Free Fall of Freebies: ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳಿಂದ ಉಚಿತ ಕೊಡುಗೆ; ಸುಪ್ರೀಂಕೋರ್ಟ್ ಮಹತ್ವದ ಸೂಚನೆ

ಉಚಿತ ಕೊಡುಗೆ ಘೋಷಣೆಗಳನ್ನು ಮಾಡುವ ಪಕ್ಷ ಅಥವಾ ವ್ಯಕ್ತಿಗಳ ನೋಂದಣಿಯನ್ನು ರದ್ದುಗೊಳಿಸುವ ಅಧಿಕಾರವನ್ನು ಚುನಾವಣಾ ಆಯೋಗಕ್ಕೆ ನೀಡಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿತ್ತು.

ಸುಪ್ರೀಂಕೋರ್ಟ್

ಸುಪ್ರೀಂಕೋರ್ಟ್

  • Share this:
    ದೆಹಲಿ: ಉಚಿತ ವಿತರಣೆ ಕೊಡುಗೆಗಳು ಮತ್ತು ಸಾಮಾಜಿಕ ಯೋಜನೆಗಳು ಎರಡು ವಿಭಿನ್ನ ಪರಿಕಲ್ಪನೆಗಳು ಎಂದು ಗಮನಿಸಿದ ಸುಪ್ರೀಂಕೋರ್ಟ್ ಆರ್ಥಿಕತೆಯು ಹಣವನ್ನು ಕಳೆದುಕೊಳ್ಳುವ ಮತ್ತು ಕಲ್ಯಾಣ ಕ್ರಮಗಳ ನಡುವೆ ಸಮತೋಲನವನ್ನು ಸಾಧಿಸಲು ಕರೆ ನೀಡಿದೆ. ಉಚಿತ ಕೊಡುಗೆಗಳನ್ನು (Freebies) ನೀಡುವ ಭರವಸೆಗಳನ್ನು ನೀಡುವ ಪಕ್ಷಗಳ ಮಾನ್ಯತೆ ರದ್ದುಗೊಳಿಸುವ ಮನವಿಯನ್ನು ಪರಿಗಣಿಸುವ ಸಾಧ್ಯತೆಯನ್ನು  ಸರ್ವೋಚ್ಛ ನ್ಯಾಯಾಲಯ (Supreme Court) ತಳ್ಳಿಹಾಕಿದೆ. ವಕೀಲರಾದ ಅಶ್ವಿನಿ ಉಪಾಧ್ಯಾಯ (Lawyer Ashwini Upadhyay) ಅವರು ಸಲ್ಲಿಸಿದ ಮನವಿಯನ್ನು ಆಲಿಸಿದ ಸುಪ್ರೀಂಕೋರ್ಟ್ ಈ ಸೂಚನೆ ನೀಡಿದೆ.  ರಾಜಕೀಯ ಪಕ್ಷಗಳು ಚುನಾವಣಾ ಸಮಯದಲ್ಲಿ ಉಚಿತ ಭರವಸೆ ನೀಡುವ ಅಭ್ಯಾಸವನ್ನು ವಿರೋಧಿಸಿ ಅಂತಹ ಯೋಜನೆ ಘೋಷಿಸುವ ಪಕ್ಷಗಳ ಚುನಾವಣಾ ಚಿಹ್ನೆಗಳನ್ನು ಸ್ಥಗಿತಗೊಳಿಸಬೇಕು ಎಂದು ವಕೀಲರಾದ ಅಶ್ವಿನಿ ಉಪಾಧ್ಯಾಯ ಅವರು ಮನವಿ ಸಲ್ಲಿಸಿದ್ದರು.

    ಅಲ್ಲದೇ ಅಂತಹ ಘೋಷಣೆಗಳನ್ನು ಮಾಡುವ ಪಕ್ಷ ಅಥವಾ ವ್ಯಕ್ತಿಗಳ ನೋಂದಣಿಯನ್ನು ರದ್ದುಗೊಳಿಸುವ ಅಧಿಕಾರವನ್ನು ಚುನಾವಣಾ ಆಯೋಗಕ್ಕೆ ನೀಡಬೇಕು ಎಂದು ಅವರು ಅರ್ಜಿಯಲ್ಲಿ ಒತ್ತಾಯಿಸಿದ್ದರು.

    ರಾಜಕೀಯ ಪಕ್ಷಗಳ ಮಾನ್ಯತೆ ರದ್ದು
    ಆಗಸ್ಟ್ 17 ರ ಮೊದಲು ಈ ಅಂಶದ ಬಗ್ಗೆ ಸಲಹೆಗಳನ್ನು ನೀಡುವಂತೆ ಮಧ್ಯಸ್ಥಗಾರರನ್ನು ಕೇಳಿಕೊಂಡಿದ್ದು, ಆಗಸ್ಟ್ 26 ರಂದು ಅಧಿಕಾರ ತ್ಯಜಿಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಮತ್ತು ನ್ಯಾಯಮೂರ್ತಿ ಕೃಷ್ಣ ಮುರಾರಿ ಅವರನ್ನೊಳಗೊಂಡ ಪೀಠವು ಈಕುರಿತು ತಮ್ಮ ಸೂಚನೆಗಳನ್ನು ನೀಡಿದೆ. ಉಚಿತ ಕೊಡುಗೆಗಳನ್ನು ನೀಡುವ ಭರವಸೆಗಳನ್ನು ನೀಡುವ ರಾಜಕೀಯ ಪಕ್ಷಗಳ ಮಾನ್ಯತೆಯನ್ನು ರದ್ದುಗೊಳಿಸುವ ಆಲೋಚನೆಯನ್ನು ಸಹ ಸುಪ್ರೀಂಕೋರ್ಟ್ ವ್ಯಕ್ತಪಡಿಸಿದೆ.

    ಏನಾದರೂ ಸಲಹೆ ನೀಡಬಹುದೇ?
    ಉಚಿತ ಘೋಷಣೆಗಳು ಮತ್ತು ಸಮಾಜ ಕಲ್ಯಾಣ ಯೋಜನೆಯು ಎರಡೂ ಪರಸ್ಪರ ವಿಭಿನ್ನವಾಗಿದೆ. ಹಣವನ್ನು ಕಳೆದುಕೊಳ್ಳುವ ಆರ್ಥಿಕತೆ ಮತ್ತು ಜನರ ಕಲ್ಯಾಣ, ಎರಡನ್ನೂ ಸಮತೋಲನಗೊಳಿಸಬೇಕು. ಅದಕ್ಕಾಗಿಯೇ ಈ ಚರ್ಚೆ ನಡೆಸಬೇಕು. ನನ್ನ ನಿವೃತ್ತಿಯ ಮೊದಲು ದಯವಿಟ್ಟು ಈಕುರಿತು ಏನನ್ನಾದರೂ ಸಲಹೆ ನೀಡಬಹುದೇ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್​ ವಿ ರಮಣ ಅವರು ಪ್ರಶ್ನಿಸಿದರು.

    ಇದನ್ನೂ ಓದಿ: 2023ರಿಂದ ವಿಶ್ವಾದ್ಯಂತ Johnson & Johnson ಬೇಬಿ ಪೌಡರ್ ಮಾರಾಟ ಸ್ಥಗಿತ, ಕಾರಣವೇನು?

    ಬೆಳೆಯುತ್ತಲೇ ಇದೆ ಉಚಿತ ಭರವಸೆಗಳ ವ್ಯಾಪ್ತಿ
    ಮತದಾರರಿಗೆ ಚುನಾವಣಾ ಪೂರ್ವ ಭರವಸೆ ನೀಡುವುದು ದಶಕಗಳಿಂದ ಭಾರತದ ರಾಜಕಾರಣಿಗಳಲ್ಲಿ ಸಾಮಾನ್ಯ ರೂಢಿಯಾಗಿದೆ. ನಗದು ಹಣದಿಂದ ಹಿಡಿದು ಮದ್ಯ, ಮನೆಬಳಕೆಯ ವಿವಿಧ ವಸ್ತುಗಳು, ವಿದ್ಯಾರ್ಥಿ ವೇತನಗಳು, ಸಬ್ಸಿಡಿಗಳು ಮತ್ತು ಆಹಾರ ಧಾನ್ಯಗಳವರೆಗೆಈ ಉಚಿತ ಆಮಿಷಗಳ ವ್ಯಾಪ್ತಿ ಬೆಳೆಯುತ್ತಲೆ ಇದೆ.

    ಜಯಲಲಿತಾರೂ ಹೊರತಲ್ಲ
    ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ, ಎಐಎಡಿಎಂಕೆ ನಾಯಕಿ ದಿವಂಗತ ಜಯಲಲಿತಾ ಅವರು ಹೀಗೆ ಚುನಾವಣೆಗೂ ಮುನ್ನ ಉಚಿತವಾಗಿ ಹಂಚಿಕೆ ಮಾಡುವ ಭರವಸೆ ಬಿತ್ತಿದವರಲ್ಲಿ ಒಬ್ಬರು ಎಂಬ ಮಾತು ರಾಜಕೀಯ ವಲಯದಲ್ಲಿದೆ.

    ಇದನ್ನೂ ಓದಿ: GST On House Rent: ಮನೆ ಬಾಡಿಗೆಗೂ ಜಿಎಸ್​ಟಿ! ಹೊಸ ನಿಯಮ ಜಾರಿ

    ಜಯಲಲಿತಾ ಘೋಷಣೆಗಳಿಗೆ ಸ್ಪೂರ್ತಿಯಾರು?
    ಮತದಾರರಿಗೆ ಉಚಿತ ವಿದ್ಯುತ್, ಮೊಬೈಲ್ ಫೋನ್, ವೈಫೈ ಸಂಪರ್ಕ, ಸಬ್ಸಿಡಿ ಸ್ಕೂಟರ್, ಬಡ್ಡಿ ರಹಿತ ಸಾಲ, ಫ್ಯಾನ್, ಮಿಕ್ಸರ್-ಗ್ರೈಂಡರ್, ಸ್ಕಾಲರ್‌ಶಿಪ್ ಮತ್ತು ಇನ್ನಿತರ ಭರವಸೆಗಳನ್ನು ಜಯಲಲಿತಾ ನೀಡಿದ್ದರು. ಅವರು ಆರಂಭಿಸಿದ ಅಮ್ಮಾ ಕ್ಯಾಂಟೀನ್ ಯೋಜನೆಯೂ ಭಾರೀ ಜನಪ್ರಿಯವೇ ಆಯಿತು. ಜಯಲಲಿತಾ ಅವರಿಗಿಂತ ಮೊದಲು ತಮಿಳುನಾಡು ಸಿಎಂ ಆಗಿದ್ದ ಸಿಎನ್ ಅಣ್ಣಾದೊರೈ 1960 ರ ದಶಕದಲ್ಲೇ 1 ರೂ.ಗೆ ಒಂದು ಕಿಲೋಗ್ರಾಂ ಅಕ್ಕಿ ವಿತರಿಸುವುದಾಗಿ ಘೋಷಿಸಿದ್ದರು. ಇಂತಹ ಘೋಷಣೆಗಳೇ ಜಯಲಲಿತಾ ಅವರಿಗೆ ಸ್ಪೂರ್ತಿಯಾಗಿತ್ತು ಎಂಬ ಅಂದಾಜಿದೆ.
    Published by:guruganesh bhat
    First published: