• Home
  • »
  • News
  • »
  • national-international
  • »
  • Pegasus Espionage Case: ಫೆಬ್ರವರಿ 25ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

Pegasus Espionage Case: ಫೆಬ್ರವರಿ 25ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

ಸುಪ್ರೀಂಕೋರ್ಟ್

ಸುಪ್ರೀಂಕೋರ್ಟ್

ಪೆಗಾಸಸ್ ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ರಚಿಸಿರುವ ಉನ್ನತ ಮಟ್ಟದ ಸಮಿತಿಯು ವರದಿ ಸಲ್ಲಿಸಲು ಸಮಯಾವಕಾಶ ಬೇಕಾಗಿದೆ. ಆದುದರಿಂದ ಪೆಗಾಸಸ್ ಅರ್ಜಿಗಳನ್ನು ಬುಧವಾರದ ಬದಲಿಗೆ ಶುಕ್ರವಾರದಂದು ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಕೇಂದ್ರ ಸರ್ಕಾರದ ಪರ ವಕೀಲರು ಕೇಳಿದ್ದಾರೆ.

  • Share this:

ನವದೆಹಲಿ, ಫೆ. 22: ಪ್ರತಿಪಕ್ಷಗಳ ನಾಯಕರು (Opposition Leaders), ನ್ಯಾಯಾಧೀಶರು (Judges) ಮಾಧ್ಯಮದವರು (Journalists) ಮತ್ತು ಇತರ ಗಣ್ಯ ವ್ಯಕ್ತಿಗಳ (Important Persons) ಮೇಲೆ  ಬೇಹುಗಾರರಿಕೆ ಮಾಡಿದ್ದಾರೆ ಎನ್ನಲಾಗುತ್ತಿರುವ ಪೆಗಾಸಸ್ ಪ್ರಕರಣಕ್ಕೆ (Pegasus Espionage Case) ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ (Supreme Court) ನಾಳೆ (ಫೆಬ್ರವರಿ 23ರಂದು) ವಿಚಾರಣೆ ನಡೆಯಬೇಕಿತ್ತು. ಆದರೆ ಕೇಂದ್ರ ಸರ್ಕಾರ ಹೆಚ್ಚಿನ ಸಮಯಾವಕಾಶ ಕೇಳಿರುವುದರಿಂದ ಫೆಬ್ರವರಿ 25ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ. ಅರ್ಜಿಯಲ್ಲಿ ಭಾರತ ಸರ್ಕಾರ (Indian Government) ಮತ್ತು ಇಸ್ರೇಲಿ ಸ್ಪೈವೇರ್ ಪೆಗಾಸಸ್ ನಡುವೆ ಆಗಿರುವ ಒಪ್ಪಂದದ ತನಿಖೆಗೆ ಆದೇಶಿಸುವಂತೆ ಹಾಗೂ ಈ ಅಕ್ರಮ ವ್ಯವಹಾರದಲ್ಲಿ ಭಾಗಿಯಾದವರ ವಿರುದ್ಧ FIR ದಾಖಲಿಸುವಂತೆ ಮನವಿ ಮಾಡಲಾಗಿದೆ


ಕೇಂದ್ರ ಸರ್ಕಾರದ ಮನವಿ ಮೇರೆಗೆ ವಿಚಾರಣೆ ಮುಂದೂಡಿಕೆ
ಕೇಂದ್ರ ಸರ್ಕಾರದ ಪರವಾಗಿ ಸುಪ್ರೀಂ ಕೋರ್ಟಿನಲ್ಲಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಫೆಬ್ರವರಿ 23ರಂದು ತಾವು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಗೆ ಸಂಬಂಧಿಸಿದ ಭಾಗಶಃ ವಿಚಾರಣೆಯಲ್ಲಿ ನಿರತರಾಗಿರುತ್ತೇನೆ. ಅಲ್ಲದೆ ಪೆಗಾಸಸ್ ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ರಚಿಸಿರುವ ಉನ್ನತ ಮಟ್ಟದ ಸಮಿತಿಯು ವರದಿ ಸಲ್ಲಿಸಲು ಸಮಯಾವಕಾಶ ಬೇಕಾಗಿದೆ. ಆದುದರಿಂದ ಪೆಗಾಸಸ್ ಅರ್ಜಿಗಳನ್ನು ಬುಧವಾರದ ಬದಲಿಗೆ ಶುಕ್ರವಾರದಂದು ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಕೇಳಿದರು. ಇದಕ್ಕೆ ಸಮ್ಮತಿಸಿದ ಸುಪ್ರೀಂ ಕೋರ್ಟ್ ಫೆಬ್ರವರಿ 25ಕ್ಕೆ ವಿಚಾರಣೆಯನ್ನು ಮುಂದೂಡಿದೆ.


ಇದನ್ನು ಓದಿ: ಮಣಿಪುರ ವಿಧಾನಸಭಾ ಚುನಾವಣೆಗೆ ಅಖಾಡ ಸಿದ್ಧ, ಮತದಾರನ ಓಲೈಕೆಗೆ ಬಂದ್ರು ಪ್ರಧಾನಿ ಮೋದಿ!


ಎಂ.ಎಲ್. ಶರ್ಮಾ ಎಂಬುವರಿಂದ ಅರ್ಜಿ ಸಲ್ಲಿಕೆ
ಹಿಂದೆ ಕೂಡ  ಪೆಗಾಸಸ್ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ಎಂ.ಎಲ್. ಶರ್ಮಾ ಎಂಬ ವಕೀಲರು ಅರ್ಜಿ ಸಲ್ಲಿಸಿದ್ದರು. ಈಗ ಮತ್ತೆ ಅದೇ ಎಂ.ಎಲ್. ಶರ್ಮಾ ಅವರು ಪೆಗಾಸಸ್ ಪ್ರಕರಣದ ಬಗ್ಗೆ ಅರ್ಜಿ ಸಲ್ಲಿಸಿ ತನಿಖೆಗೆ ಮನವಿ ಮಾಡಿದ್ದಾರೆ. ಅರ್ಜಿಯಲ್ಲಿ ಬೇಹುಗಾರಿಕೆ ಪ್ರಕರಣವನ್ನು ತನಿಖೆ ಮಾಡುವಂತೆ ಕೇಳಿಕೊಂಡಿರುವ ಶರ್ಮಾ ಅವರು ಸದ್ಯ ಮತ್ತೆ 'ಭಾರತ ಸರ್ಕಾರದಿಂದ ಬೇಹುಗಾರಿಕೆ ಆಗಿದೆ ಎಂದು ಸಾಬೀತು ಪಡಿಸುವ ರೀತಿಯಲ್ಲಿ' 'ನ್ಯೂಯಾರ್ಕ್ ಟೈಮ್ಸ್' ಮಾಡಿರುವ ವರದಿಯನ್ನು ಉಲ್ಲೇಖಿಸಿದ್ದಾರೆ.


ಇದನ್ನು ಓದಿ: Uttarakhandದಲ್ಲಿ ಕಮರಿಗೆ ಬಿದ್ಧ ಬಸ್; 14 ಮಂದಿ ಸಾವು: ಪ್ರಧಾನಿ ಸಂತಾಪ


ಮತ್ತೆ ಚರ್ಚೆಯ ಮುನ್ನಲೆಗೆ ಬಂದ ಪೆಗಾಸಸ್
ಪೆಗಾಸಸ್ ಪ್ರಕರಣ ಹಿಂದೆ ಹೊರಬಂದಾಗ ಭಾರೀ ಸದ್ದು ಮಾಡಿತ್ತು. ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ತಣ್ಣಗಾಗಿತ್ತು. ಈಗ 'ನ್ಯೂಯಾರ್ಕ್ ಟೈಮ್ಸ್' ಪತ್ರಿಕೆ ಭಾರತ ಮತ್ತು ಇಸ್ರೇಲ್ ನಡುವೆ ಕ್ಷಿಪಣಿಗಳು ಸೇರಿದಂತೆ ಶಸ್ತ್ರಾಸ್ತ್ರಗಳಿಗಾಗಿ ಮಾಡಿಕೊಂಡ 2-ಬಿಲಿಯನ್ ಡಾಲರ್‌‌ ಪ್ಯಾಕೇಜ್‌ ಭಾಗವಾಗಿ ಇಸ್ರೇಲಿ ಸ್ಪೈವೇರ್ ಪೆಗಾಸಸ್ ಅನ್ನು ಕೂಡ ಖರೀದಿ ಮಾಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಜುಲೈ 2017ರಲ್ಲಿ ಇಸ್ರೇಲ್‌ಗೆ ಭೇಟಿ ನೀಡಿದ್ದಾಗ ಈ ಒಪ್ಪಂದಗಳಾಗಿವೆ ಎಂದು ವರದಿ ಮಾಡಿರುವ ಹಿನ್ನಲೆಯಲ್ಲಿ ಪೆಗಾಸಸ್ ಪ್ರಕರಣ ಮತ್ತೆ ಚರ್ಚೆಯ ಮುನ್ನಲೆಗೆ ಬಂದಿದೆ.


ಪೆಗಾಸಸ್ ಬೇಹುಗಾರಿಕೆ ದೇಶದ್ರೋಹ: ರಾಹುಲ್ ಗಾಂಧಿ
ಪೆಗಾಸಸ್ ಬೇಹುಗಾರಿಕೆ ಪ್ರಕರಣದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ನಡೆಯನ್ನು ಗಂಭೀರವಾಗಿ ವಿರೋಧಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 'ನಮ್ಮ ಪ್ರಜಾಪ್ರಭುತ್ವದ ಸ್ವಾಯತ್ತ ಸಂಸ್ಥೆಗಳು, ಮುಂಚೂಣಿ ನಾಯಕರು ಮತ್ತು ಇತರೆ ಗಣ್ಯ ವ್ಯಕ್ತಿಗಳ ಮೇಲೆ ಕಣ್ಣಿಡಲು ನರೇಂದ್ರ ಮೋದಿ ಸರ್ಕಾರ ಇಸ್ರೇಲಿ ಸ್ಪೈವೇರ್ ಪೆಗಾಸಸ್ ಅನ್ನು ಖರೀದಿ ಮಾಡಿದೆ. ಫೋನ್ ಕದ್ದಾಲಿಕೆ ಮೂಲಕ ಆಡಳಿತ ಪಕ್ಷ, ವಿರೋಧ ಪಕ್ಷ, ಸೇನೆ, ನ್ಯಾಯಾಂಗ ಎಲ್ಲರನ್ನೂ ಬೇಹುಗಾರಿಕೆ ಮಾಡಲಾಗಿದೆ. ಇದು ದೇಶದ್ರೋಹದ ಕೆಲಸ' ಎಂದು ಕಿಡಿಕಾರಿದ್ದಾರೆ.

Published by:Seema R
First published: