ಕಂಪನಿಯ 600 ಸಿಬ್ಬಂದಿಗೆ ದೀಪಾವಳಿ ಉಡುಗೊರೆಯಾಗಿ ಕಾರ್ ನೀಡಿದ ವಜ್ರದ ವ್ಯಾಪಾರಿ

Seema.R | news18
Updated:October 25, 2018, 4:17 PM IST
ಕಂಪನಿಯ 600 ಸಿಬ್ಬಂದಿಗೆ ದೀಪಾವಳಿ ಉಡುಗೊರೆಯಾಗಿ ಕಾರ್ ನೀಡಿದ ವಜ್ರದ ವ್ಯಾಪಾರಿ
  • News18
  • Last Updated: October 25, 2018, 4:17 PM IST
  • Share this:
ನ್ಯೂಸ್​ 18 ಕನ್ನಡ

ನವದೆಹಲಿ (ಅ.25):  ಕೆಲಸಮಾಡುವವ ನೌಕರರ ಹಿತ ಕಾಯುವ ಉದ್ದೇಶದಿಂದ  ವಜ್ರದ ವ್ಯಾಪಾರಿಯೊಬ್ಬರು ತಮ್ಮ ಕಂಪನಿಯಲ್ಲಿ ಕಾರ್ಯ ನಿರ್ವಹಿಸುವ  600 ಸಿಬ್ಬಂದಿಗಳಿಗೆ ದೀಪಾವಳಿ ಉಡುಗೊರೆಯಾಗಿ ಕಾರ್​ ನೀಡಿ ಔದರ್ಯ ಮೆರೆದಿದ್ದಾರೆ.

ಸೂರತ್​ ಮೂಲದ ವಜ್ರದ ವ್ಯಾಪಾರಿ ಸವ್ಜಿ ಡೊಲಕಿಯ ಈ ವಿಶೇಷ ಉಡುಗೊರೆ ನೀಡಿದ ಮಾಲೀಕ. ಹರಿಕೃಷ್ಣ ರಫ್ತು ಕಂಪನಿಯ ನೌಕರರಿಗೆ  3.56 ಲಕ್ಷ ರೂ ಮೌಲ್ಯದ ಮಾರುತಿ ಸಿಜಾಕಿ ಮತ್ತು 5.38 ಲಕ್ಷ ರೂ ಮೌಲ್ಯದ ಸುಜುಕಿ ಸಿಲೆರಿಯೋ ಕಾರನ್ನು ದೀಪಾವಳಿ ಬೋನಸ್​ ಆಗಿ ನೀಡಿದ್ದಾರೆ.

ಹರಿ ಕೃಷ್ಣ ಸಮೂಹ ಅಕ್ಟೋಬರ್​ 25ರಂದು ಕೌಶಲ್ಯ ಭಾರತ ಪ್ರೋತ್ಸಾಹ ಸಮಾರಂಭವನ್ನು ಹಮ್ಮಿಕೊಂಡಿದ್ದು, ಅದರ ಭಾಗವಾಗಿ ಕೆಲಸಗಾರರಿಗೆ ಈ ಬೋನಸ್​ ನೀಡಲಾಗುತ್ತಿದೆ ಎಂದರು. ಅಷ್ಟೇ ಅಲ್ಲದೇ 1,700 ವಜ್ರದ ಕುಶಲಕರ್ಮಿ ಹಾಗೂ ವಜ್ರದ ಇಂಜಿನಿಯರ್​ಗಳಿಗೆ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ ಎಂದರು.

ಇದನ್ನು ಓದಿ : ರೈಲು ಪ್ರಯಾಣಿಕರ ಗಮನಕ್ಕೆ: ಜನರಲ್ ಟಿಕೆಟ್​ನಿಂದ AC ಕೋಚ್​ನಲ್ಲಿ ಪ್ರಯಾಣಿಸಬಹುದು

ಡೊಲಕಿಯ ಅವರ ಹರಿಕೃಷ್ಣ ಸಮೂಹದಲ್ಲಿ 5,500 ಕೆಲಸಗಾರರಿದ್ದು, ಅದರಲ್ಲಿ 4,000 ಜನ ಈಗಾಗಲೇ ದುಬಾರಿ ಉಡುಗೊರೆಯನ್ನು ಪಡೆದಿದ್ದಾರೆ ಎಂದು ಬ್ಯುಸಿನೆಸ್​ ಸ್ಟಾಂಟರ್ಡ್​ ವರದಿ ಮಾಡಿದೆ.

ಕಳೆದ ವಾರ ಕಂಪನಿಯಲ್ಲಿ 25 ವರ್ಷ ಸೇವೆ ಸಲ್ಲಿಸಿದ ಮೂವರು ಹಿರಿಯ  ಸಿಬ್ಬಂದಿಗೆ 3 ಕೋಟಿ ಮೌಲ್ಯದ ಮರ್ಸಿಡಿಸ್​ ಬೆಂಜ್​ ಜಿಎಲ್​ಎಸ್​ ಎಸ್​ಯುವಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು.  ನಿಲೇಶ್​ ಜಡ, ಮುಖೇಶ್​ ಚಂದಪರ, ಮಹೇಶ್​ ಚಂದಪರ ಅವರಿಗೆ ಗುಜರಾತ್​ ಮಾಜಿ ಮುಖ್ಯಮಂತ್ರಿ ಆನಂದಿಬೆನ್​ ಪಟೇಲ್​ ಕೈಯಲ್ಲಿ ಕಾರ್​ ಕೀಯನ್ನು ಉಡುಗೊರೆಯಾಗಿ ಕೊಡಿಸಿದ್ದರು.
First published:October 25, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading