Accident Victim: ಅಪಘಾತ ಸಂತ್ರಸ್ತರಿಗೆ ಪರಿಹಾರ ಮೊತ್ತವನ್ನು 10 ಲಕ್ಷದಿಂದ 2 ಕೋಟಿಗೆ ಹೆಚ್ಚಿಸಿದ ಸುಪ್ರೀಂ ಕೋರ್ಟ್

Accident Victim: ಅಕ್ಟೋಬರ್ 14 ರಂದು ಪೆರುಮನಲ್ಲೂರಿನಿಂದ ಈರೋಡ್ ಗೆ ಕಾರು ಚಾಲನೆ ಮಾಡುತ್ತಿದ್ದ ಸಮಯದಲ್ಲಿ 35 ರ ಹರೆಯದ ಖಾಸಗಿ ಸಂಸ್ಥೆಯ ಮ್ಯಾನೇಜರ್ ಸುಭಾಷ್ ಬಾಬು ಅಪಘಾತದಲ್ಲಿ ಮೃತಪಟ್ಟಿದ್ದರು. ಇದೇ ಸಮಯದಲ್ಲಿ ಕಾರಿನಲ್ಲಿದ್ದ ಅವರ ಪತ್ನಿ ಹಾಗೂ ಇತರ ಕುಟುಂಬ ಸದಸ್ಯರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದರು.

ಪ್ರಾತಿನಿಧಿಕ ಚಿತ್ರ (Photo: Google)

ಪ್ರಾತಿನಿಧಿಕ ಚಿತ್ರ (Photo: Google)

 • Share this:
  ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾದ ಆರ್. ಸುಭಾಷ್ ರೆಡ್ಡಿ ಹಾಗೂ ಹೃಷಿಕೇಶ್ ರಾಯ್ ನ್ಯಾಯಪೀಠವು, ಅಪಘಾತಕ್ಕೊಳಗಾದ ಸಂತ್ರಸ್ತನ ಕುಟುಂಬಕ್ಕೆ ನೀಡಲಾದ ಪರಿಹಾರ ಮೊತ್ತವನ್ನು ಮೃತರ ಕುಟುಂಬವು ಸಲ್ಲಿಸಿರುವ ಸಂಬಳ ದಾಖಲೆ ಹಾಗೂ ಇತರ ದಾಖಲೆಗಳನ್ನು ಆಧರಿಸಿ 10.4 ಲಕ್ಷದಿಂದ 1.85 ಕೋಟಿಗೆ ಫಾರ್ಮ್-16 (Form-16) ಆಧರಿಸಿ ಹೆಚ್ಚಿಸಲಾಗಿರುವ ಮದ್ರಾಸ್ ಹೈಕೋರ್ಟ್ (Madras High Court) ಆದೇಶದ ವಿರುದ್ಧ, ರಾಷ್ಟ್ರೀಯ ವಿಮಾ ಕಂಪನಿಯು (National Insurance Company Limited) ಸಲ್ಲಿಸಿದ ಮೇಲ್ಮನವಿಯನ್ನು ವಜಾಗೊಳಿಸಿದೆ.

  ಅಕ್ಟೋಬರ್ 14 ರಂದು ಪೆರುಮನಲ್ಲೂರಿನಿಂದ ಈರೋಡ್ ಗೆ ಕಾರು ಚಾಲನೆ ಮಾಡುತ್ತಿದ್ದ ಸಮಯದಲ್ಲಿ 35 ರ ಹರೆಯದ ಖಾಸಗಿ ಸಂಸ್ಥೆಯ ಮ್ಯಾನೇಜರ್ ಸುಭಾಷ್ ಬಾಬು ಅಪಘಾತದಲ್ಲಿ ಮೃತಪಟ್ಟಿದ್ದರು. ಇದೇ ಸಮಯದಲ್ಲಿ ಕಾರಿನಲ್ಲಿದ್ದ ಅವರ ಪತ್ನಿ ಹಾಗೂ ಇತರ ಕುಟುಂಬ ಸದಸ್ಯರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದರು. ಅಪಘಾತದ ಪ್ರತ್ಯಕ್ಷದರ್ಶಿಯಾಗಿರುವ ಅವರ ಪತ್ನಿ ತಿರುಪ್ಪೂರು ಮೋಟಾರು ಅಪಘಾತ ನ್ಯಾಯಪೀಠಕ್ಕೆ ಅಪಘಾತದ ವಿವರಗಳನ್ನು ತಿಳಿಸಿದ್ದು, ತಮ್ಮ ಕಾರಿನ ಮುಂದೆ ಹೋಗುತ್ತಿದ್ದ ವ್ಯಾನ್ ಯಾವುದೇ ಸಿಗ್ನಲ್ ತೋರಿಸದೆ ಬಲಕ್ಕೆ ತಿರುಗಿತು ಮತ್ತು ಅವರ ಕಾರು ವ್ಯಾನ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆಕೆಯ ಪತಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ನ್ಯಾಯಾಲಯವು ಪೊಲೀಸ್ ಎಫ್‌ಐಆರ್ ಆಧರಿಸಿ, ಕಾರು ಚಾಲಕರಾದ ಸುಭಾಷ್ ಬಾಬುವಿನ 75% ನಿರ್ಲಕ್ಷ್ಯತನದಿಂದಾಗಿಯೇ ಅಪಘಾತವುಂಟಾಗಿದೆ ಎಂದು ದಾಖಲಿಸಿ ಪ್ರತಿ ತಿಂಗಳಿಗೆ ಬಾಬು ಅವರ ಮಾಸಿಕ ವೇತನ 20,000 ರೂಗೆ ನಿಗದಿಪಡಿಸುವ ಮೂಲಕ 10.4 ಲಕ್ಷ ಪರಿಹಾರದ ತೀರ್ಪು ನೀಡಿತ್ತು.

  ನ್ಯಾಯಾಲಯದ ಈ ಆದೇಶದಿಂದ ಕೋಪಗೊಂಡ ಕುಟುಂಬವು ಹೈಕೋರ್ಟ್‌ಗೆ ಮನವಿ ಸಲ್ಲಿಸಿತು. ಆಗಸ್ಟ್ 2018 ರಲ್ಲಿ ವಿಮಾ ಕಂಪನಿಯು ನಿರಾಕರಣ ಸಾಕ್ಷಿಯನ್ನು ಒದಗಿಸದೇ ಇರುವ ಕಾರಣ ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಎನ್. ಕಿರುಬಾಕರನ್ ಮತ್ತು ನ್ಯಾಯಮೂರ್ತಿ ಕೃಷ್ಣನ್ ರಾಮಸಾಮಿ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದರು ಹಾಗೂ ವ್ಯಾನ್ ಚಾಲಕನ ನಿರ್ಲಕ್ಷ್ಯತನವೇ ಅಪಘಾತಕ್ಕೆ ಸಂಪೂರ್ಣ ಕಾರಣ ಎಂದು ತಿಳಿಸಿದರು. ಬಾಬು ಅವರ ತೆರಿಗೆ ದಾಖಲೆಗಳು ಹಾಗೂ ವೇತನ ದಾಖಲೆಗಳನ್ನು ಪರಿಗಣಿಸಿ ನ್ಯಾಯಾಲಯವು ಬಾಬು ಅವರ ಮಾಸಿಕ ವೇತವನ್ನು 12.3 ಲಕ್ಷಕ್ಕೆ ನಿಗದಿಪಡಿಸಿತು ಹಾಗೂ ಇದನ್ನು ಆಧರಿಸಿ ವಿಮಾ ಕಂಪನಿಯು ಪರಿಹಾರ ಮೊತ್ತವಾಗಿ ರೂ 1.85 ಕೋಟಿಯನ್ನು ನೀಡಬೇಕು ಎಂದು ತಿಳಿಸಿತು.

  Read Also: ಕರ್ನಾಟಕ ಹೈಕೋರ್ಟ್ ಆದೇಶ: Crime Stories-India Detectives ಸರಣಿಯ ಮೊದಲ ಕಂತಿನ ಪ್ರಸಾರ ನಿಲ್ಲಿಸಿದ ನೆಟ್‌ಫ್ಲಿಕ್ಸ್‌

  ಹೈಕೋರ್ಟ್ ನೀಡಿರುವ ತೀರ್ಪನ್ನು ಅಂಗೀಕರಿಸಿರುವ ಸುಪ್ರೀಂ ಕೋರ್ಟ್, ದಾಖಲೆಗಳಲ್ಲಿರುವ ಇಂತಹ ಸಾಕ್ಷಿಗಳನ್ನು ಅವಲಂಬಿಸಿ FIR ನಲ್ಲಿ ಉಲ್ಲೇಖಿಸಿರುವ ಅಂಶಗಳಿಗೆ ಪ್ರಾಧಾನ್ಯತೆ ನೀಡಲಾಗುವುದಿಲ್ಲ ಎಂದು ತಿಳಿಸಿದೆ. ತೀರ್ಪಿಗೂ ಮೊದಲು ಯಾವುದೇ ಪುರಾವೆಗಳು FIR ನಲ್ಲಿರುವ ವಿಷಯಗಳಿಗೆ ವಿರುದ್ಧವಾಗಿ ಸಂಭವಿಸಿದರೆ, ತೀರ್ಪಿಗೆ ಮುಂಚಿತವಾಗಿ ದಾಖಲಿಸಲಾದ ಪುರಾವೆಗಳಿಗೆ ಪ್ರಾಧಾನ್ಯತೆ ನೀಡಬೇಕು ಎಂದು ಹೇಳಿದೆ. ವಿಮಾ ಕಂಪನಿಯು ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಮನ್ನಣೆ ನೀಡಿದೆ.
  First published: