ವಿಶ್ವಾಸಮತ ಯಾಚನೆಗೆ ಸುಪ್ರೀಂ ಕೊಡುತ್ತಾ ಅವಕಾಶ?; ಸಿಎಂ ಕಮಲ್​ನಾಥ್​ ಭವಿಷ್ಯ ಇಂದು ನಿರ್ಧಾರ

ಮುಂದಿನ 48 ಗಂಟೆ ಒಳಗೆ ವಿಶ್ವಾಸಮತ ಯಾಚನೆಗೆ ನಿರ್ದೇಶನ ನೀಡಬೇಕು ಎಂದು ಸುಪ್ರೀಂಕೋರ್ಟ್​ ಬಳಿ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್ ಕೋರಿದ್ದಾರೆ. ಈ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್​ ಇಂದು ನಡೆಸಲಿದೆ.

ಮಧ್ಯಪ್ರದೇಶ ಸಿಎಂ ಕಮಲನಾಥ್.

ಮಧ್ಯಪ್ರದೇಶ ಸಿಎಂ ಕಮಲನಾಥ್.

  • Share this:
    ಭೋಪಾಲ್ (ಮಾ.17)​: ಮಧ್ಯಪ್ರದೇಶದ ಕಾಂಗ್ರೆಸ್​ ಸರ್ಕಾರದ ವಿರುದ್ಧ ಬಂಡಾಯ ಎದ್ದಿರುವ 22 ಶಾಸಕರು ರೆಸಾರ್ಟ್​ ಸೇರಿದ್ದಾರೆ. ಮಧ್ಯಪ್ರದೇಶ ಸ್ಪೀಕರ್​ ಎನ್​.ಪಿ ಪ್ರಜಾಪತಿ ಅಧಿವೇಶನವನ್ನು ಮಾ. 26ರವರೆಗೆ ಮುಂದೂಡಿದ್ದು,  ಈ ಅವಧಿಯಲ್ಲಿ ಅತೃಪ್ತರ ಮನವೊಲಿಸುವ ಕಾರ್ಯವನ್ನು ಸಿಎಂ ಕಮಲ್​ನಾಥ್​ ಮಾಡಬೇಕಿದೆ. ಈ ಮಧ್ಯೆ ಸುಪ್ರಿಂಕೋರ್ಟ್​ ಇಂದು ನೀಡುವ ಆದೇಶದ ಮೇಲೆ ಸಿಎಂ ಕಮಲ್​ ನಾಥ್​ ಭವಿಷ್ಯ ನಿರ್ಧಾರವಾಗಲಿದೆ. 

    ಶನಿವಾರ ಮಧ್ಯಪ್ರದೇಶದ ರಾಜ್ಯಪಾಲರ ಲಾಲ್​ಜೀ ಟಂಡನ್ ಅವರನ್ನು ಭೇಟಿಯಾಗಿದ್ದ ಬಿಜೆಪಿ ನಾಯಕರು, ಸಿಎಂ ಕಮಲನಾಥ್ ಅವರಿಗೆ ಸೋಮವಾರ ಸದನದಲ್ಲಿ ವಿಶ್ವಾಸಮತ ಯಾಚಿಸಿ ಬಹುಮತ ಸಾಬೀತು ಪಡಿಸಲು ನಿರ್ದೇಶನ ನೀಡುವಂತೆ ಒತ್ತಾಯಿಸಿದ್ದರು. ಅಂತೆಯೇ ಸೋಮವಾರ ವಿಶ್ವಾಸ ಮತಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ, ಅಧಿವೇಶನವನ್ನು ಸ್ಪೀಕರ್ ಎನ್​.ಪಿ ಪ್ರಜಾಪತಿ ​ ಮಾ.26ಕ್ಕೆ ಮುಂದೂಡಿದ್ದರು.

    230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಪ್ರಸ್ತುತ 228 ಶಾಸಕರಿದ್ದಾರೆ. ಬಹುಮತಕ್ಕೆ 115 ಸ್ಥಾನಗಳ ಅವಶ್ಯಕತೆ ಇದೆ. ಬಿಎಸ್​ಪಿಯ ಇಬ್ಬರು ಶಾಸಕರು, ಸಮಾಜವಾದಿ ಪಕ್ಷದ ಓರ್ವ ಶಾಸಕ ಹಾಗೂ ನಾಲ್ವರು ಪಕ್ಷೇತರ ಶಾಸಕರ ಬೆಂಬಲದೊಂದಿಗೆ 121 ಸದಸ್ಯರ ಬಲದೊಂದಿಗೆ ಕಾಂಗ್ರೆಸ್ ಸರ್ಕಾರ ರಚನೆ ಮಾಡಿತ್ತು. ಆದರೆ, ಇದೀಗ ಪಕ್ಷೇತರರು ಸೇರಿದಂತೆ ಕಾಂಗ್ರೆಸ್​ನ 22 ಶಾಸಕರು ರಾಜೀನಾಮೆ ನೀಡಿದ್ದಾರೆ. ಹಾಲಿ ಕಾಂಗ್ರೆಸ್​ನಲ್ಲಿ ಕೇವಲ 92 ಶಾಸಕರಿದ್ದಾರೆ. ಈಗ ವಿಶ್ವಾಸಮತಯಾಚನೆ ಮುಂದೂಡಲ್ಪಟ್ಟಿದ್ದರಿಂದ ರಾಜೀನಾಮೆ ನೀಡಿದ 22 ಶಾಸಕರ ಮನವೊಲಿಸಲು ಕಮಲನಾಥ್​ಗೆ 10 ದಿನ ಸಮಯಾವಕಾಶ ದೊರೆತಿತ್ತು.

    ಇದನ್ನೂ ಓದಿ: 48 ಗಂಟೆ ಒಳಗೆ ವಿಶ್ವಾಸ ಮತಯಾಚನೆ ನಡೆಸುವಂತೆ ಸೂಚಿಸಿ; ಸುಪ್ರೀಂ ಮೆಟ್ಟಿಲೇರಿದ ಮಧ್ಯಪ್ರದೇಶ ಬಿಜೆಪಿ

    ಆದರೆ, ಮಾಜಿ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಸೇರಿ ಇತರ ಬಿಜೆಪಿ ನಾಯಕರು ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದು, ಮುಂದಿನ 48 ಗಂಟೆ ಒಳಗೆ ವಿಶ್ವಾಸಮತ ಯಾಚನೆಗೆ ನಿರ್ದೇಶನ ನೀಡಬೇಕು ಎಂದು ಕೋರಿದ್ದಾರೆ. ಈ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್​ ಇಂದು ನಡೆಸಲಿದೆ. ಸುಪ್ರೀಂಕೋರ್ಟ್​ ನೀಡುವ ಆದೇಶದ ಮೇಲೆ ಸಿಎಂ ಕಮಲ್​ ನಾಥ್​ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.
    First published: