Nupur Sharma: ನಿಟ್ಟುಸಿರು ಬಿಟ್ಟ ನೂಪುರ್ ಶರ್ಮಾ; ಎಲ್ಲ ಕೇಸ್​ಗಳನ್ನೂ ಕ್ಲಬ್ ಮಾಡಲು ಸುಪ್ರೀಂ ಅನುಮತಿ

Supreme Court On Nupur Sharma: ಸುಪ್ರೀಂಕೋರ್ಟ್ ನೂಪುರ್ ಶರ್ಮಾ ಅವರಿಗೆ ಜೀವ ಬೆದರಿಕೆ ಬಂದಿರುವ ಅಂಶವನ್ನು ಸಹ ಈ ಪ್ರಕರಣದಲ್ಲಿ ಪರಿಗಣಿಸಿರುವುದಾಗಿ ತಿಳಿಸಿದೆ.

ನೂಪುರ್ ಶರ್ಮಾ

ನೂಪುರ್ ಶರ್ಮಾ

  • Share this:
    ದೆಹಲಿ: ಪ್ರವಾದಿ ಮೊಹಮದ್ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ನೂಪುರ್ ಶರ್ಮಾಗೆ ಸುಪ್ರೀಂ ಕೋರ್ಟ್ (Supreme Court On Nupur Sharma) ದೊಡ್ಡ ಮಟ್ಟದ ರಿಲೀಫ್ ನೀಡಿದೆ. ಬೇರೆ ಬೇರೆ ರಾಜ್ಯಗಳಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳಲ್ಲಿ ತನ್ನನ್ನು ತಾನು ಸಮರ್ಥಿಸಿಕೊಳ್ಳಬೇಕಾಗಿಲ್ಲ ಎಂಬ ಕಾರಣಕ್ಕೆ ತಮ್ಮ ವಿರುದ್ಧದ ಎಲ್ಲಾ ಪೊಲೀಸ್ ಕೇಸ್‌ಗಳನ್ನು ಕ್ಲಬ್ ಮಾಡುವಂತೆ ಮಾಡಿದ ಮನವಿಯನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ನೂಪುರ್ ಶರ್ಮಾ ವಿರುದ್ಧ ಅನೇಕ (Nupur Sharma) ರಾಜ್ಯಗಳಲ್ಲಿ ಎಫ್‌ಐಆರ್‌ಗಳು ದಾಖಲಾಗಿವೆ. ಹೀಗಾಗಿ ಈ ಎಲ್ಲ ಪ್ರಕರಣಗಳನ್ನು  ಒಟ್ಟುಗೂಡಿಸುವಂತೆ ಅವರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು. ಅದಕ್ಕೆ ಸಮ್ಮತಿಸಿದ ಸುಪ್ರೀಂಕೋರ್ಟ್ ನೂಪುರ್ ಶರ್ಮಾ ಅವರಿಗೆ ಜೀವ ಬೆದರಿಕೆ ಬಂದಿರುವ ಅಂಶವನ್ನು ಸಹ ಈ ಪ್ರಕರಣದಲ್ಲಿ ಪರಿಗಣಿಸಿರುವುದಾಗಿ ತಿಳಿಸಿದೆ.

    ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆಬಿ ಪರ್ದಿವಾಲಾ ಅವರ ಪೀಠವು ನೂಪುರ್ ಶರ್ಮಾ ವಿರುದ್ಧ ಸದ್ಯ ದಾಖಲಾಗಿರುವ ಎಫ್‌ಐಆರ್​ಗಳಿಗೆ (FIR On Nupur Sharma) ಸಂಬಂಧಿಸಿ ಯಾವುದೇ ಬಲವಂತದ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಆದೇಶಿಸಿತ್ತು ಈ ಮೂಲಕ ಮಧ್ಯಂತರ ಆದೇಶವನ್ನು ಸುಪ್ರೀಂಕೋರ್ಟ್ ಈಮುನ್ನ ಪ್ರಕಟಿಸಿತ್ತು.

    ವಿವಿಧ ರಾಜ್ಯಗಳಲ್ಲಿ ಪ್ರಕರಣ ದಾಖಲು
    ದೆಹಲಿ, ಮಹಾರಾಷ್ಟ್ರ, ತೆಲಂಗಾಣ, ಪಶ್ಚಿಮ ಬಂಗಾಳ, ಕರ್ನಾಟಕ, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಅಸ್ಸಾಂ ರಾಜ್ಯಗಳನ್ನು ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ಮನವಿಗೆ ಉತ್ತರಿಸುವಂತೆ ಕೇಳಲಾಗಿತ್ತು.

    ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಪತ್ರ 
    ನೂಪುರ್ ಶರ್ಮಾ ದೇಶದ ಕ್ಷಮೆ ಯಾಚಿಸಬೇಕು ಎಂದು ಸುಪ್ರೀಂಕೋರ್ಟ್ ಇತ್ತೀಚಿಗೆ ಆದೇಶ ನೀಡಿತ್ತು. ಸುಪ್ರೀಂ ಕೋರ್ಟ್​ ನೀಡಿದ್ದ ಈ ಆದೇಶದ ವಿರುದ್ಧ 15 ನಿವೃತ್ತ ನ್ಯಾಯಾಧೀಶರು, 77 ಮಾಜಿ ಅಧಿಕಾರಿಗಳು ಮತ್ತು ಸಶಸ್ತ್ರ ಪಡೆಗಳ 25 ನಿವೃತ್ತ ಅಧಿಕಾರಿಗಳು ಟೀಕಿಸಿ ಸಿಜೆಐ ಎನ್.ವಿ. ರಮಣ ಅವರಿಗೆ ಪತ್ರ ಬರೆದಿದ್ದಾರೆ. ನೂಪೂರ್ ಶರ್ಮಾ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್ ಜಡ್ಜ್​ಗಳ ಅಭಿಪ್ರಾಯದ ವಿರುದ್ಧ15 ನಿವೃತ್ತ ನ್ಯಾಯಾಧೀಶರು, 77 ಮಾಜಿ ಅಧಿಕಾರಿಗಳು ಮತ್ತು ಸಶಸ್ತ್ರ ಪಡೆಗಳ 25 ನಿವೃತ್ತ ಅಧಿಕಾರಿಗಳು ಪತ್ರ ಬರೆದಿದ್ದರು. ಈ ಪತ್ರ ಭಾರೀ ಸಂಚಲನ ಸೃಷ್ಟಿಸಿತ್ತು.

    ಇದನ್ನೂ ಓದಿ: Bihar Politics: 8ನೇ ಬಾರಿಗೆ ಬಿಹಾರ ಸಿಎಂ ಆದ ನಿತೀಶ್ ಕುಮಾರ್; ತೇಜಸ್ವಿ ಯಾದವ್ ಉಪಮುಖ್ಯಮಂತ್ರಿ

    ಇಡೀ ದೇಶದ ಕ್ಷಮೆಯಾಚಿಸಬೇಕು ಎಂದಿದ್ದ ಸುಪ್ರೀಂ ಕೋರ್ಟ್
    ದೇಶದಲ್ಲಿ ಇಷ್ಟೆಲ್ಲಾ ನಡೆಯಲು ಅವರು ಒಬ್ಬರೇ ಕಾರಣ ಎಂದು ಕೋರ್ಟ್​ ಹೇಳಿತ್ತು. ಅವರ ಹೇಳಿಕೆ ಹೇಗೆ ಪ್ರಚೋದಿಸಲಾಗಿದೆ ಎಂಬ ಚರ್ಚೆಯನ್ನು ನಾವು ನೋಡಿದ್ದೇವೆ. ಆದರೆ ಅವರು ಇದನ್ನೆಲ್ಲ ಹೇಳಿದ ರೀತಿ ಮತ್ತು ನಂತರ ತಾನು ವಕೀಲೆ ಎಂದು ಹೇಳುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಅವರು ಇಡೀ ದೇಶದ ಕ್ಷಮೆಯಾಚಿಸಬೇಕು ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಸೂಚಿಸಿದ್ದರು.

    ಇದನ್ನೂ ಓದಿ: Viral Protest: ರಸ್ತೆಗುಂಡಿಯಲ್ಲೇ ಯೋಗ, ಸ್ನಾನ! ವೈರಲ್ ಆಯ್ತು ಪ್ರತಿಭಟನೆ

    ನೂಪುರ್ ಶರ್ಮಾಗೆ ಜೀವ ಬೆದರಿಕೆ ಎದುರಾಗಿತ್ತು
    ನೂಪುರ್ ಶರ್ಮಾ ಅವರು ತಮ್ಮ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ದೆಹಲಿಗೆ ವರ್ಗಾಯಿಸುವಂತೆ ಸಲ್ಲಿಸಿದ ಮನವಿಗೆ ಸುಪ್ರೀಂ ಕೋರ್ಟ್ ಪ್ರತಿಕ್ರಿಯಿಸಿದೆ. ಮಾಜಿ ಬಿಜೆಪಿ ವಕ್ತಾರೆ ತಮ್ಮ ಹೇಳಿಕೆ ವೈರಲ್ ಆದ ನಂತರ ಬೆದರಿಕೆಗಳನ್ನು ಎದುರಿಸುತ್ತಿದ್ದರು ಎಂದು ಆಕೆಯ ವಕೀಲರು ತಿಳಿಸಿದ್ದಾರೆ.
    Published by:guruganesh bhat
    First published: