ದೆಹಲಿ(ಜು. 12): ಇತ್ತೀಚೆಗೆ ಕರ್ನಾಟಕದಲ್ಲಿ (Karnataka) ಭಾರೀ ಚರ್ಚೆಗೆ ಗ್ರಾಸವಾಗಿದ್ದ 'ನ್ಯಾಯಾಧೀಶರಿಗೆ ವರ್ಗಾವಣೆಯ ಬೆದರಿಕೆ ಪ್ರಕರಣ' (Transfer Threaten To Judge) ಈಗ ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲೇರಿದೆ. ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಾದ ಹೆಚ್.ಪಿ. ಸಂದೇಶ್ (High Court Judge HP Sandesh) ಅವರು ಕಳೆದ ವಾರ ಜಾಮೀನು ಪ್ರಕರಣ ಒಂದರ ವಿಚಾರಣೆ ನಡೆಸುತ್ತಿದ್ದಾಗ 'ನನಗೆ ಎಸಿಬಿ ಎಡಿಜಿಪಿಯಿಂದ ವರ್ಗಾವಣೆ ಬೆದರಿಕೆ ಬಂದಿದೆ' ಎಂದು ಹೇಳಿದ್ದರು. ಈ ಬಗ್ಗೆ ಬಹಳ ದೊಡ್ಡ ಚರ್ಚೆ ನಡೆಯುತ್ತಿದ್ದು ಇಂದು ಸುಪ್ರೀಂ ಕೋರ್ಟಿನಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ.
ಗಂಭೀರ ಪ್ರಕರಣ ಎಂದ ತುಷಾರ್ ಮೆಹ್ತಾ
ರಾಜ್ಯ ಹೈಕೋರ್ಟ್ ಜೆಡ್ಜ್ ಗೆ ವರ್ಗಾವಣೆ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಕರ್ನಾಟಕ ಸರ್ಕಾರದ ಪರವಾಗಿ ನಿನ್ನೆ ಸುಪ್ರೀಂ ಕೋರ್ಟಿನಲ್ಲಿ ಮೆನ್ಷನ್ ಮಾಡಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಹೈಕೋರ್ಟ್ ನ್ಯಾಯಾಧೀಶರಾದ ಹೆಚ್.ಪಿ. ಸಂದೇಶ್ ತಮಗೆ ಎಸಿಬಿ ಎಡಿಜಿಪಿಯಿಂದ ವರ್ಗಾವಣೆ ಬೆದರಿಕೆ ಬಂದಿದೆ ಎಂದು ಹೇಳಿದ್ದಾರೆ.
ತಮ್ಮ ಆದೇಶ ಮತ್ತು ಅಭಿಪ್ರಾಯ ಎರಡರಲ್ಲೂ ನ್ಯಾಯಾಧೀಶರು ಗಂಭೀರ ವಿಷಯ ಪ್ರಸ್ತಾಪಿದ್ದಾರೆ. ಈ ವಿಷಯದ ಮಹತ್ವದ ಅರಿತು ತುರ್ತಾಗಿ ತಮ್ಮ ಅರ್ಜಿ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು.
ಅಧಿಕಾರಿ ಪರವಾಗಿ ಪ್ರತ್ಯೇಕ ಅರ್ಜಿ
ಇನ್ನೊಂದೆಡೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಅವರ ಪರವಾಗಿ ಹಿರಿಯ ವಕೀಲ ಅಮಿತ್ ಕುಮಾರ್ ಪ್ರತ್ಯೇಕವಾದ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಧೀಶ ಹೆಚ್.ಪಿ. ಸಂದೇಶ್ ಅವರು ಜಾಮೀನು ಪ್ರಕರಣ ಒಂದರಲ್ಲಿ ಅಧಿಕಾರಿಯ ಸರ್ವೀಸ್ ರೆಕಾರ್ಡ್ ತರಲು ಹೇಳಿದ್ದಾರೆ. ತನಗೆ ವರ್ಗಾವಣೆಯ ಒತ್ತಡ ಹೇರಲಾಗಿದೆ ಎಂದು ಆರೋಪಿಸಿದ್ದಾರೆ. ಅಧಿಕಾರಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Pregnant Lady: ಹೆರಿಗೆ ನೋವಿನಿಂದ ಆಸ್ಪತ್ರೆ ಹೊರಗೆ ಗರ್ಭಿಣಿಗೆ ರಕ್ತಸ್ರಾವ, 9 ಆರೋಗ್ಯ ಸಿಬ್ಬಂದಿ ಅಮಾನತು
ಅಷ್ಟು ಪ್ರಭಾವಶಾಲಿಯೇ? ನಿಮ್ಮ ಅಧಿಕಾರಿ ಎಂದು ಪ್ರಶ್ನಿಸಿದ್ದಾರೆ. ಅಧಿಕಾರಿಯಿಂದ ಜೆಡ್ಜ್ ಗೆ ವರ್ಗಾವಣೆ ಬೆದರಿಕೆ ಎಂಬ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆಯಾಗಿದೆ. ಇದರಿಂದ ಅಧಿಕಾರಿಯ ಘನತೆಗೆ ಧಕ್ಕೆ ತರುವಂತಹುದಾಗಿದೆ. ಕೂಡಲೇ ಸುಪ್ರೀಂ ಕೋರ್ಟ್ ಈ ಪ್ರಕರಣ ಇತ್ಯರ್ಥ ಪಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಕುತೂಹಲ ಮೂಡಿಸಿರುವ ಇಂದಿನ ವಿಚಾರಣೆ
ಕರ್ನಾಟಕ ಸರ್ಕಾರ ಮತ್ತು ಎಸಿಬಿ ಎಡಿಜಿಪಿ ಸೀಮಂತ ಕುಮಾರ್ ಸಿಂಗ್ ಇಬ್ಬರ ಅರ್ಜಿಗಳನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ಮಂಗಳವಾರ ವಿಚಾರಣೆ ನಡೆಸುವುದಾಗಿ ಹೇಳಿದ್ದಾರೆ. 'ನ್ಯಾಯಾಧೀಶರಿಗೆ ವರ್ಗಾವಣೆಯ ಬೆದರಿಕೆ ಪ್ರಕರಣ' ರಾಜಕೀಯವಾಗಿ ಕೂಡ ಬಹಳ ಚರ್ಚೆಯಾಗಿದ್ದು ಇಂದು ಸುಪ್ರೀಂ ಕೋರ್ಟ್ ಯಾವ ರೀತಿಯ ವಿಚಾರಣೆ ನಡೆಯುತ್ತದೆ ಎಂಬುದು ಕುತೂಹಲಕಾರಿಯಾಗಿದೆ.
ಇದನ್ನೂ ಓದಿ: ಸೀನಿಯರ್ ರಜೆ ಕೊಡಲಿಲ್ಲ! ಸ್ವಂತ ಹೆಂಡತಿ, ಮಗಳನ್ನು ಒತ್ತೆಯಾಳಾಗಿಟ್ಟು ಸಿಆರ್ಪಿಎಫ್ ಜವಾನ್ ಆತ್ಮಹತ್ಯೆ
ಇಂದೇ ಆದೇಶ ಹೊರಬೀಳುವುದು ಅನುಮಾನ
ಕರ್ನಾಟಕ ಸರ್ಕಾರ ಮತ್ತು ಎಸಿಬಿ ಎಡಿಜಿಪಿ ಸೀಮಂತ ಕುಮಾರ್ ಸಿಂಗ್ ಇಬ್ಬರ ಅರ್ಜಿಗಳ ಬಗ್ಗೆ ಇಂದು ಸುಪ್ರೀಂ ಕೋರ್ಟ್ ವಿಚಾರಣೆ ಕೈಗೆತ್ತಿಕೊಳ್ಳುತ್ತೆಯಾದರೂ ಇಂದೇ ಆದೇಶ ಹೊರಬೀಳುವುದು ಅನುಮಾನವಾಗಿದೆ. ನ್ಯಾಯಧೀಶರಿಗೆ ಬೆದರಿಕೆ ಒಡ್ಡಿರುವ ಗಂಭೀರ ಪ್ರಕರಣವಾಗಿರುವುದರಿಂದ ಹೆಚ್ಚಿನ ವಿಚಾರಣೆ ನಡೆಯುವ ಸಾಧ್ಯತೆ ಇದೆ.
ಜಡ್ಜ್ ಟ್ರಾನ್ಸ್ಫರ್ ಬೆದರಿಕೆ ಪ್ರಕರಣವನ್ನು 3 ದಿನಗಳ ವರೆಗೆ ವಿಚಾರಣೆ ನಡೆಸದಂತೆ ತಡೆ ನೀಡಲಾಗಿದ್ದು, ರಾಜ್ಯ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಗುರುವಾರ ಮತ್ತೆ ವಿಚಾರಣೆ ನಡೆಸುವುದಾಗಿ ಹೇಳಿದ ಸುಪ್ರೀಂ ಕೋರ್ಟ್ ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ