ಎಸ್‌ಸಿ / ಎಸ್‌ಟಿ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್

ನ್ಯಾಯಪೀಠದ ಮತ್ತೋರ್ವ ನ್ಯಾಯಮೂರ್ತಿ ರವೀಂದ್ರ ಭಟ್, ಪ್ರತಿ ನಾಗರಿಕನು ಸಹ ನಾಗರಿಕರನ್ನು ಸಮಾನವಾಗಿ ಪರಿಗಣಿಸಬೇಕು ಮತ್ತು ಭ್ರಾತೃತ್ವದ ಪರಿಕಲ್ಪನೆಯನ್ನು ಬೆಳೆಸಬೇಕು ಎಂದು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ಸುಪ್ರೀಂ ಕೋರ್ಟ್​

ಸುಪ್ರೀಂ ಕೋರ್ಟ್​

 • Share this:
  ನವ ದೆಹಲಿ (ಫೆಬ್ರವರಿ 10); ಎಸ್​ಸಿ / ಎಸ್​ಟಿ ತಿದ್ದುಪಡಿ ಕಾಯ್ದೆ 2018 ರ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಸೋಮವಾರ ಎತ್ತಿಹಿಡಿದಿದೆ. ಮತ್ತು ಪ್ರೈಮಾ ಫೇಸಿ ಪ್ರಕರಣವನ್ನು ಹೊರಹಾಕದ ಸಂದರ್ಭಗಳಲ್ಲಿ ಮಾತ್ರ ನ್ಯಾಯಾಲಯವು ನಿರೀಕ್ಷಿತ ಜಾಮೀನು ನೀಡಬಹುದು ಎಂದು ಹೇಳುವ ಮೂಲಕ ಮಹತ್ವದ ತೀರ್ಪು ನೀಡಿದೆ. 

  ಎಸ್​ಸಿ/ಎಸ್​ಟಿ ಅಟ್ರಾಸಿಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ತೀರ್ಪು ನೀಡಿರುವ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ದ್ವಿಸದಸ್ಯ ನ್ಯಾಯಪೀಠ “ಈ ಕಾಯ್ದೆಯಡಿ ಎಫ್ಐಆರ್ ದಾಖಲಿಸುವ ಮೊದಲು ಪ್ರಾಥಮಿಕ ವಿಚಾರಣೆ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಅನುಮೋದನೆ ಅಗತ್ಯವಿಲ್ಲ” ಎಂದು ತಿಳಿಸಿದ್ದಾರೆ.

  ನ್ಯಾಯಪೀಠದ ಮತ್ತೋರ್ವ ನ್ಯಾಯಮೂರ್ತಿ ರವೀಂದ್ರ ಭಟ್, “ಪ್ರತಿ ನಾಗರಿಕನು ಸಹ ನಾಗರಿಕರನ್ನು ಸಮಾನವಾಗಿ ಪರಿಗಣಿಸಬೇಕು ಮತ್ತು ಭ್ರಾತೃತ್ವದ ಪರಿಕಲ್ಪನೆಯನ್ನು ಬೆಳೆಸಬೇಕು” ಎಂದು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

  ಅಲ್ಲದೆ, "ಎಸ್​ಸಿ/ ಎಸ್​ಟಿ ಕಾಯ್ದೆಯಡಿ ಪ್ರೈಮಾ ಫೇಸಿ ಪ್ರಕರಣವನ್ನು ಹೊರಹಾಕದಿದ್ದರೆ ನ್ಯಾಯಾಲಯವು ಎಫ್ಐಆರ್ ಅನ್ನು ರದ್ದುಗೊಳಿಸಬಹುದು ಮತ್ತು ನಿರೀಕ್ಷಣಾ ಜಾಮೀನು ಸುಲಭವಾಗಿ ಸಿಗುವುದರಿಂದ ಸಂಸತ್ತಿನ ಆಶಯ ಬಲಿಯಾಗುತ್ತಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

  2018ರಲ್ಲಿ ಸುಪ್ರೀಂ ಕೋರ್ಟ್​ ಅಟ್ರಾಸಿಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕಾಯ್ದೆಯ ನಿಬಂಧನೆಗಳನ್ನು ದುರ್ಬಲಗೊಳಿತ್ತು. ಆದರೆ, ಸುಪ್ರೀಂ ಕೋರ್ಟ್​ 2018 ರ ತೀರ್ಪಿನ ಪರಿಣಾಮವನ್ನು ರದ್ದುಗೊಳಿಸಲು ತರಲಾದ 2018 ರ ಎಸ್​ಸಿ / ಎಸ್​ಟಿ ತಿದ್ದುಪಡಿ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ಇಂದು ಮಹತ್ವದ ತೀರ್ಪು ನೀಡಿದೆ.

  ಇದನ್ನೂ ಓದಿ : Pulwama Terror Attack: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಪುಲ್ವಾಮಾ ದಾಳಿಗೆ ವರ್ಷ ಒಂದು; 50 ಸೈನಿಕರ ಬಲಿಗೆ ಪ್ರತೀಕಾರ ಎಂದು?
  First published: