ಇಂದು ಅನರ್ಹ ಶಾಸಕರ ಭವಿಷ್ಯದ ಜೊತೆ ಮತ್ತೊಂದು ಪ್ರಮುಖ ಪ್ರಕರಣದ ತೀರ್ಪು

ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ರಂಜನ್​ ಗೋಗೋಯ್​ ಅವರು ನ.17ರಂದು ನಿವೃತ್ತಿ ಪಡೆಯಲಿದ್ದಾರೆ. ಈ ಅವಧಿ ಒಳಗೆ ಕೆಲ ಪ್ರಮುಖ ಪ್ರಕರಣದ ತೀರ್ಪನ್ನು ಪ್ರಕಟಿಸಬೇಕಿದೆ.

news18-kannada
Updated:November 13, 2019, 9:54 AM IST
ಇಂದು ಅನರ್ಹ ಶಾಸಕರ ಭವಿಷ್ಯದ ಜೊತೆ ಮತ್ತೊಂದು ಪ್ರಮುಖ ಪ್ರಕರಣದ ತೀರ್ಪು
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ನ.13): ಸ್ಪೀಕರ್ ಆದೇಶ ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂಕೋರ್ಟ್​ನಲ್ಲಿ ಸಲ್ಲಿಸಿರುವ ಅರ್ಜಿಯ ತೀರ್ಪು ಇಂದು ಪ್ರಕಟಗೊಳ್ಳಲಿದೆ. ಇದರ ಜೊತೆಗೆ ಆಯ್ದ ಹಣಕಾಸು ಕಾಯ್ದೆ ನಿಬಂಧನೆಗಳ ಸಾಂವಿಧಾನಿಕ ಮಾನ್ಯತೆ ಬಗ್ಗೆಯೂ ತೀರ್ಪು ನೀಡಲಿದೆ.

ನ್ಯಾ. ಎನ್.ವಿ. ರಮಣ, ನ್ಯಾ. ಸಂಜೀವ್ ಖನ್ನಾ, ನ್ಯಾ. ಕೃಷ್ಣ ಮುರಾರಿ ಅವರಿರುವ ತ್ರಿಸದಸ್ಯ ಪೀಠದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈಗಾಗಲೇ ಎರಡು ಕಡೆ ವಕೀಲರಿಂದ ವಾದ-ಪ್ರತಿವಾದಗಳನ್ನು ಆಲಿಸಿರುವ ನ್ಯಾಯಾಲಯದ ತೀರ್ಪನ್ನು ಕಾಯ್ದಿರಿಸಿದ್ದು, ಇಂದು ಪ್ರಕಟಿಸಲಿದೆ. ಬೆಳಗ್ಗೆ 10.30ರಿಂದ 11ರೊಳಗೆ ತೀರ್ಪು ಪ್ರಕಟಗೊಳ್ಳಲಿದೆ.

ಇನ್ನು, ಕೆಲ ಹಣಕಾಸು ಕಾಯ್ದೆಯ ಸಾಂವಿಧಾನಿಕ ಮಾನ್ಯತೆ ಕುರಿತು ಕೆಲವರು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಇದರ ವಿಚಾರಣೆ ಪೂರ್ಣಗೊಂಡಿದ್ದು, ಈ ಬಗ್ಗೆಯೂ ಸುಪ್ರೀಂಕೋರ್ಟ್​ ತೀರ್ಪು ನೀಡಲಿದೆ ಎನ್ನಲಾಗಿದೆ.

ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ರಂಜನ್​ ಗೋಗೋಯ್​ ಅವರು ನ.17ರಂದು ನಿವೃತ್ತಿ ಪಡೆಯಲಿದ್ದಾರೆ. ಈ ಅವಧಿ ಒಳಗೆ ಕೆಲ ಪ್ರಮುಖ ಪ್ರಕರಣದ ತೀರ್ಪನ್ನು ಪ್ರಕಟಿಸಬೇಕಿದೆ.

First published:November 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ