ ಅವರ ಮಗ ಚಿರಾಗ್ ದಾವರ್ ಹೇಳಿದ್ದಾರೆ.

  ಇದನ್ನೂ ಓದಿ: Viral News : ಪ್ರಿಯತಮೆ ಬೆಕ್ಕು ಪರಚುತ್ತೆ ಅಂತ ಈತ ಮಾಡಿದ್ದೇನು ಗೊತ್ತಾ? 6 ವರ್ಷವಾದರೂ ರಟ್ಟಾಗದ ಗುಟ್ಟು!

  ಈ ಬಗ್ಗೆ ಎಎನ್‍ಯ ವರದಿ ಮಾಡಿದ್ದು, ಗುಜರಾತ್ ದೀಪಾವಳಿ ಸಂದರ್ಭದಲ್ಲಿ, ಸೂರತ್‍ನ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ದೀಪಾವಳಿ ಹಬ್ಬಕ್ಕೆ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಉಡುಗೊರೆಯಾಗಿ ನೀಡಿದೆ. ಹೆಚ್ಚುತ್ತಿರುವ ಇಂಧನ ಬೆಲೆಗಳು ಮತ್ತು ಇತರ ಅಂಶಗಳ ದೃಷ್ಟಿಯನ್ನು ಗಮನದಲ್ಲಿ ಇರಿಸಿಕೊಂಡು ನಾವು ನಮ್ಮ ಉದ್ಯೋಗಿಗಳಿಗೆ ಎಲೆಕ್ಟ್ರಿಕ್ ವಾಹನಗಳನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದೇವೆ" ಎಂದು ಕಂಪನಿಯ ನಿರ್ದೇಶಕ ಸುಭಾಷ್ ದಾವರ್ ಹೇಳಿದ್ದಾರೆ. ಎಂದು ತಿಳಿಸಿದೆ.
  Published by:Kavya V
  First published: