• Home
  • »
  • News
  • »
  • national-international
  • »
  • Supreme Court: ಆಸ್ತಿ ವ್ಯವಹಾರಗಳಲ್ಲಿನ ತೆರಿಗೆ ವಂಚನೆಗೆ ಅಂತ್ಯ ಹಾಡಿದ ಸುಪ್ರೀಂ ಕೋರ್ಟ್!

Supreme Court: ಆಸ್ತಿ ವ್ಯವಹಾರಗಳಲ್ಲಿನ ತೆರಿಗೆ ವಂಚನೆಗೆ ಅಂತ್ಯ ಹಾಡಿದ ಸುಪ್ರೀಂ ಕೋರ್ಟ್!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇದೀಗ ಸುಪ್ರೀಂ ಕೋರ್ಟ್ ಈ ರೀತಿಯ ಯೋಜನಾ ಕ್ರಮಕ್ಕೆ ತೆರೆ ಎಳೆದಿದೆ. ಸುಪ್ರೀಂ ಕೋರ್ಟ್ ಆದಾಯ ತೆರಿಗೆ ಇಲಾಖೆಯ ಪರವಾಗಿ ತೀರ್ಪು ನೀಡಿರುವುದರಿಂದ ಇಲಾಖೆಯು ಹಿಂದಿನ ವಹಿವಾಟುಗಳನ್ನು ಪರಿಶೀಲಿಸುತ್ತದೆ ಹಾಗೂ ಹಳೆಯ ಮೌಲ್ಯಮಾಪನಗಳನ್ನು ಮರುಪರಿಶೀಲಿಸುತ್ತದೆ.

  • Share this:

ಸಹಭಾಗಿತ್ವ ಸಂಸ್ಥೆಗಳ ಮೂಲಕ ನಡೆಯುತ್ತಿದ್ದ ಕೋಟಿಗಟ್ಟಲೆ ಮೌಲ್ಯದ ಅನಿಯಂತ್ರಿತ ತೆರಿಗೆ ದುಡ್ಡಿಗೆ ಸುಪ್ರೀಂ ಕೋರ್ಟ್ (Supreme Court) ಅಂತ್ಯಹಾಡಿದೆ. ಸುಪ್ರೀಂ ಕೋರ್ಟ್‌ನ ಈ ನಿಲುವು ಇದೀಗ ಆದಾಯ ತೆರಿಗೆ (Income Tax) ಇಲಾಖೆಗೆ, ಹಿಂದಿನ ಆಸ್ತಿ ವ್ಯವಹಾರಗಳ ಪರಿಶೀಲನೆಗೆ ಉತ್ತೇಜನ ದೊರೆಯುವುದು ಖಾತ್ರಿಯಾಗಿದೆ. ಕೆಲವೊಂದು ತಂತ್ರಗಳನ್ನು (Technic) ಬಳಸಿಕೊಂಡು ಭೂಮಿ, ಆಸ್ತಿ ಮತ್ತು ಪುನರಾಭಿವೃದ್ಧಿ ಹಕ್ಕುಗಳ (Rights) ಹೆಸರಿನಲ್ಲಿ ಅತಿರೇಕವಾಗಿ ತೆರಿಗೆ ದುಡ್ಡುಗಳ ಸಂಗ್ರಹಣೆ ನಡೆಯುತ್ತಿತ್ತು ಎಂಬುದು ವರದಿಯಾಗಿದೆ.


ತಂತ್ರಗಳನ್ನು ಬಳಸಿ ತೆರಿಗೆ ಹಣ ವಂಚನೆ
ರಿಯಲ್ ಎಸ್ಟೇಟ್ ಆಸ್ತಿಗಳನ್ನು ಪಾಲುದಾರಿಕೆ ನೆಲೆಯಲ್ಲಿ ಹಿಡಿದಿಟ್ಟುಕೊಳ್ಳುವುದು, ಪ್ರಸ್ತುತ ಮಾರುಕಟ್ಟೆ ಬೆಲೆಗೆ ಆಸ್ತಿಗಳನ್ನು ಮರುಮೌಲ್ಯಮಾಪನ ಮಾಡುವುದು, ಸಂಸ್ಥೆಯ ಲಾಭದಲ್ಲಿ ಸದಸ್ಯರು ಹಣ ಲಪಟಾಯಿಸುವುದು ಮೊದಲಾದ ತಂತ್ರಗಳನ್ನು ನಡೆಸಿ ತೆರಿಗೆ ಹಣದ ಸುಲಿಗೆ ನಡೆಯುತ್ತಿದ್ದುದು ಗಮನಕ್ಕೆ ಬಂದ ಹಿನ್ನಲೆಯಲ್ಲಿ ಸರ್ವೋಚ್ಛ ನ್ಯಾಯಾಲಯ ಈ ಕ್ರಮ ಕೈಗೊಂಡಿದೆ. ಆಸ್ತಿ ಮಾರಾಟ ಹಾಗೂ ವರ್ಗಾವಣೆಯಲ್ಲಿ ಅಗತ್ಯವಿರುವ ಯಾವುದೇ ಶುಲ್ಕವಿಲ್ಲ ಜೊತೆಗೆ ಬಂಡವಾಳ ಲಾಭಗಳು ಮತ್ತು ಆದಾಯ ತೆರಿಗೆಯನ್ನು ಪಾವತಿಸಲಾಗಿಲ್ಲ ಎಂಬುದು ತಿಳಿದುಬಂದಿದೆ.


ಸ್ವತ್ತಿನ ಮಾಲೀಕರಿಗೂ ತೆರಿಗೆ ಅನ್ವಯ
ನಿಧಿಗಳ ಮೇಲ್ವಿಚಾರಣೆ ನಡೆಸುವ ಪಾಲುದಾರಿಕೆ ಘಟಕವು ಹೊಸ ಪಾಲುದಾರರಿಗೆ ಆಸ್ತಿಯನ್ನು ನಿಯಂತ್ರಿಸಲು ಅನುಮತಿಸಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಇತ್ತೀಚೆಗೆ ತಾನೇ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಯಾವುದೇ ಹೆಚ್ಚುವರಿ ಮೌಲ್ಯಮಾಪನವು ಸಂಸ್ಥೆಯ ಅಧಿಪತ್ಯಕ್ಕೆ ಒಳಪಟ್ಟು ವರ್ಗಾವಣೆಯ ರೂಪದಲ್ಲಿ ತೆರಿಗೆಗೆ ಒಳಪಡುತ್ತದೆ ಹಾಗೂ ಬಂಡವಾಳ ಲಾಭ ಕೂಡ ತೆರಿಗೆಗೆ ಸೇರಿದೆ ಎಂದು ತಿಳಿಸಿತ್ತು.


ಇದನ್ನೂ ಓದಿ: Liquor Bottles: ಮದ್ಯದ ಬಾಟಲಿಯಿಂದ ಮಹಿಳೆಯರಿಗೆ ಉದ್ಯೋಗ! ಹೆಣ್ಣುಮಕ್ಕಳ ಕೈಯಲ್ಲಿ ನಳನಳಿಸಲಿವೆ ಲಿಕ್ಕರ್ ಬಾಟಲಿ


ಹಾಗಾಗಿ ಮರುಮೌಲ್ಯಮಾಪನದ ನಂತರ ಸಂಸ್ಥೆಯು ತೆರಿಗೆ ಬಾಧ್ಯತೆಗೆ ಒಳಪಟ್ಟಾಗ ಹೊಸ ಪಾಲುದಾರರು (ಖರೀದಿದಾರರು) ಹಣ ಪಡೆದುಕೊಳ್ಳುವಾಗ ಹಳೆಯ ಪಾಲುದಾರರು ಅಂದರೆ ಆಸ್ತಿಯ ಅಂತಿಮ ಮಾಲೀಕರು ಅಥವಾ ಮಾರಾಟಗಾರರು, ತೆರಿಗೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದೆ.


ಮರುಮೌಲ್ಯಮಾಪನವನ್ನು ತೆರಿಗೆ ಉಳಿಸುವ ಕ್ರಮವಾಗಿ ಬಳಸುವಂತಿಲ್ಲ
ಸುಪ್ರೀಂ ಕೋರ್ಟ್‌ನ ತೀರ್ಮಾನವು ತೀಕ್ಷ್ಣವಾದ ಪರಿಣಾಮಗಳನ್ನು ಹೊಂದಿದೆ. ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಅಂದರೆ ಭೂಮಿ ಹಾಗೂ ಅಭಿವೃದ್ಧಿ ಹಕ್ಕುಗಳ ವರ್ಗಾವಣೆಯ ಸಮಯದಲ್ಲಿ ಬಾಧ್ಯತೆಯನ್ನು ತಡೆಯಲು ಮರುಮೌಲ್ಯಮಾಪನವನ್ನು ತೆರಿಗೆ ಉಳಿಸುವ ಸಾಧನವಾಗಿ ಬಳಸಲಾಗುತ್ತದೆ.


ಇಂತಹ ಕ್ರಮ ಹಲವಾರು ವರ್ಷಗಳಿಂದ ಜಾರಿಯಲ್ಲಿದ್ದು, ಇದೀಗ ಸುಪ್ರೀಂ ಕೋರ್ಟ್ ಈ ರೀತಿಯ ಯೋಜನಾ ಕ್ರಮಕ್ಕೆ ತೆರೆ ಎಳೆದಿದೆ. ಸುಪ್ರೀಂ ಕೋರ್ಟ್ ಆದಾಯ ತೆರಿಗೆ ಇಲಾಖೆಯ ಪರವಾಗಿ ತೀರ್ಪು ನೀಡಿರುವುದರಿಂದ ಇಲಾಖೆಯು ಹಿಂದಿನ ವಹಿವಾಟುಗಳನ್ನು ಪರಿಶೀಲಿಸುತ್ತದೆ ಹಾಗೂ ಹಳೆಯ ಮೌಲ್ಯಮಾಪನಗಳನ್ನು ಮರುಪರಿಶೀಲಿಸುತ್ತದೆ. ಈ ರೀತಿಯ ಕ್ರಮವು ರಿಯಲ್ ಎಸ್ಟೇಟ್ ಉದ್ಯಮಗಳಿಗೆ ತೊಂದರೆಯನ್ನುಂಟು ಮಾಡಬಹುದು ಎಂದು ವಕೀಲರಾದ ಕೆ.ಆರ್. ಪ್ರದೀಪ್ ತಿಳಿಸಿದ್ದಾರೆ.


ವಾದ ತಿರಸ್ಕರಿಸಿದ ಸುಪ್ರೀಂ ಕೋರ್ಟ್
ಪಾಲುದಾರ ಬಂಡವಾಳ ಖಾತೆಗಳಿಗೆ ಆಸ್ತಿ ಮರುಮೌಲ್ಯಮಾಪನದ ಮೇಲೆ ಜಮಾ ಮಾಡಲಾದ ಮೊತ್ತವು ಕೇವಲ ಕಾಲ್ಪನಿಕ ಅಥವಾ ಇ-ಬುಕ್ ನಮೂದು ಎಂದು ಮೌಲ್ಯಮಾಪಕರು ವಾದಿಸಿದರು. ಐಟಿ ಕಾಯಿದೆ ವಿಭಾಗ 45(4) ಅನ್ವಯ ಏಜೆನ್ಸಿ ಅಥವಾ ಅಂಗಸಂಸ್ಥೆ ಅಥವಾ ಸಂಸ್ಥೆಗಳ ಸ್ವತ್ತುಗಳ ಮೇಲೆ ತೆರಿಗೆ ನಿಭಾಯಿಸುವುದು ಪಾಲುದಾರಿಕೆ ಏಜೆನ್ಸಿಯನ್ನು ವಿಸರ್ಜಿಸುವವರೆಗೆ ಪ್ರಸ್ತುತವಾಗುವುದಿಲ್ಲ ಎಂದು ತಿಳಿಸಿತು ಆದರೆ ಸುಪ್ರೀಂ ಕೋರ್ಟ್ ಈ ವಾದವನ್ನು ತಿರಸ್ಕರಿಸಿದೆ.


ಸುಪ್ರೀಂ ಕೋರ್ಟ್ ತೀರ್ಪು ಪ್ರಮುಖ ಪರಿಣಾಮಗಳನ್ನು ಬೀರಿದೆ
2021 ರಲ್ಲಿ ಶಾಸಕಾಂಗವು ಈ ಲೋಪದೋಷವನ್ನು ನಿರ್ಬಂಧಿಸಲು ಪ್ರಯತ್ನಿಸಿತು ಹಾಗೂ ಸಂಸ್ಥೆಗಳ ಅಧಿಪತ್ಯದಲ್ಲಿ ತೆರಿಗೆ ವಿಧಿಸಲು IT ಕಾಯಿದೆಯ ಸೆಕ್ಷನ್ 45(4) ಅಡಿಯಲ್ಲಿ ಸೂತ್ರ-ಆಧಾರಿತ ವಿಧಾನವನ್ನು ಸೂಚಿಸಿತು.


ಆದರೆ ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಸಂಸ್ಥೆಯ ಸ್ವತ್ತುಗಳ ಮರುಮೌಲ್ಯಮಾಪನವು ತೆರಿಗೆಗೆ ಸಂಬಂಧಿಸುತ್ತದೆ ಹಾಗೂ ಪಾಲುದಾರಿಗೆ ಆಸ್ತಿ ಮರುಮೌಲ್ಯಮಾಪನವು ಸ್ವತ್ತುಗಳ ಪರವಾಗಿ ಸಂಬಂಧಿತ ವರ್ಗಾವಣೆಯಾಗಿದೆ ಅಂತೆಯೇ ಈ ತೀರ್ಪು ಪ್ರಮುಖ ಪರಿಣಾಮಗಳನ್ನು ಬೀರುತ್ತದೆ ಎಂದು ಖೈತಾನ್ ಮತ್ತು ಕಂಪನಿಯ ಪಾಲುದಾರ ಆಶಿಶ್ ಮೆಹ್ತಾ ತಿಳಿಸಿದ್ದಾರೆ.

First published: