• Home
  • »
  • News
  • »
  • national-international
  • »
  • Supreme Court: ಆರ್ಥಿಕ ದುರ್ಬಲ ವರ್ಗಕ್ಕೆ ಮೀಸಲಾತಿ; ಸುಪ್ರೀಂನಲ್ಲಿ ಕೇಂದ್ರಕ್ಕೆ ಜಯ

Supreme Court: ಆರ್ಥಿಕ ದುರ್ಬಲ ವರ್ಗಕ್ಕೆ ಮೀಸಲಾತಿ; ಸುಪ್ರೀಂನಲ್ಲಿ ಕೇಂದ್ರಕ್ಕೆ ಜಯ

ಸುಪ್ರೀಂಕೋರ್ಟ್

ಸುಪ್ರೀಂಕೋರ್ಟ್

2019 ರ ಸಾರ್ವತ್ರಿಕ ಚುನಾವಣೆಯ ಮೊದಲು ಈ ಮೀಸಲಾತಿಯನ್ನು ಕೇಂದ್ರ ಸರ್ಕಾರ ಪರಿಚಯಿಸಿತ್ತು.

  • News18 Kannada
  • Last Updated :
  • Bangalore [Bangalore], India
  • Share this:

    ದೆಹಲಿ: ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಕೇಂದ್ರ ಸರ್ಕಾರ ಒದಗಿಸಿದ್ದ ಮೀಸಲಾತಿಯನ್ನು ಸುಪ್ರೀಂಕೋರ್ಟ್ (Supreme Court On EWS) ಎತ್ತಿಹಿಡಿದಿದೆ. ಕಾಲೇಜುಗಳು ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ 10 ಪ್ರತಿಶತ ಮೀಸಲಾತಿಯ (EWS Reservation) ಪರ ಸುಪ್ರೀಂ ಇಂದು ತೀರ್ಪು ನೀಡಿದೆ. EWS ಕೋಟಾವು ತಾರತಮ್ಯವಲ್ಲ ಮತ್ತು ಸಂವಿಧಾನದ ಮೂಲ ರಚನೆಯನ್ನು ಬದಲಾಯಿಸುವುದಿಲ್ಲ ಎಂದು ಇಂದಿನ ಸುಪ್ರೀಂ ಕೋರ್ಟ್ ತೀರ್ಪು ಹೇಳಿದೆ. 2019 ರ ಸಾರ್ವತ್ರಿಕ ಚುನಾವಣೆಯ ಮೊದಲು ಈ ಮೀಸಲಾತಿಯನ್ನು ಕೇಂದ್ರ ಸರ್ಕಾರ ಪರಿಚಯಿಸಿತ್ತು. ವಿಚಾರಣೆ ನಡೆಸಿದ ಐವರು ನ್ಯಾಯಮೂರ್ತಿಗಳಲ್ಲಿ ನಾಲ್ವರು ನ್ಯಾಯಮೂರ್ತಿಗಳು ಮೀಸಲಾತಿ ಪರ ತೀರ್ಪು ನೀಡಿದರು.


    ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ಚುನಾವಣೆಗಳಲ್ಲಿ ಆಡಳಿತಾರೂಢ ಬಿಜೆಪಿ ಸೋತ  ನಂತರ ಕೇಂದ್ರದಿಂದ ಜನವರಿ 2019 ರಲ್ಲಿ 103 ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ ಕೋಟಾವನ್ನು ಪರಿಚಯಿಸಲಾಗಿತ್ತು. ಆದರೆ ಈ ಕೇಂದ್ರ ಸರ್ಕಾರದ ಈ ನಿಲುವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.


    ಶೇಕಡಾ 50 ರ ರಾಷ್ಟ್ರೀಯ ಮಿತಿಯನ್ನು ದಾಟಬಹುದೇ?
    1992 ರಲ್ಲಿ ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಮೀಸಲಾತಿಯ ಶೇಕಡಾ 50 ರ ರಾಷ್ಟ್ರೀಯ ಮಿತಿಯನ್ನು ಕೋಟಾ ಹೇಗೆ ದಾಟಬಹುದು ಮತ್ತು ಅದು ಸಂವಿಧಾನದ "ಮೂಲ ರಚನೆ" ಯನ್ನು ಬದಲಾಯಿಸಿದೆಯೇ ಎಂದು ಕೇಂದ್ರ ಸರ್ಕಾರದ ನಿಲುವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು.


    ಕೇಂದ್ರ ಸರ್ಕಾರಕ್ಕೆ ಸಿಕ್ಕ ಜಯ ಎಂದೇ ವ್ಯಾಖ್ಯಾನ
    ಸಂಪೂರ್ಣ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ತ್ರಿವೇದಿ, ಫಾರ್ದಿವಾಲ, ಯು.ಯು.ಲಲಿತ್ ಮೀಸಲಾತಿ ಪರವಾಗಿ ತೀರ್ಪು ಕೊಟ್ಟರು. ನ್ಯಾಯಮೂರ್ತಿ ಎಸ್.ರವೀಂದ್ರ ಭಟ್ ಭಿನ್ನಮತ ತೀರ್ಪು ನೀಡಿದರು. ಈ ತೀರ್ಪು ಕೇಂದ್ರ ಸರ್ಕಾರದ ನಿಲುವಿಗೆ ಸಿಕ್ಕ ಜಯ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. 


    ಇದನ್ನೂ ಓದಿ:


    ಕನ್ಯತ್ವ ನಿರ್ಧರಿಸುವ ಪರೀಕ್ಷೆ ನಿಷೇಧಿಸಿದ ಸುಪ್ರೀಂಕೋರ್ಟ್
    ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಪ್ರಕರಣಗಳಲ್ಲಿ ಸಂತೃಸ್ತರಿಗೆ ಎರಡು ಬೆರಳಿನ ಪರೀಕ್ಷೆಯನ್ನು ನಡೆಸದಿರುವಂತೆ ಸುಪ್ರೀಂಕೋರ್ಟ್ ಸೋಮವಾರ ಆದೇಶ ನೀಡಿದೆ. ಅಲ್ಲದೇ ಎರಡು ಬೆರಳಿನ ಪರೀಕ್ಷೆಯನ್ನು (Two Finger Test Banned) ನಿಷೇಧಿಸುವಂತೆ ಮತ್ತು ಅಂತಹ ಪರೀಕ್ಷೆಗಳನ್ನು ನಡೆಸುವ ವ್ಯಕ್ತಿಗಳನ್ನು ದುರ್ವರ್ತನೆಗಾಗಿ ತಪ್ಪಿತಸ್ಥರೆಂದು ಪರಿಗಣಿಸಲಾಗುವುದು ಎಂದು ಎಚ್ಚರಿಸಿದೆ. ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಯೋನಿಯ ಸ್ನಾಯುಗಳ ಸಡಿಲತೆಯನ್ನು ಅಳೆಯಲು ಮಹಿಳೆಯ ಯೋನಿಯೊಳಗೆ ಬೆರಳುಗಳನ್ನು ಹಾಕಿ, ಆ ಮೂಲಕ ಆಕೆಯ 'ಕನ್ಯತ್ವ'ವನ್ನು ನಿರ್ಧರಿಸುವ ಪರೀಕ್ಷೆಯನ್ನು ಈ ಆದೇಶದ ಮೂಲಕ ಸುಪ್ರೀಂಕೋರ್ಟ್ (Supreme Court) ನಿಷೇಧಿಸಿದೆ.


    ಇದನ್ನೂ ಓದಿ: Vijay Mallya Lawyer: ವಿಜಯ್ ಮಲ್ಯ ಜೊತೆ ಸಂಪರ್ಕವೇ ಇಲ್ಲ, ಮುಕ್ತಿ ನೀಡುವಂತೆ ಸುಪ್ರೀಂಗೆ ವಕೀಲರ ಅಹವಾಲು


    ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಶಿಕ್ಷೆಯನ್ನು ಮರುಸ್ಥಾಪಿಸುವ ತೀರ್ಪು ನೀಡುವಾಗ, ನ್ಯಾಯಮೂರ್ತಿ ಚಂದ್ರಚೂಡ್ ಅವರು ಸೋಮವಾರ, “ಸಂತ್ರಸ್ತ ಮಹಿಳೆಯ ಲೈಂಗಿಕ ಇತಿಹಾಸದ ಸಾಕ್ಷ್ಯವು ಪ್ರಕರಣಕ್ಕೆ ವಸ್ತುವಲ್ಲ. ಈ ಪರೀಕ್ಷೆಯನ್ನು ಇಂದಿಗೂ ನಡೆಸುತ್ತಿರುವುದು ವಿಷಾದನೀಯ' ಎಂದರು.


    ಖಡಕ್ ಎಚ್ಚರಿಕೆ ನೀಡಿದ ಸುಪ್ರೀಂಕೋರ್ಟ್
    ಅತ್ಯಾಚಾರ ಪ್ರಕರಣಗಳಲ್ಲಿ ಈ ಪರೀಕ್ಷೆ ನಡೆಸುವ ವ್ಯಕ್ತಿಗಳನ್ನು ದುರ್ನಡತೆಯ ಅಪರಾಧಿ ಎಂದು ಪರಿಗಣಿಸಲಾಗುವುದು ಎಂದು ಸುಪ್ರೀಂಕೋರ್ಟ್ ಎಚ್ಚರಿಸಿದೆ. ವೈದ್ಯಕೀಯ ಕಾಲೇಜುಗಳಲ್ಲಿನ ಅಧ್ಯಯನ ಸಾಮಗ್ರಿಗಳಿಂದ ಎರಡು ಬೆರಳಿನ ಪರೀಕ್ಷೆಯನ್ನು ನಡೆಸದಂತೆ ಆದೇಶಿಸಿದೆ. ಅತ್ಯಾಚಾರದಿಂದ ಬದುಕುಳಿದವರನ್ನು ಪರೀಕ್ಷಿಸುವ ಅವೈಜ್ಞಾನಿಕ ಆಕ್ರಮಣಕಾರಿ ವಿಧಾನವು ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಗೆ ಮರುಕಳಿಸುತ್ತದೆ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.


    ಇದನ್ನೂ ಓದಿ: Explained: ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಡಿ. ವೈ ಚಂದ್ರಚೂಡ್, ಈ ಆಯ್ಕೆ ಹೊಸ ಭರವಸೆ ಮೂಡಿಸಲು ಇದೇ ಕಾರಣ!


    ಈಮುನ್ನವೇ ಅಸಂವಿಧಾನಿಕ ಎಂದಿದ್ದ ಕೋರ್ಟ್
    2013 ರಲ್ಲಿ ಸುಪ್ರೀಂ ಕೋರ್ಟ್ ಈ ಅಭ್ಯಾಸವನ್ನು ಅಸಂವಿಧಾನಿಕ ಎಂದು ಪರಿಗಣಿಸಿತ್ತು ಮತ್ತು ಪರೀಕ್ಷೆಯನ್ನು ನಡೆಸಬಾರದು ಎಂದು ಹೇಳಿತ್ತು.

    Published by:ಗುರುಗಣೇಶ ಡಬ್ಗುಳಿ
    First published: