• Home
  • »
  • News
  • »
  • national-international
  • »
  • Supreme Court On Marriage: ಈ ಪತಿಗೆ ಮದುವೆಯೇ ಹನಿಟ್ರ್ಯಾಪ್​ನಂತಾಯ್ತು! ಸುಪ್ರೀಂ ಖಡಕ್ ತೀರ್ಪು

Supreme Court On Marriage: ಈ ಪತಿಗೆ ಮದುವೆಯೇ ಹನಿಟ್ರ್ಯಾಪ್​ನಂತಾಯ್ತು! ಸುಪ್ರೀಂ ಖಡಕ್ ತೀರ್ಪು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇನ್ನು ಪೀಠದ ಮುಂದೆ ಹಾಜರಾದ ಪತಿಯು ಪತ್ನಿ ತನ್ನಲ್ಲಿರುವ ಹಣಕ್ಕಾಗಿ ಮಾತ್ರವೇ ಆಸಕ್ತಳಾಗಿದ್ದು ಈ ಬಂಧನ ಹನಿ ಟ್ರ್ಯಾಪ್‌ನಂತಿದೆ ಎಂದು ತಿಳಿಸಿದ್ದಾರೆ.

  • Share this:

ವಿವಾಹವನ್ನು ಉಳಿಸಿಕೊಳ್ಳುವಂತೆ ಕೋರಿ ಪತ್ನಿಯೊಬ್ಬರು ಸುಪ್ರೀಂಕೋರ್ಟ್‌ನಲ್ಲಿ  (Supreme Court) ಸಲ್ಲಿಸಿದ ವರ್ಗಾವಣೆ ಅರ್ಜಿಯು ಸುಪ್ರೀಂ ಕೋರ್ಟ್‌ನಲ್ಲಿ ನಾಟಕೀಯ ತಿರುವು ಪಡೆದುಕೊಂಡಿತು. ವಿವಾಹದ ಕುರಿತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಅಭಯ್ ಶ್ರೀನಿವಾಸ್ ಓಕಾ ಪೀಠವು ನೀಡಿರುವ ಸಂಬಂಧಿತ ಹೇಳಿಕೆಗಳಿಗೆ ವಿಚಾರಣೆ ಸಾಕ್ಷಿಯಾಗಿದೆ ಹಾಗೂ ಸಂಗಾತಿಗಳು ಪರಸ್ಪರ ಅಸಾಧ್ಯವಾಗಿರುವುದನ್ನು ನಿರೀಕ್ಷಿಸಬಾರದು ಎಂದು ತಿಳಿಸಿದೆ. ಪರಸ್ಪರ ದೂರವಾಗಿರುವ ದಂಪತಿಗಳ (Couple Relationship) ದೋಷಾರೋಪಣೆಗಳನ್ನು ಪೀಠ ಗಮನಿಸಿದೆ.


ಪತ್ನಿಯ ವರ್ಗಾವಣೆ ಅರ್ಜಿ ರದ್ದುಗೊಳಿಸಿದ ಪತಿ
ಪತಿಯೊಂದಿಗೆ ದಾಂಪತ್ಯ ಜೀವನವನ್ನು ಪುನಃ ಪ್ರಯತ್ನಿಸಲು ಸಿದ್ಧ ಎಂದು ಪತ್ನಿಯು ನ್ಯಾಯಪೀಠಕ್ಕೆ ತಿಳಿಸಿದ್ದು, ಪತಿ ಮುರಿದಿದ್ದ ವಿವಾಹವನ್ನು ಉಲ್ಲೇಖಿಸಿ, ಪತ್ನಿ ಸಲ್ಲಿಸಿರುವ ವರ್ಗಾವಣೆ ಅರ್ಜಿಯನ್ನು ರದ್ದುಗೊಳಿಸಲು ಪ್ರಯತ್ನಿಸಿದ್ದಾರೆ. ದಂಪತಿಗಳು ಕೇವಲ 40 ದಿನಗಳು ಮಾತ್ರ ಜೊತೆಯಾಗಿ ವಾಸಿಸಿದ್ದು, ಎರಡು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವುದಾಗಿ ಪತಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇದೀಗ ನಾವು ಅಪರಿಚಿತರು ಇದನ್ನು ಹೊರತುಪಡಿಸಿ ಬೇರೇನೂ ಇಲ್ಲ ಎಂದೇ ಪತಿ ಸ್ಪಷ್ಟಪಡಿಸಿದ್ದಾರೆ.


ದಾಂಪತ್ಯವನ್ನು ಮುಂದುವರಿಸಲು ಸತಿಪತಿಗಳಿಬ್ಬರ ಅಂಗೀಕಾರ ಬೇಕು
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪತಿಯೊಂದಿಗೆ ಪುನಃ ವಿವಾಹ ಬಂಧನಕ್ಕೆ ಒಳಪಡುವ ಇಚ್ಛೆಯನ್ನು ಪತ್ನಿಯು ಹೊಂದಿರುವುದಾಗಿ ತಿಳಿಸಿದ್ದಾರೆ. ಇದಕ್ಕೆ ಪೀಠವು ಈ ವಿಷಯವನ್ನು ಕೇಳಿ ನಮಗೂ ಆನಂದವಾಗಿದೆ. ಆದರೆ ವಿವಾಹವನ್ನು ಉಳಿಸುವ ನಿರ್ಧಾರದಲ್ಲಿ ಇಬ್ಬರ ಪಾತ್ರವೂ ಹಿರಿದಾದುದು. ವಿವಾಹವನ್ನು ನಮಗೆ ಉಳಿಸಲಾಗುವುದಿಲ್ಲ ಎಂದು ಪೀಠ ತಿಳಿಸಿದೆ.


ವಿಚಾರಣೆಯ ಆರಂಭದಲ್ಲಿ ದಂಪತಿಗಳಿಬ್ಬರೂ ಪರಸ್ಪರ ಬೇರ್ಪಡುವ ಇರಾದೆಯನ್ನು ವ್ಯಕ್ತಪಡಿಸಿದ್ದರಿಂದ, ಪೀಠವು ಇಬ್ಬರಿಗೂ ವಿವಾಹ ಬಾಂಧವ್ಯದಲ್ಲಿ ಒಪ್ಪಿಗೆಯಿಲ್ಲ ಎಂದಾದಲ್ಲಿ ಒಂದಾಗುವಂತೆ ಏಕೆ ಒತ್ತಾಯಪಡಿಸಬೇಕು ಎಂದು ತಿಳಿಸಿದೆ.


ಹನಿಟ್ರ್ಯಾಪ್​ನಂತಿದೆ ಮದುವೆ!
ಇನ್ನು ಪೀಠದ ಮುಂದೆ ಹಾಜರಾದ ಪತಿಯು ಪತ್ನಿ ತನ್ನಲ್ಲಿರುವ ಹಣಕ್ಕಾಗಿ ಮಾತ್ರವೇ ಆಸಕ್ತಳಾಗಿದ್ದು ಈ ಬಂಧನ ಹನಿ ಟ್ರ್ಯಾಪ್‌ನಂತಿದೆ ಎಂದು ತಿಳಿಸಿದ್ದಾರೆ. ಇಲ್ಲಿ ಹಣವೇ ಮುಖ್ಯ ಹಾಗೂ ಆಕೆಗೆ ಅದುವೇ ಎಲ್ಲವೂ ಎಂದು ಪತಿ ತಿಳಿಸಿದ್ದಾರೆ. ಪತ್ನಿಯು ವಿಚ್ಛೇದನದ ಇತ್ಯರ್ಥವಾಗಿ 2 ಕೋಟಿ ಹಣವನ್ನು ಆಗ್ರಹಿಸಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.


ಪತಿಯ ಹೇಳಿಕೆಗೆ ಪೀಠದ ಖಡಕ್ ಪ್ರಶ್ನೆ
ಪತ್ನಿಯು ಈ ಹಿಂದೆ ಕೆನಡಾದಲ್ಲಿ ಉದ್ಯೋದಲ್ಲಿದ್ದರು ಹಾಗೂ ಕೋವಿಡ್-19 ಕಾರಣದಿಂದ ಭಾರತಕ್ಕೆ ಬಂದರು ಎಂದು ತಿಳಿಸಿದ್ದಾರೆ. ತನ್ನ ವೃತ್ತಿ ಹಾಗೂ ಜೀವನವನ್ನೇ ಪತಿಯು ಹಾಳುಮಾಡಿದ್ದಾರೆ ಎಂಬುದಾಗಿ ಪತ್ನಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.


ದಂಪತಿಗಳ ಹೇಳಿಕೆಗಳನ್ನು ಆಲಿಸಿದ ಪೀಠವು, ದಂಪತಿಗಳು ದಾಂಪತ್ಯದಲ್ಲಿ ಖುಷಿಯಾಗಿಲ್ಲ ಹಾಗೂ ಇಬ್ಬರೂ ತಮ್ಮದೇ ಆದ ಧೋರಣೆಗಳನ್ನು ಹೊಂದಿರುವುದರಿಂದ ಪ್ರತ್ಯೇಕಗೊಳ್ಳುವುದೇ ವಾಸಿ ಎಂದು ಸಲಹೆ ಇತ್ತಿದೆ. ಪತ್ನಿಯು ತನ್ನನ್ನು ತನ್ನ ಹೆತ್ತವರಿಂದ ದೂರವಾಗಿಸಿ ಪ್ರತ್ಯೇಕವಾಗಿರಲು ಒತ್ತಡ ಹೇರುತ್ತಿದ್ದಾರೆ ಎಂಬುದು ಪತಿಯ ಮಾತಾಗಿದೆ.


ಇದನ್ನೂ ಓದಿ: Sabarimala Ayyappa: ಯಾರಿಗೆ ಸಿಗುತ್ತೆ ಅಯ್ಯಪ್ಪನ ಪೂಜೆಯ ಅವಕಾಶ? ಪುಟ್ಟ ಮಕ್ಕಳಿಂದ ಆಯ್ಕೆಯಾಗಲಿದ್ದಾರೆ ಅರ್ಚಕರು!


ಇದಕ್ಕೆ ಪ್ರತಿಯಾಗಿ ನ್ಯಾಯಾಲಯವು, ಪೋಷಕರೇ ನಿಮಗೆ ಮುಖ್ಯ ಎಂದಾದಲ್ಲಿ ನೀವು ವಿವಾಹವಾಗಬಾರದಾಗಿತ್ತು. ಇಲ್ಲದಿದ್ದರೆ ನಿಮ್ಮ ತಂದೆ ತಾಯಿಯನ್ನು ನೋಡಿಕೊಳ್ಳುವ ಸಂಗಾತಿಯನ್ನು ನೀವು ವಿವಾಹವಾಗಬೇಕಿತ್ತು. ಆದರೆ ನೀವು ವಿವಾಹವಾಗಿರುವುದು ಕೆನಡಾದಲ್ಲಿ ಉದ್ಯೋಗದಲ್ಲಿದ್ದ ಸ್ತ್ರೀಯನ್ನಾಗಿದೆ ಹಾಗೂ ಎಲ್ಲವನ್ನೂ ತ್ಯಜಿಸಿ ಭಾರತಕ್ಕೆ ಬರಲು ಹೇಳುವುದು ಎಷ್ಟು ಸಮಂಜಸ ಎಂದು ಪತಿಯನ್ನು ಪ್ರಶ್ನಿಸಿದೆ.


ಮೂರ್ಖತನದ ಪರಮಾವಧಿ
ದಂಪತಿಗಳ ಎಲ್ಲಾ ಹೇಳಿಕೆಗಳನ್ನು, ವಾದ ವಿವಾದಗಳನ್ನು ಆಲಿಸಿದ ನ್ಯಾಯಾಲಯವು, ಎಲ್ಲಾ ಆರೋಪಗಳು ಹುರುಳಿಲ್ಲದೇ ಇರುವಂಥದ್ದು, ಮೂರ್ಖತನದ ಪರಮಾವಧಿಯಾಗಿದೆ ಎಂದೇ ತೀರ್ಪಿತ್ತಿದೆ.


ಭಾರತೀಯ ವಿವಾಹ ಬಾಂಧವ್ಯವು ನಿರ್ದಿಷ್ಟ ಕಟ್ಟುಪಾಡುಗಳಿಗೆ ಒಳಗಾಗಿರುವಂತಹ ಪ್ರವಿತ್ರ ಸಂಬಂಧ ಎಂದು ತಿಳಿಸಿರುವ ಪೀಠವು ನಾವು ಪಾಶ್ಚಿಮಾತ್ಯ ದೇಶದಲ್ಲಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲಿನ ವ್ಯವಸ್ಥೆಯಂತೆ ಇಂದು ವಿವಾಹಿತರಾಗಿ ನಾಳೆ ಬೇರ್ಪಡುವ ವ್ಯವಸ್ಥೆ ನಮ್ಮದಲ್ಲ ಎಂದು ತಿಳಿಸಿದ್ದಾರೆ. ವಿವಾಹವನ್ನು ಮುಂದಕ್ಕೆ ಕೊಂಡೊಯ್ಯಲು ಸತಿ ಪತಿ ಇಬ್ಬರ ತೀರ್ಮಾನ ಹಾಗೂ ಅಂಗೀಕಾರ ಮುಖ್ಯವಾಗಿದ್ದು, ಪರಸ್ಪರ ಅಂಗೀಕಾರವಿಲ್ಲದೇ ಇದ್ದರೆ ಪ್ರಯತ್ನ ಎಂಬುದಕ್ಕೆ ಫಲವಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.


ಇದನ್ನೂ ಓದಿ: Russia-Ukraine War: ಮತ್ತೆ ಕ್ಷಿಪಣಿ ದಾಳಿ ಮಾಡೋದಿಲ್ಲ ಎಂದ ಪುಟಿನ್! ಅಂತ್ಯವಾಗುತ್ತಾ ರಷ್ಯಾ-ಉಕ್ರೇನ್ ಯುದ್ಧ?


ಎರಡೂ ಪಕ್ಷಗಳು ಬೇರ್ಪಡಲು ಬಯಸಿದರೆ, ಅವರು ಪಾಶ್ಚಿಮಾತ್ಯ ತತ್ವವನ್ನು ಅಳವಡಿಸಿಕೊಳ್ಳಲು ಬಯಸಿದರೆ, ನಾವು ಅವಕಾಶ ನೀಡುತ್ತಿದ್ದೆವು. ಆದರೆ ಏಕಮುಖವಾಗಿರಲು ಸಾಧ್ಯವಿಲ್ಲ ಎಂದು ಹೇಳಿದೆ. ಖಾಸಗಿ ಮಧ್ಯಸ್ಥಿಕೆ ಪ್ರಕ್ರಿಯೆಗಳಿಗೆ ಒಳಗಾಗುವಂತೆ ನ್ಯಾಯಾಲಯ ದಂಪತಿಗಳಿಗೆ ತಿಳಿಸಿದೆ.

Published by:ಗುರುಗಣೇಶ ಡಬ್ಗುಳಿ
First published: