ಪುರಿ ರಥಯಾತ್ರೆಗೆ ಅನುಮತಿ ಕೋರಿ ಮೇಲ್ಮನವಿ: ಸುಪ್ರೀಂ ಕೋರ್ಟ್​ನಲ್ಲಿ ಇಂದು ಅರ್ಜಿ ವಿಚಾರಣೆ

ರಥಯಾತ್ರೆಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಬದಲು ಸುಮಾರು 500-600 ಮಂದಿಯೊಂದಿಗೆ ಸಾಮಾಜಿಕ ಅಂತರ ಪಾಲನೆ ಇತ್ಯಾದಿ ಮುನ್ನೆಚ್ಚರಿಕೆಗಳೊಂದಿಗೆ ರಥ ಯಾತ್ರೆ ನಡೆಸಲು ಅನುಮತಿ ಕೊಡಬೇಕೆಂದು ಈಗ ಮೇಲ್ಮನವಿ ಸಲ್ಲಿಸಲಾಗಿದೆ.

news18
Updated:June 22, 2020, 7:15 AM IST
ಪುರಿ ರಥಯಾತ್ರೆಗೆ ಅನುಮತಿ ಕೋರಿ ಮೇಲ್ಮನವಿ: ಸುಪ್ರೀಂ ಕೋರ್ಟ್​ನಲ್ಲಿ ಇಂದು ಅರ್ಜಿ ವಿಚಾರಣೆ
ಪುರಿ ರಥಯಾತ್ರೆಯ ಒಂದು ಚಿತ್ರ
  • News18
  • Last Updated: June 22, 2020, 7:15 AM IST
  • Share this:
ನವದೆಹಲಿ(ಜೂನ್ 22): ಒಡಿಶಾದ ಐತಿಹಾಸಿಕ ಪುರಿ ಜಗನ್ನಾಥ ಮಂದಿರದ ರಥ ಯಾತ್ರೆಯನ್ನು ಈ ವರ್ಷ ರದ್ದು ಮಾಡಿ ತಾನು ನೀಡಿದ್ದ ತೀರ್ಪನ್ನ ಹಿಂಪಡೆಯುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇವತ್ತು ಕೈಗೆತ್ತಿಕೊಳ್ಳಲಿದೆ. ಕೊರೋನಾ ವೈರಸ್ ಬಿಕ್ಕಟ್ಟು ಇರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಸರ್ವೋಚ್ಚ ನ್ಯಾಯಾಲಯವು ರಥಯಾತ್ರೆಯನ್ನ ನಡೆಸಬಾರದೆಂದು ಜೂನ್ 18ರಂದು ಆದೇಶ ಹೊರಡಿಸಿದೆ. ಜೂನ್ 23ರಂದು ನಡೆಯಬೇಕಿದ್ದ ರಥಯಾತ್ರೆಗೆ ತಡೆ ಬಿದ್ದಿರುವುದು ಕೆಲ ಹಿಂದೂ ಸಂಘಟನೆಗಳಿಗೆ ಇರಿಸುಮುರುಸು ತಂದಿದೆ.

ಜೂನ್ 19, ಶುಕ್ರವಾರದಂದು ತೀರ್ಪನ್ನು ಮರುಪರಿಶೀಲಿಸುವಂತೆ, ಅಥವಾ ತೀರ್ಪು ಹಿಂಪಡೆಯುವಂತೆ ಕೋರಿ ಸುಪ್ರೀಮ್ ಕೋರ್ಟ್​ನಲ್ಲಿ ಜಗನ್ನಾಥ್ ಸಂಸ್ಕೃತಿ ಜನ ಜಾಗರಣ ಮಂಚ್ ಸಂಘಟನೆ ಸೇರಿ ಹಲವರಿಂದ ಅರ್ಜಿಗಳು ಸಲ್ಲಿಕೆಯಾಗಿವೆ. ನ್ಯಾ| ಎಸ್ ರವೀಂದ್ರ ಭಟ್ ಅವರಿರುವ ಏಕಸದಸ್ಯ ನ್ಯಾಯಪೀಠ ಸೋಮವಾರ ಈ ಅರ್ಜಿ ವಿಚಾರಣೆ ನಡೆಸಲಿದೆ.

ಪುರಿ ಮಠದ ಶಂಕರಾಚಾರ್ಯರಾದ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರು ಐತಿಹಾಸಿಕ ರಥ ಯಾತ್ರೆಯನ್ನು ನಿಲ್ಲಿಸುವ ವ್ಯವಸ್ಥಿತ ಸಂಚು ನಡೆದಿದೆ ಎಂದು ಇವತ್ತು ಗಂಭೀರ ಆರೋಪ ಮಾಡಿದ್ಧಾರೆ. ಪುರಿ ಸಂಸ್ಥಾನದ ಮಹಾರಾಜ ಹಾಗೂ ಜಗನ್ನಾಥ ದೇವರ ಆದ್ಯಸೇವಕರಾದ ದಿಬ್ಯಸಿಂಘ ದೇಬ್ ಅವರು ಒಡಿಶಾ ಸಿಎಂ ನಿತೀಶ್ ಪಾಟ್ನಾಯಕ್ ಅವರ ಮಧ್ಯಪ್ರವೇಶಕ್ಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಭ್ರಷ್ಟರ ಸಿಂಹಸ್ವಪ್ನ ಕರ್ನಾಟಕದ ‘ಖೇಮ್ಕಾ’ ಕೆ ಮಥಾಯ್ ಈಗ ವಕೀಲರಾಗಿ ಎರಡನೇ ಇನ್ನಿಂಗ್ಸ್

ಪುರಿಯ ಜಗನ್ನಾಥ ರಥ ಯಾತ್ರೆ ವಿಶ್ವ ವಿಖ್ಯಾತವಾಗಿದೆ. 10-12 ದಿನಗಳ ಕಾಲ ನಡೆಯುವ ಈ ರಥಯಾತ್ರೆಯನ್ನು ಕೋಟಿಗಟ್ಟಲೆ ಜನರು ವೀಕ್ಷಿಸುತ್ತಾರೆ. ಈ ಬಾರಿ ಜೂನ್ 23ರಂದು ರಥಯಾತ್ರೆ ಉತ್ಸವ ಪ್ರಾರಂಭಗೊಳ್ಳಬೇಕಿತ್ತು.

ಇನ್ನು, ರಥಯಾತ್ರೆ ರದ್ದು ಮಾಡಿ ಸುಪ್ರೀಂ ಕೋರ್ಟ್ ತೀರ್ಪು ನೀಡಲು ಒಡಿಶಾ ವಿಕಾಸ್ ಪರಿಷದ್ ಎಂಬ ಎನ್​ಜಿಒ ಸಲ್ಲಿಸಿದ್ದ ಪಿಐಎಲ್ ಕಾರಣವಾಗಿದೆ. ಕೊರೋನಾ ವೈರಸ್ ಹರಡುವ ಭೀತಿ ಇರುವುದರಿಂದ ರಥಯಾತ್ರೆ ನಿಲ್ಲಿಸಿ ಎಂದು ಅರ್ಜಿ ಸಲ್ಲಿಸಲಾಗಿತ್ತು. ಸುಪ್ರೀಂ ಕೋರ್ಟ್ ಈ ವಾದಕ್ಕೆ ಮನ್ನಣೆ ನೀಡಿ ಜೂನ್ 18ರಂದು ತೀರ್ಪು ನೀಡಿತು.

ಆದರೆ, ರಥಯಾತ್ರೆಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಬದಲು ಸುಮಾರು 500-600 ಮಂದಿಯೊಂದಿಗೆ ಸಾಮಾಜಿಕ ಅಂತರ ಪಾಲನೆ ಇತ್ಯಾದಿ ಮುನ್ನೆಚ್ಚರಿಕೆಗಳೊಂದಿಗೆ ರಥ ಯಾತ್ರೆ ನಡೆಸಲು ಅನುಮತಿ ಕೊಡಬೇಕೆಂದು ಈಗ ಮೇಲ್ಮನವಿ ಸಲ್ಲಿಸಲಾಗಿದೆ.
First published: June 22, 2020, 7:15 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading