Triple Talaq: ತ್ರಿವಳಿ ತಲಾಖ್, ಬಹುಪತ್ನಿತ್ವ ಪದ್ಧತಿಗಳ ವಿರುದ್ಧ ಸಿಡಿದೆದ್ದ ಮುಸ್ಲಿಂ ಮಹಿಳೆಯರು; ಸುಪ್ರೀಂಗೆ ಅರ್ಜಿ

ತ್ರಿವಳಿ ತಲಾಖ್‌ಗೆ ಬಲಿಯಾದ ಅರ್ಜಿದಾರರಲ್ಲಿ ಒಬ್ಬರಾದ ಸಮೀನಾ ಬೇಗಂ ಅವರು ಸುಪ್ರೀಂಕೋರ್ಟ್​ನಿಂದ ನ್ಯಾಯ ದೊರೆಯುವ ಭರವಸೆ ಇದೆ ಎಂದು ಆಶಯ ವ್ಯಕ್ತಪಡಿಸಿದರು.

ಸುಪ್ರೀಂಕೋರ್ಟ್

ಸುಪ್ರೀಂಕೋರ್ಟ್

  • Share this:
    ದೆಹಲಿ: ಮುಸ್ಲಿಂ ಸಮುದಾಯದಲ್ಲಿ ವಿಚ್ಛೇದನ ಪದ್ಧತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರಶ್ನಿಸಿ ಮುಸ್ಲಿಂ ಮಹಿಳೆಯರು ಮತ್ತು ಕಾರ್ಯಕರ್ತರು ಸಲ್ಲಿಸಿದ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ನ (Supreme Court) ಐವರು ನ್ಯಾಯಾಧೀಶರ ಸಂವಿಧಾನ ಪೀಠ ಮಂಗಳವಾರ ಕೈಗೆತ್ತಿಕೊಂಡಿದೆ. 2017 ರ ತ್ರಿವಳಿ ತಲಾಖ್ (Triple Talaq) ಪ್ರಕರಣದ ತೀರ್ಪು ತ್ವರಿತ ತ್ರಿವಳಿ ತಲಾಖ್ ಪದ್ಧತಿಯನ್ನು ಅಪರಾಧವೆಂದು ಪರಿಗಣಿಸಿದ ನಂತರ ಎಂಟು ಸಾರ್ವಜನಿಕ ಹಿತಾಸಕ್ತಿಗಳ (PIL) ಬ್ಯಾಚ್ ಅನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿತ್ತು. ಈ ಅರ್ಜಿಗಳು ಮುಸ್ಲಿಂ ವಿವಾಹಗಳು ಮತ್ತು ವಿಚ್ಛೇದನ ಕಾನೂನು ಪದ್ಧತಿಗಳ ಅಡಿಯಲ್ಲಿ ಪ್ರಚಲಿತದಲ್ಲಿರುವ ನಿಕಾಹ್ ಹಲಾಲಾ, ಬಹುಪತ್ನಿತ್ವ, ಮುತಾಹ್, ಮಿಸ್ಯಾರ್ ವಿವಾಹ ಸೇರಿದಂತೆ ಆಚರಣೆಗಳನ್ನು ಪ್ರಶ್ನಿಸಿವೆ.

    ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ನೇತೃತ್ವದ ಸುಪ್ರೀಂಕೋರ್ಟ್ ಪೀಠದ ಮುಂದೆ ವಿಚಾರಣೆಯ ಸಂದರ್ಭದಲ್ಲಿ, ಅರ್ಜಿಗಳಿಗೆ ಕಕ್ಷಿದಾರರಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ), ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯೂ) ಮತ್ತು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗಕ್ಕೆ ನ್ಯಾಯಾಲಯವು ನೋಟಿಸ್ ಜಾರಿಗೊಳಿಸಿದೆ.

    ಏನಿವು ಪದ್ಧತಿಗಳು?
    ತಹ್ಲೀಲ್ ಮದುವೆ ಎಂದೂ ಕರೆಯಲ್ಪಡುವ ನಿಕಾಹ್ ಹಲಾಲಾ, ವಿವಾಹಿತ ಮಹಿಳೆ ತನ್ನ ಪತಿಯಿಂದ ವಿಚ್ಛೇದನ ಪಡೆದು, ಮತ್ತೊಬ್ಬ ಪುರುಷನನ್ನು ಮದುವೆ ಮಾಡಿಕೊಳ್ಳುವ ಮತ್ತು ತನ್ನ ಮೊದಲ ಪತಿಯನ್ನು ಮರುಮದುವೆ ಮಾಡಿಕೊಳ್ಳುವ ಸಲುವಾಗಿ ಮತ್ತೆ ವಿಚ್ಛೇದನ ಪಡೆಯುವ ಅಭ್ಯಾಸವಾಗಿದೆ.

    ಘನತೆ ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆ
    ಧಾರ್ಮಿಕ ಆಚರಣೆಯ ನೆಪದಲ್ಲಿ ನಿಕಾಹ್ ಹಲಾಲಾ ಅಭ್ಯಾಸವನ್ನು ಮುಸ್ಲಿಂ ಮಹಿಳೆಯರು ವಿರೋಧಿಸಿ ಅರ್ಜಿ ಸಲ್ಲಿಸಿದ್ದಾರೆ. ಏಕೆಂದರೆ ಈ ಧಾರ್ಮಿಕ ಆಚರಣೆಯ ನೆಪದಲ್ಲಿ ತಮ್ಮ ಘನತೆ ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

    ಇದನ್ನೂ ಓದಿ: 50 ಬೆಡಗಿಯರ ಟೀಂ, ಹೋಟೆಲ್ ಕೊಠಡಿ, ಮೇಕಪ್ ಕಿಟ್: ಭಾರತೀಯ ಯೋಧರ ಹನಿಟ್ರ್ಯಾಪ್ ಮಾಡಲು Pak​ ಪ್ಲಾನ್!

    ಈ ವಿಷಯವನ್ನು ಸುಪ್ರೀಂಕೋರ್ಟ್​ ಅಕ್ಟೋಬರ್ ಮಧ್ಯದಲ್ಲಿ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ, ಏಕೆಂದರೆ ಸಾಂವಿಧಾನಿಕ ಪೀಠವು ತನ್ನ ಮುಂದೆ ಇರುವ ವಿಷಯಗಳನ್ನು ವಾರದಿಂದ ವಾರದ ಆಧಾರದ ಮೇಲೆ ತೆಗೆದುಕೊಳ್ಳುವುದಾಗಿ ಹೇಳಿದೆ.

    ಸುಪ್ರೀಂಕೋರ್ಟ್​ನಿಂದ ನೊಟೀಸ್ ಜಾರಿ
    ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ, ಹೇಮಂತ್ ಗುಪ್ತಾ, ಸೂರ್ಯ ಕಾಂತ್, ಎಂಎಂ ಸುಂದ್ರೇಶ್ ಮತ್ತು ಸುಧಾಂಶು ಧುಲಿಯಾ ಅವರ ಪೀಠವು ಬಹುಪತ್ನಿತ್ವದ ಆಚರಣೆಯನ್ನು ಪ್ರಶ್ನಿಸಿ ಹಿಂದೂ ಮಹಿಳೆಯರ ಗುಂಪು ಸಲ್ಲಿಸಿದ ಪ್ರತ್ಯೇಕ ಅರ್ಜಿಯ ಮೇಲೆ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದೆ. ಇದು ತಾರತಮ್ಯವಾಗಿದೆ. ಶೋಷಕ ಮತ್ತು ಮಹಿಳಾ ವಿರೋಧಿ ಪದ್ಧತಿಯಾಗಿದೆ ಎಂದು ಪ್ರತ್ಯೇಕ ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿತ್ತು.

    ಇದನ್ನೂ ಓದಿ: UPSC Exam: ಬಡ ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಬೋಧಿಸಲು ಉದ್ಯೋಗವನ್ನೇ ತೊರೆದ IAS ಅಧಿಕಾರಿ!

    ಅರ್ಜಿದಾರ ಮಹಿಳೆ ಹೇಳಿದ್ದೇನು?
    ವಿಚಾರಣೆಯ ನಂತರ ಖಾಸಗಿ ಮಾಧ್ಯಮ ಸಂಸ್ಥೆಯ ಜೊತೆಗೆ ಮಾತನಾಡಿದ ತ್ರಿವಳಿ ತಲಾಖ್‌ಗೆ ಬಲಿಯಾದ ಅರ್ಜಿದಾರರಲ್ಲಿ ಒಬ್ಬರಾದ ಸಮೀನಾ ಬೇಗಂ ಅವರು ಸುಪ್ರೀಂಕೋರ್ಟ್​ನಿಂದ ನ್ಯಾಯ ದೊರೆಯುವ ಭರವಸೆ ಇದೆ ಎಂದು ಆಶಯ ವ್ಯಕ್ತಪಡಿಸಿದರು.

    ಇನ್ನೊಬ್ಬರಿಗೆ ಹೀಗೆ ಆಗುವುದು ಬೇಡ
    "ಇತರ ಅರ್ಜಿದಾರರು ಮತ್ತು ನಾನು ನೋವು ಅನುಭವಿಸಿದ್ದೇವೆ. ನಮ್ಮ ಹಾಗೆಯೇ ಇನ್ನೊಬ್ಬ ಹುಡುಗಿಗೆ ಆಗಬಾರದು ಎಂದು ಖಚಿತಪಡಿಸಿಕೊಳ್ಳಲು ನ್ಯಾಯಾಲಯದ ಮೊರೆ ಹೋಗಿದ್ದೇವೆ. ನನಗೆ ತಲಾಖ್ ನೀಡಲಾಯಿತು. ನಂತರ ನನ್ನ ಪತಿ ಹಲಾಲಾಗೆ ಒತ್ತಾಯಿಸಿದರು. ನನ್ನ ಕುಟುಂಬ ನನಗೆ ಬೆಂಬಲ ನೀಡಿದ್ದರಿಂದ ಮಾತ್ರ ನಾನು ಸುಪ್ರೀಂಕೋರ್ಟ್ ತಲುಪಲು ಸಾಧ್ಯವಾಯಿತು” ಎಂದು ಸಮೀನಾ ಹೇಳಿದರು.
    Published by:guruganesh bhat
    First published: