ಕೋಲ್ಕತ್ತದಲ್ಲಿರುವ ಆರ್ಟ್​​ ಆಫ್​ ಲಿವಿಂಗ್ ಕಟ್ಟಡ ಕೆಡವಲು ಸುಪ್ರೀಂಕೋರ್ಟ್​ ಆದೇಶ

ಮದನ್​ ಬಿ. ಲೋಕೂರ್​ ಅವರನ್ನೊಳಗೊಂಡ ಪೀಠ ಈ ಅರ್ಜಿ ವಿಚಾರಣೆ ನಡೆಸಿದೆ. ವಾದ ಪ್ರತಿವಾದ ಆಲಿಸಿದ ನಂತರ ಸುಪ್ರೀಂಕೋರ್ಟ್​​ ಎನ್​ಜಿಟಿ ತೀರ್ಪನ್ನು ಎತ್ತಿ ಹಿಡಿದಿದೆ.

Rajesh Duggumane | news18
Updated:November 8, 2018, 3:09 PM IST
ಕೋಲ್ಕತ್ತದಲ್ಲಿರುವ ಆರ್ಟ್​​ ಆಫ್​ ಲಿವಿಂಗ್ ಕಟ್ಟಡ ಕೆಡವಲು ಸುಪ್ರೀಂಕೋರ್ಟ್​ ಆದೇಶ
ಸಾಂದರ್ಭಿಕ ಚಿತ್ರ
Rajesh Duggumane | news18
Updated: November 8, 2018, 3:09 PM IST
ನ್ಯೂಸ್​ 18 ಕನ್ನಡ

ನವದೆಹಲಿ:  ಕೋಲ್ಕತ್ತದಲ್ಲಿರುವ ಶ್ರೀ ಶ್ರೀ ರವಿಶಂಕರ್​ ಗುರೂಜಿ ಅವರ ಆರ್ಟ್​ ಆಫ್​ ಲಿವಿಂಗ್​ ಟ್ರಸ್ಟ್​ಗೆ ಸೇರಿದ ಕಟ್ಟಡ ಕೆಡವಲು ಸುಪ್ರೀಂಕೋರ್ಟ್​​​ ಆದೇಶ ನೀಡಿದೆ. ಈ ಕಟ್ಟಡವನ್ನು ಅಕ್ರಮವಾಗಿ ಕಟ್ಟಲಾಗಿದೆ ಎನ್ನುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ.

ಕೋಲ್ಕತ್ತದ ಹೊರಭಾಗದಲ್ಲಿರುವ ಜೌಗು ಪ್ರದೇಶದಲ್ಲಿ ಆರ್ಟ್​ ಆಫ್​ ಲಿವಿಂಗ್​ನ ಅಂಗ ಸಂಸ್ಥೆಯಾಗಿರುವ ವೈದಿಕ್​ ಧರ್ಮ ಸನಾತನ ಟ್ರಸ್ಟ್​​ ಮೂರು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಿತ್ತು. ಜಾಗವನ್ನು ಅತಿಕ್ರಮಣ ಮಾಡಿ ಕಟ್ಟಡ ನಿರ್ಮಾಣ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ್ದ ರಾಷ್ಟ್ರೀಯ ಹಸಿರು ಪ್ರಾಧಿಕಾರ ಈ ಕಟ್ಟಡ ನೆಲಸಮಗೊಳಿಸುವಂತೆ ಆದೇಶಿಸಿತ್ತು. ಒಂದೊಮ್ಮೆ ಕಟ್ಟಡ ನೆಲಕ್ಕುರುಳದ ಪಕ್ಷದಲ್ಲಿ, ಜೌಗು ಪ್ರದೇಶ ನಿರ್ವಹಣಾ ಇಲಾಖೆ ಹಾಗೂ ರಾಜ್ಯ ಪರಿಸರ ಇಲಾಖೆ ತಲಾ 50 ಲಕ್ಷ ರೂ. ದಂಡ ಕಟ್ಟಬೇಕು ಎನ್ನುವ ಆದೇಶ ಹೊರಡಿಸಿತ್ತು.

ಇದನ್ನೂ ಓದಿ:  ಛತ್ತೀಸ್​ಗಡದಲ್ಲಿ ಬಾಂಬ್ ಸಿಡಿದು ಸಿಐಎಸ್​ಎಫ್​ ಸಿಬ್ಬಂದಿ ಸೇರಿ ನಾಲ್ವರು ಬಲಿ; ವಾರದ ಅಂತರದಲ್ಲಿಯೇ ಎರಡನೇ ಬಾರಿಗೆ ನಕ್ಸಲ್ ದಾಳಿ

ರಾಷ್ಟ್ರೀಯ ಹಸಿರು ಪ್ರಾಧಿಕಾರದ ಕ್ರಮವನ್ನು ಪ್ರಶ್ನಿಸಿ ಆರ್ಟ್​​ ಆಫ್​ ಲಿವಿಂಗ್​ನವರು ಸುಪ್ರೀಂಕೋರ್ಟ್​​ ಮೆಟ್ಟಿಲೇರಿದ್ದರು. ಮದನ್​ ಬಿ. ಲೋಕೂರ್​ ಅವರನ್ನೊಳಗೊಂಡ ಪೀಠ ಈ ಅರ್ಜಿ ವಿಚಾರಣೆ ನಡೆಸಿತ್ತು. ವಾದ ಪ್ರತಿವಾದ ಆಲಿಸಿದ ನಂತರ ಸುಪ್ರೀಂಕೋರ್ಟ್​​ ಎನ್​ಜಿಟಿ ತೀರ್ಪನ್ನು ಎತ್ತಿ ಹಿಡಿದಿದೆ.
First published:November 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626