HOME » NEWS » National-international » SUPREME COURT TO HEAR FRESH PIL SEEKING PROBE INTO RAFALE DEAL AFTER TWO WEEKS MAK

Rafale Deal: ರಫೇಲ್ ಹಗರಣದ ತನಿಖೆಗೆ ಒತ್ತಾಯಿಸಿ PIL: ಮತ್ತೆ ವಿಚಾರಣೆಗೆ ಮುಂದಾದ ಸುಪ್ರೀಂ ಕೋರ್ಟ್​

ವಕೀಲರೊಬ್ಬರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಎರಡು ವಾರಗಳ ನಂತರ ವಿಚಾರಣೆ ನಡೆಸುವುದಾಗಿ ಭಾರತದ ಮುಖ್ಯ ನ್ಯಾಯಮೂರ್ತಿ ಎಸ್‌.ಎ ಬೋಬ್ಡೆ ತಿಳಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.

news18-kannada
Updated:April 12, 2021, 4:00 PM IST
Rafale Deal: ರಫೇಲ್ ಹಗರಣದ ತನಿಖೆಗೆ ಒತ್ತಾಯಿಸಿ PIL: ಮತ್ತೆ ವಿಚಾರಣೆಗೆ ಮುಂದಾದ ಸುಪ್ರೀಂ ಕೋರ್ಟ್​
ಸುಪ್ರೀಂಕೋರ್ಟ್​.
  • Share this:
ನವ ದೆಹಲಿ (ಏಪ್ರಿಲ್ 12); ರಫೇಲ್​ ಯುದ್ದ ವಿಮಾನ ಖರೀದಿಯಲ್ಲಿ ಕೇಂದ್ರ ಸರ್ಕಾರ ಸಾವಿರಾರು ಕೋಟಿ ಭ್ರಷ್ಟಾಚಾರ ಎಸಗಿದೆ ಎಂದು ಕಳೆದ ಹಲವು ವರ್ಷಗಳಿಂದ ವಿರೋಧ ಪಕ್ಷಗಳು ಟೀಕಿಸುತ್ತಲೇ ಇವೆ. ಈ ನಡುವೆ ರಫೇಲ್​ ಯುದ್ಧ ವಿಮಾನದ ಕಡತಗಳೇ ಕಾಣೆಯಾಗಿದ್ದು ದೊಡ್ಡ ಮಟ್ಟದ ಸಂಚಲನವನ್ನೇ ಸೃಷ್ಟಿಸಿತ್ತು. ಆದರೆ, ಇದೀಗ ಫ್ರೆಂಚ್ ಯುದ್ಧ ವಿಮಾನ ರಫೇಲ್ ತಯಾರಕರಾದ ಡಸಾಲ್ಟ್ ಕಂಪನಿಯು, 36 ರಫೇಲ್‌ ವಿಮಾನಗಳಿಗಾಗಿ ಭಾರತವು ಫ್ರಾನ್ಸ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ಬೆನ್ನಲ್ಲೇ ಭಾರತದ ಮಧ್ಯವರ್ತಿಯೊಬ್ಬರಿಗೆ 1.1 ಮಿಲಿಯನ್ ಯೂರೋ ಪಾವತಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಆರೋಪದಲ್ಲಿ ಭ್ರಷ್ಟಾಚಾರದ ವಾಸನೆಯೂ ಇದ್ದು, ಈ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ಒತ್ತಾಯಿಸಿ ಸುಪ್ರೀಂ ಕೋರ್ಟ್​ನಲ್ಲಿ PIL (ಸಾರ್ವಜನಿಕ  ಹಿತಾಸಕ್ತಿ ಮೊಕದ್ದಮೆ) ದಾಖಲಿಸಲಾಗಿದೆ. ಈ PIL ಅನ್ನು ವಿಚಾರಣೆ ನಡೆಸಲು ಕೊನೆಗೂ ಸುಪ್ರೀಂ ಕೋರ್ಟ್​ ಒಪ್ಪಿಗೆ ಸೂಚಿಸಿದೆ.

ವಕೀಲರೊಬ್ಬರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಎರಡು ವಾರಗಳ ನಂತರ ವಿಚಾರಣೆ ನಡೆಸುವುದಾಗಿ ಭಾರತದ ಮುಖ್ಯ ನ್ಯಾಯಮೂರ್ತಿ ಎಸ್‌.ಎ ಬೋಬ್ಡೆ ತಿಳಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.

ಫ್ರೆಂಚ್ ಭ್ರಷ್ಟಾಚಾರ-ವಿರೋಧಿ ಸಂಸ್ಥೆ ‘ಎಜೆನ್ಸ್ ಫ್ರಾಂಕೈಸ್ ಆಂಟಿಕೊರಪ್ಷನ್ (ಎಎಫ್‌ಎ)’ ಅವರು ಡಸಾಲ್ಟ್ ಅವರ ಲೆಕ್ಕಪರಿಶೋಧನೆಯ ಸಮಯದಲ್ಲಿ ಭಾರತದ ಮಧ್ಯವರ್ತಿಯೊಬ್ಬರಿಗೆ 1.1 ಮಿಲಿಯನ್ ಯೂರೋ ಹಣ ಕೊಡುಗೆಯಾಗಿ ನೀಡಿದೆ ಎಂಬ ಅಂಶ ಬೆಳಕಿಗೆ ಬಂದಿದೆ. "ರಾಫೇಲ್ ಜೆಟ್‌ಗಳ 50 ದೊಡ್ಡ ಪ್ರತಿಕೃತಿಗಳ ತಯಾರಿಕೆಗೆ ಪಾವತಿಸಲು ಈ ಹಣವನ್ನು ಬಳಸಲಾಗಿದೆ ಎಂದು ಕಂಪನಿ ಹೇಳಿದೆ, ಆದರೆ ಈ ಮಾದರಿಗಳನ್ನು ತಯಾರಿಸಲಾಗಿದೆಯೆಂದು ತನಿಖಾಧಿಕಾರಿಗಳಿಗೆ ಯಾವುದೇ ಪುರಾವೆ ನೀಡಲಾಗಿಲ್ಲ" ಎಂದು ಫ್ರೆಂಚ್ ಮಾಧ್ಯಮ ಮೀಡಿಯಾಪಾರ್ಟ್ ವರದಿ ಮಾಡಿತ್ತು.

ಇದನ್ನೂ ಓದಿ: Rahul Dravid: ನಾನು ಇಂದಿರಾನಗರದ ಗೂಂಡಾ ಎಂದ ರಾಹುಲ್ ದ್ರಾವಿಡ್ ಹಿಂದೆ ಬಿದ್ದ ಮುಂಬೈ ಪೊಲೀಸರು!

ಅಗುಸ್ಟಾವೆಸ್ಟ್‌ಲ್ಯಾಂಡ್ ಪ್ರಕರಣದಲ್ಲಿ ವಿ.ವಿ.ಐ.ಪಿ ಹೆಲಿಕ್ಯಾಪ್ಟರ್‌ಗಳ ಒಪ್ಪಂದದಲ್ಲಿ ಭಾರತದಲ್ಲಿ ಕಿಕ್‌ಬ್ಯಾಕ್‌ ಪಡೆದ ಆರೋಪದ ಮೇಲೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಿಂದ ತನಿಖೆ ಎದುರಿಸುತ್ತಿರುವ ಸುಶೇನ್ ಗುಪ್ತಾ ನಡೆಸುತ್ತಿರುವ ಭಾರತೀಯ ಕಂಪನಿ ಡೆಫ್ಸಿಸ್ ಸೊಲ್ಯೂಷನ್ಸ್‌ನಿಂದ ಮೇಲಿನ ಹಣಕ್ಕೆ ರಶೀದಿ ನೀಡಲಾಗಿದೆ.
Youtube Video

ಭಾರತದ ಡಸಾಲ್ಟ್‌ನ ಉಪ ಗುತ್ತಿಗೆದಾರರಲ್ಲಿ ಡೆಫ್ಸಿಸ್ ಕೂಡ ಒಂದಾಗಿದೆ. ಹೆಲಿಕ್ಯಾಪ್ಟರ್ ಡೀಲ್ ಪ್ರಕರಣದಲ್ಲಿ ಸುಶೇನ್ ಗುಪ್ತಾ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು. ಈಗ ಜಾಮೀನು ನೀಡಲಾಗಿದೆ. ಅವರ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ಭಾರತವು ಫ್ರಾನ್ಸ್‌ನಿಂದ 36 ಫೈಟರ್ ಜೆಟ್‌ಗಳನ್ನು 2016 ರಲ್ಲಿ, 59,000 ಕೋಟಿ ರೂ ಹಣ ನೀಡಿ ಅಂತರಾಷ್ಟ್ರೀಯ ಒಪ್ಪಂದದಲ್ಲಿ ಖರೀದಿಸಿತ್ತು.
Published by: MAshok Kumar
First published: April 12, 2021, 3:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories