PMC Bank scam: ಜೈಲಿನಿಂದ ಆರೋಪಿಗಳ ಸ್ಥಳಾಂತರ ಆದೇಶಕ್ಕೆ ಸುಪ್ರೀಂ ತಡೆಯಾಜ್ಞೆ

ಹಗರಣಗಳ ಮೇಲೆ ಹಗರಣ ಕಾಣುತ್ತಿರುವ ಬ್ಯಾಂಕಿಂಗ್ ವಲಯದ ವಸ್ತು ಸ್ಥಿತಿಗೆ ಪಿಎಂಸಿ ಕೈಗನ್ನಡಿ ಹಿಡಿದಿದೆ. ಕೆಲವಾರು ವರ್ಷಗಳಿಂದ ಎನ್​ಪಿಎ ಅಥವಾ ಅನುತ್ಪಾದಕ ಸಾಲಗಳ ಪ್ರಮಾಣ ತೀವ್ರತರವಾಗಿ ಏರುತ್ತಿದೆ. ಪಿಎಂಸಿ ಬ್ಯಾಂಕ್ ನೀಡಿದ ಶೇ. 70ಕ್ಕಿಂತಲೂ ಹೆಚ್ಚು ಸಾಲ ಎನ್​ಪಿಎ ಆಗಿದೆ. ಇದು ಸಾವಿರಾರು ಬ್ಯಾಂಕ್ ಗ್ರಾಹಕರಿಗೆ ಬರಸಿಡಿಲಿನಂತೆ ಬಡಿದಿದೆ.

news18-kannada
Updated:January 16, 2020, 4:41 PM IST
PMC Bank scam: ಜೈಲಿನಿಂದ ಆರೋಪಿಗಳ ಸ್ಥಳಾಂತರ ಆದೇಶಕ್ಕೆ ಸುಪ್ರೀಂ ತಡೆಯಾಜ್ಞೆ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಜ.16): ಪಂಜಾಬ್ ಮಹಾರಾಷ್ಟ್ರ ಕೋಆಪರೇಟಿವ್ ಬ್ಯಾಂಕ್ ಹಗರಣದಲ್ಲಿ ಬಂಧನಕ್ಕೀಡಾಗಿರುವ ಎಚ್​​ಡಿಐಎಲ್​​ ನಿರ್ದೇಶಕರಾದ ಸರಾಂಗ್​​ ಮತ್ತು ರಾಕೇಶ್ ವಾಧವನ್​​ರನ್ನು ಅರ್ಥರ್​​​​ ರೋಡ್​​ ಜೈಲಿನಿಂದ ಮನೆಗೆ ಸ್ಥಳಾಂತರಿಸುವಂತೆ ನೀಡಿದ್ದ ಬಾಂಬೆ ಹೈಕೋರ್ಟ್​​​​ ಆದೇಶಕ್ಕೆ ಸುಪ್ರೀಂಕೋರ್ಟ್​​ ತಡೆಯಾಜ್ಞೆ ನೀಡಿದೆ. ಇಂದು ಬಾಂಬೆ ಹೈಕೋರ್ಟ್​​ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ ಈ ಆದೇಶ ಹೊರಡಿಸಿದೆ.

ಇತ್ತೀಚೆಗೆ ಪಿಎಂಸಿ ಬ್ಯಾಂಕ್ ಹಗರಣ ಸಂಬಂಧ ಬಾಂಬೆ ಹೈಕೋರ್ಟ್​ ಅಸಾಮಾನ್ಯ ತೀರ್ಪು ನೀಡಿತ್ತು. ಎಚ್​​ಡಿಐಎಲ್​​ ನಿರ್ದೇಶಕರಾದ ಸರಾಂಗ್​​ ಮತ್ತು ರಾಕೇಶ್ ವಾಧವನ್​​ರನ್ನು ಜೈಲಿನಿಂದ ಮನೆಗೆ ಸ್ಥಳಾಂತರಿಸುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂಕೋರ್ಟ್​​ ಮೊರೆ ಹೋಗಿದ್ದರು. ಪಿಎಂಸಿ ಬ್ಯಾಂಕ್​​ ಹಗರಣ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್​ ಅಸಾಮಾನ್ಯ ಆದೇಶ ನೀಡಿದೆ. ಅಪ್ಪ ಮತ್ತು ಮಗ ಪೊಲೀಸರ ವಶದಲ್ಲಿದ್ದಾರೆ. ಈಗ ಬಾಂಬೆ ಹೈಕೋರ್ಟ್​ ಆದೇಶದಂತೆ ಇಬ್ಬರನ್ನೂ ಸ್ಥಳಾಂತರ ಮಾಡಿದರೆ ಜಾಮೀನು ನೀಡಿದಂತಾಗುತ್ತದೆ ಎಂದು ತುಷಾರ್ ಮೆಹ್ತಾ ನ್ಯಾಯಪೀಠದ ಮುಂದೆ ಹೇಳಿದ್ದಾರೆ. ಹಾಗಾಗಿಯೇ ಸುಪ್ರೀಂಕೋರ್ಟ್​​ ಬಾಂಬೆ ಹೈಕೋರ್ಟ್​ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.

ಪಂಜಾಬ್ ಮಹಾರಾಷ್ಟ್ರ ಕೋಆಪರೇಟಿವ್ ಬ್ಯಾಂಕ್ ಅಥವಾ ಪಿಎಂಸಿ ಬ್ಯಾಂಕ್ ಈಗ್ಗೆ ಕೆಲವಾರು ದಿನಗಳಿಂದ ಜೋರು ಸದ್ದು ಮಾಡುತ್ತಿತ್ತು. ಆ ಸಹಕಾರಿ ಬ್ಯಾಂಕಲ್ಲಿ ಠೇವಣಿ ಇಟ್ಟಿದ್ದ ಎಂಟು ವ್ಯಕ್ತಿಗಳು ನಿಧನರಾಗಿರುವ ಶಾಕಿಂಗ್ ನ್ಯೂಸ್ ಕೂಡ ಕೇಳಿಬಂದಿದೆ. ಬ್ಯಾಂಕಿಂಗ್ ವಲಯದಲ್ಲಿ ನಡೆದಿರುವ ಹಲವು ಹಗರಣಗಳ ಪಟ್ಟಿಗೆ ಪಿಎಂಸಿಯೂ ಸೇರ್ಪಡೆಯಾಗಿದೆ. 6 ಸಾವಿರ ಕೋಟಿಗೂ ಅಧಿಕ ಹಣದ ಹಗರಣ ಇದಾಗಿದೆ. ಪಿಎಂಸಿ ಬ್ಯಾಂಕ್​ನ ಕೋಟ್ಯಂತರ ಹಣವನ್ನು ಸಂಚು ರೂಪಿಸಿ ಲಪಟಾಯಿಸಿದ ಹೆಚ್​ಡಿಐಎಲ್ ಬ್ಯಾಂಕ್​ನ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹೆಚ್​​ಡಿಐಎಲ್ ಕಂಪನಿಗೆ ಸೇರಿದ ಆಸ್ತಿಗಳನ್ನು ಗುರುತಿಸಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಯತ್ನ ನಡೆದಿದೆ.

ಇದನ್ನೂ ಓದಿ: ಬಿಜೆಪಿಯತ್ತ ಸಿ.ಎಂ. ಇಬ್ರಾಹಿಂ? ಕುತೂಹಲ ಕೆರಳಿಸಿದ ಹೇಳಿಕೆ

ಹಗರಣಗಳ ಮೇಲೆ ಹಗರಣ ಕಾಣುತ್ತಿರುವ ಬ್ಯಾಂಕಿಂಗ್ ವಲಯದ ವಸ್ತು ಸ್ಥಿತಿಗೆ ಪಿಎಂಸಿ ಕೈಗನ್ನಡಿ ಹಿಡಿದಿದೆ. ಕೆಲವಾರು ವರ್ಷಗಳಿಂದ ಎನ್​ಪಿಎ ಅಥವಾ ಅನುತ್ಪಾದಕ ಸಾಲಗಳ ಪ್ರಮಾಣ ತೀವ್ರತರವಾಗಿ ಏರುತ್ತಿದೆ. ಪಿಎಂಸಿ ಬ್ಯಾಂಕ್ ನೀಡಿದ ಶೇ. 70ಕ್ಕಿಂತಲೂ ಹೆಚ್ಚು ಸಾಲ ಎನ್​ಪಿಎ ಆಗಿದೆ. ಇದು ಸಾವಿರಾರು ಬ್ಯಾಂಕ್ ಗ್ರಾಹಕರಿಗೆ ಬರಸಿಡಿಲಿನಂತೆ ಬಡಿದಿದೆ.

ಪಂಜಾಬ್ ಅಂಡ್ ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್ 1984ರ ಫೆ. 13ರಂದು ಪ್ರಾರಂಭವಾದಾಗ ಒಂದೇ ಬ್ರ್ಯಾಂಚ್ ಇದ್ದದ್ದು. 35 ವರ್ಷಗಳಲ್ಲಿ ಅದು ಕರ್ನಾಟಕ ಸೇರಿದಂತೆ ಏಳು ರಾಜ್ಯಗಳಲ್ಲಿ 137 ಬ್ರ್ಯಾಂಚ್​ಗಳನ್ನ ಸ್ಥಾಪಿಸುವ ಮಟ್ಟಕ್ಕೆ ಬೆಳೆದಿದೆ. 1,800ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ. ಬರೋಬ್ಬರಿ 11 ಸಾವಿರ ಕೋಟಿ ರೂ ಠೇವಣಿಗಳನ್ನ ಗ್ರಾಹಕರಿಂದ ಶೇಖರಿಸಿದೆ. ಭಾರತದ ಸಹಕಾರಿ ಬ್ಯಾಂಕುಗಳಲ್ಲೇ ಪಿಎಂಸಿ ನಂಬರ್ ಒನ್ ಎನಿಸಿದೆ. 19 ವರ್ಷಗಳ ಹಿಂದ ಆರ್​ಬಿಐ ಈ ಸಹಕಾರಿ ಬ್ಯಾಂಕನ್ನ ಶೆಡ್ಯೂಲ್ಡ್ ಕಮರ್ಷಿಯಲ್ ಪಟ್ಟಿಗೆ ಸೇರ್ಪಡೆ ಮಾಡಿತು.ಪಿಎಂಸಿ ಬ್ಯಾಂಕ್​ನ ಸಾಲ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕೆಲ ಮಹಿಳಾ ಉದ್ಯೋಗಿಗಳಿಗೆ ಅದೇನೋ ಅನುಮಾನ ಬಂದಿದೆ. ಲೋನ್ ಅಕೌಂಟ್ ಹೆಸರಲ್ಲಿ ಗುಪ್ತ ಖಾತೆಗಳಿವೆ. ಇತ್ತ ಗಮನ ಹರಿಸಿ ಎಂದು ಈ ಮಹಿಳೆಯರು ಆರ್​ಬಿಐಗೆ ತಿಳಿಸಿದ್ದಾರೆ. ಆಗ ಘೋಸ್ಟ್ ಅಕೌಂಟ್​ಗಳ ಕರ್ಮಕಾಂಡ ಮತ್ತು ಸಾವಿರಾರು ಕೋಟಿ ರೂ ವಂಚನೆಯ ಪ್ರಕರಣಗಳು ಬೆಳಕಿಗೆ ಬಂದವು.
Published by: Ganesh Nachikethu
First published: January 16, 2020, 3:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading