Curlies Restaurant: ಸೋನಾಲಿ ಸಾವನ್ನಪ್ಪಿದ ಕರ್ಲೀಸ್ ರೆಸ್ಟೋರೆಂಟ್ ಧ್ವಂಸ ಬೇಡ ಎಂದ ಸುಪ್ರೀಂ!

ನಿಗದಿತ ಸರ್ವೆ ನಂಬರ್ ಹೊರತುಪಡಿಸಿ ಬೇರೆ ಭೂಮಿಯಲ್ಲಿ ಅನಧಿಕೃತ ನಿರ್ಮಾಣಗಳಿದ್ದರೆ ಖಂಡಿತವಾಗಿಯೂ ಕೆಡವಬಹುದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಕರಾವಳಿ ನಿಯಂತ್ರಣ ವಲಯ (CRZ) ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಗೋವಾದ ಪ್ರಸಿದ್ಧ ಅಂಜುನಾ ಬೀಚ್‌ನಲ್ಲಿರುವ 'ಕರ್ಲೀಸ್' ರೆಸ್ಟೋರೆಂಟ್ ಅನ್ನು ಕೆಡವಲು ರಾಷ್ಟ್ರೀಯ ಹಸಿರು ನ್ಯಾಯಪೀಠ ಆದೇಶ ನೀಡಿತ್ತು ಆದರೆ ಸುಪ್ರೀಂ ಕೋರ್ಟ್ ಇದನ್ನು ಕೆಡವದಂತೆ ಶುಕ್ರವಾರ ತಡೆಯಾಜ್ಞೆ ನೀಡಿದೆ.

ಸೋನಾಲಿ ಫೋಗಟ್

ಸೋನಾಲಿ ಫೋಗಟ್

  • Share this:
ಮುಂದಿನ ವಿಚಾರಣೆಯ ದಿನಾಂಕದವರೆಗೆ ವಾಣಿಜ್ಯ ಕಾರ್ಯಾಚರಣೆಗಳನ್ನು ಕೈಗೆತ್ತಿಕೊಳ್ಳುವುದಿಲ್ಲವೆಂಬ ಷರತ್ತಿಗೆ ಅನ್ವಯವಾಗಿ ನಿರ್ದಿಷ್ಟ ಸರ್ವೆ ನಂಬರ್‌ನಲ್ಲಿರುವ ಗೋವಾದ ಐಕಾನಿಕ್ ಕರ್ಲೀಸ್ ಬೀಚ್ ರೆಸ್ಟೋರೆಂಟ್‌ನ (Iconic Curlies Beach Restaurant) ಕಟ್ಟಡಗಳನ್ನು ಕೆಡವಲು ಸುಪ್ರೀಂ ಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ. ನಿಗದಿತ ಸರ್ವೆ ನಂಬರ್ ಹೊರತುಪಡಿಸಿ ಬೇರೆ ಭೂಮಿಯಲ್ಲಿ ಅನಧಿಕೃತ ನಿರ್ಮಾಣಗಳಿದ್ದರೆ (Unauthorized construction) ಖಂಡಿತವಾಗಿಯೂ ಕೆಡವಬಹುದು ಎಂದು ಕೋರ್ಟ್ (Court) ಸ್ಪಷ್ಟಪಡಿಸಿದೆ. ಕರಾವಳಿ ನಿಯಂತ್ರಣ ವಲಯ (CRZ) ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಗೋವಾದ ಪ್ರಸಿದ್ಧ ಅಂಜುನಾ ಬೀಚ್‌ನಲ್ಲಿರುವ (Anjuna Beach) 'ಕರ್ಲೀಸ್' ರೆಸ್ಟೋರೆಂಟ್ ಅನ್ನು ಕೆಡವಲು ರಾಷ್ಟ್ರೀಯ ಹಸಿರು ನ್ಯಾಯಪೀಠ ಆದೇಶ ನೀಡಿತ್ತು.

ಈ ರೆಸ್ಟೋರೆಂಟ್ ಭಾರತೀಯ ಜನತಾ ಪಕ್ಷದ ನಾಯಕಿ ಸೋನಾಲಿ ಫೋಗಟ್ ಸಾವಿಗೆ ಸಂಬಂಧಿಸಿ ವಿವಾದಕ್ಕೆ ಒಳಗಾಗಿದ್ದು, ಬಿಗ್‌ಬಾಸ್ ಸ್ಪರ್ಧಿ ಅಂತೆಯೇ ಮಾಜಿ ಟಿಕ್‌ಟಾಕರ್ ಸೋನಾಲಿ ಫೋಗಟ್ ಸಾಯುವ ಕೆಲವು ಗಂಟೆಗಳ ಮೊದಲು ರೆಸ್ಟೋರೆಂಟ್‌ನ ಔಟ್‌ಲೆಟ್‌ನಲ್ಲಿ ಪಾರ್ಟಿ ಮಾಡುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ. ಫೋಗಟ್ ಸಾವಿನ ಪ್ರಕರಣದಲ್ಲಿ ಬಂಧಿತರಾದ ಐವರ ಪೈಕಿ ರೆಸ್ಟಾರೆಂಟ್ ಮಾಲೀಕ ಎಡ್ವಿನ್ ನೂನ್ಸ್ ಕೂಡ ಸೇರಿದ್ದಾರೆ.

ಕರಾವಳಿ ನಿಯಂತ್ರಣ ನಿಯಮಗಳನ್ನು ಉಲ್ಲಂಘಿಸಿದ ರೆಸ್ಟೋರೆಂಟ್
ಅಂಜುನಾದ ಈ ವಿವಾದಾತ್ಮಕ ರೆಸ್ಟೋರೆಂಟ್ ಕರಾವಳಿ ನಿಯಂತ್ರಣ ನಿಯಮಗಳನ್ನು ಉಲ್ಲಂಘಿಸಿದೆ ಎಂಬ ಕಾರಣಕ್ಕಾಗಿ ಇದನ್ನು ಕೆಡವಲು ರಾಷ್ಟ್ರೀಯ ಹಸಿರು ನ್ಯಾಯಪೀಠ ಆದೇಶ ನೀಡಿತ್ತು. ಈ ಹಿನ್ನಲೆಯಲ್ಲಿ ರೆಸ್ಟೋರೆಂಟ್‌ನ ಮಾಲೀಕರು ಕೆಡವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.



ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಕರ್ಲೀಸ್ ರೆಸ್ಟೋರೆಂಟ್ ಕಟ್ಟಡ ಧ್ವಂಸಗೊಳಿಸಬೇಕೆಂಬ ರಾಷ್ಟ್ರೀಯ ಹಸಿರು ನ್ಯಾಯಪೀಠದ ಆದೇಶಕ್ಕೆ ತಡೆ ನೀಡಿದ್ದು, ಇದರೊಂದಿಗೆ ಕರ್ಲೀಸ್ ರೆಸ್ಟೋರೆಂಟ್ ಕಟ್ಟಡ ಧ್ವಂಸಗೊಳಿಸುವ ಕಾರ್ಯಕ್ಕೆ ತಾತ್ಕಾಲಿಕ ತಡೆ ಬಿದ್ದಂತಾಗಿದೆ ಎಂಬುದು ವರದಿಯಿಂದ ತಿಳಿದು ಬಂದಿದೆ.

ರೆಸ್ಟೋರೆಂಟ್ ನೆಲಸಮಕ್ಕೆ ತಡೆ 
ಪೀಠವು ಗೋವಾ ಕರಾವಳಿ ನಿರ್ವಹಣಾ ಪ್ರಾಧಿಕಾರ ಮತ್ತು ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ರೆಸ್ಟೋರೆಂಟ್ ನೆಲಸಮಕ್ಕೆ ತಡೆ ನೀಡಿದೆ, ಅಂತೆಯೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಛಾಯಾಚಿತ್ರಗಳು ಹಾಗೂ ಮೌಲ್ಯಮಾಪನದ ಭಾಗವಾಗಿ ಇತರ ಎಲ್ಲಾ ವರದಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಅಗತ್ಯವಿದೆ ಎಂದು ಪೀಠವು ಹೇಳಿದೆ.

ಇದನ್ನೂ ಓದಿ: Building Collapses: ಕುಸಿದುಬಿತ್ತು ಬಹುಮಹಡಿ ಕಟ್ಟಡ; ಎಲ್ಲಾ ನೆಲಸಮ!

ಮೇಲ್ಮನವಿದಾರರು ನೀಡಿದ ಹೇಳಿಕೆಗೆ ಅನುಗುಣವಾಗಿ, ಸರ್ವೆ 42/10 ಹೊರತುಪಡಿಸಿ ಜಮೀನುಗಳಲ್ಲಿ ಅಸ್ತಿತ್ವದಲ್ಲಿರುವ ಇತರ ಕಟ್ಟಡಗಳು ರಚನೆಗಳು ಈ ಆದೇಶಕ್ಕೆ ಒಳಪಡುವುದಿಲ್ಲ. ಈ ಪರಿಣಾಮವಾಗಿ, ನೆಲಸಮವನ್ನು ಹೊರತುಪಡಿಸಿ ಇತರ ಜಮೀನುಗಳಲ್ಲಿ ಅನಧಿಕೃತ ನಿರ್ಮಾಣವಿದ್ದರೆ ಖಂಡಿತವಾಗಿಯೂ ಮುಂದುವರಿಯಬಹುದು. ಮೇಲ್ಮನವಿದಾರರು ಕಟ್ಟಡಗಳಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆಗಳನ್ನು ನಡೆಸದೇ ಇದ್ದರೆ 42/10 ಕಟ್ಟಡಕ್ಕೆ ಸಂಬಂಧಿಸಿದಂತೆ ಕೆಡವಲು ತಡೆ ಇರುತ್ತದೆ ಎಂದು ಪೀಠವು ಹೇಳಿಕೆ ನೀಡಿದೆ.

ಫೋಟೋಗಳು ಹಾಗೂ ವರದಿಗಳೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರದೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ನ್ಯಾಯಾಲಯವು ಪ್ರತಿವಾದಿಗಳಿಗೆ ಸೂಚಿಸಿದೆ.

ಕಟ್ಟಡ ಒಡೆಯಲು ಬಂದಿದ್ದ ತಂಡ
ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯೆಲ್ ನೇತೃತ್ವದ ಎನ್‌ಜಿಟಿ ಪೀಠವು ಸೆಪ್ಟೆಂಬರ್ 6 ರಂದು ಪ್ರಕರಣದ ವಿಚಾರಣೆ ನಡೆಸಿತು. ರೆಸ್ಟೋರೆಂಟ್ ಮ್ಯಾನೇಜ್‌ಮೆಂಟ್ ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡಿದ ಜಿಸಿಜೆಡ್‌ಎಂಎ ಆದೇಶವನ್ನು ಪೀಠ ಎತ್ತಿ ಹಿಡಿದಿತ್ತು.

ಇದನ್ನೂ ಓದಿ:  Twin Children: 19ರ ಯುವತಿ ಜನ್ಮ ನೀಡಿದ ಅವಳಿ ಮಕ್ಕಳ ತಂದೆ ಬೇರೆ ಬೇರೆ!

ಜಿಲ್ಲಾಡಳಿತವು ತನ್ನ ಡೆಮಾಲಿಷನ್ ಸ್ಕ್ವಾಡ್‌ಗೆ ಶುಕ್ರವಾರ ಕಟ್ಟಡವನ್ನು ನೆಲಸಮ ಮಾಡುವಂತೆ ನೋಟಿಸ್ ನೀಡಿತ್ತು. CRZ ನಿಯಮಗಳನ್ನು ಉಲ್ಲಂಘಿಸಿ ಅಭಿವೃದ್ಧಿ ವಲಯ'ದಲ್ಲಿ ನಿರ್ಮಿಸಲಾಗಿದ್ದ ರೆಸ್ಟೋರೆಂಟ್ ಅನ್ನು ಕೆಡವಲು ಜಿಲ್ಲಾಡಳಿತದ ಡೆಮಾಲಿಷನ್ ಸ್ಕ್ವಾಡ್ ಅಂಜುನಾ ಪೊಲೀಸ್ ಸಿಬ್ಬಂದಿಯೊಂದಿಗೆ ರೆಸ್ಟಾರೆಂಟ್ ಒಡೆಯಲು ಬಂದಿದ್ದರು. ಬಿಜೆಪಿ ನಾಯಕಿ ಹಾಗೂ ಮಾಜಿ ಟಿಕ್‌ಟಾಕ್ ತಾರೆ ಮತ್ತು 'ಬಿಗ್ ಬಾಸ್' ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದ ಸೋನಾಲಿ ಫೋಗಟ್ ಇತ್ತೀಚೆಗೆ ಆಗಸ್ಟ್ 23 ರಂದು ಇದೇ ರೆಸ್ಟೋರೆಂಟ್‌ನಲ್ಲಿ ಮಾದಕ ದ್ರವ್ಯ ಸೇವಿಸಿದ ನಂತರ ಶವವಾಗಿ ಪತ್ತೆಯಾಗಿದ್ದರು.
Published by:Ashwini Prabhu
First published: