ಐಎನ್​ಎಕ್ಸ್ ಮೀಡಿಯಾ​ ಹಗರಣ; ಸುಪ್ರೀಂಕೋರ್ಟ್​ನಲ್ಲಿ ಇಂದು ಪಿ. ಚಿದಂಬರಂ ಜಾಮೀನು ಅರ್ಜಿ ತೀರ್ಪು ಪ್ರಕಟ

ಇಡಿ ದಾಖಲಿಸಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪಿ. ಚಿದಂಬರಂ ತಿಹಾರ್ ಜೈಲು ಸೇರಿದ್ದಾರೆ. ಇಂದು ಸುಪ್ರೀಂಕೋರ್ಟ್​ ನ್ಯಾಯಮೂರ್ತಿಗಳಾದ ಆರ್. ಭಾನುಮತಿ, ಎ.ಎಸ್. ಬೋಪಣ್ಣ ಮತ್ತು ಹೃಷಿಕೇಶ್ ರಾಯ್ ಅವರ ನ್ಯಾಯಪೀಠ ಜಾಮೀನು ಅರ್ಜಿಯ ತೀರ್ಪು ಪ್ರಕಟಿಸಲಿದೆ.

Sushma Chakre | news18-kannada
Updated:December 4, 2019, 8:43 AM IST
ಐಎನ್​ಎಕ್ಸ್ ಮೀಡಿಯಾ​ ಹಗರಣ; ಸುಪ್ರೀಂಕೋರ್ಟ್​ನಲ್ಲಿ ಇಂದು ಪಿ. ಚಿದಂಬರಂ ಜಾಮೀನು ಅರ್ಜಿ ತೀರ್ಪು ಪ್ರಕಟ
ಪ್ರಾತಿನಿಧಿಕ ಚಿತ್ರ
  • Share this:
ನವದೆಹಲಿ (ಡಿ. 4): ಐಎನ್‌ಎಕ್ಸ್ ಮೀಡಿಯಾ ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಸಲ್ಲಿಕೆ ಮಾಡಿರುವ ಜಾಮೀನು ಅರ್ಜಿ ಕುರಿತು ಸುಪ್ರೀಂಕೋರ್ಟ್​ನಲ್ಲಿ​ ಇಂದು ತೀರ್ಪು ಪ್ರಕಟವಾಗಲಿದೆ.

ಐಎನ್​ಎಕ್ಸ್​​ ಮೀಡಿಯಾ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡಲು ದೆಹಲಿ ಹೈಕೋರ್ಟ್​ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಪಿ. ಚಿದಂಬರಂ ಸುಪ್ರೀಂಕೋರ್ಟ್​​ ಮೆಟ್ಟಿಲೇರಿದ್ದರು. ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿರುವ ಎಸ್​ಎಸ್​ ಬೋಬ್ಡೆ ಅವರನ್ನೊಳಗೊಂಡ ಪೀಠ ಈ ಅರ್ಜಿ ವಿಚಾರಣೆ ನಡೆಸಿತ್ತು.

ನವೆಂಬರ್ 15ರಂದು ಚಿದಂಬರಂ ಅರ್ಜಿ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್​ ಜಾಮೀನು ನಿರಾಕರಿಸಿತ್ತು. ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂ ಪ್ರಮುಖ ಪಾತ್ರವಹಿಸಿದ್ದು, ಅವರಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಇಂದು ಜಾಮೀನು ಅರ್ಜಿಯ ಅಂತಿಮ ತೀರ್ಪು ಹೊರಬೀಳಲಿದ್ದು, 105 ದಿನಗಳ ಕಾಲ ಜೈಲು ವಾಸ ಅನುಭವಿಸಿರುವ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರಿಗೆ ಬೇಲ್ ಸಿಗಲಿದೆಯಾ? ಅಥವಾ ಜೈಲು ವಾಸವೇ ಗತಿಯಾಗಲಿದೆಯಾ? ಎಂಬುದು ಇಂದು ನಿರ್ಧಾರವಾಗಲಿದೆ.

ನಿತ್ಯಾನಂದರ ‘ಕೈಲಾಸ’ ವಾಸ; ಅಮೆರಿಕ ಖಂಡದಲ್ಲೊಂದು ಹೊಸ ‘ಹಿಂದೂ ರಾಷ್ಟ್ರ’?

ಏನಿದು ಪ್ರಕರಣ?:

ಐಎನ್​ಎಕ್ಸ್ ಮೀಡಿಯಾಗೆ ಸಂಬಂಧಿಸಿದ ಎರಡು ಪ್ರಕರಣಗಳಿವೆ. ಭ್ರಷ್ಟಾಚಾರ ಮತ್ತು ಹಣ ಅವ್ಯವಹಾರ ಪ್ರಕರಣಗಳು ಪಿ. ಚಿದಂಬರಮ್ ಮತ್ತವರ ಪುತ್ರ ಕಾರ್ತಿ ಚಿದಂಬರಂ ಅವರ ಮೈ ಸುತ್ತಿವೆ. ಚಿದಂಬರಮ್ ಅವರು 2007ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದಾಗ ಐಎನ್​ಎಕ್ಸ್ ಮೀಡಿಯಾ ಸಂಸ್ಥೆಗೆ 305 ಕೋಟಿ ರೂ ಮೊತ್ತದಷ್ಟು ವಿದೇಶೀ ಬಂಡವಾಳ ಹೂಡಿಕೆಗೆ ವಿದೇಶ ಬಂಡವಾಳ ಹೂಡಿಕೆ ಪ್ರೋತ್ಸಾಹಕ ಮಂಡಳಿ (ಎಫ್​ಐಪಿಬಿ)ಯ ಅನುಮೋದನೆ ಸಿಕ್ಕಿತ್ತು. ಮಗನ ಶಿಫಾರಸಿನ ಮೇಲೆ ಈ ಅನುಮೋದನೆಯನ್ನು ಚಿದಂಬರಂ ದೊರಕಿಸಿಕೊಟ್ಟಿದ್ದರೆಂಬ ಆರೋಪ ಇದೆ.

ಉಪ ಚುನಾವಣೆಗೆ ಒಂದೇ ದಿನ ಬಾಕಿ; ರಾಣೆಬೆನ್ನೂರು ಕಾಂಗ್ರೆಸ್ ಅಭ್ಯರ್ಥಿ ಕೋಳಿವಾಡಗೆ ಐಟಿ ಶಾಕ್!2017ರಲ್ಲಿ ಐಎನ್​ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂ ಮತ್ತಿತರರ ವಿರುದ್ಧ ಸಿಬಿಐ ಎಫ್​ಐಆರ್ ದಾಖಲಿಸಿತ್ತು. 2018ರಲ್ಲಿ ಇಡಿಯವರೂ ಕೂಡ ಹಣ ಅವ್ಯವಹಾರದ ಪ್ರಕರಣ ದಾಖಲಿಸಿದ್ದರು. ಇಡಿ ದಾಖಲಿಸಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪಿ. ಚಿದಂಬರಂ ತಿಹಾರ್ ಜೈಲು ಸೇರಿದ್ದಾರೆ. ಇಂದು ಸುಪ್ರೀಂಕೋರ್ಟ್​ ನ್ಯಾಯಮೂರ್ತಿಗಳಾದ ಆರ್. ಭಾನುಮತಿ, ಎ.ಎಸ್. ಬೋಪಣ್ಣ ಮತ್ತು ಹೃಷಿಕೇಶ್ ರಾಯ್ ಅವರ ನ್ಯಾಯಪೀಠ ಜಾಮೀನು ಅರ್ಜಿಯ ತೀರ್ಪು ಪ್ರಕಟಿಸಲಿದೆ.
First published:December 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ