ಕೊರೋನಾ ಪರಿಣಾಮ; ಪುರಿ ಜಗನ್ನಾಥ ಸ್ವಾಮಿ ರಥಯಾತ್ರೆಗೆ ಸುಪ್ರೀಂ ಕೋರ್ಟ್​ ತಡೆ

ಜೂ. 23ರಂದು ಪುರಿ ಜಗನ್ನಾಥ ಸ್ವಾಮಿಯ ರಥಯಾತ್ರೆ ನಡೆಯಬೇಕಿತ್ತು. ಆದರೆ, ರಥಯಾತ್ರೆಗೆ ಅವಕಾಶ ಕೊಟ್ಟರೆ ಜಗನ್ನಾಥ ಕ್ಷಮಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್​ ಸ್ಪಷ್ಟಪಡಿಸಿದೆ.

news18-kannada
Updated:June 18, 2020, 2:23 PM IST
ಕೊರೋನಾ ಪರಿಣಾಮ; ಪುರಿ ಜಗನ್ನಾಥ ಸ್ವಾಮಿ ರಥಯಾತ್ರೆಗೆ ಸುಪ್ರೀಂ ಕೋರ್ಟ್​ ತಡೆ
ಪುರಿ ಜಗನ್ನಾಥ ಸ್ವಾಮಿ ರಥೋತ್ಸವ
  • Share this:
ನವದೆಹಲಿ (ಜೂ. 18): ಒಡಿಶಾದಲ್ಲಿರುವ ವಿಶ್ವಪ್ರಸಿದ್ಧ ಪುರಿ ಜಗನ್ನಾಥ ಸ್ವಾಮಿ ದೇವಸ್ಥಾನದ ರಥೋತ್ಸವಕ್ಕೆ ಸುಪ್ರೀಂ ಕೋರ್ಟ್​ ತಡೆ ನೀಡಿದೆ. ಕೊರೋನಾ ಹಿನ್ನೆಲೆ ಜನರ ಆರೋಗ್ಯ ಮತ್ತು ಸುರಕ್ಷತಾ ದೃಷ್ಟಿಯಿಂದ ಲಕ್ಷಾಂತರ ಜನರು ಸೇರುವ ಈ ವಾರ್ಷಿಕ ರಥಯಾತ್ರೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.

ಜೂ. 23ರಂದು ಪುರಿ ಜಗನ್ನಾಥ ಸ್ವಾಮಿಯ ರಥಯಾತ್ರೆ ನಡೆಯಬೇಕಿತ್ತು. ಆದರೆ, ರಥಯಾತ್ರೆಗೆ ಅವಕಾಶ ಕೊಟ್ಟರೆ ಜಗನ್ನಾಥ ಕ್ಷಮಿಸುವುದಿಲ್ಲ. ಕೊರೋನಾ ಹಿನ್ನೆಲೆಯಲ್ಲಿ  ರಥೋತ್ಸವಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ. ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆಯೇ ನಮಗೆ ಮುಖ್ಯವಾದ್ದರಿಂದ ರಥಯಾತ್ರೆಗೆ ಅವಕಾಶ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್​.ಎ. ಬೋಬ್ಡೆ ನೇತೃತ್ವದ ನ್ಯಾಯಪೀಠ ಸ್ಪಷ್ಟಪಡಿಸಿದೆ.


ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಈ ರಥಯಾತ್ರೆ ನಡೆಸಲು ಪುರಿ ಜಗನ್ನಾಥ ದೇವಾಲಯದ ಅಡಳಿತ ಮಂಡಳಿಗೆ ಅನುಮತಿ ನೀಡಬೇಕೆಂದು ವಕೀಲ ತುಷಾರ್ ಮೆಹ್ತಾ ಮನವಿ ಮಾಡಿದ್ದರು. ಆದರೆ, ಈ ಬಗ್ಗೆ ತನ್ನ ಸ್ಪಷ್ಟ ನಿಲುವನ್ನು ಹೇಳಿರುವ ನ್ಯಾಯಪೀಠ, ಇಂತಹ ಹಲವು ಪ್ರಕರಣಗಳಲ್ಲಿ ಕೊರೋನಾ ಕೇಸುಗಳು ಹೆಚ್ಚಾಗಿ ಹರಡಿರುವ ಉದಾಹರಣೆಗಳು ನಮ್ಮ ಮುಂದಿವೆ. ಹೀಗಿರುವಾಗ ನಾವು ರಥಯಾತ್ರೆಗೆ ಅವಕಾಶ ನೀಡಿದರೆ ಜನರು ತಮ್ಮ ಭಕ್ತಿಯ ಕಾರಣದಿಂದ ಬಂದೇ ಬರುತ್ತಾರೆ. ಇದರಿಂದ ಕೊರೋನಾ ಸಂಕಷ್ಟ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ, ಈ ವರ್ಷ ಪುರಿಯ ರಥೋತ್ಸವಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿಗಳು ಖಚಿತಪಡಿಸಿದ್ದಾರೆ.
First published: June 18, 2020, 2:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading