HOME » NEWS » National-international » SUPREME COURT REJECTS NIRBHAYA RAPISTS PETITION FOUR RAPIST ARE HANGED SURE FOR FEBRUARY 1ST MAK

Nirbhaya Verdict: ನಿರ್ಭಯಾ ಅತ್ಯಾಚಾರಿ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ; ಫೆಬ್ರವರಿ 1ಕ್ಕೆ ನಾಲ್ವರಿಗೂ ಗಲ್ಲು ಖಚಿತ

Nirbhaya Case Judgement: ನಿರ್ಭಯಾ ಅತ್ಯಾಚಾರ ಆರೋಪಿ ಪವನ್ ಗುಪ್ತಾ ಶಾಲಾ ದಾಖಲಾತಿಯನ್ನು ಪರಿಶೀಲಿಸಿದ ನ್ಯಾಯಾಲಯ ಬಾಲಾಪರಾಧಿ ಎಂದು ತನ್ನನ್ನು ಪರಿಗಣಿಸುವಂತೆ ನೀಡಿದ ಅರ್ಜಿಯನ್ನು ತಿರಸ್ಕೃತಗೊಳಿಸಿದೆ. ಈ ಮೂಲಕ ದೆಹಲಿ ಹೈಕೋರ್ಟ್​ ಜಾರಿ ಮಾಡಿರುವ ಡೆತ್​ ವಾರಂಟ್​ನಂತೆ ಈ ನಾಲ್ವರೂ ಫೆಬ್ರವರಿ 1 ರಂದು ಗಲ್ಲಿಗೇರುವುದು ಖಚಿತವಾಗಿದೆ.

MAshok Kumar | news18-kannada
Updated:January 20, 2020, 4:53 PM IST
Nirbhaya Verdict: ನಿರ್ಭಯಾ ಅತ್ಯಾಚಾರಿ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ; ಫೆಬ್ರವರಿ 1ಕ್ಕೆ ನಾಲ್ವರಿಗೂ ಗಲ್ಲು ಖಚಿತ
ನಿರ್ಭಯಾ ಪ್ರಕರಣದ ರೇಖಾಚಿತ್ರ.
  • Share this:
ನವ ದೆಹಲಿ (ಜನವರಿ 20); ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ದೆಹಲಿ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಆರೋಪಿ ಪವನ್ ಕುಮಾರ್​ ಗುಪ್ತಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಇಂದು ನಡೆಸಿರುವ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಆತನ ಅರ್ಜಿಯನ್ನು ತಿರಸ್ಕರಿಸಿದೆ. ಈ ಮೂಲಕ ನಾಲ್ಕೂ ಜನ ಅತ್ಯಾಚಾರಿಗಳು ದೆಹಲಿ ಹೈಕೋರ್ಟ್​ ಜಾರಿ ಮಾಡಿರುವ ಡೆತ್​ ವಾರಂಟ್​ ನಂತೆ ಫೆಬ್ರವರಿ 1 ರಂದು ಗಲ್ಲಿಗೇರುವುದು ಖಚಿತವಾಗಿದೆ.​

ಈ ಹಿಂದೆಯೇ ಸುಪ್ರೀಂ ಕೋರ್ಟ್​ ಈ ನಾಲ್ವರ ಗಲ್ಲು ಶಿಕ್ಷೆಯನ್ನು ಖಚಿತಪಡಿಸಿತ್ತು. ಹೀಗಾಗಿ ದೆಹಲಿ ಹೈಕೋರ್ಟ್​ ಜನವರಿ 22 ರಂದು ನಾಲ್ಕೂ ಜನ ನಿರ್ಭಯಾ ಅತ್ಯಾಚಾರ ಆರೋಪಿಗಳನ್ನು ಗಲ್ಲಿಗೇರಿಸುವಂತೆ ಡೆತ್​ ವಾರಂಟ್ ನೀಡಿತ್ತು. ಎರಡನೇ ಬಾರಿ ಫೆಬ್ರವರಿ.1ಕ್ಕೆ ಡೆತ್ ವಾರಂಟ್​ ಹೊರಡಿಸಲಾಗಿತ್ತು. ಹೀಗಾಗಿ ನಾಲ್ವರನ್ನೂ ಗಲ್ಲಿಗೇರಿಸಲು ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿತ್ತು.

ಆದರೆ, ಈ ನಾಲ್ವರ ಪೈಕಿ ಪ್ರಮುಖ ಆರೋಪಿಯಾಗಿದ್ದ ಪವನ್ ಕುಮಾರ್​ ಗುಪ್ತಾ ಘಟನೆ ನಡೆಯುವಾಗ ತಾನು ಬಾಲಕನಾಗಿದ್ದೆ ಎಂದು ಸುಪ್ರೀಂ ಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿ ಇವರ ಶಿಕ್ಷೆಯನ್ನು ನೆರವೇರಿಸಲು ತೊಡಕಾಗಿತ್ತು.

ಈ ನಾಲ್ವರೂ ಆರೋಪಿಗಳು ರಾಷ್ಟ್ರಪತಿಗಳಿಗೆ ಕ್ಷಮಾಪಣಾ ಅರ್ಜಿ ಸಲ್ಲಿಸಿ, ಕ್ಷಮಾಪಣಾ ಅರ್ಜಿ ತಿರಸ್ಕೃತಗೊಳ್ಳದ ಹೊರತಾಗಿ ಗಲ್ಲಿಗೇರಿಸುವುದು ಸಾಧ್ಯವಿಲ್ಲ. ಹೀಗಾಗಿ ದೆಹಲಿ ಕೋರ್ಟ್​ ಎರಡು ಬಾರಿ ಡೆತ್​ ವಾರಂಟ್​ ಹೊರಡಿಸಿಯೂ ತಾಂತ್ರಿಕ ದೋಷದಿಂದ ಅತ್ಯಾಚಾರ ಆರೋಪಿಗಳ ಗಲ್ಲು ಶಿಕ್ಷೆಯನ್ನು ಮುಂದೂಡಲಾಗಿತ್ತು.

ಹೀಗಾಗಿ ಪ್ರಕರಣದ ತ್ವರಿತ ಇತ್ಯರ್ಥಕ್ಕೆ ಮುಂದಾದ ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿ ಆರ್​ ಬಾನುಮತಿ ನೇತೃತ್ವದ ಮೂವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠವನ್ನು ರಚಿಸಿತ್ತು. ಜಸ್ಟೀಸ್​ ಬಾನುಮತಿ, ಜಸ್ಟೀಸ್​ ಅಶೋಕ್ ಭೂಷಣ್ ಹಾಗೂ ಜಸ್ಟೀಸ್​ ಎ.ಎಸ್​.ಬೋಪಣ್ಣ ಇಂದು ಪವನ್ ಕುಮಾರ್​ ಗುಪ್ತಾ ಅವರ ಅರ್ಜಿಯನ್ನು ವಿಚಾರಣೆಗೆ ಒಳಪಡಿಸಿದ್ದರು.

ಈ ವೇಳೆ ಆರೋಪಿ ಪವನ್ ಗುಪ್ತಾ ಶಾಲಾ ದಾಖಲಾತಿಯನ್ನು ಪರಿಶೀಲಿಸಿದ ನ್ಯಾಯಾಲಯ ಬಾಲಾಪರಾಧಿ ಎಂದು ತನ್ನನ್ನು ಪರಿಗಣಿಸುವಂತೆ ನೀಡಿದ ಅರ್ಜಿಯನ್ನು ತಿರಸ್ಕೃತಗೊಳಿಸಿದೆ. ಅಲ್ಲದೆ, ನಿರ್ಭಯಾ ಪ್ರಕರಣ ನಡೆಯುವಾಗ ಪವನ್ ಬಾಲಕನಾಗಿರಲಿಲ್ಲ ಎಂದು ತಿಳಿಸಿದೆ. ಈ ಮೂಲಕ ದೆಹಲಿ ಹೈಕೋರ್ಟ್​ ಜಾರಿ ಮಾಡಿರುವ ಡೆತ್​ ವಾರಂಟ್​ನಂತೆ ಈ ನಾಲ್ವರೂ ಫೆಬ್ರವರಿ 1 ರಂದು ಗಲ್ಲಿಗೇರುವುದು ಖಚಿತವಾಗಿದೆ.

2012ರಲ್ಲಿ ದೆಹಲಿಯಲ್ಲಿ ಆರು ಮಂದಿ ಸೇರಿ ನಿರ್ಭಯಾ(ಹೆಸರು ಬದಲಿಸಲಾಗಿದೆ) ಮೇಲೆ ಅಮಾನುಷ ರೀತಿಯಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಕೆಲ ದಿನಗಳ ಜೀವನ್ಮರಣ ಹೋರಾಟದ ಬಳಿಕ ಆಕೆ ಸಾವನ್ನಪ್ಪಿದ್ದರು. ಪೊಲೀಸರು ಎಲ್ಲಾ 6 ಮಂದಿಯನ್ನು ಬಂಧಿಸಿದ್ದರು. ಅವರಲ್ಲಿ ಒಬ್ಬ ಬಾಲಾಪರಾಧಿಯಾಗಿದ್ದು, ಆತನಿಗೆ ಬಾಲಾಪರಾಧ ನಿಯಮದ ಪ್ರಕಾರ ಶಿಕ್ಷೆಯಾಗಿದೆ. ರಾಮ್ ಸಿಂಗ್ ಎಂಬ ಪ್ರಮುಖ ಆರೋಪಿಯು ತಿಹಾರ್ ಜೈಲಿನಲ್ಲೇ ನೇಣಿಗೆ ಶರಣಾಗಿದ್ದ. ಉಳಿದ ನಾಲ್ವರಿಗೆ ಮರಣದಂಡನೆ ಶಿಕ್ಷೆಯಾಗಿದೆ. ಆದರೆ, ಮೇಲ್ಮನವಿ, ಕ್ಷಮಾದಾನ ಅರ್ಜಿಗಳ ಕಾರಣದಿಂದಾಗಿ ಅವರನ್ನು ಗಲ್ಲಿಗೇರಿಸುವುದು ತಡವಾಗುತ್ತಿದೆ.ಇದನ್ನೂ ಓದಿ : ನಿರ್ಭಯಾ ಅತ್ಯಚಾರಿಗಳ ರಕ್ಷಣೆಗೆ ದೆಹಲಿ ಎಎಪಿ​​ ಸರ್ಕಾರ ಯತ್ನಿಸುತ್ತಿದೆ: ಬಿಜೆಪಿ ಆರೋಪ
Youtube Video
First published: January 20, 2020, 3:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories