Justice UU Lalit: ಮಕ್ಕಳೇ ಬೆಳಗ್ಗೆ 7ಕ್ಕೆ ಶಾಲೆಗೆ ಹೋಗ್ತಾರೆ, 9 ಗಂಟೆಗೂ ಕೋರ್ಟ್ ತೆರೆಯಲ್ಲ ಏಕೆ?

ಸಾಮಾನ್ಯವಾಗಿ ಸುಪ್ರೀಂ ಕೋರ್ಟ್ ತನ್ನ ವಿಚಾರಣೆಯನ್ನು ಬೆಳಿಗ್ಗೆ 10:30 ಕ್ಕೆ ಪ್ರಾರಂಭಿಸುತ್ತದೆ. ಆದರೆ ಆಗಸ್ಟ್‌ ತಿಂಗಳಲ್ಲಿ ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿಯಾಗಲಿರುವ ನ್ಯಾಯಮೂರ್ತಿ ಯು. ಯು.ಲಲಿತ್ ಇಂದು ಬೆಳಿಗ್ಗೆ 9:30 ಕ್ಕೆ ಪ್ರಕರಣದ ವಿಚಾರಣೆಯನ್ನು ಪ್ರಾರಂಭಿಸಿದರು. 

ನ್ಯಾಯಮೂರ್ತಿ ಯು. ಯು. ಲಲಿತ್

ನ್ಯಾಯಮೂರ್ತಿ ಯು. ಯು. ಲಲಿತ್

 • Share this:
  ದೆಹಲಿ: ಸರ್ಕಾರಿ ಕಚೇರಿಗಳು ಸೇವಾ ಅವಧಿಯ ಬಗ್ಗೆ ಸಾರ್ವಜನಿಕರಲ್ಲಿ ಕೊಂಚ ಅಸಮಾಧಾನವಿದೆ. ಬೆಳಗ್ಗೆ ಬೇಗ ಬಂದರೂ ಇನ್ನೂ ಆಫೀಸ್ ಬಾಗಿಲನ್ನೇ ತೆಗೆದಿಲ್ಲ ಎಂದು ನೀವೂ ಬೈದುಕೊಂಡಿರಬಹುದು. ಇದೇ ವಿಚಾರ ಇದೀಗ ಸುಪ್ರೀಂ ಕೋರ್ಟ್​ನಲ್ಲಿ ಸಹ ಸದ್ದು ಮಾಡಿದೆ. ಅಲ್ಲದೇ ಸುಪ್ರೀಂ ಕೋರ್ಟ್ (Supreme Court) ಪ್ರಕರಣದ ವಿಚಾರಣೆ ನಡೆಸುವುದನ್ನು ಸಹ ಬೇಗನೆ ಶುರು ಮಾಡುವ ಕುರಿತು ಮಹತ್ವದ ಸೂಚನೆ ಹೊರಬಿದ್ದಿದೆ. ಮಕ್ಕಳು ಬೆಳಿಗ್ಗೆ 7 ಗಂಟೆಗೆ ಶಾಲೆಗೆ ಹೋಗಬಹುದಾದರೆ, ನ್ಯಾಯಾಧೀಶರು ಮತ್ತು ವಕೀಲರು ತಮ್ಮ ದಿನವನ್ನು 9 ಗಂಟೆಗೆ ಏಕೆ ಪ್ರಾರಂಭಿಸಬಾರದು?  ಎಂದು ಸುಪ್ರೀಂ ಕೋರ್ಟ್​ನ ಮುಂದಿನ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ (Supreme Court Next Chief Justice UU Lalit) ಪ್ರಶ್ನಿಸಿದ್ದಾರೆ.

  ಇಂದು ಮೂವರು ನ್ಯಾಯಾಧೀಶರ ಸುಪ್ರೀಂ ಕೋರ್ಟ್ ಪೀಠವು ನಿಗದಿತ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ಆರಂಭವಾಗಿತ್ತು. ಸುಪ್ರೀಂ ಕೋರ್ಟ್ ಬೆಳಿಗ್ಗೆ 9 ಗಂಟೆಗೆ ಸಭೆ ಸೇರಬೇಕು ಎಂದು ದೇಶದ ಮುಂದಿನ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಶುಕ್ರವಾರ ಸ್ಪಷ್ಟವಾಗಿ ಸೂಚಿಸಿದ್ದಾರೆ.

  10:30ಕ್ಕೆ ಆರಂಭವಾಗುತ್ತಿದ್ದ ವಿಚಾರಣೆ
  ಸಾಮಾನ್ಯವಾಗಿ ಸುಪ್ರೀಂ ಕೋರ್ಟ್ ತನ್ನ ವಿಚಾರಣೆಯನ್ನು ಬೆಳಿಗ್ಗೆ 10:30 ಕ್ಕೆ ಪ್ರಾರಂಭಿಸುತ್ತದೆ. ಆದರೆ ಆಗಸ್ಟ್‌ ತಿಂಗಳಲ್ಲಿ ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿಯಾಗಲಿರುವ ನ್ಯಾಯಮೂರ್ತಿ ಯು. ಯು.ಲಲಿತ್ ಇಂದು ಬೆಳಿಗ್ಗೆ 9:30 ಕ್ಕೆ ಪ್ರಕರಣದ ವಿಚಾರಣೆಯನ್ನು ಪ್ರಾರಂಭಿಸಿದರು. 

  ಸಂತೋಷ ವ್ಯಕ್ತಪಡಿಸಿದ ಅಟಾರ್ನಿ ಜನರಲ್ ಮುಕುಲ್ ರೋಹಟಗಿ
  ಹೀಗೆ ಬೆಳಗ್ಗೆ ಬೇಗ ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆಯ ಆರಂಭದ ಬಗ್ಗೆ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಸಂತೋಷ ವ್ಯಕ್ತಪಡಿಸಿದರು. ಆಗ  ಸುಪ್ರೀಂ ಕೋರ್ಟ್​ನ ಮುಂದಿನ ಮುಖ್ಯ ನ್ಯಾಯಮೂರ್ತಿ ಯು. ಯು .ಲಲಿತ್ ಮಕ್ಕಳು ಬೆಳಿಗ್ಗೆ 7 ಗಂಟೆಗೆ ಶಾಲೆಗೆ ಹೋಗಬಹುದಾದರೆ, ನ್ಯಾಯಾಧೀಶರು ಮತ್ತು ವಕೀಲರು ತಮ್ಮ ದಿನವನ್ನು 9 ಗಂಟೆಗೆ ಏಕೆ ಪ್ರಾರಂಭಿಸಬಾರದು?  ಎಂದು ಪ್ರಶ್ನೆ ಮಾಡಿದ್ದಾರೆ.

  ನಡೆಯಲಿದೆ ರಾಮ ಸೇತು ವಿಚಾರಣೆ
  ಭಾರತೀಯ ಸಂಸ್ಕೃತಿಯಲ್ಲಿ  ಅದರಲ್ಲೂ ಹಿಂದೂ ಧರ್ಮದಲ್ಲಿ ರಾಮಾಯಣಕ್ಕೆ  ಎಷ್ಟು ಮಹತ್ವ ಇದೆಯೋ ಅಷ್ಟೇ ಮಹತ್ವ ರಾಮ ಓಡಾಡಿದ ಪ್ರದೇಶ, ಭೇಟಿ ಕೊಟ್ಟ ಸ್ಥಳಗಳೆಲ್ಲ ಪುಣ್ಯ ಪವಿತ್ರವಾಗಿದೆ. ಪೈಕಿ ರಾಮ ಸೇತುವೂ ಸೇರಿದೆ. ಸೀತೆಯನ್ನು  ಕರೆದುಕೊಂಡು ಬರಲು ಸಮುದ್ರದ ಮಧ್ಯೆ ಸೇತುವೆ ಕಟ್ಟಿ, ಅದರ ಮೂಲಕವೇ ಶ್ರೀರಾಮ  ಹಾಗೂ ಸೇನೆ ಲಂಕೆಗೆ ಹೋಗಿತ್ತು ಎನ್ನುವುದು ಪ್ರತೀತಿ. ಈ ಹಿಂದಿನಿಂದಲೂ ರಾಮಸೇತು ವಿವಾದಕ್ಕೆ ಒಳಗಾಗಿದೆ. ಇದೀಗ 'ರಾಮಸೇತು'ವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವನ್ನಾಗಿ ಘೋಷಿಸುವಂತೆ ವ್ಯಾಪಕ ಬೇಡಿಕೆ ವ್ಯಕ್ತವಾಗಿದೆ. ಇದಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿಸಿದೆ. ಇದೇ ಜುಲೈ 26ರಂದು ರಾಮಸೇತು ಕುರಿತಾದ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ.

  ಇದನ್ನೂ ಓದಿ: Ram Setu: ರಾಮಸೇತು ರಾಮನೇ ಕಟ್ಟಿದ್ದಾ, ಪ್ರಕೃತಿಯೇ ನಿರ್ಮಿಸಿದ್ದಾ? ಅಪರೂಪದ ಸ್ಥಳ ವಿವಾದವಾಗಿದ್ದೇಕೆ?

  ಸುಪ್ರೀಂಕೋರ್ಟ್‌ನಲ್ಲಿ ಜುಲೈ 26ಕ್ಕೆ ವಿಚಾರಣೆ
  ಈ ಹಿಂದೆ ಯುಪಿಎ ಸರ್ಕಾರದ ಮೊದಲ ಅವಧಿಯಲ್ಲಿ ವಿವಾದಾತ್ಮಕ 'ಸೇತುಸಮುದ್ರಂ ಶಿಪ್ ಚಾನೆಲ್ ಪ್ರಾಜೆಕ್ಟ್' ಅಂದರೆ ಸೇತುಸಮುದ್ರಂ ನೌಕಾ ಕಾಲುವೆ ಯೋಜನೆ ಘೋಷಿಸಿತ್ತು. ಅದರ ಪ್ರಕಾರ ಯೋಜನೆಗಾಗಿ ರಾಮಸೇತು ಒಡೆಯುವ ಬಗ್ಗೆ ಯೋಚಿಸಲಾಗಿತ್ತು.

  ಇದನ್ನೂ ಓದಿ: Transfer Threat: ಜಡ್ಜ್​ಗೆ ವರ್ಗಾವಣೆ ಬೆದರಿಕೆ ಪ್ರಕರಣ! ಸುಪ್ರೀಂನಲ್ಲಿ ಇಂದು ವಿಚಾರಣೆ

  ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಸುಬ್ರಮಣಿಯನ್ ಸ್ವಾಮಿ
  ಇದರ ವಿರುದ್ದ ಬಿಜೆಪಿ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಸಿದ್ದರು. ರಾಮಸೇತುವನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸುವ ವಿಷಯವನ್ನು ಸುಬ್ರಮಣಿಯನ್ ಸ್ವಾಮಿ ಅರ್ಜಿಯಲ್ಲಿ ಪ್ರಸ್ತಾಪಿಸಿದ್ದರು.
  Published by:guruganesh bhat
  First published: