ಮಧ್ಯಪ್ರದೇಶ ಬಿಕ್ಕಟ್ಟು: ವಿಶ್ವಾಸ ಮತಯಾಚನೆಗೆ ಸೂಚಿಸಿ ಎಂದು ಬಿಜೆಪಿ ಅರ್ಜಿ; ಇಂದು ಸುಪ್ರೀಂಕೋರ್ಟ್​​ ವಿಚಾರಣೆ

ಮಧ್ಯಪ್ರದೇಶದ ಕಾಂಗ್ರೆಸ್‌ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾಗಿದ್ದರು. ಪರಿಣಾಮ ಅಲ್ಲಿನ ಕಾಂಗ್ರೆಸ್‌ ಸರ್ಕಾರದ ಮೇಲೆ ತಮಗೆ ವಿಶ್ವಾಸ ಇಲ್ಲ ಎಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ 22 ಶಾಸಕರು ಕರ್ನಾಟಕಕ್ಕೆ ಆಗಮಿಸಿ ಆಶ್ರಯಪಡೆದರು. ಪರಿಣಾಮ ಕಮಲನಾಥ್ ಸರ್ಕಾರ ಅಲ್ಪ ಮತಕ್ಕೆ ಕುಸಿಯಿತು.

ಸುಪ್ರೀಂಕೋರ್ಟ್​

ಸುಪ್ರೀಂಕೋರ್ಟ್​

 • Share this:
  ನವದೆಹಲಿ(ಮಾ.18): ಮುಖ್ಯಮಂತ್ರಿ ಕಮಲ್​​ನಾಥ್ ನೇತೃತ್ವದ ಕಾಂಗ್ರೆಸ್​​ ಸರ್ಕಾರದ​ ಬಹುಮತ ಸಾಬೀತಿಗೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ಇಂದು ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದೆ. ಇದರ ವಿಚಾರಣೆ ಬಳಿಕ ಜತೆಗೆ ಮಧ್ಯಪ್ರದೇಶದ ಅತೃಪ್ತ ಕಾಂಗ್ರೆಸ್ ಶಾಸಕರ ರಾಜೀನಾಮೆ ಅರ್ಜಿಯನ್ನು ಸ್ಪೀಕರ್ ಅಂಗೀಕರಿಸಬೇಕು ಎಂಬುದರ ಬಗ್ಗೆಯೂ ಸುಪ್ರೀಂಕೋರ್ಟ್ ತೀರ್ಪು ನೀಡಲಿದೆಯಾ ಎಂದು ಕಾದು ನೋಡಬೇಕಿದೆ.

  ಮಧ್ಯಪ್ರದೇಶದ ಕಾಂಗ್ರೆಸ್‌ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾಗಿದ್ದರು. ಪರಿಣಾಮ ಅಲ್ಲಿನ ಕಾಂಗ್ರೆಸ್‌ ಸರ್ಕಾರದ ಮೇಲೆ ತಮಗೆ ವಿಶ್ವಾಸ ಇಲ್ಲ ಎಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ 22 ಶಾಸಕರು ಕರ್ನಾಟಕಕ್ಕೆ ಆಗಮಿಸಿ ಆಶ್ರಯಪಡೆದರು. ಪರಿಣಾಮ ಕಮಲನಾಥ್ ಸರ್ಕಾರ ಅಲ್ಪ ಮತಕ್ಕೆ ಕುಸಿಯಿತು.

  ಆದರೆ, ವಿಧಾನ ಮಂಡಲ ಅಧಿವೇಶನವನ್ನೇ 10 ದಿನಗಳ ಕಾಲ ಮುಂದೂಡಿದರು. ಅಲ್ಲದೆ, ಅತೃಪ್ತ ಶಾಸಕರ ರಾಜೀನಾರಾಜ್ಯಪಾಲರ ನಿರ್ದೇಶನದ ಮೇರೆಗೆ ವಿಶ್ವಾಸಮತ ಯಾಚನೆಗೆ ತಾಕೀತು ಮಾಡಬೇಕಿದ್ದ ಸ್ಪೀಕರ್ ಕೊರೋನಾ ಭೀತಿಯಿಂದಮೆ ಅರ್ಜಿಯನ್ನೂ ಈವರೆಗೆ ಅಂಗೀಕಾರ ಮಾಡಿಲ್ಲ. ಹೀಗಾಗಿ ಮಧ್ಯಪ್ರದೇಶದಲ್ಲೂ ಕರ್ನಾಟಕದ ಮಾದರಿಯಲ್ಲೇ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿದ್ದು ಇದನ್ನು ಪ್ರಶ್ನಿಸಿ ಎಲ್ಲಾ ಶಾಸಕರು ಸುಪ್ರೀಂ ಮೆಟ್ಟಿಲೇರಿದ್ದರು.

  ಇದನ್ನೂ ಓದಿ: ಕೊರೋನಾ ಆತಂಕ; ಗಾಳಿಸುದ್ದಿಗಳಿಗೆ ಕಿವಿಗೊಡದಂತೆ ರಾಜ್ಯದ ಜನತೆಗೆ ಸಿಎಂ ಬಿಎಸ್​ವೈ ವಿಡಿಯೋ ಸಂದೇಶ

  ಈ ಕುರಿತ ಪ್ರಕರಣದ ವಿಚಾರಣೆಯನ್ನು ಬುಧವಾರ ಕೈಗೆತ್ತಿಕೊಂಡಿದ್ದ ಸುಪ್ರೀಂಕೋರ್ಟ್‌, "ಶಾಸಕರ ರಾಜೀನಾಮೆಯನ್ನು ಅಂಗೀಕಾರ ಮಾಡುವುದು ಅಥವಾ ಬಿಡುವುದು ಸ್ಪೀಕರ್ ವಿವೇಚನಾ ಅಧಿಕಾರಕ್ಕೆ ಬಿಟ್ಟ ವಿಚಾರ. ಸ್ಪೀಕರ್ ಅಧಿಕಾರದಲ್ಲಿ ಸುಪ್ರೀಂ ಕೋರ್ಟ್‌ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ" ಎಂದು ತೀರ್ಪು ನೀಡಿದೆ. ಆದ್ದರಿಂದ ಕಮಲನಾಥ್ ಸರ್ಕಾರ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ಕರ್ನಾಟಕದಲ್ಲಿರುವ ಅತೃಪ್ತ ಶಾಸಕರು ಒತ್ತಡಕ್ಕೆ ಸಿಲುಕಿದಂತಾಗಿದೆ. ಅಲ್ಲದೆ, ಖುದ್ದಾಗಿ ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಸಬೇಕಾದ ಸಂಕಷ್ಟಕ್ಕೆ ಒಳಗಾದಂತಾಗಿದೆ.
  First published: