ನಾಳೆ ಸುಪ್ರೀಂ ಅಂಗಳದಲ್ಲಿ ಲಾಲೂ ಜಾಮೀನು ಅರ್ಜಿ ವಿಚಾರಣೆ: ಆಕ್ಷೇಪಣೆ ಸಲ್ಲಿಸಿರುವ ಸಿಬಿಐ

ಜೈಲಿಗೆ ಹೋಗಬೇಕಾದ ಸಂದರ್ಭ ಎದುರಾದರೆ ಲಾಲೂ ಅನಾರೋಗ್ಯ ಕಾರಣವನ್ನು ಮುಂದಿಟ್ಟು ಆಸ್ಪತ್ರೆ ಸೇರುತ್ತಾರೆ. ದಿಢೀರನೆ ತಾವು ಸಂಪೂರ್ಣ ಫಿಟ್ ಆಗಿರುವುದಾಗಿ ದಾಖಲೆ ನೀಡಿ ಜಾಮೀನು ಪಡೆಯುತ್ತಾರೆ ಇದೇ ಕಾರಣಕ್ಕೆ ಈ ಹಿಂದೆ ಜಾರ್ಖಂಡ್ ಹೈಕೋರ್ಟ್ ಅವರ ಜಾಮೀನು ಅರ್ಜಿಯನ್ನು ನಿರಾಕರಿಸಿತ್ತು

news18
Updated:April 9, 2019, 2:00 PM IST
ನಾಳೆ ಸುಪ್ರೀಂ ಅಂಗಳದಲ್ಲಿ ಲಾಲೂ ಜಾಮೀನು ಅರ್ಜಿ ವಿಚಾರಣೆ: ಆಕ್ಷೇಪಣೆ ಸಲ್ಲಿಸಿರುವ ಸಿಬಿಐ
ಲಾಲೂ ಪ್ರಸಾದ್​ ಯಾದವ್​ ಫೈಲ್​ ಫೋಟೊ
news18
Updated: April 9, 2019, 2:00 PM IST
ನವ ದೆಹಲಿ ; ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಸಭೆಗಳಲ್ಲಿ ಭಾಗವಹಿಸುವುದಕ್ಕಾಗಿ ಲಾಲೂ ಪ್ರಸಾದ್ ಯಾದವ್ ವೈದ್ಯಕೀಯ ನೆಪವೊಡ್ಡಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ಅವರು ನ್ಯಾಯಾಲಯವನ್ನು ತಪ್ಪು ದಾರಿಗೆ ಎಳೆಯಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿರುವ ಸಿಬಿಐ ಅವರಿಗೆ ಜಾಮೀನು ನೀಡಿದಂತೆ ಸುಪ್ರೀಂಗೆ ಮನವಿ ಮಾಡಿದೆ.

ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಲಾಲೂ ಪ್ರಸಾದ್ ಯಾದವ್  ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಜಾರ್ಖಂಡ್ ಹೈಕೋರ್ಟ್ ತಿರಸ್ಕರಿಸಿತ್ತು. ಹೀಗಾಗಿ ಅವರು ಸುಪ್ರೀಂ ಮೆಟ್ಟಿಲೇರಿದ್ದರು. ಈ ಕುರಿತು ಏಪ್ರಿಲ್ 6 ರಂದು ಪ್ರಕಟಣೆ ಹೊರಡಿಸಿದ್ದ ಸುಪ್ರೀಂ, ಏಪ್ರಿಲ್.10 ರಂದು ಅರ್ಜಿಯ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿತ್ತು. ಅಲ್ಲದೆ ಏಪ್ರಿಲ್. 09ರ ಒಳಗಾಗಿ ಆಕ್ಷೇಪಣೆ ಅಥವಾ ಉತ್ತರ ಸಲ್ಲಿಸುವಂತೆ ಸಿಬಿಐಗೆ ನಿರ್ದೇಶನ ನೀಡಿತ್ತು.

ಕೋರ್ಟ್ ನಿರ್ದೇಶನದಂತೆ ಲಾಲೂ ಜಾಮೀನು ಅರ್ಜಿಗೆ ಇಂದು ಆಕ್ಷೇಪಣೆ ಸಲ್ಲಿಸಿರುವ ಸಿಬಿಐ ಅಧಿಕಾರಿಗಳು, “ರಾಂಚಿಯ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ನ  ಸುಸಜ್ಜಿತ ವಿಶೇಷ ವಾರ್ಡ್ ನಲ್ಲಿ ದಾಖಲಾಗಿರುವ ಲಾಲೂ ಪ್ರಸಾದ್ ಯಾದವ್ ರನ್ನು ನೋಡಲು ಪ್ರತಿದಿನ ಯಾವ ಯಾವ ರಾಜಕಾರಣಿಗಳು ಆಗಮಿಸಿದ್ದರು ಎಂಬ ಪಟ್ಟಿಯನ್ನು ನ್ಯಾಯಾಲಯದ ಮುಂದಿಟ್ಟು ಅವರಿಗೆ ಜಾಮೀನು ನೀಡದಂತೆ ಮನವಿ ಮಾಡಿದೆ.

ಲಾಲೂ ನಾಟಕ ಲೀಲೆ : ಜೈಲಿಗೆ ಹೋಗಬೇಕಾದ ಸಂದರ್ಭ ಎದುರಾದರೆ ಲಾಲೂ ಅನಾರೋಗ್ಯ ಕಾರಣವನ್ನು ಮುಂದಿಟ್ಟು ಆಸ್ಪತ್ರೆ ಸೇರುತ್ತಾರೆ. ದಿಢೀರನೆ ತಾವು ಸಂಪೂರ್ಣ ಫಿಟ್ ಆಗಿರುವುದಾಗಿ ದಾಖಲೆ ನೀಡಿ ಜಾಮೀನು ಪಡೆಯುತ್ತಾರೆ ಇದೇ ಕಾರಣಕ್ಕೆ ಈ ಹಿಂದೆ ಜಾರ್ಖಂಡ್ ಹೈಕೋರ್ಟ್ ಅವರ ಜಾಮೀನು ಅರ್ಜಿಯನ್ನು ನಿರಾಕರಿಸಿತ್ತು ಎಂದು ತಮ್ಮ ಆಕ್ಷೇಪಣೆಯಲ್ಲಿ ಉಲ್ಲೇಖಿಸಿರುವ ಸಿಬಿಐ ಅಧಿಕಾರಿಗಳು ಈಗಿನ ಅವರ ಜಾಮೀನು ಅರ್ಜಿ ನಾಟಕದ ಕುರಿತು ಸಂಶಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬಹುಕೋಟಿ ರೂಪಾಯಿ ಮೇವು ಹಗರಣದಲ್ಲಿ ಲಾಲೂಗೆ ಜೈಲು

“ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಮುನ್ನಡೆಸುವ ಸಲುವಾಗಿ ಲಾಲೂ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದಾರೆ. ವೈದ್ಯಕೀಯ ಕಾರಣಕ್ಕಾಗಿಯೇ ಜಾಮೀನು ನೀಡಿದರೂ ಅವರು ಪಕ್ಷದ ಅಧ್ಯಕ್ಷರಾಗಿ ರಾಜಕೀಯ ಚಟುವಟಿಕೆಯಲ್ಲಿ ಮುಂದುವರೆಯಲು ಬಯಸುತ್ತಾರೆ. ಇದು ಕಾನೂನಿನ ಅಡಿಯಲ್ಲಿ ಒಪ್ಪಿಕೊಳ್ಳಲಾಗದ ಚಟುವಟಿಕೆಯಾಗಿದ್ದು ಲಾಲೂ ಪ್ರಸಾದ್ ಅವರ ಜಾಮೀನು ಅರ್ಜಿಯನ್ನು ಕೋರ್ಟ್ ತಿರಸ್ಕರಿಸಬೇಕು” ಎಂದು ಅಫಿಡವಿಟ್ ಸಲ್ಲಿಸಲಾಗಿದೆ ಎಂದು ಸಿಬಿಐ ಅಧಿಕಾರಗಳು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ವಿಚ್ಛೇದನ ವಿಷಯ ಅಪ್ಪನಿಗೆ ತಿಳಿಸಿ ನಾಪತ್ತೆಯಾದ ಲಾಲೂ ಪ್ರಸಾದ್​ ಯಾದವ್​ ಮಗ

ಲಾಲೂ ಪ್ರಸಾದ್ ಯಾದವ್ ಬಿಹಾರದ ಮುಖ್ಯಮಂತ್ರಿಯಾಗಿದ್ದಾಗ ಮೇವು ಹಗರಣ ಸೇರಿದಂತೆ ವಿವಿಧ ಕಾನೂನು ಬಾಹೀರ ಕೃತ್ಯಗಳಿಗಾಗಿ ಒಟ್ಟು 27.5 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಆದರೆ ಅವರು ಜೈಲಿನಲ್ಲಿ ಕಳೆದದ್ದು ಕೇವಲ 20 ತಿಂಗಳು ಮಾತ್ರ. ಹೀಗಾಗಿ ಅಪರಾಧದ ಗಂಭೀರತೆಯನ್ನು ಪರಿಗಣಿಸಿ ನ್ಯಾಯಾಲಯವು ಅರ್ಜಿದಾರರ ಜಾಮೀನು ಅರ್ಜಿಯನ್ನು ವಜಾಗೊಳಿಸಬೇಕು ಎಂದು ಮನವಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರ (ಏಪ್ರಿಲ್.10) ರಂದು ಸುಪ್ರೀಂ ಕೋರ್ಟ್ ಲಾಲೂ ಪ್ರಸಾದ್ ಯಾದವ್ ಜಾಮೀನು ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲಿದ್ದು ಹಿರಿಯ ವಕೀಲ ಕಪಿಲ್ ಸಿಬಲ್ ಲಾಲೂ ಪರವಾಗಿ ವಾದ ಮಂಡಿಸಲಿದ್ದಾರೆ.

First published:April 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ