ವೇಗದ ಜಿಡಿಪಿ ಅಭಿವೃದ್ಧಿ: ಟಾಪ್-20 ಪಟ್ಟಿಯಲ್ಲಿ ಭಾರತದ 17 ನಗರಗಳು; ಬೆಂಗಳೂರು ನಂ. 3

2019ರಿಂದ 2035ರವರೆಗೆ ಜಿಡಿಪಿ ಅಭಿವೃದ್ಧಿ ವೇಗದಲ್ಲಿ ಏಷ್ಯಾದ ನಗರಗಳು, ಅದರಲ್ಲೂ ಭಾರತದ ನಗರಗಳು ಅದ್ವಿತೀಯ ಪ್ರಗತಿ ಸಾಧಿಸಲಿವೆ ಎಂದು ಆಕ್ಸ್​ಫರ್ಡ್ ಎಕನಾಮಿಕ್ಸ್​ನ ವರದಿಯೊಂದು ಅಂದಾಜಿಸಿದೆ.

Vijayasarthy SN | news18india
Updated:December 6, 2018, 7:01 PM IST
ವೇಗದ ಜಿಡಿಪಿ ಅಭಿವೃದ್ಧಿ: ಟಾಪ್-20 ಪಟ್ಟಿಯಲ್ಲಿ ಭಾರತದ 17 ನಗರಗಳು; ಬೆಂಗಳೂರು ನಂ. 3
ಬೆಂಗಳೂರಿನ ವಿಧಾನಸೌಧ
Vijayasarthy SN | news18india
Updated: December 6, 2018, 7:01 PM IST
ನವದೆಹಲಿ(ಡಿ. 06): ಗುಜರಾತ್ ರಾಜ್ಯದ ನಗರ ಸೂರತ್ ವಿಶ್ವದಲ್ಲೇ ಅತ್ಯಂತ ವೇಗದಲ್ಲಿ ಆರ್ಥಿಕ ಪ್ರಗತಿ ಹೊಂದುತ್ತಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. 2019ರಿಂದ 2035ರ ಅವಧಿಯಲ್ಲಿ ವಿಶ್ವದ ಅತ್ಯಂತ ವೇಗದ ಜಿಡಿಪಿ ಅಭಿವೃದ್ಧಿ ದಾಖಲಿಸಲಿರುವ 20 ನಗರಗಳ ಪಟ್ಟಿಯಲ್ಲಿ ಸೂರತ್ ನಂಬರ್ ಒನ್ ಸ್ಥಾನ ಗಳಿಸಿದೆ. ಆಕ್ಸ್​ಫರ್ಡ್ ಎಕನಾಮಿಕ್ಸ್  ಪ್ರಕಟಿಸಿರುವ ಈ ಟಾಪ್-20 ಪಟ್ಟಿಯಲ್ಲಿ ಬರೋಬ್ಬರಿ 17 ಭಾರತೀಯ ನಗರಗಳಿವೆ. ಬೆಂಗಳೂರು ನಗರ ಈ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದೆ. ಭಾರತದ ನಗರಗಳು ಒಟ್ಟಾರೆ ಜಿಡಿಪಿಯಲ್ಲಿ ವಿಶ್ವದ ಇತರ ಪ್ರಮುಖ ನಗರಗಳಿಗಿಂತ ಹಿಂದುಳಿದಿವೆಯಾದರೂ, ಜಿಡಿಪಿ ಅಭಿವೃದ್ಧಿ ವೇಗದಲ್ಲಿ ಎಲ್ಲರಿಗಿಂತ ಮುಂದಿವೆಯಂತೆ.

ಜಿಡಿಪಿ ಅಭಿವೃದ್ಧಿ ವೇಗದಲ್ಲಿ ಭಾರತದ ಟಾಪ್-10 ನಗರಗಳ ಪಟ್ಟಿ:
1) ಸೂರತ್

2) ಆಗ್ರಾ
3) ಬೆಂಗಳೂರು
4) ಹೈದರಾಬಾದ್
5) ನಾಗಪುರ
6) ತಿರುಪ್ಪೂರ್
7) ರಾಜಕೋಟ್
8) ತಿರುಚ್ಚಿರಾಪಳ್ಳಿ
9) ಚೆನ್ನೈ
10) ವಿಜಯವಾಡ

ಸೂರತ್ ನಗರವು ಶೇ. 9.2ರಷ್ಟು ವೇಗದಲ್ಲಿ ಜಿಡಿಪಿ ಅಭಿವೃದ್ಧಿ ಹೊಂದಲಿದೆ ಎಂದು ಜಾಗತಿಕ ನಗರಗಳ ಸಂಶೋಧನಾ ವರದಿ ಅಂದಾಜು ಮಾಡಿದೆ. ಆದರೆ, ಜಿಡಿಪಿಯ ವಿಚಾರದಲ್ಲಿ ಚೀನಾದ ನಗರಗಳು ವಿಶ್ವದ ಅಗ್ರಮಾನ್ಯ ಎನಿಸಲಿವೆ. 2035ರಷ್ಟರಲ್ಲಿ ಇಡೀ ಉತ್ತರ ಅಮೆರಿಕ ಅಥವಾ ಯೂರೋಪ್ ಖಂಡದ ಒಟ್ಟು ನಗರಗಳ ಜಿಡಿಪಿಗಿಂತ ಚೀನಾದ ನಗರಗಳ ಜಿಡಿಪಿ ಹೆಚ್ಚಾಗಿರಲಿವೆ ಎಂದು ಈ ವರದಿ ಹೇಳಿದೆ. ಆ ಎರಡು ಪಾಶ್ಚಿಮಾತ್ಯ ಖಂಡಗಳ ಎಲ್ಲಾ ನಗರಗಳ ಜಿಡಿಪಿ ಕಲೆಹಾಕಿದರೂ ಏಷ್ಯನ್ ನಗರಗಳ ಸಮಾನಕ್ಕೆ ಬರಲು ಅಸಾಧ್ಯ ಎಂದು ಹೇಳಲಾಗಿದೆ.

ಸದ್ಯ, ಆರ್ಥಿಕ ಅಭಿವೃದ್ಧಿಯಲ್ಲಿ ಚೀನಾ ಮತ್ತು ಭಾರತ ದೇಶಗಳು ವಿಶ್ವದ ಮುಂಚೂಣಿಯಲ್ಲಿವೆ. ಚೀನಾದ ಜಿಡಿಪಿಯು ಸದ್ಯ ವಿಶ್ವದ ನಂಬರ್ 2 ಎನಿಸಿದೆ. ಅಷ್ಟಾದರೂ ಜಿಡಿಪಿ ತಲಾದಾಯದ ಲೆಕ್ಕಾಚಾರದಲ್ಲಿ ಏಷ್ಯನ್ ರಾಷ್ಟ್ರಗಳಿಗಿಂತ ಕೆಲ ಪಾಶ್ಚಿಮಾತ್ಯ ರಾಷ್ಟ್ರಗಳು ಮುಂದಿವೆ ಎಂಬುದು ಇಲ್ಲಿ ಉಲ್ಲೇಖಾರ್ಹ.
First published:December 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...