• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Supreme Court: ಹೆಣ್ಮಕ್ಕಳಿಗೆ ಗುಡ್ ನ್ಯೂಸ್- ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಮಹತ್ವದ ತೀರ್ಪು ಕೊಟ್ಟ ಸುಪ್ರೀಂ

Supreme Court: ಹೆಣ್ಮಕ್ಕಳಿಗೆ ಗುಡ್ ನ್ಯೂಸ್- ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಮಹತ್ವದ ತೀರ್ಪು ಕೊಟ್ಟ ಸುಪ್ರೀಂ

ಸುಪ್ರೀಂ ಕೋರ್ಟ್‌

ಸುಪ್ರೀಂ ಕೋರ್ಟ್‌

ಪಿತ್ರಾರ್ಜಿತ/ಪೂರ್ವಜರ ಆಸ್ತಿ(Ancestral Property ) ಪಾಲುದಾರಿಕೆಗೆ ಸಂಬಂಧಿಸಿದಂತೆ ಮಾನ್ಯ ಸರ್ವೋಚ್ಛ ನ್ಯಾಯಾಲಯವು(Supreme Court) ಒಂದು ದೊಡ್ಡ ಹಾಗೂ ಐತಿಹಾಸಿಕವಾದಂತಹ ತೀರ್ಪನ್ನು ನೀಡಿದೆ.

  • Trending Desk
  • 2-MIN READ
  • Last Updated :
  • New Delhi, India
  • Share this:

 ನವದೆಹಲಿ(ಫೆ.4): ಈ ಆಸ್ತಿ, ಸಂಪತ್ತು ಎಂಬ ವಿಚಾರ ಭಾರತದಂತಹ ದೇಶದಲ್ಲಿ ಸಾಕಷ್ಟು ಸುದ್ದಿಯಲ್ಲಿರುತ್ತದೆ. ನಿತ್ಯ ಆಸ್ತಿ(Property) ಸಂಬಂಧವಾಗಿ ಏನಾದರೊಂದು ಅವಘಡಗಳು ನಡೆಯುತ್ತಲೇ ಇರುತ್ತವೆ. ಅದೆಷ್ಟೋ ಪ್ರಕರಣದ ವಿಚಾರಣೆಗಳು ಇಂದಿಗೂ ನಡೆಯುತ್ತಲೇ ಇವೆ. ಇದೀಗ ಇಂತಹ ಪಿತ್ರಾರ್ಜಿತ/ಪೂರ್ವಜರ ಆಸ್ತಿ(Ancestral Property ) ಪಾಲುದಾರಿಕೆಗೆ ಸಂಬಂಧಿಸಿದಂತೆ ಮಾನ್ಯ ಸರ್ವೋಚ್ಛ ನ್ಯಾಯಾಲಯವು(Supreme Court) ಒಂದು ದೊಡ್ಡ ಹಾಗೂ ಐತಿಹಾಸಿಕವಾದಂತಹ ತೀರ್ಪನ್ನು ನೀಡಿದೆ.


ತನ್ನ ತೀರ್ಪಿನ ಮೂಲಕ ಘನವೆತ್ತ ನ್ಯಾಯಾಲಯವು ಪೂರ್ವಜರ ಆಸ್ತಿಯ ವಿಷಯದಲ್ಲಿ ಮಗಳಾದವಳಿಗೆ ಸಹೋದರರಿಗಿಂತ ಹೆಚ್ಚಿನ ಆದ್ಯತೆ ಇರಬೇಕೆಂಬ ಸೂಚನೆಯನ್ನು ನೀಡಿದೆ. ಹಾಗಾದರೆ ಏನಿದು ಪ್ರಕರಣ, ಇದರ ಅರ್ಥವಾದರೂ ಏನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.


ಏನಿದು ಪ್ರಕರಣ?


ತಮಿಳುನಾಡಿನ ಪ್ರಕರಣವೊಂದನ್ನು ಇತ್ಯರ್ಥ ಮಾಡುವ ಸಂದರ್ಭದಲ್ಲಿ ಸರ್ವೋಚ್ಛ ನ್ಯಾಯಾಲಯವು ಈ ಮಹತ್ವದ ತೀರ್ಪನ್ನು ನೀಡಿದೆ. ತೀರ್ಪಿನಲ್ಲಿ ನ್ಯಾಯಾಲಯವು, ಅವಿಭಕ್ತ ಕುಟುಂಬದಲ್ಲಿರುವ ವ್ಯಕ್ತಿಯೊಬ್ಬ ಯಾವುದೇ ಆಸ್ತಿಪತ್ರ/ಉಯಿಲು ಬರೆಯದೆ ತೀರಿ ಹೋದ ಸಂದರ್ಭದಲ್ಲಿ ಅವನ ಆಸ್ತಿಯಲ್ಲಿ ಅವನ ಮಗಳಿಗೆ ಹಕ್ಕಿರುತ್ತದೆ ಎಂದು ಉಲ್ಲೇಖಿಸಿದೆ.


ಈ ಸಂದರ್ಭದಲ್ಲಿ ತೀರಿಹೋದ ವ್ಯಕ್ತಿಯ ಸಹೋದರನ ಮಕ್ಕಳಿಗಿಂತ ತೀರಿಹೋದ ವ್ಯಕ್ತಿಯ ಮಗಳಿಗೆ, ತೀರಿದ ವ್ಯಕ್ತಿಯ ಆಸ್ತಿಯಲ್ಲಿ ಪ್ರಥಮ ಆದ್ಯತೆಯಿರುತ್ತದೆ ಎಂಬುದಾಗಿ 51 ಪುಟಗಳ ತೀರ್ಪಿನಲ್ಲಿ ನ್ಯಾಯಮೂರ್ತಿಗಳಿದ್ದ ಎಸ್.ಅಬ್ದುಲ್ ನಜೀರ್ ಹಾಗೂ ಕೃಷ್ಣ ಮುರಾರಿ ಅವರ ಪೀಠವು ತಿಳಿಸಿದೆ.


ಇದನ್ನೂ ಓದಿ: Amrit Udyan: ಈಗ 'ಅಮೃತ್ ಉದ್ಯಾನ್​' ನೋಡೋದು ಇನ್ನೂ ಸುಲಭ- ಕುಳಿತಲ್ಲೇ ಟಿಕೆಟ್ ಬುಕ್ ಮಾಡಿ


ಇಷ್ಟೇ ಅಲ್ಲದೆ, ನ್ಯಾಯಾಲಯವು ಈ ಸಂದರ್ಭದಲ್ಲಿ ಈ ಆಸ್ತಿ ವಿಭಜನೆಯು ಹಿಂದು ವಿಚ್ಛೇದನ ಕಾಯಿದೆ 1956 ಜಾರಿಗೆ ಬರುವ ಮುಂಚಿನ ಆಸ್ತಿ ವಿಭಜನೆಯ ಪ್ರಕ್ರಿಯೆಗೂ ಅನ್ವಯವಾಗಲಿದೆ ಎಂದು ತನ್ನ ತೀರ್ಪಿನಲ್ಲಿ ತಿಳಿಸಿದೆ.


ವಾಸ್ತವದಲ್ಲಿ, ಈ ರೀತಿಯ, ತಮಿಳುನಾಡಿನಲ್ಲಾಗಿದ್ದ ಆಸ್ತಿ ಪ್ರಕರಣವೊಂದರ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿತ್ತು. ಅದರಲ್ಲಿ ವ್ಯಕ್ತಿಯೊಬ್ಬರು 1949 ರಲ್ಲಿ ತೀರಿಕೊಂಡಿದ್ದರು. ಅವರು ಸ್ವತಃ ಗಳಿಸಿದ ಹಾಗೂ ಅವರಿಗೆ ಬಂದಿದ್ದ ಪಿತ್ರಾರ್ಜಿತ ಅಸ್ತಿ ಕುರಿತಂತೆ ಯಾವುದೇ ಉಯಿಲು ಅಥವಾ ವಿಲ್ ಬರೆದಿರಲಿಲ್ಲ.


ಈ ವಿಷಯದಲ್ಲಿ ಮದ್ರಾಸ್ ಹೈಕೋರ್ಟ್ ತೀರಿಕೊಂಡ ಆ ವ್ಯಕ್ತಿಯ ಸಹೋದರನ ಗಂಡು ಮಕ್ಕಳಿಗೆ ತೀರಿದ ವ್ಯಕ್ತಿಯ ತಂದೆಯ ಆಸ್ತಿಯಲ್ಲಿ ಹಕ್ಕುಗಳನ್ನು ನೀಡಿ ತೀರ್ಪಿತ್ತಿತ್ತು. ಏಕೆಂದರೆ ತೀರಿಕೊಂಡ ವ್ಯಕ್ತಿಯು ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದರು.


ಆದರೆ, ಇದೀಗ ಸರ್ವೋಚ್ಛ ನ್ಯಾಯಾಲಯವು ತೀರಿಕೊಂಡ ವ್ಯಕ್ತಿಯ ಮಗಳಿಗೆ ಪ್ರಾಥಮಿಕವಾಗಿ ಆಸ್ತಿಯ ಹಕ್ಕನ್ನು ನೀಡುವ ಮೂಲಕ ದೊಡ್ಡ ತೀರ್ಪು ನೀಡಿದಂತಾಗಿದೆ. ತೀರಿಕೊಂಡ ವ್ಯಕ್ತಿಯ ಮಗಳ ವಾರಸುದಾರರು ಈ ಪ್ರಕರಣದಲ್ಲಿ ಮುನ್ನಡೆಸಿದ್ದರು.


ಹೆಣ್ಣು ಮಕ್ಕಳಿಗೆ ಅಪ್ಪನ ಆಸ್ತಿಯಲ್ಲಿ ಸಮಾನ ಹಕ್ಕಿದೆ:


ಹಿಂದು ವಿಚ್ಛೇದನ ಕಾಯಿದೆಯು ಹೆಣ್ಣು ಮಕ್ಕಳಿಗೆ ತಂದೆಯ ಸಂಪತ್ತಿನಲ್ಲಿ ಸಮಾನ ಹಕ್ಕನ್ನು ನೀಡುತ್ತದೆ ಎಂಬುದನ್ನು ಸರ್ವೋಚ್ಛ ನ್ಯಾಯಾಲಯ ಹೇಳಿದೆ. ಈ ಸಂದರ್ಭದಲ್ಲಿ ನ್ಯಾಯಾಲಯವು, ಈ ಕಾನೂನನ್ನು ಅನುಷ್ಠಾನಗೊಳಿಸುವ ಮುಂಚೆಯೂ ಧಾರ್ಮಿಕ ವ್ಯವಸ್ಥೆಯಲ್ಲಿ ಹೆಣ್ಣು ಸಂತಾನಗಳಿಗೆ ತಂದೆಯ ಆಸ್ತಿಯಲ್ಲಿ ಪಾಲನ್ನು ಬೆಂಬಲಿಸಲಾಗಿತ್ತು ಎಂದು ಹೇಳಿದೆ.


ಇದಲ್ಲದೆ, ಇನ್ನೂ ಅನೇಕ ತೀರ್ಪುಗಳಲ್ಲಿ ವ್ಯಕ್ತಿಯೊಬ್ಬ ಯಾವುದೇ ಗಂಡು ಸಂತಾನ ಹೊಂದಿರದೆ ಇದ್ದಾಗ ಆ ವ್ಯಕ್ತಿಯ ಸಾವಿನ ನಂತರ ಆತನಿಗೆ ಸಂಬಂಧಿಸಿದ ಆಸ್ತಿಯನ್ನು ಆತನ ಸಹೋದರನ ಗಂಡು ಸಂತಾನಗಳ ಬದಲಿಗೆ ತೀರಿದ ವ್ಯಕ್ತಿಯ ಹೆಣ್ಣು ಸಂತಾನಕ್ಕೆ ಸಲ್ಲುವುದಾಗಿ ಹೇಳಲಾಗಿದೆ.



ಈ ವ್ಯವಸ್ಥೆಯು ವ್ಯಕ್ತಿ ತಾನು ಸ್ವಯಾರ್ಜಿತವಾಗಿ ಮಾಡಿದ ಆಸ್ತಿ ಹಾಗೂ ಕುಟುಂಬ ಪಾಲಿನ ಮೂಲಕ ಪಡೆದ ಆಸ್ತಿ ಈ ಎರಡೂ ರೂಪಗಳಿಗೆ ಅನ್ವಯಿಸುತ್ತದೆ. ಇದೀಗ ಸರ್ವೋಚ್ಛ ನ್ಯಾಯಾಲಯವು ಈ ನಿಯಮವನ್ನು 1956 ರ ಮುಂಚೆಯೂ ಮಾಡಲಾಗಿರುವ ಆಸ್ತಿ ವಿಭಜನೆಗೂ ಅನ್ವಯಿಸಲಿದೆ ಎಂಬುದಾಗಿ ಹೇಳಿದೆ. ಈಗ ಈ ತೀರ್ಪು ದೇಶಗಳಾದ್ಯಂತ ಕೆಳ ಹಂತದ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಆಸ್ತಿ ಸಂಬಂಧಿತ ಇಂತಹ ಪ್ರಕರಣಗಳ ಮೇಲೆ ಗಮನಾರ್ಹ ಪ್ರಭಾವ ಬೀರಲಿದೆ ಎನ್ನಬಹುದು.

Published by:Latha CG
First published: