• Home
  • »
  • News
  • »
  • national-international
  • »
  • Supreme Court On Note Ban: ಕೇಂದ್ರ ಸರ್ಕಾರದ ನೋಟ್ ಬ್ಯಾನ್ ನಿರ್ಧಾರ, ಮಹತ್ವದ ಆದೇಶ ನೀಡಿದ ಸುಪ್ರೀಂ

Supreme Court On Note Ban: ಕೇಂದ್ರ ಸರ್ಕಾರದ ನೋಟ್ ಬ್ಯಾನ್ ನಿರ್ಧಾರ, ಮಹತ್ವದ ಆದೇಶ ನೀಡಿದ ಸುಪ್ರೀಂ

ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್

ಕೋರ್ಟ್​ಗಿಂತ ನೋಟು ರದ್ಧತಿಯ (Note Ban) ಬಗ್ಗೆ ಸಂಸತ್​ಗೆ ಹೆಚ್ಚಿನ ಅಧಿಕಾರವಿದೆ. ಆದರೆ ನೋಟು ರದ್ಧತಿ ನಿರ್ಧಾರವನ್ನು ಸಂಸತ್​ನಲ್ಲಿ ಘೋಷಿಸಿದ್ದರೆ ಇನ್ನಷ್ಟು ಸೂಕ್ತವಾಗಿ ಇರುತ್ತಿತ್ತು ಎಂದು ಕೋರ್ಟ್ (Supreme Court On Note Ban)  ತೀರ್ಪಿತ್ತಿದೆ.

  • News18 Kannada
  • 2-MIN READ
  • Last Updated :
  • Delhi, India
  • Share this:

ದೆಹಲಿ: ಕೇಂದ್ರ ಸರ್ಕಾರ 2016ರಲ್ಲಿ ಕೈಗೊಂಡಿದ್ದ ನೋಟು ಬ್ಯಾನ್ ಕ್ರಮವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಕೇಂದ್ರ ಸರ್ಕಾರ ನೋಟು ರದ್ಧತಿ ನಿರ್ಧಾರ ಕೈಗೊಂಡ ಒಂದೇ ಕಾರಣದಿಂದ ಈ ಆದೇಶವನ್ನು ತಪ್ಪು ಎಂದು ಕರೆಯಲು ಸಾಧ್ಯವಿಲ್ಲ ಎಂದು ದೇಶದ ಸರ್ವೋಚ್ಛ ನ್ಯಾಯಾಲಯ ತಿಳಿಸಿದೆ. ಕೋರ್ಟ್​ಗಿಂತ ನೋಟು ರದ್ಧತಿಯ (Note Ban) ಬಗ್ಗೆ ಸಂಸತ್​ಗೆ ಹೆಚ್ಚಿನ ಅಧಿಕಾರವಿದೆ. ಆದರೆ ನೋಟು ರದ್ಧತಿ ನಿರ್ಧಾರವನ್ನು ಸಂಸತ್​ನಲ್ಲಿ ಘೋಷಿಸಿದ್ದರೆ ಇನ್ನಷ್ಟು ಸೂಕ್ತವಾಗಿ ಇರುತ್ತಿತ್ತು ಎಂದು ಕೋರ್ಟ್ (Supreme Court On Note Ban)  ತೀರ್ಪಿತ್ತಿದೆ. ಐವರು ನ್ಯಾಯಮೂರ್ತಿಗಳಿದ್ದ ಸುಪ್ರೀಂ ಕೋರ್ಟ್​ ಪೀಠ 4:1 ರ ಅನುಪಾತದಲ್ಲಿ ಈ ತೀರ್ಪು ನೀಡಿದೆ. 


ನೋಟ್ ಬ್ಯಾನ್ ವಿರುದ್ಧದ ಅರ್ಜಿಯನ್ನು ತಳ್ಳಿಹಾಕಿದ ಸುಪ್ರೀಂ ಕೋರ್ಟ್​ನ ಐವರು ನ್ಯಾಯಮೂರ್ತಿಗಳ ಪೀಠ ಈ ತೀರ್ಪು ನೀಡಿದೆ. ನಾಲ್ವರು ನ್ಯಾಯಮೂರ್ತಿಗಳು ನೋಟ್ ಬ್ಯಾನ್ ಪರವಾಗಿ ಆದೇಶ ನೀಡಿದ್ದು, ನ್ಯಾಯಮೂರ್ತಿ ಬಿವಿ ನಾಗರತ್ನ ಅವರು ಕೇಂದ್ರ ಸರ್ಕಾರದ ನಿರ್ಧಾರ ವಿರುದ್ಧ ಆದೇಶ ನೀಡಿದ್ದಾರೆ. ನ್ಯಾಯಮೂರ್ತಿ ಬಿವಿ ನಾಗರತ್ನ  ಅವರು ಕೇಂದ್ರ ಸರ್ಕಾರ ನವೆಂಬರ್ 8, 2016 ರ ಕೇಂದ್ರದ ನೋಟು ರದ್ಧತಿ ಅಧಿಸೂಚನೆಯನ್ನು ಕಾನೂನುಬಾಹಿರ ಎಂದು ವ್ಯಾಖ್ಯಾನಿಸಿ ಆದೇಶ ನೀಡಿದ್ದಾರೆ.


ಸಮಗ್ರ ವರದಿ ಸಲ್ಲಿಕೆಗೆ ಕೇಂದ್ರ, ಆರ್‌ಬಿಐಗೆ  ಸೂಚನೆ ನೀಡಿದ್ದ ಸುಪ್ರೀಂ
ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್, ಬಿಆರ್ ಗವಾಯಿ, ಎಎಸ್ ಬೋಪಣ್ಣ, ವಿ ರಾಮಸುಬ್ರಮಣಿಯನ್ ಮತ್ತು ಬಿವಿ ನಾಗರತ್ನ ಅವರ ಪೀಠವು ಈ ಕುರಿತು ಮಹತ್ವದ ಆದೇಶ ನೀಡಿತ್ತು. ಆರ್‌ಬಿಐ ಕಾಯ್ದೆಯ ಸೆಕ್ಷನ್ 26 ರ ನೋಟುಗಳ ಅಮಾನ್ಯೀಕರಣವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ಬಗ್ಗೆ ಸಮಗ್ರ ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಸೂಚಿಸಿತ್ತು.


ನೋಟು ಬ್ಯಾನ್ ಬಗ್ಗೆ ಕಟುವಾಗಿ ಟೀಕಿಸಿದ್ದ ಪಿ. ಚಿದಂಬರಂ
ನೋಟು ರದ್ದಾದ ಕೆಲವೇ ದಿನಗಳಲ್ಲಿ ಹಲವಾರು ಜನರು ನ್ಯಾಯಾಲಯದ ಮೊರೆ ಹೋಗಿದ್ದರು. ನೋಟು ರದ್ದತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಕೆಲವು ಅರ್ಜಿದಾರರ ಪರ ಹಾಜರಾದ ಮಾಜಿ ವಿತ್ತ ಸಚಿವ ಮತ್ತು ನೋಟು ಅಮಾನ್ಯೀಕರಣದ ಕಟು ಟೀಕಾಕಾರ, ಪಿ ಚಿದಂಬರಂ, ಇದು ಒಂದು ಬುದ್ದಿಹೀನ ಕಸರತ್ತು ಎಂದು ನರೇಂದ್ರ ಮೋದಿಯನ್ನು ಟೀಕಿಸಿದ್ದರು. ಇದು ನಾಗರಿಕರಿಗೆ ತೀವ್ರ ತೊಂದರೆ ಉಂಟುಮಾಡಿದೆ ಎಂದು ಅವರು ಟೀಕಿಸಿದ್ದರು.


8 ತಿಂಗಳ ಮೊದಲೇ ರಿಸರ್ವ್ ಬ್ಯಾಂಕ್ ಜೊತೆ ಮಾತುಕತೆ
2016 ರಲ್ಲಿ ನೋಟು ಅಮಾನ್ಯೀಕರಣಕ್ಕೂ ಎಂಟು ತಿಂಗಳ ಮೊದಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ (Reserve Bank Of India) ಈ ವಿಷಯದ ಬಗ್ಗೆ ತಾವು ಚರ್ಚೆಯನ್ನು ಪ್ರಾರಂಭಿಸಿದ್ದೆವು ಎಂದು ಕೇಂದ್ರ ಸರ್ಕಾರ ತಿಳಿಸಿತ್ತು.


ಪ್ರಜ್ಞಾಪೂರ್ವಕ ನಿರ್ಧಾರ ಎಂದಿದ್ದ ಕೇಂದ್ರ ಸರ್ಕಾರ
‘ಒಟ್ಟು ಕರೆನ್ಸಿ ಮೌಲ್ಯದ ಗಮನಾರ್ಹ ಭಾಗವನ್ನು ಹಿಂಪಡೆಯುವುದು ಪ್ರಜ್ಞಾಪೂರ್ವಕ ನಿರ್ಧಾರ’ ಎಂದು ಕೇಂದ್ರ ಸರ್ಕಾರ ಈ ಅಫಿಡವಿಟ್‌ನಲ್ಲಿ ಹೇಳಿದೆ. ಇದಕ್ಕಾಗಿ 2016ರ ಡಿಸೆಂಬರ್ 1ರಂದು ಸಲ್ಲಿಸಿರುವ ಎರಡು ಅಫಿಡವಿಟ್ ಗಳನ್ನು ಓದಬೇಕು ಎಂದು ಕೇಂದ್ರ ಹೇಳಿತ್ತು.


ಇದನ್ನೂ ಓದಿ: Aadhaar Guidelines: ಆಧಾರ್ ಬಳಕೆಗೆ ಹೊಸ ಮಾರ್ಗಸೂಚಿ, ನಿಮ್ಮ ಗೌಪ್ಯತೆ ಕಾಪಾಡೋಕೆ ಹೀಗೆ ಮಾಡಿ


ನೋಟು ಅಮಾನ್ಯೀಕರಣದ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸರ್ಕಾರ, 500 ಮತ್ತು 1000 ರೂಪಾಯಿ ನೋಟುಗಳನ್ನು ಹಿಂತೆಗೆದುಕೊಳ್ಳುವ ಆರ್‌ಬಿಐ ಶಿಫಾರಸು ಮತ್ತು ಅನುಷ್ಠಾನದ ಉದ್ದೇಶಿತ ಕರಡು ಯೋಜನೆಯನ್ನು ಆಧರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿತ್ತು.


ಇದನ್ನೂ ಓದಿ: Crime Report: 2022ರಲ್ಲಿ ಮಹಿಳೆಯರ ವಿರುದ್ದ 31,000 ಅಪರಾಧ ಪ್ರಕರಣಗಳು ದಾಖಲು; ರಾಷ್ಟ್ರೀಯ ಮಹಿಳಾ ಆಯೋಗ


ಆರ್‌ಬಿಐ ಅಂಕಿಅಂಶಗಳನ್ನು ಉಲ್ಲೇಖಿಸಿ ಕಳೆದ ಐದು ವರ್ಷಗಳಲ್ಲಿ 500 ಮತ್ತು 100 ರೂಪಾಯಿಗಳ ನೋಟುಗಳ ಚಲಾವಣೆಯಲ್ಲಿ ಭಾರಿ ಹೆಚ್ಚಳವಾಗಿದೆ ಎಂದು ಸರ್ಕಾರ ಅಫಿಡವಿಟ್‌ನಲ್ಲಿ ತಿಳಿಸಿತ್ತು. ಎರಡು ಅತ್ಯಧಿಕ ಮುಖಬೆಲೆಗಳು, ಅಂದರೆ ರೂ 500 ಗೆ 76.4% ಮತ್ತು ರೂ 1,000 ಗೆ 109%, 2010-11 ರಿಂದ 2015-1 ರವರೆಗೆ ಭಾರಿ ಏರಿಕೆ ಕಂಡಿದೆ. 500 ಮತ್ತು 1,000 ರೂಪಾಯಿ ನೋಟುಗಳನ್ನು ಕಾನೂನು ಬದ್ಧವಾಗಿ ಹಿಂತೆಗೆದುಕೊಳ್ಳುವ ಮೂಲಕ ಕಪ್ಪು ಹಣ, ನಕಲಿ ಮತ್ತು ಅಕ್ರಮ ಹಣಕಾಸನ್ನು ಎದುರಿಸಲು ಹೊಸ ಸರಣಿಯ ನೋಟುಗಳನ್ನು ಪರಿಚಯಿಸಲು ಸರ್ಕಾರ ಮತ್ತು ಆರ್‌ಬಿಐ ಏಕಕಾಲದಲ್ಲಿ ಯೋಚಿಸಿದೆ ಎಂದು ತಿಳಿಸಿತ್ತು.

Published by:ಗುರುಗಣೇಶ ಡಬ್ಗುಳಿ
First published: