HOME » NEWS » National-international » SUPREME COURT REFUSES TO ENTERTAIN PLEAS TO DEFER NEET GNR

JEE main NEET 2020 Exam: ಪರೀಕ್ಷೆ ಮುಂದೂಡಿಕೆಗೆ ಸುಪ್ರೀಂ ನಕಾರ - ಅರ್ಜಿ ವಿಚಾರಣೆ ಸಾಧ್ಯವಿಲ್ಲ ಎಂದ ಕೋರ್ಟ್​

ನೀಟ್​​​​ ಮುಂದೂಡಬೇಕು ಇಲ್ಲವೇ ರದ್ದು ಮಾಡಬೇಕೆಂಬ ಕುರಿತಾದ ಅರ್ಜಿಗಳ ವಿಚಾರಣೆ ನಡೆಸಲು ನಾವು ಇಚ್ಛಿಸುವುದಿಲ್ಲ. ಕೊರೋನಾ ನಡುವೆಯೂ ನೀಟ್‌ ನಡೆಸಲು ಸಂಬಂಧಪಟ್ಟ ಪ್ರಾಧಿಕಾರ ಎಲ್ಲ ಸಿದ್ಧತೆಗಳನ್ನು ಮಾಡಲಿದೆ ಎಂದು ಸುಪ್ರೀಂಕೋರ್ಟ್​ ಹೇಳಿದೆ.

news18-kannada
Updated:September 9, 2020, 5:56 PM IST
JEE main NEET 2020 Exam: ಪರೀಕ್ಷೆ ಮುಂದೂಡಿಕೆಗೆ ಸುಪ್ರೀಂ ನಕಾರ - ಅರ್ಜಿ ವಿಚಾರಣೆ ಸಾಧ್ಯವಿಲ್ಲ ಎಂದ ಕೋರ್ಟ್​
ಸುಪ್ರೀಂಕೋರ್ಟ್​.
  • Share this:
ನವದೆಹಲಿ(ಸೆ.09): ಕೊರೋನಾ ವೈರಸ್ ಇರುವ ಕಾರಣ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳಾದ NEET ಮತ್ತು JEE ಮುಂದೂಡಿಕೆ ಮಾಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ನೇತೃತ್ವದ ನ್ಯಾಯಪೀಠ ಈ ಅರ್ಜಿಗಳ ವಿಚಾರಣೆ ಮಾಡುವುದಕ್ಕೆ ಆಗೋದಿಲ್ಲ ಎಂದು ಖಡಕ್​ ಆಗಿ ಹೇಳಿ ನಿರಾಕರಿಸಿದೆ. ಈಗ ನೀಟ್​​​​ ಮುಂದೂಡಬೇಕು ಇಲ್ಲವೇ ರದ್ದು ಮಾಡಬೇಕೆಂಬ ಕುರಿತಾದ ಅರ್ಜಿಗಳ ವಿಚಾರಣೆ ನಡೆಸಲು ನಾವು ಇಚ್ಛಿಸುವುದಿಲ್ಲ. ಕೊರೋನಾ ನಡುವೆಯೂ ನೀಟ್‌ ನಡೆಸಲು ಸಂಬಂಧಪಟ್ಟ ಪ್ರಾಧಿಕಾರ ಎಲ್ಲ ಸಿದ್ಧತೆಗಳನ್ನು ಮಾಡಲಿದೆ. ಹೀಗಿರುವಾಗ ಎಲ್ಲವೂ ಮುಗಿದಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳ ಭವಿಷ್ಯವನ್ನು ಬಲಿಕೊಡುವುದು ಸರಿಯಲ್ಲ ಎಂದು ಸುಪ್ರೀಂ ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಈಗ ಕೋರ್ಟ್​ ಆದೇಶದಿಂದ ವಿದ್ಯಾರ್ಥಿಗಳು ಮತ್ತವರ ಪೋಷಕರಿಗೂ ಅಸಮಾಧಾನ ಆಗಿದೆ.


ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ(ಎನ್​ಟಿಎ) ಸೆಪ್ಟೆಂಬರ್ ತಿಂಗಳಲ್ಲಿ ನೀಟ್ ಮತ್ತು ಜೀ ಪರೀಕ್ಷೆಗಳನ್ನು ಆಯೋಜಿಸುತ್ತಿದೆ. ಎಂಜಿನಿಯರಿಂಗ್ ಪ್ರವೇಶ ಪರೀಕ್ಎಯಾದ ಜೆಇಇ ಸೆಪ್ಟೆಂಬರ್ 1ರಿಂದ 6ರವರೆಗೆ ನಡೆಯಲಿದೆ. ಎನ್​ಇಇಟಿ ಪರೀಕ್ಷೆ ಸೆಪ್ಟೆಂಬರ್ 13ರಂದು ನಡೆಸಲು ಎನ್​ಟಿಎ ನಿರ್ಧರಿಸಿದೆ.

ಈ ಹಿಂದೆಯೇ ಆಗಸ್ಟ್​​ 17ನೇ ತಾರೀಕಿನಂದು ಜೆಇಇ ಮತ್ತು ನೀಟ್‌ ನಡೆಸುವುದಕ್ಕೆ ಸುಪ್ರೀಂಕೋರ್ಟ್‌ ಅನುಮತಿ ನೀಡಿತ್ತು. ಅಂದೇ ಈ ಪರೀಕ್ಷೆಗಳನ್ನು ನಡೆಸಲು ಇದ್ದ ಅಡೆತಡೆಗಳು ನಿವಾರಣೆಯಾಗಿದ್ದವು. ಬಳಿಕ ಈ ತೀರ್ಪು ಮರುಪರಿಶೀಲಿಸಿ ಎಂದು ಕೋರಿ ಹಲವರು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು.
Youtube Video

ಇದನ್ನೂ ಓದಿ: Fact Check: ಕೇರಳದ ಹಿಂದೂ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಲಾಯಿತೇ? ವೈರಲ್ ವಿಡಿಯೋ ಅಸಲಿಯತ್ತೇನು?

ಬಿಜೆಪಿಯೇತರ ಪಕ್ಷಗಳು ಆಡಳಿತವಿರುವ ಆರು ರಾಜ್ಯಗಳು ಈ ಸಂಬಂಧ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದವು. ಆದರೀಗ ಈ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್​ ವಿಚಾರಣೆ ನಡೆಸಲಾಗುವುದಿಲ್ಲ ಎಂದಿದೆ.
Published by: Ganesh Nachikethu
First published: September 9, 2020, 5:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories