ನವದೆಹಲಿ: ಉತ್ತರ ಪ್ರದೇಶದ ನೋಯ್ಡಾದಲ್ಲಿರುವ 40 ಮಹಡಿಗಳ ಅವಳಿ ಅಪಾರ್ಟ್ಮೆಂಟ್ಗಳನ್ನು (twin towers in Noida) ನೆಲಸಮ ಮಾಡಲು ಸುಪ್ರೀಂಕೋರ್ಟ್ ಆದೇಶಿಸಿದೆ. ರಿಯಲ್ ಎಸ್ಟೇಟ್ ಸಂಸ್ಥೆ ಸೂಪರ್‌ಟೆಕ್ ನಿರ್ಮಿಸಿರುವ, 900ಕ್ಕೂ ಹೆಚ್ಚು ಫ್ಲ್ಯಾಟ್‌ಗಳನ್ನು ಹೊಂದಿರುವ ಕಟ್ಟಡಗಳನ್ನು ನಿರ್ಮಾಣ ನಿಯಮಗಳ ಉಲ್ಲಂಘನೆಯ ಹಿನ್ನೆಲೆಯಲ್ಲಿ ನೆಲಸಮ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಈ ಹಿಂದೆ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಈ ಆದೇಶ ವಿರುದ್ಧವೂ ಮರುಪರಿಶೀಲನಾ ಅರ್ಜಿ ಸಲ್ಲಿಸುವುದಾಗಿ ನಿರ್ಮಾಣ ಕಂಪನಿ ಹೇಳಿದೆ.
ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಎಂಆರ್ ಷಾ ಅವರ ದ್ವಿಸದಸ್ಯ ಪೀಠವು ಟವರ್‌ಗಳ ಅಕ್ರಮ ನಿರ್ಮಾಣವನ್ನು ಖಂಡಿಸಿತು. ನ್ಯೂ ಓಖ್ಲಾ ಕೈಗಾರಿಕಾ ಅಭಿವೃದ್ಧಿ ಪ್ರದೇಶದ ಅಧಿಕಾರಿಗಳು ಮತ್ತು ಬಿಲ್ಡರ್‌ಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಅಪಾರ್ಟ್ಮೆಂಟ್ಗಳಲ್ಲಿ ಪ್ಲಾಟ್ ಖರೀದಿಸಿದ ಜನರಿಗೆ ಎರಡು ತಿಂಗಳಲ್ಲಿ ಮರುಪಾವತಿ ಮಾಡಬೇಕು. ಜೊತೆಗೆ ಮೂರು ತಿಂಗಳಲ್ಲಿ ಬಿಲ್ಡಿಂಗ್ ನೆಲೆ ಸಮವಾಗಬೇಕು, ಅದರ ವೆಚ್ಚವನ್ನು ಸೂಪರ್‌ಟೆಕ್ ನಿರ್ಮಾಣ ಕಂಪನಿಯೇ ಭರಿಸಬೇಕು ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಅಧಿಕಾರಿಗಳು ಮತ್ತು ಡೆವಲಪರ್‌ಗಳ ನಡುವೆ ಪದೇ ಪದೇ ಅಕ್ರಮ ಒಡಂಬಡಿಕೆಯಾಗಿರುವುದು ಕೋರ್ಟ್ ಸ್ಪಷ್ಟವಾಗಿದೆ. ನೋಯ್ಡಾ ಅಧಿಕಾರಿಗಳ ಹಸ್ತಕ್ಷೇಪ, ಕಟ್ಟಡದ ಯೋಜನೆಗಳ ಉಲ್ಲಂಘನೆ, ಕಟ್ಟಡದ ಯೋಜನೆಗಳ ಬಗ್ಗೆ ನಿವಾಸಿಗಳೊಂದಿಗೆ ಹಂಚಿಕೊಳ್ಳಲು ಅಧಿಕಾರಿಗಳ ನಿರಾಕರಣೆ, ಕಟ್ಟಡದ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಕೋರ್ಟ್ ತಿಳಿಸಿದೆ.
ಪರಿಸರದ ರಕ್ಷಣೆ ಮತ್ತು ನಿವಾಸಿಗಳ ಸುರಕ್ಷತೆಯನ್ನು ಎಲ್ಲಾ ಸಮಯದಲ್ಲೂ ಪರಿಗಣಿಸಬೇಕೆಂದು ಎಂದು ಕೋರ್ಟ್ಒತ್ತಿ ಹೇಳಿದೆ. ಗೋಪುರಗಳ ನಡುವಿನ ಕನಿಷ್ಠ ಅಂತರದ ಅವಶ್ಯಕತೆಗಳಿಗೆ ವಿರುದ್ಧವಾಗಿದೆ. ಅಗ್ನಿ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಗೋಪುರಗಳನ್ನು ನಿರ್ಮಿಸಲು ಉದ್ಯಾನ ಪ್ರದೇಶವನ್ನು ಉಲ್ಲಂಘಿಸಲಾಗಿದೆ ಎಂದು ಕೋರ್ಟ್ ತನ್ನ ತೀರ್ಪಿಸಲ್ಲಿ ತಿಳಿಸಿದೆ.
ಕಾನೂನುಬಾಹಿರವಾಗಿ ಕಟ್ಟಡಗಳ ನಿರ್ಮಾಣವಾಗಿಲ್ಲ ಎಂದು ಒತ್ತಾಯಿಸುವ ಮೂಲಕ ಸೂಪರ್‌ಟೆಕ್ ತನ್ನ ನಿರ್ಮಾಣವನ್ನು ಸಮರ್ಥಿಸಿಕೊಂಡಿದೆ. ಕಂಪನಿಯನ್ನು ಪ್ರತಿನಿಧಿಸಿದ ವಕೀಲ ವಿಕಾಸ್ ಸಿಂಗ್, ನಿರ್ಮಾಣ ಆರಂಭವಾದಾಗ ಪ್ರಕರಣ ದಾಖಲಿಸಿದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಅಸ್ತಿತ್ವದಲ್ಲಿರಲಿಲ್ಲ. ನಾವು ಕನಿಷ್ಠ ಮಾನದಂಡಗಳನ್ನು ಅನುಸರಿಸಿದ್ದೇವೆ, ಅಗ್ನಿ ಸುರಕ್ಷತಾ ನಿಯಮಗಳು ಮತ್ತು ಎಲ್ಲಾ ಇತರ ನಿಯತಾಂಕಗಳನ್ನು ಅನುಸರಿಸಿದ್ದೇವೆ. ಮನೆ ನಿರ್ಮಾಣದಾರರಿಂದ ಯಾವುದೇ ಅಕ್ರಮ ನಡೆದಿಲ್ಲ ಎಂದು ಕೋರ್ಟ್ಗೆ ತಿಳಿಸಿದರು. ಆದರೆ ಇದನ್ನು ಒಪ್ಪದ ಕೋರ್ಟ್ ಅಂತಿಮವಾಗಿ ಅವಳಿ ಟವರ್‌ಗಳ ನೆಲಸಮಕ್ಕೆ ಆದೇಶಿಸಿದೆ.
ಇದನ್ನೂ ಓದಿ: ಜಲಿಯನ್ ವಾಲಾಬಾಗ್ ಸ್ಮಾರಕ ನವೀಕರಣಕ್ಕೆ ಆಕ್ಷೇಪ; ಇಂತಹ ಅಪಮಾನ ಸಹಿಸಲ್ಲ ಎಂದ ರಾಹುಲ್ ಗಾಂಧಿ
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ