ವಿಜಯ್ ಮಲ್ಯ ಸಲ್ಲಿಸಿರುವ ಮೇಲ್ಮನವಿ ಅರ್ಜಿ ಆ.20ರಂದು ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ
ಮಕ್ಕಳ ಖಾತೆಗೆ ವರ್ಗಾಯಿಸಿರುವ ಹಣವನ್ನು ಹಿಂದಕ್ಕೆ ಪಡೆಯಬೇಕು ಎಂದು ಮನವಿ ಮಾಡಿದ್ದವು. 2017 ಮೇ ತಿಂಗಳಿನಲ್ಲಿ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಮಲ್ಯ ತಪ್ಪಿತಸ್ಥ ಎಂದು ತೀರ್ಪು ನೀಡಿತ್ತು. ಈ ಆದೇಶ ವಿರುದ್ಧ ವಿಜಯ್ ಮಲ್ಯ ಮೇಲ್ಮನವಿ ಸಲ್ಲಿಸಿದ್ದರು.
news18-kannada Updated:August 6, 2020, 4:55 PM IST

ವಿಜಯ್ ಮಲ್ಯ
- News18 Kannada
- Last Updated: August 6, 2020, 4:55 PM IST
ನವದೆಹಲಿ; ಉದ್ಯಮಿ ವಿಜಯ್ ಮಲ್ಯ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ಆಗಸ್ಟ್ 20 ರಂದು ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಗುರುವಾರ ತಿಳಿಸಿದೆ. ವಿಜಯ್ ಮಲ್ಯ ನ್ಯಾಯಾಲಯದ ಆದೇಶ ಉಲ್ಲಂಘಿಸಿ ತಮ್ಮ ಮಕ್ಕಳಿಗೆ 40 ಮಿಲಿಯನ್ ಡಾಲರ್ ಹಣ ವರ್ಗಾವಣೆ ಮಾಡುವ ಮೂಲಕ 2017ರಲ್ಲಿ ನ್ಯಾಯಾಂಗ ನಿಂದನೆಗೆ ಗುರಿಯಾಗಿದ್ದರು. ಆ ಆದೇಶದ ವಿರುದ್ಧ ವಿಜಯ್ ಮಲ್ಯ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿಗಳಾದ ಯು.ಯು.ಲಲಿತ್ ಮತ್ತು ಅಶೋಕ್ ಭೂಷಣ್ ಅವರಿದ್ದ ದ್ವಿಸದಸ್ಯ ಪೀಠ ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಅರ್ಜಿ ವಿಚಾರಣೆ ನಡೆಸಬೇಕಿತ್ತು. ಆದರೆ, ದಾಖಲೆಯೊಂದು ಲಭ್ಯವಿಲ್ಲದ ಕಾರಣ ಪೀಠವು ವಿಚಾರಣೆಯನ್ನು ಆಗಸ್ಟ್ 20ಕ್ಕೆ ಮುಂದೂಡಿದೆ. ವಿವಿಧ ನ್ಯಾಯಾಂಗ ಆದೇಶಗಳನ್ನು ಉಲ್ಲಂಘಿಸಿ ವಿಜಯ್ ಮಲ್ಯ ಅವರು 40 ಮಿಲಿಯನ್ ಡಾಲರ್ ಹಣವನ್ನು ತಮ್ಮ ಮಕ್ಕಳಿಗೆ ಅಕ್ರಮವಾಗಿ ವರ್ಗಾಯಿಸಿದ್ದಾರೆ ಎಂದು ವಿವಿಧ ಬ್ಯಾಂಕುಗಳು ದೂರಿದ್ದವು. ನ್ಯಾಯಾಗ ನಿಂದನೆ ಪ್ರಕರಣದ ಅಡಿಯಲ್ಲಿ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು, ಜೊತೆಗೆ ಮಕ್ಕಳ ಖಾತೆಗೆ ವರ್ಗಾಯಿಸಿರುವ ಹಣವನ್ನು ಹಿಂದಕ್ಕೆ ಪಡೆಯಬೇಕು ಎಂದು ಮನವಿ ಮಾಡಿದ್ದವು. 2017 ಮೇ ತಿಂಗಳಿನಲ್ಲಿ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಮಲ್ಯ ತಪ್ಪಿತಸ್ಥ ಎಂದು ತೀರ್ಪು ನೀಡಿತ್ತು. ಈ ಆದೇಶ ವಿರುದ್ಧ ವಿಜಯ್ ಮಲ್ಯ ಮೇಲ್ಮನವಿ ಸಲ್ಲಿಸಿದ್ದರು.
ಇದನ್ನು ಓದಿ: RBI Repo Rate - ಶೇ. 4ರ ರೆಪೋ ದರ ಉಳಿಸಿಕೊಂಡ ಆರ್ಬಿಐ; ರಿವರ್ಸ್ ರೆಪೋದಲ್ಲೂ ಇಲ್ಲ ಬದಲಾವಣೆ
ಕಳೆದ ಮೂರು ವರ್ಷಗಳಿಂದ ವಿಜಯ್ ಮಲ್ಯ ಅವರ ಪರಿಶೀಲನಾ ಅರ್ಜಿ ಸಂಬಂಧಪಟ್ಟ ನ್ಯಾಯಾಲಯದ ಮುಂದೆ ಏಕೆ (ಲಿಸ್ಟ್) ಬಂದಿಲ್ಲ ಎಂದು ವಿವರಿಸುವಂತೆ ಸುಪ್ರೀಂ ಕೋರ್ಟ್ ಜೂನ್ನಲ್ಲಿ ರಿಜಿಸ್ಟ್ರಿಗೆ ನಿರ್ದೇಶನ ನೀಡಿತ್ತು.
ನ್ಯಾಯಮೂರ್ತಿಗಳಾದ ಯು.ಯು.ಲಲಿತ್ ಮತ್ತು ಅಶೋಕ್ ಭೂಷಣ್ ಅವರಿದ್ದ ದ್ವಿಸದಸ್ಯ ಪೀಠ ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಅರ್ಜಿ ವಿಚಾರಣೆ ನಡೆಸಬೇಕಿತ್ತು. ಆದರೆ, ದಾಖಲೆಯೊಂದು ಲಭ್ಯವಿಲ್ಲದ ಕಾರಣ ಪೀಠವು ವಿಚಾರಣೆಯನ್ನು ಆಗಸ್ಟ್ 20ಕ್ಕೆ ಮುಂದೂಡಿದೆ.
ಇದನ್ನು ಓದಿ: RBI Repo Rate - ಶೇ. 4ರ ರೆಪೋ ದರ ಉಳಿಸಿಕೊಂಡ ಆರ್ಬಿಐ; ರಿವರ್ಸ್ ರೆಪೋದಲ್ಲೂ ಇಲ್ಲ ಬದಲಾವಣೆ
ಕಳೆದ ಮೂರು ವರ್ಷಗಳಿಂದ ವಿಜಯ್ ಮಲ್ಯ ಅವರ ಪರಿಶೀಲನಾ ಅರ್ಜಿ ಸಂಬಂಧಪಟ್ಟ ನ್ಯಾಯಾಲಯದ ಮುಂದೆ ಏಕೆ (ಲಿಸ್ಟ್) ಬಂದಿಲ್ಲ ಎಂದು ವಿವರಿಸುವಂತೆ ಸುಪ್ರೀಂ ಕೋರ್ಟ್ ಜೂನ್ನಲ್ಲಿ ರಿಜಿಸ್ಟ್ರಿಗೆ ನಿರ್ದೇಶನ ನೀಡಿತ್ತು.