ಸುಪ್ರೀಂಕೋರ್ಟ್​ನಲ್ಲಿ ಇಂದಿನಿಂದ ಜಮ್ಮು-ಕಾಶ್ಮೀರಕ್ಕೆ ವಿಶೇಷ ರಾಜ್ಯ ಸ್ಥಾನಮಾನ ಕಲ್ಪಿಸುವ ಕಲಂ 35 ಎ ವಿಚಾರಣೆ

news18
Updated:August 6, 2018, 1:07 PM IST
ಸುಪ್ರೀಂಕೋರ್ಟ್​ನಲ್ಲಿ ಇಂದಿನಿಂದ ಜಮ್ಮು-ಕಾಶ್ಮೀರಕ್ಕೆ ವಿಶೇಷ ರಾಜ್ಯ ಸ್ಥಾನಮಾನ ಕಲ್ಪಿಸುವ ಕಲಂ 35 ಎ ವಿಚಾರಣೆ
news18
Updated: August 6, 2018, 1:07 PM IST
ನ್ಯೂಸ್​18 ಕನ್ನಡ

ಬೆಂಗಳೂರು (ಆ. 6): ಜಮ್ಮು-ಕಾಶ್ಮೀರಕ್ಕೆ ವಿಶೇಷ ರಾಜ್ಯದ ಸ್ಥಾನಮಾನ ಕಲ್ಪಿಸಿರುವ ಸಂವಿಧಾನದ ವಿಧಿ 35 ಎ ಸಿಂಧುತ್ವ ಪ್ರಶ್ನಿಸಿ, ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಇಂದು ಸುಪ್ರೀಂಕೋರ್ಟ್ ಆರಂಭಿಸಲಿದೆ.

ಕಲಂ 35 ಎ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ, ನಾಲ್ಕು ಅರ್ಜಿಗಳು ಸುಪ್ರೀಂಕೋರ್ಟ್​ಗೆ ಸಲ್ಲಿಕೆಯಾಗಿವೆ. ವಿ ದಿ ಸಿಟಿಜನ್ ಎಂಬ ಎನ್​ಜಿಒ ಸಲ್ಲಿಸಿರುವ ಅರ್ಜಿಯ ಜೊತೆಗೆ ಇತರೆ ಮೂರು ಅರ್ಜಿಗಳನ್ನು ಸೇರಿಸಿ, ಇಂದಿನಿಂದ ಸುಪ್ರೀಂಕೋರ್ಟ್ ವಿಚಾರಣೆ ಕೈಗೆತ್ತಿಕೊಳ್ಳಲಿದೆ. ಸಂಸತ್ತಿನಲ್ಲಿ ಈ ವಿಧಿ ಮಂಡನೆಯಾಗಿಲ್ಲ. ಸಂವಿಧಾನ ಪ್ರತಿ ಅನುಬಂಧದಲ್ಲಿ ರಾಷ್ಟ್ರಪತಿಗಳ ಆದೇಶದ ಉಲ್ಲೇಖವಿದೆ. ಈ ವಿಧಿ ಒಂದು ತಿದ್ದುಪಡಿ ಕೂಡ ಅಲ್ಲ. ಹೀಗಾಗಿ ವಿಧಿ 35 ಎ ಅನ್ನು ರದ್ದುಮಾಡುವಂತೆ ಕೋರಿ ಎನ್​ಜಿಒ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದೆ.

ಕಲಂ 35 ಎ ಪರವಾಗಿ ಜಮ್ಮು-ಕಾಶ್ಮೀರದಲ್ಲಿ ಉಗ್ರ ಪ್ರತಿಭಟನೆಗಳು ಆರಂಭವಾಗಿದ್ದು, ಭಾನುವಾರ ವ್ಯಾಪಾರಿಗಳು, ಸ್ಥಳೀಯ ನಿವಾಸಿಗಳು ಹಾಗೂ ವಕೀಲರ ಸಂಘಟನೆಗಳ ರಾಜ್ಯದೆಲ್ಲೆಡೆ ಪ್ರತಿಭಟನೆ ಆರಂಭಿಸಿವೆ. ತೀರ್ಪು ವ್ಯತಿರಿಕ್ತವಾಗಿ ಬಂದಲ್ಲಿ ದಂಗೆ ಏಳುವ ಸಾಧ್ಯತೆ ನಿಚ್ಚಳವಾಗಿದೆ.

ಅಮರನಾಥ ಯಾತ್ರೆ ಸ್ಥಗಿತ:

ಜಮ್ಮು-ಕಾಶ್ಮೀರದ ಚಿನಾಬ್ನಲ್ಲಿ ಪ್ರತಿಭಟನಾ ರ್ಯಾಲಿ ಮುಂದುವರೆದಿರುವುದರಿಂದ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಬೇಸ್​ ಕ್ಯಾಂಪ್​ನಲ್ಲಿ ಯಾತ್ರಾರ್ಥಿಗಳನ್ನು ಉಳಿಸಲಾಗಿದೆ.

ವಿಚಾರಣೆ, ತೀರ್ಪು ಮುಂದೂಡಲು ರಾಜ್ಯಪಾಲದ ಮನವಿ:
Loading...

ವಿಧಿ 35 ಎ ವಿರುದ್ಧ ತೀರ್ಪು ಹೊರಬಿದ್ದರೆ ಜಮ್ಮು-ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೇಳಲಿದೆ. ಜೊತೆಗೆ ಪೊಲೀಸರು ದಂಗೆ ಏಳುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರ ರಾಜ್ಯಪಾಲ ಎನ್.ಎನ್.ವೋಹ್ರಾ ಅವರು ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ಹಾಗೂ ತೀರ್ಪು ಮುಂದೂಡುವಂತೆ ಮನವಿ ಮಾಡಿದ್ದಾರೆ. ಅಕ್ಟೋಬರ್​ನಲ್ಲಿ ಸ್ಥಳೀಯ ಸಂಸ್ಥೆ ಮತ್ತು ಪಂಚಾಯತ್ ಚುನಾವಣೆಗಳು ನಡೆಯಲಿವೆ. ಅಲ್ಲಿಯವರೆಗೂ ತೀರ್ಪು ಪ್ರಕಟಿಸದಂತೆ ಅವರು ಮನವಿ ಮಾಡಿದ್ದಾರೆ. ಒಂದು ವೇಳೆ ತೀರ್ಪು ವ್ಯತಿರಿಕ್ತವಾದಲ್ಲಿ, ಹಿಂಸಾಚಾರ ಭುಗಿಲೆದ್ದು, ಚುನಾವಣೆ ನಡೆಸುವುದು ಅಸಾಧ್ಯವಾಗುತ್ತದೆ. ಹಾಗಾದ್ದಲ್ಲಿ ಸ್ಥಳೀಯ ಆಡಳಿತ ಯಂತ್ರವೇ ಕುಸಿದುಬೀಳುತ್ತದೆ. ಹಾಗಾಗಿ ಚುನಾವಣೆ ನಂತರ ತೀರ್ಪು ಪ್ರಕಟಿಸುವಂತೆ ಅವರು ಮನವಿ ಮಾಡಿದ್ದಾರೆ.

ಏನಿದು 35 ಎ ವಿಧಿ?

1954ರಲ್ಲಿ ರಾಷ್ಟ್ರಪತಿ ಆದೇಶದ ಮೇರೆಗೆ 35 ಎ ವಿಧಿ ಅನ್ವಯ ಜಮ್ಮು-ಕಾಶ್ಮೀರಕ್ಕೆ ವಿಶೇಷ ರಾಜ್ಯದ ಸ್ಥಾನಮಾನ ಸಿಕ್ಕಿದೆ. ರಾಜ್ಯದ ಶಾಶ್ವತ ನಾಗರಿಕರು ಯಾರು ಎಂಬುದನ್ನು ನಿರ್ಧರಿಸುವ ಅವಕಾಶವನ್ನು ಜಮ್ಮು-ಕಾಶ್ಮೀರದ ವಿಧಾನಸಭೆಗೆ ನೀಡಲಾಗಿದೆ. ಸರ್ಕಾರಿ ಕೆಲಸಗಳ ನೇಮಕಾತಿ, ವಿದ್ಯಾರ್ಥಿವೇತನ ಹಾಗೂ ಸಾರ್ವಜನಿಕ ಕಲ್ಯಾಣಾಭಿವೃದ್ಧಿ ಯೋಜನೆಗಳಲ್ಲಿ ಜಮ್ಮು-ಕಾಶ್ಮೀರ ನಿವಾಸಿಗಳಿಗೆ ವಿಶೇಷ ಮೀಸಲಾತಿ ನೀಡಲಾಗುತ್ತದೆ. ಹೊರರಾಜ್ಯದವರು ಕಣಿವೆ ರಾಜ್ಯದಲ್ಲಿ ಸ್ಥಿರಾಸ್ತಿ ಖರೀದಿಸಲು ಅವಕಾಶವಿಲ್ಲ.
First published:August 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...