• Home
  • »
  • News
  • »
  • national-international
  • »
  • Supreme Court Live: ಇತಿಹಾಸ ನಿರ್ಮಿಸಿದ ಸುಪ್ರೀಂ; ಇನ್ಮೇಲೆ ಕಲಾಪ ಲೈವ್ ನೋಡಿ

Supreme Court Live: ಇತಿಹಾಸ ನಿರ್ಮಿಸಿದ ಸುಪ್ರೀಂ; ಇನ್ಮೇಲೆ ಕಲಾಪ ಲೈವ್ ನೋಡಿ

ಸುಪ್ರೀಂಕೋರ್ಟ್

ಸುಪ್ರೀಂಕೋರ್ಟ್

ಹಾಗಾದರೆ ಸುಪ್ರೀಂ ಕೋರ್ಟ್ ಕಲಾಪವನ್ನು ಇನ್ಮುಂದೆ ಲೈವ್ ವೀಕ್ಷಣೆ ಮಾಡುವುದು ಹೇಗೆ? ಇಲ್ಲಿದೆ ನೋಡಿ.

  • Share this:

ದೆಹಲಿ: ಸರ್ವೋಚ್ಚ ನ್ಯಾಯಾಲಯವು ಇತಿಹಾಸವನ್ನು ಸೃಷ್ಟಿಸಲು ಸಿದ್ಧವಾಗಿದೆ.  ಸುಪ್ರೀಂ ಕೋರ್ಟ್​ನ (Supreme Court) ಮೂರು ಸಾಂವಿಧಾನಿಕ ಪೀಠಗಳ ಮುಂದೆ ನಡೆಯುವ ವಿಚಾರಣೆ ಇಂದಿನಿಂದ, ಅಂದರೆ ಸೆಪ್ಟೆಂಬರ್ 27, ಮಂಗಳವಾರದಿಂದ ಲೈವ್‌ಸ್ಟ್ರೀಮ್ (Supreme Court Livestream) ಆರಂಭವಾಗಿದೆ. ಕಳೆದ ಭಾನುವಾರ ಮತ್ತು ಸೋಮವಾರ ಹೊಸ ವ್ಯವಸ್ಥೆಯನ್ನು ಪರೀಕ್ಷಿಸಲಾಗಿದ್ದು, ಫಲಿತಾಂಶಗಳು ತೃಪ್ತಿಕರವಾಗಿವೆ ಎಂದು ವರದಿಗಳು ತಿಳಿಸಿವೆ. ಹಾಗಾದರೆ ಸುಪ್ರೀಂ ಕೋರ್ಟ್ ಕಲಾಪವನ್ನು ಇನ್ಮುಂದೆ ಲೈವ್ ವೀಕ್ಷಣೆ ಮಾಡುವುದು ಹೇಗೆ? ಇಲ್ಲಿದೆ ನೋಡಿ.


ಪ್ರಾಸಂಗಿಕವಾಗಿ ತ್ರಿಸದಸ್ಯ ಪೀಠದ ನೇತೃತ್ವದ ಭಾರತದ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ಸೋಮವಾರ ಬೆಳಿಗ್ಗೆ ವಕೀಲರೊಬ್ಬರಿಗೆ ಎಸ್‌ಸಿ ಶೀಘ್ರದಲ್ಲೇ ಲೈವ್‌ಸ್ಟ್ರೀಮಿಂಗ್‌ಗೆ ತನ್ನದೇ ಆದ ವೇದಿಕೆಯನ್ನು ಹೊಂದಲಿದೆ ಎಂದು ತಿಳಿಸಿದ್ದರು.


ಇಲ್ಲಿದೆ ನೋಡಿ ಲೈವ್ ನೋಡಲು ಲಿಂಕ್
ಸುಪ್ರೀಂ ಕೋರ್ಟ್ ಕಲಾಪವನ್ನು ಲೈವ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ


ಯೂಟ್ಯೂಬ್​ನಲ್ಲಿ ಏಕೆ ಮಾಡಿಲ್ಲ?
ಯೂಟ್ಯೂಬ್‌ನಲ್ಲಿ ಲೈವ್‌ಸ್ಟ್ರೀಮ್ ಮಾಡಲು ಯೋಜಿಸಿದರೆ ವಿಚಾರಣೆಯ ಹಕ್ಕುಸ್ವಾಮ್ಯವನ್ನು ಪಡೆದುಕೊಳ್ಳಬೇಕು ಎಂದು ವಕೀಲರು ನ್ಯಾಯಾಲಯವನ್ನು ಒತ್ತಾಯಿಸಿದ್ದರು. ಹೀಗಾಗಿ ಪ್ರತ್ಯೇಕ ವೇದಿಕೆಯಲ್ಲಿ ಸುಪ್ರೀಂ ಕೋರ್ಟ್​ ಲೈವ್ ಸ್ಟ್ರೀಮಿಂಗ್​ ಮಾಡುಂತೆ ಸೂಚನೆ ನೀಡಲಾಗಿತ್ತು.


ಈ ಹಿಂದೆಯೇ ಮಹತ್ವದ ತೀರ್ಪು ನೀಡಿದ್ದ ಕೋರ್ಟ್
ಸರಿಯಾಗಿ ನಾಲ್ಕು ವರ್ಷಗಳ ಹಿಂದೆ ಸೆಪ್ಟೆಂಬರ್ 27, 2018 ರಂದು, ಆಗಿನ ಭಾರತದ ಮುಖ್ಯ ನ್ಯಾಯಮೂರ್ತಿ ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ಪೀಠವು ಸಾಂವಿಧಾನಿಕ ಪ್ರಾಮುಖ್ಯತೆಯ ವಿಷಯಗಳಲ್ಲಿ ಪ್ರಮುಖ ಪ್ರಕ್ರಿಯೆಗಳ ನೇರ ಪ್ರಸಾರ ಅಥವಾ ವೆಬ್‌ಕಾಸ್ಟ್ ಕುರಿತು ಮಹತ್ವದ ತೀರ್ಪು ನೀಡಿತ್ತು.


ಇಂದು ನಡೆಯಲಿರುವ ವಿಚಾರಣೆಗಳಿವು
ಮಂಗಳವಾರ ಸಿಜೆಐ ಮತ್ತು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಎಸ್ ಕೆ ಕೌಲ್ ನೇತೃತ್ವದ ಮೂರು ಸಾಂವಿಧಾನಿಕ ಪೀಠಗಳು ಕ್ರಮವಾಗಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಮೀಸಲಾತಿಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಲಿದೆ. ಶಿವಸೇನೆಯಲ್ಲಿನ ಭಿನ್ನಾಭಿಪ್ರಾಯದಿಂದ ಉಂಟಾದ ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿನ ನಂತರ ಸಲ್ಲಿಸಲಾದ ಅರ್ಜಿಗಳು ಮತ್ತು ಅಖಿಲ ಭಾರತ ವಕೀಲರ ಪರೀಕ್ಷೆಯ ಸಿಂಧುತ್ವಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಯಲಿದೆ. 


ಇದನ್ನೂ ಓದಿ: Covid 19: ಕೊರೋನಾ ಸೋಂಕು ಮತ್ತೊಂದು ಅವತಾರದಲ್ಲಿ ಬರ್ತಾ ಇದ್ಯಾ? ಸಂಶೋಧಕರು ಇದರ ಬಗ್ಗೆ ಹೇಳಿದ್ದೇನು ಗೊತ್ತಾ


ಮಾಜಿ ಸಿಎಂ ಯಡಿಯೂರಪ್ಪಗೆ ತಾತ್ಕಾಲಿಕ ರಿಲೀಫ್; ಲಂಚ ಪ್ರಕರಣದ ತನಿಖೆಗೆ ಸುಪ್ರೀಂ ಕೋರ್ಟ್​ ತಡೆ
ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್ಐಆರ್‌ನ ತನಿಖೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. 12 ಕೋಟಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ  ಅಸ್ತು ಎಂದಿರುವ ಕರ್ನಾಟಕ ಹೈಕೋರ್ಟ್​ನ ತೀರ್ಪು ಪ್ರಶ್ನಿಸಿ ಮಾಜಿ ಸಿಎಂ ಬಿಎಸ್​ವೈ ಸುಪ್ರೀಂಕೋರ್ಟ್​ ಮೆಟ್ಟಿಲು ಏರಿದ್ದು, ಇಂದು ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​​, ಪ್ರಕರಣದ ತನಿಖೆಗೆ ತಡೆ ನೀಡಿದ್ದು, ಪ್ರತಿವಾದಿಗಳಿಗೆ ನೋಟಿಸ್​ ಜಾರಿ ಮಾಡಿದೆ.


ತನಿಖೆಗೆ ಅಸ್ತು ಎಂದಿದ್ದ ಸುಪ್ರೀಂ ಕೋರ್ಟ್​
ಮೊನ್ನೆಯಷ್ಟೇ ಕೋರ್ಟ್​​ನಲ್ಲಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಅವರ ಕೆಲವು ಕುಟುಂಬಸ್ಥರ ವಿರುದ್ಧ ಪ್ರಕರಣದ ವಿಚಾರಣೆಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ ವಿಚಾರಣೆ ನಡೆಸುವಂತೆ ಲೋಕಾಯುಕ್ತರಿಗೆ ಸೂಚನೆ ನೀಡಿತ್ತು. ಕೆಳ ನ್ಯಾಯಾಲಯದ ಆದೇಶದಂತೆ ಲೋಕಾಯುಕ್ತದಲ್ಲಿ ಎಫ್​ಎಆರ್​ ಕೂಡಾ ದಾಖಲಾಗಿತ್ತು.


ಇದನ್ನೂ ಓದಿ: Rajasthan Crisis: ರಾಜಸ್ಥಾನದಲ್ಲಿ ಸಿಎಂ ಗಾದಿಗಾಗಿ ಕಿತ್ತಾಟ: ಬಿಕ್ಕಟ್ಟಿನ ಮಧ್ಯೆ ಬಗೆಹರಿಯದ ಆ 5 ಪ್ರಶ್ನೆಗಳು, ಈವರೆಗೂ ಸಿಕ್ಕಿಲ್ಲ ಉತ್ತರ


ತೀರ್ಪು ಪ್ರಶ್ನಿಸಿ ಸುಪ್ರೀಂಗೆ ಅರ್ಜಿ ಸಲ್ಲಿದ್ದ ಬಿಎಸ್​ವೈ
ಈ ಹಿನ್ನೆಲೆ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು. ಇಂದು ಬಿಎಸ್​ವೈ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿರುವ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಹೈಕೋರ್ಟ್​​ ತೀರ್ಪಿಗೆ ತಡೆ ನೀಡಿ ಪ್ರತಿವಾದಿಗಳಿಗೆ ನೋಟಿಸ್​ ಜಾರಿ ಮಾಡಿದೆ.

Published by:ಗುರುಗಣೇಶ ಡಬ್ಗುಳಿ
First published: