Bhopal ಅನಿಲ ದುರಂತ ಪ್ರಕರಣ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆ!

ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್

ಎರಡು ದಶಕಗಳ ನಂತರ ಈ ಸಮಸ್ಯೆಯನ್ನು ಪ್ರಸ್ತಾಪಿಸಿರುವ ಕೇಂದ್ರ ಸರ್ಕಾರವು ಯಾವುದೇ ತಾರ್ಕಿಕ ಆಧಾರಗಳನ್ನು ನೀಡದಿರುವ ಬಗ್ಗೆ ಅತೃಪ್ತಿ ಇದೆ. ಹೆಚ್ಚುವರಿ ಪರಿಹಾರಕ್ಕೆ ಕೇಂದ್ರವು ಇಟ್ಟಿರುವ ಬೇಡಿಕೆಯಲ್ಲಿ ಕಾನೂನಿಗೆ ಪೂರಕವಾದ ಯಾವುದೇ ಆಧಾರವಿಲ್ಲ. ಸಂತ್ರಸ್ತರಿಗೆ ಪರಿಹಾರದ ಕೊರತೆಯ ಬಗ್ಗೆ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದೆ.

ಮುಂದೆ ಓದಿ ...
  • Share this:

ನವ ದೆಹಲಿ: 1984ರಲ್ಲಿ ನಡೆದ ಭೋಪಾಲ್ ಅನಿಲ ದುರಂತದ (Bhopal Gas Tragedy) ಸಂತ್ರಸ್ತರಿಗೆ ಅಮೆರಿಕಾ ಮೂಲದ ಯೂನಿಯನ್ ಕಾರ್ಬೈಡ್‌ ಕಾರ್ಪೋರೇಷನ್‌ (Union Carbide Corporation) ಸಂಸ್ಥೆಯಿಂದ ಹೆಚ್ಚುವರಿ ಪರಿಹಾರ ನೀಡುವಂತೆ ಆಗ್ರಹಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್‌ (Supreme Court) ತಿರಸ್ಕಾರ ಮಾಡಿದೆ. ಆ ಮೂಲಕ ಕೇಂದ್ರ ಸರ್ಕಾರಕ್ಕೆ (Central Government) ಭಾರೀ ಹಿನ್ನಡೆಯುಂಟಾಗಿದೆ.


1984 ರ ಡಿಸೆಂಬರ್ 2 ಮತ್ತು 3ರಂದು ಮಧ್ಯರಾತ್ರಿ ವೇಳೆ ಭೋಪಾಲ್‌ನಲ್ಲಿ ಇರುವ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದ ವಿಷಕಾರಿ ಮೀಥೈಲ್ ಐಸೊಸೈನೇಟ್ ಅನಿಲ ಸೋರಿಕೆಯಾದ ನಂತರ 1989 ರಲ್ಲಿ 3,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು ಜೊತೆಗೆ 1.02 ಲಕ್ಷ ಜನರು ಗಾಯಗೊಂಡು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿದ್ದರು. ಈ ಭಯಾನಕ ಘಟನೆಯಿಂದ ಪರಿಸರಕ್ಕೂ ಭಾರೀ ಹಾನಿಯುಂಟಾಗಿತ್ತು.


ಇದನ್ನೂ ಓದಿ: Supreme Court: ಸುಪ್ರೀಂ ನಿರ್ಧಾರದಿಂದ ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ನಡುಕ, ಶಿಕ್ಷೆ ವಿಧಿಸಲು ಈ ವಿಚಾರವಷ್ಟೇ ಪರಿಗಣನೆ!


'ವಂಚನೆಯ ಕಾರಣವನ್ನು ಸರ್ಕಾರ ನೀಡಿಲ್ಲ'


1989ರ ಪ್ರಕರಣದ ಇತ್ಯರ್ಥದ ಸಂದರ್ಭದಲ್ಲಿ ಮಾನವ ಜೀವನ ಮತ್ತು ಪರಿಸರಕ್ಕೆ ಉಂಟಾದ ನಿಜವಾದ ಹಾನಿಯ ಅಗಾಧತೆಯನ್ನು ಸರಿಯಾಗಿ ನಿರ್ಣಯಿಸಲು ಸಾಧ್ಯವಾಗಿರಲಿಲ್ಲ ಎಂದು ಸರ್ಕಾರ ವಾದಿಸಿತ್ತು. ಆದರೆ, ಸರ್ಕಾರದ ವಾದವನ್ನು ತಿರಸ್ಕರಿಸಿರುವ ನ್ಯಾಯಮೂರ್ತಿ ಎಸ್‌.ಕೆ. ಕೌಲ್ ನೇತೃತ್ವದ ಐವರು ನ್ಯಾಯೂರ್ತಿಗಳ ಪೀಠವು, ವಂಚನೆ ನಡೆದಿದ್ದಲ್ಲಿ ಮಾತ್ರ ಪರಿಹಾರ ನಿರ್ಣಯವನ್ನು ಕೈಬಿಡಬಹುದು. ಆದರೆ, ಇಲ್ಲಿ ಯಾವುದೇ ವಂಚನೆಯ ಕಾರಣವನ್ನು ಸರ್ಕಾರ ನೀಡಿಲ್ಲ ಎಂದು ಹೇಳಿದೆ.


ಜಸ್ಟಿಸ್ ಸಂಜಯ್ ಕಿಶನ್ ಕೌಲ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಇತ್ಯರ್ಥದ ಎರಡು ದಶಕಗಳ ನಂತರ ಈ ಸಮಸ್ಯೆಯನ್ನು ತರಲು ಕೇಂದ್ರದಿಂದ ಯಾವುದೇ ತರ್ಕವಿಲ್ಲ ಎಂದು ಹೇಳಿದೆ. ಸಂತ್ರಸ್ತರಿಗಾಗಿ ಆರ್‌ಬಿಐ ಬಳಿ ಇರುವ 50 ಕೋಟಿ ರೂಪಾಯಿಯನ್ನು ಸಂತ್ರಸ್ತರ ಬಾಕಿ ಇರುವ ಕ್ಲೈಮ್‌ಗಳನ್ನು ಪೂರೈಸಲು ಯೂನಿಯನ್ ಆಫ್ ಇಂಡಿಯಾ ಬಳಸಿಕೊಳ್ಳುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.


ಇದನ್ನೂ ಓದಿ: Viral News: ದಾರಿ ತಪ್ಪಿ ಅಳುತ್ತಿದ್ದ ವಿದ್ಯಾರ್ಥಿನಿ ಪರೀಕ್ಷಾ ಕೇಂದ್ರ ತಲುಪಲು ಝೀರೋ ಟ್ರಾಫಿಕ್! ಪೊಲೀಸ್​ ​ಇನ್ಸ್‌ಪೆಕ್ಟರ್ ಕಾರ್ಯಕ್ಕೆ ನೆಟ್ಟಿಗರ ಹ್ಯಾಟ್ಸಾಪ್


'ಸರ್ಕಾರ ತಾರ್ಕಿಕ ಆಧಾರಗಳನ್ನು ನೀಡದಿರುವ ಬಗ್ಗೆ ಅತೃಪ್ತಿ ಇದೆ'


ಎರಡು ದಶಕಗಳ ನಂತರ ಈ ಸಮಸ್ಯೆಯನ್ನು ಪ್ರಸ್ತಾಪಿಸಿರುವ ಕೇಂದ್ರ ಸರ್ಕಾರವು ಯಾವುದೇ ತಾರ್ಕಿಕ ಆಧಾರಗಳನ್ನು ನೀಡದಿರುವ ಬಗ್ಗೆ ಅತೃಪ್ತಿ ಇದೆ. ಹೆಚ್ಚುವರಿ ಪರಿಹಾರಕ್ಕೆ ಕೇಂದ್ರವು ಇಟ್ಟಿರುವ ಬೇಡಿಕೆಯಲ್ಲಿ ಕಾನೂನಿಗೆ ಪೂರಕವಾದ ಯಾವುದೇ ಆಧಾರವಿಲ್ಲ. ಸಂತ್ರಸ್ತರಿಗೆ ಪರಿಹಾರದ ಕೊರತೆಯ ಬಗ್ಗೆ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಪೀಠ, ಭಾರತೀಯ ರಿಸರ್ವ್ ಬ್ಯಾಂಕ್ ಬಳಿ ಇರುವ 50 ಕೋಟಿ ರೂ ಅನ್ನು ಕೇಂದ್ರ ಸರ್ಕಾರವು ಬಾಕಿ ಉಳಿದಿರುವ ಕ್ಲೈಮ್‌ಗಳನ್ನು ಪೂರೈಸಲು ಬಳಸಿಕೊಳ್ಳಬೇಕು ಎಂದು ಹೇಳಿದೆ.ದುರಂತದ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರವನ್ನು ನೀಡಲು ಯೂನಿಯನ್ ಕಾರ್ಬೈಡ್ ಕಾರ್ಪೊರೇಶನ್‌ ಒಡೆತನದ ಸಂಸ್ಥೆಯಿಂದ ಹೆಚ್ಚುವರಿ 7,844 ಕೋಟಿ ರೂ ಕೊಡಿಸಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿತ್ತು. ಪ್ರಕರಣದ ಇತ್ಯರ್ಥದ ಸಮಯದಲ್ಲಿ ಪರಿಹಾರದ ಮೊತ್ತ ಅಸಮರ್ಪಕವಾಗಿದೆ ಎಂದು ಭಾರತ ಸರ್ಕಾರವು ಹೇಳಿಲ್ಲ ಎಂದು ಯೂನಿಯನ್ ಕಾರ್ಬೈಡ್ ಕಾರ್ಪೊರೇಶನ್‌ ಒಡೆತನದ ಸಂಸ್ಥೆ ವಾದಿಸಿತ್ತು.


ಇದನ್ನೂ ಓದಿ: Supreme Court: ಹಿಂದೂ ಧರ್ಮ ಶ್ರೇಷ್ಠ ಧರ್ಮ, ಇಲ್ಲಿ ಧರ್ಮಾಂಧತೆಗೆ ಅವಕಾಶವಿಲ್ಲ -ಸುಪ್ರೀಂ ಕೋರ್ಟ್

Published by:Avinash K
First published: